ನಮ್ಮ ಕ್ರೈಸ್ತ ಜೀವನ
ಜಂಬ ಕೊಚ್ಚಿಕೊಳ್ಳೋದನ್ನ ಬಿಟ್ಟುಬಿಡೋಣ—ದೀನತೆ ತೋರಿಸೋಣ
ನಮ್ಮ ಬಗ್ಗೆ ನಾವೇ ಹೊಗಳಿಕೊಳ್ಳೋದು ಅಥವಾ ಜಂಬ ಕೊಚ್ಚಿಕೊಳ್ಳೋದು, ನಮ್ಮಲ್ಲಿ ಅಹಂಕಾರ ಇದೆ ಅಂತ ತೋರಿಸುತ್ತೆ. ಹೀಗೆ ಮಾತಾಡಿದ್ರೆ ಇದನ್ನ ಕೇಳೋರಿಗೆ ಯಾವುದೇ ಪ್ರೋತ್ಸಾಹ ಸಿಗಲ್ಲ. ಹಾಗಾಗಿ ಬೈಬಲ್ “ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, ಮತ್ತೊಬ್ಬನು ಹೊಗಳಿದರೆ ಹೊಗಳಲಿ” ಅಂತ ಹೇಳುತ್ತೆ.—ಜ್ಞಾನೋ 27:2.
ಯೆಹೋವ ದೇವರ ಗೆಳೆಯರಾಗೋಣ—ದೀನತೆ ತೋರಿಸಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಜನ್ರು ಸಾಮಾನ್ಯವಾಗಿ ಯಾವೆಲ್ಲಾ ವಿಷಯಗಳ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಾರೆ?
ಕೇಲಬ್ ತನ್ನ ಫ್ರೆಂಡ್ ಹತ್ರ ಯಾವ ವಿಷಯದ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿದ್ದ?
ದೀನತೆ ತೋರಿಸಬೇಕು ಅನ್ನೋ ಪಾಠನಾ ಕೇಲಬ್ನ ಅಪ್ಪ ಹೇಗೆ ಕಲಿಸಿದ್ರು?
ದೀನತೆ ತೋರಿಸಲು 1 ಪೇತ್ರ 5:5 ನಮಗೆ ಹೇಗೆ ಸಹಾಯ ಮಾಡುತ್ತೆ?