ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w04 8/15 ಪು. 30-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಅನುರೂಪ ಮಾಹಿತಿ
  • “ನಮ್ಮಲ್ಲಿ ಒಬ್ರೂ ಸಾಯಲ್ಲ”
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ಪೌಲನು ರೋಮ್‌ಗೆ ಹಡಗಿನಲ್ಲಿ ಹೋದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಪೌಲನು ಕೇಡಿನ ಮೇಲೆ ಜಯಸಾಧಿಸುತ್ತಾನೆ
    ಕಾವಲಿನಬುರುಜು—1999
  • ‘ಸಮುದ್ರದಲ್ಲಿ ಅಪಾಯಗಳು’
    ಕಾವಲಿನಬುರುಜು—1999
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
w04 8/15 ಪು. 30-31

ವಾಚಕರಿಂದ ಪ್ರಶ್ನೆಗಳು

ಪೌಲನಿದ್ದ ಹಡಗು ಸಿಸಿಲಿಯ ದಕ್ಷಿಣಕ್ಕಿರುವ ಮೆಲೀತೆ ದ್ವೀಪದಲ್ಲಲ್ಲ, ಬದಲಾಗಿ ಇನ್ನೊಂದು ದ್ವೀಪದಲ್ಲಿ ಹಡಗೊಡೆತಕ್ಕೊಳಗಾಯಿತು ಎಂದು ಕೆಲವರು ವಾದಿಸಿದ್ದಾರೆ. ಅವನಿದ್ದ ಹಡಗು ಎಲ್ಲಿ ಹಡಗೊಡೆತಕ್ಕೊಳಗಾಯಿತು?

ಈ ಪ್ರಶ್ನೆಯು, ಅಪೊಸ್ತಲ ಪೌಲನಿದ್ದ ಹಡಗು ಮೆಲೀತೆ ದ್ವೀಪದಲ್ಲಲ್ಲ, ಬದಲಾಗಿ ಪಶ್ಚಿಮ ಗ್ರೀಸಿನ ಕರಾವಳಿಯ ಆಚೆಯಿರುವ ಅಯೋನಿಯನ್‌ ಸಮುದ್ರದಲ್ಲಿರುವ ಕಾರ್ಫುವಿನ ಹತ್ತಿರವಿರುವ ಸೆಫಲೋನ್ಯ (ಅಥವಾ, ಕೆಫಲಿನ್ಯ)ದಲ್ಲಿ ಹಡಗೊಡೆತಕ್ಕೊಳಗಾಯಿತು ಎಂಬ ಸುಮಾರು ಇತ್ತೀಚಿಗೆ ಎತ್ತಲಾದ ಪ್ರಸ್ತಾಪಕ್ಕೆ ಸಂಬಂಧಿತವಾಗಿದೆ. ರೋಮನ್‌ ಶತಾಧಿಪತಿಯಾದ ಯೂಲ್ಯನ ನೇತೃತ್ವದಲ್ಲಿ ಪೌಲನು ಕೈಸರೈಯದಿಂದ, ಬೇರೆ ಸೈನಿಕರು ಹಾಗೂ ತನ್ನ ಸಂಗಡಿಗರ ಜೊತೆಯಲ್ಲಿ ಹೊರಟನೆಂದು ಪ್ರೇರಿತ ದಾಖಲೆಯು ನಮಗೆ ತಿಳಿಸುತ್ತದೆ. ನಕ್ಷೆಯಲ್ಲಿ ಚಿತ್ರಿಸಲ್ಪಟ್ಟಿರುವಂತೆ, ಅವರು ಸೀದೋನ್‌ ಮತ್ತು ಮುರಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿಂದ ಅವರು ಐಗುಪ್ತದ ಅಲೆಕ್ಸಾಂದ್ರಿಯದಲ್ಲಿ ಒಂದು ದೊಡ್ಡ ಧಾನ್ಯದ ಹಡಗನ್ನು ಹತ್ತಿ ಪಶ್ಚಿಮಾಭಿಮುಖವಾಗಿ ಕ್ನೀದಕ್ಕೆ ಹೊರಟರು. ಅವರು ಗ್ರೀಸಿನ ತುದಿಯನ್ನು ದಾಟಿ ಇಜೀಯನ್‌ ಸಮುದ್ರದಾಚೆಗೆ ರೋಮ್‌ ನಗರಕ್ಕೆ ಹೋಗುವ ದಾರಿಗೆ ಅಂಟಿಕೊಳ್ಳಲು ಸಾಧ್ಯವಾಗದೆ ಹೋಯಿತು. ಬಲವಾದ ಬಿರುಗಾಳಿಯು ಅವರನ್ನು ದಕ್ಷಿಣಕ್ಕೆ ಕ್ರೇತದ ಕಡೆಗೆ ಮತ್ತು ಅದರ ಕರಾವಳಿಯ ಮರೆಯ ಕಡೆಗೆ ಹೋಗುವಂತೆ ನಿರ್ಬಂಧಿಸಿತು. ಅಲ್ಲಿ ಅವರು ಚಂದರೇವುಗಳಲ್ಲಿ ತಂಗಿದರು. ಅಲ್ಲಿಂದ “ಕ್ರೇತದ್ವೀಪವನ್ನು ಅನುಸರಿಸಿ” ಹೋದಾಗ “ಈಶಾನ್ಯಪೂರ್ವವಾಯು ಎಂಬ ಹುಚ್ಚುಗಾಳಿ”ಗೆ ಹಡಗು ಸಿಕ್ಕಿಕೊಂಡಿತು. ಈ ಭಾರವಾಗಿದ್ದ ಧಾನ್ಯದ ಹಡಗು ಹದಿನಾಲ್ಕನೆಯ ರಾತ್ರಿಯ ತನಕ “ಅತ್ತ ಇತ್ತ ಬಡಿಸಿಕೊಂಡು” ಹೋಯಿತು. ಕೊನೆಗೆ, ಅದರಲ್ಲಿದ್ದ ಎಲ್ಲಾ 276 ಮಂದಿಯೊಂದಿಗೆ, ಪವಿತ್ರ ಶಾಸ್ತ್ರದ ಗ್ರೀಕ್‌ ಗ್ರಂಥಪಾಠ ಯಾವುದನ್ನು ಮೆಲೀಟೆ ಎಂದು ಕರೆಯುತ್ತದೊ ಆ ದ್ವೀಪದಲ್ಲಿ ಹಡಗೊಡೆತಕ್ಕೊಳಗಾಯಿತು.​—ಅ. ಕೃತ್ಯಗಳು 27:​1–28:1.

ಗತಕಾಲಗಳಲ್ಲಿ ಈ ದ್ವೀಪವಾದ ಮೆಲೀಟೆ ಯಾವುದಾಗಿರಬಹುದೆಂಬುದನ್ನು ಗುರುತಿಸಲು ಅನೇಕ ಸಲಹೆಗಳು ಕೊಡಲ್ಪಟ್ಟಿವೆ. ಕ್ರೊಏಷಿಯ ಕರಾವಳಿಯ ಹತ್ತಿರದಲ್ಲೇ ಏಡ್ರಿಯಾಟಿಕ್‌ ಸಮುದ್ರದಲ್ಲಿರುವ, ಈಗ ಮಲ್ಯೆಟ್‌ ಎಂದು ಕರೆಯಲಾಗುವ ಮೆಲಟ ಇಲೀರಿಕಾ ಎಂಬ ದ್ವೀಪವೇ ಈ ಮೆಲೀತೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಇದು ಅಸಂಭವವಾಗಿರುವಂತೆ ತೋರುತ್ತದೆ, ಏಕೆಂದರೆ ಈ ಮಲ್ಯೆಟ್‌ನ ಉತ್ತರ ದಿಶೆಯಲ್ಲಿದ್ದು ಅದನ್ನು ಪೌಲನ ಪ್ರಯಾಣದ ಮುಂದಿನ ಹಂತಗಳಾದ ಸಿಸಿಲಿಯ ಸುರಕೂಸ್‌, ಮತ್ತು ಬಳಿಕ ಇಟೆಲಿಯ ಪಶ್ಚಿಮ ಕರಾವಳಿಯೊಂದಿಗೆ ಹೊಂದಿಸಿಕೊಳ್ಳಲು ಕಷ್ಟವಾಗುತ್ತದೆ.​—ಅ. ಕೃತ್ಯಗಳು 28:​11-13.

ಹೆಚ್ಚಿನ ಬೈಬಲ್‌ ಭಾಷಾಂತರಕಾರರು ಈ ಮೆಲೀಟೆಯು ಮೆಲೀಟೆ ಆಫ್ರಿಕೇನಸ್‌ ಎಂಬ, ಈಗ ಮಾಲ್ಟಾ ಎಂದು ಪ್ರಸಿದ್ಧವಾಗಿರುವ ದ್ವೀಪವನ್ನು ಸೂಚಿಸುತ್ತದೆಂದು ತೀರ್ಮಾನಿಸಿದ್ದಾರೆ. ಪೌಲನಿದ್ದ ಆ ಹಡಗಿನ ಕೊನೆಯ ತಂಗುದಾಣವು ಕ್ರೇತದ ಚಂದರೇವುಗಳು. ಬಳಿಕ ಬಿರುಗಾಳಿಯು ಆ ಹಡಗನ್ನು ಪಶ್ಚಿಮಾಭಿಮುಖವಾಗಿ ಕೌಡಕ್ಕೆ ಕೊಂಡೊಯ್ಯಿತು. ಆ ಗಾಳಿ ಅನೇಕ ದಿನಗಳ ವರೆಗೆ ಹಡಗನ್ನು ದೂಡಿಕೊಂಡು ಹೋಯಿತು. ಆದುದರಿಂದ ಈ ಗಾಳಿ ನೂಕಿದ ಹಡಗು ಇನ್ನೂ ಹೆಚ್ಚು ಪಶ್ಚಿಮಕ್ಕೆ ಹೋಗಿ ಮಾಲ್ಟಾವನ್ನು ಮುಟ್ಟಿತೆಂಬುದು ತೀರ ನ್ಯಾಯಸಮ್ಮತವಾಗಿದೆ.

ಸಾಮಾನ್ಯವಾಗಿ ಬೀಸುವ ಮಾರುತ ಮತ್ತು “ತೇಲಿಕೊಂಡು ಹೋಗುವ ದಿಕ್ಕು ಮತ್ತು ದರ”ದ ಕುರಿತು ಚಿಂತಿಸುವಾಗ, “ಕ್ಲೌಡ [ಅಥವಾ, ಕೌಡ] ಮತ್ತು ಮಾಲ್ಟಾದ ಮಧ್ಯೆ ಇರುವ ದೂರವು 770 ಕಿಲೊಮೀಟರ್‌ಗಳಿಗಿಂತ ಸ್ವಲ್ಪ ಕಡಿಮೆ. ಈ ತಾಳೆಬೀಳುವಿಕೆಯು ಎಷ್ಟು ಗಮನಾರ್ಹವಾಗಿದೆಯೆಂದರೆ, ಆ ಹದಿನಾಲ್ಕನೆಯ ರಾತ್ರಿಯಂದು ನಾವಿಕರು ಸಮೀಪಿಸಿದ ಸ್ಥಳವು ಮಾಲ್ಟಾ ಅಲ್ಲದೆ ಇನ್ನಾವುದೂ ಆಗಿರುವುದು ಅಸಾಧ್ಯವೆಂಬಂತೆ ತೋರುತ್ತದೆ. ಈ ಸಂಭವನೀಯತೆಯು ತುಂಬ ವಿಶ್ವಾಸಾರ್ಹವಾಗಿದೆ” ಎಂದು ಸಂತ ಪೌಲನ ಜೀವನ ಮತ್ತು ಪತ್ರಿಕೆಗಳು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಕಾನಿಬೇರ್‌ ಮತ್ತು ಹೌಸನ್‌ ಎಂಬವರು ತಿಳಿಸುತ್ತಾರೆ.

ಬೇರೆ ಸ್ಥಳಗಳನ್ನು ಸೂಚಿಸಬಹುದಾದರೂ, ಜೊತೆಗಿರುವ ನಕ್ಷೆಯಲ್ಲಿ ತೋರಿಸಲ್ಪಟ್ಟಂತೆ ಮಾಲ್ಟಾದಲ್ಲಿ ಸಂಭವಿಸಿದ ಹಡಗೊಡೆತವು ಬೈಬಲ್‌ ದಾಖಲೆಗೆ ಹೊಂದಿಕೆಯಾಗಿರುವಂತೆ ತೋರುತ್ತದೆ.

[ಪುಟ 31ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಯೆರೂಸಲೇಮ್‌

ಕೈಸರೈಯ

ಸೀದೋನ್‌

ಮುರ

ಕ್ನೀದ

ಕ್ರೇತ

ಕೌಡ

ಮಾಲ್ಟಾ

ಸಿಸಿಲಿ

ಸುರಕೂಸ್‌

ರೋಮ್‌

ಮಲ್ಯೆಟ್‌

ಗ್ರೀಸ್‌

ಸೆಫಲೋನ್ಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ