ನಮ್ಮ ಕ್ರೈಸ್ತ ಜೀವನ
“ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ”
ಯಾವ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಬೇಕು? ಸತ್ಯವಾದ, ಪ್ರಮುಖ್ಯವಾದ, ನೀತಿಯುತವಾದ, ನೈತಿಕವಾಗಿ ಶುದ್ಧವಾದ, ಪ್ರೀತಿಯೋಗ್ಯವಾದ, ಸದ್ಗುಣವಾದ ಮತ್ತು ಸ್ತುತಿಗೆ ಯೋಗ್ಯವಾದ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಬೇಕು ಅಂತ ಫಿಲಿಪ್ಪಿ 4:8 ಹೇಳುತ್ತೆ. ಆದರೆ ಇದರ ಅರ್ಥ, ಕ್ರೈಸ್ತರು ಯಾವಾಗಲೂ ಬೈಬಲ್‌ನಲ್ಲಿರೋ ವಿಷಯಗಳ ಬಗ್ಗೆನೇ ಯೋಚಿಸುತ್ತಾ ಇರಬೇಕು ಅಂತನಾ? ಇಲ್ಲ. ಬದಲಿಗೆ ನಮ್ಮ ಯೋಚನೆಗಳು ಯಾವಾಗಲೂ ಯೆಹೋವನು ಮೆಚ್ಚುವಂಥ ರೀತಿಯಲ್ಲಿ ಇರಬೇಕು. ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡುವ ವಿಷಯಗಳ ಬಗ್ಗೆ ಯಾವತ್ತೂ ಯೋಚಿಸಬಾರದು.—ಕೀರ್ತ 19:14.
ಕೆಟ್ಟ ವಿಷಯಗಳ ಬಗ್ಗೆ ಯೋಚಿಸದೇ ಇರೋದು ಕಷ್ಟ. ಯಾಕೆಂದರೆ ನಾವು ನಮ್ಮ ಅಪರಿಪೂರ್ಣತೆ ವಿರುದ್ಧ ಮಾತ್ರ ಅಲ್ಲ, ‘ಈ ಲೋಕದ ದೇವನು’ ಆಗಿರುವ ಸೈತಾನನ ವಿರುದ್ಧ ಕೂಡ ಹೋರಾಡಬೇಕು. (2ಕೊರಿಂ 4:4) ಈ ಲೋಕ ಬಳಸುವ ಮಾಧ್ಯಮಗಳು ಸೈತಾನ ಕೈಯಲ್ಲಿದೆ. ಹಾಗಾಗಿ ಟಿವಿ, ರೇಡಿಯೊ, ಇಂಟರ್‌ನೆಟ್ ಮತ್ತು ಸಾಹಿತ್ಯಗಳಲ್ಲಿ ಹೆಚ್ಚಿನ ಅಂಶ ಕೆಟ್ಟ ವಿಷಯಗಳೇ ತುಂಬಿವೆ. ಈ ಕಾರಣದಿಂದ, ನಮ್ಮ ಮನಸ್ಸಿನಲ್ಲಿ ಏನು ತುಂಬಿಸುತ್ತೇವೋ ಆ ವಿಷಯದ ಬಗ್ಗೆ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ, ಈ ವಿಷಯಗಳು ನಮ್ಮ ಮನಸ್ಸು ಹಾಗು ಆಲೋಚನೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಕ್ರಮೇಣವಾಗಿ, ಕೆಟ್ಟ ಕೆಲಸಗಳನ್ನು ಮಾಡುತ್ತೇವೆ.—ಯಾಕೋ 1:14, 15.
ನಿಷ್ಠೆಯನ್ನು ಕೆಡಿಸುವ ವಿಷಯಗಳಿಂದ ದೂರವಿರಿ—ತಪ್ಪಾದ ಮನೋರಂಜನೆ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಒಬ್ಬ ಸಹೋದರ ತನ್ನ ಫೋನ್‌ನಲ್ಲಿ ಏನು ನೋಡುತ್ತಿದ್ದನು, ಮತ್ತು ಅದರಿಂದ ಏನಾಯಿತು?
ಆ ಸಹೋದರನಿಗೆ ಗಲಾತ್ಯ 6:7, 8 ಮತ್ತು ಕೀರ್ತನೆ 119:37 ಹೇಗೆ ಸಹಾಯ ಮಾಡಿದವು?