ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 27-28
ಪೌಲ ರೋಮ್‌ಗೆ ಹಡಗಲ್ಲಿ ಹೋದನು
ಪೌಲನನ್ನು ಬಂಧಿಸಿದ್ದರೂ ಆತನು ಸಾರುವುದನ್ನು ಬಿಡಲಿಲ್ಲ. ಆತನು ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಅದರಲ್ಲಿ ಕೆಲಸ ಮಾಡುತ್ತಿದ್ದವರಿಗೆ ಮತ್ತು ಪ್ರಯಾಣಿಕರಿಗೆ ಸಾರಿದನು. ಮಾಲ್ಟದಲ್ಲಿ ಹಡಗೊಡೆತ ಆದಮೇಲೆ ಆತನು ಕೆಲವರನ್ನು ವಾಸಿಮಾಡಿದನು. ಅವರಿಗೂ ಖಂಡಿತ ಸಾರಿರಬೇಕು. ರೋಮ್‌ಗೆ ತಲಪಿದ ಮೂರನೇ ದಿನ ಯೆಹೂದ್ಯರ ಪ್ರಮುಖ ಪುರುಷರನ್ನು ಕರೆಸಿ ಅವರಿಗೆ ಸಾರಿದನು. ಆತನು ಗೃಹಬಂಧನದಲ್ಲಿ ಇದ್ದ ಎರಡು ವರ್ಷ ತನ್ನ ಹತ್ತಿರ ಬರುತ್ತಿದ್ದವರಿಗೆಲ್ಲ ಸಾರಿದನು.
ನಿಮಗೆ ಯಾವ ಅಡೆತಡೆಗಳು ಬಂದರೂ ಹೇಗೆ ಸುವಾರ್ತೆ ಸಾರಬಹುದು?