ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಫೆಬ್ರವರಿ ಪು. 8
  • ತಾಳಿಕೊಂಡು ಕಾಯುತ್ತಾ ಇರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಾಳಿಕೊಂಡು ಕಾಯುತ್ತಾ ಇರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • “ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ತಾಳ್ಮೆ—ಕ್ರೈಸ್ತರಿಗೆ ಅತ್ಯಾವಶ್ಯಕ
    ಕಾವಲಿನಬುರುಜು—1993
  • ತಾಳ್ಮೆಯಿಂದ ಓಟವನ್ನು ಓಡುವುದು
    ಕಾವಲಿನಬುರುಜು—1992
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಫೆಬ್ರವರಿ ಪು. 8

ನಮ್ಮ ಕ್ರೈಸ್ತ ಜೀವನ

ತಾಳಿಕೊಂಡು ಕಾಯುತ್ತಾ ಇರಿ

ದೇವರ ರಾಜ್ಯಕ್ಕೋಸ್ಕರ ಎಷ್ಟು ಸಮಯದಿಂದ ಕಾಯುತ್ತಾ ಇದ್ದೀರಿ? ಏನೇ ಕಷ್ಟ ಬಂದರೂ ಸಹಿಸಿಕೊಂಡು ಕಾಯುತ್ತಾ ಇದ್ದೀರಾ? (ರೋಮ 8:25) ಕೆಲವು ಕ್ರೈಸ್ತರು ದ್ವೇಷ, ಅನ್ಯಾಯ, ಸೆರೆವಾಸ ಅನುಭವಿಸುತ್ತಿದ್ದಾರೆ. ಕೆಲವರು ಪ್ರಾಣಾಪಾಯವನ್ನೂ ಎದುರಿಸಿದ್ದಾರೆ. ಇನ್ನು ಕೆಲವರು ಗಂಭೀರ ಕಾಯಿಲೆ ಅಥವಾ ವಯಸ್ಸಾಗುತ್ತಾ ಇರುವುದರಿಂದ ಬರುವ ಕಷ್ಟಗಳನ್ನು ತಾಳಿಕೊಳ್ಳುತ್ತಿದ್ದಾರೆ.

ಏನೇ ಕಷ್ಟ ಬಂದರೂ ಸಹಿಸಿಕೊಂಡು ಕಾಯುತ್ತಾ ಇರಲು ಯಾವುದು ಸಹಾಯ ಮಾಡುತ್ತದೆ? ಪ್ರತಿ ದಿನ ಬೈಬಲ್‌ ಓದಿ ಧ್ಯಾನಿಸಿ ನಂಬಿಕೆಯನ್ನು ಬಲಪಡಿಸಿಕೊಳ್ಳಬೇಕು. ನಿರೀಕ್ಷೆಯ ಮೇಲೆ ಗಮನ ಇಡಬೇಕು. (2ಕೊರಿಂ 4:16-18; ಇಬ್ರಿ 12:2) ಯೆಹೋವನ ಹತ್ತಿರ ಯಾಚಿಸಬೇಕು, ಪವಿತ್ರಾತ್ಮ ಕೊಡುವಂತೆ ಬೇಡಿಕೊಳ್ಳಬೇಕು. (ಲೂಕ 11:10, 13; ಇಬ್ರಿ 5:7) ಆಗ ‘ಆನಂದದಿಂದ ತಾಳಿಕೊಳ್ಳಲು’ ನಮ್ಮ ಪ್ರೀತಿಯ ತಂದೆ ಸಹಾಯ ಮಾಡುತ್ತಾನೆ.—ಕೊಲೊ 1:11.

ನಾವು ‘ತಾಳ್ಮೆಯಿಂದ ಓಡಬೇಕು’—ಬಹುಮಾನ ಗೆದ್ದೇ ಗೆಲ್ಲುತ್ತೇವೆಂಬ ಭರವಸೆಯಿಂದ ಎಂಬ ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಜೇಮಿ ಮತ್ತು ಅವರ ಪತ್ನಿ ಸೇವೆ ಮಾಡುತ್ತಿದ್ದಾರೆ

    ಜೀವನದಲ್ಲಿ ಅನಿರೀಕ್ಷಿತವಾಗಿ ಏನು ನಡೆಯಬಹುದು? (ಪ್ರಸಂ 9:11)

  • ಜೇಮಿಗೆ ಸ್ಟ್ರೋಕ್‌ ಆದ ಮೇಲೆ ಸಹೋದರ ಕಾರ್ಲ್‌ ಒಂದು ವಚನದ ಬಗ್ಗೆ ಅವರಿಗೆ ಹೇಳುತ್ತಿದ್ದಾರೆ

    ಕಷ್ಟಗಳು ಬಂದಾಗ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತದೆ?

  • ಜೇಮಿ ಮತ್ತು ಕಾರ್ಲ್‌ ಒಂದು ದಂಪತಿಗೆ ಪರಿಪಾಲನಾ ಭೇಟಿ ಮಾಡುತ್ತಿದ್ದಾರೆ

    ಮುಂಚಿನಷ್ಟು ಯೆಹೋವನ ಸೇವೆ ಮಾಡಲು ಆಗದಿದ್ದರೂ ನಮ್ಮಿಂದ ಎಷ್ಟು ಆಗುತ್ತೋ ಅಷ್ಟನ್ನು ಮಾಡುವುದರ ಮೇಲೆ ಯಾಕೆ ಗಮನ ಇಡಬೇಕು?

  • ಪರದೈಸಿನಲ್ಲಿ ಆರೋಗ್ಯವಾಗಿ ಇರುವುದರ ಬಗ್ಗೆ ಜೇಮಿ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ

    ಬಹುಮಾನದ ಮೇಲೆ ನಿಮ್ಮ ಗಮನ ಇರಲಿ

    ಬಹುಮಾನ ಗೆದ್ದೇ ಗೆಲ್ಲುತ್ತೇವೆ ಅಂತ ಭರವಸೆಯಿಂದ ಇರಲು ಯಾವುದು ಸಹಾಯ ಮಾಡುತ್ತದೆ?

ಕಷ್ಟಪಡುತ್ತಿರುವವರಿಗೆ, ಅವರ ಕುಟುಂಬದವರಿಗೆ ಹೇಗೆ ಸಹಾಯ ಮಾಡಬಹುದು?

  • ಪ್ರೀತಿಯಿಂದ ಮಾತಾಡಿ, ಬೇರೆಯವರ ಜೊತೆ ಅವರನ್ನು ಹೋಲಿಸಿ ಮಾತಾಡಬೇಡಿ

  • ಅವರು ಮಾತಾಡುವಾಗ ಚೆನ್ನಾಗಿ ಕೇಳಿಸಿಕೊಳ್ಳಿ

  • ಅವರಿಗೋಸ್ಕರ ಪ್ರಾರ್ಥಿಸಿ ಮತ್ತು ಅವರ ಜೊತೆ ಪ್ರಾರ್ಥಿಸಿ

  • ಅಡಿಗೆ ಮಾಡಿಕೊಡಿ ಅಥವಾ ಮನೆಕೆಲಸ ಏನಾದರೂ ಮಾಡಿಕೊಡಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ