ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 10-11
ಮೋಶೆ ಮತ್ತು ಆರೋನ ತೋರಿಸಿದ ಧೈರ್ಯ
ಆಗಿನ ಕಾಲದಲ್ಲಿ ಫರೋಹ ಇಡೀ ಭೂಮಿಯಲ್ಲೇ ತುಂಬ ಶಕ್ತಿಶಾಲಿ ರಾಜನಾಗಿದ್ದ. ಆದ್ರೂ ಮೋಶೆ ಮತ್ತು ಆರೋನ ಧೈರ್ಯದಿಂದ ಅವನ ಹತ್ರ ಮಾತಾಡಿದ್ರು. ಅವ್ರು ಯಾಕೆ ಭಯಪಡಲಿಲ್ಲ? “[ಮೋಶೆ] ಅರಸನ ಕೋಪಕ್ಕೆ ಭಯಪಡದೆ ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ; ಏಕೆಂದರೆ ಅದೃಶ್ಯನಾಗಿರು ವಾತನನ್ನು ನೋಡುವವನೋ ಎಂಬಂತೆ ಅವನು ಸ್ಥಿರಚಿತ್ತನಾಗಿ ಮುಂದುವರಿದನು” ಅಂತ ಬೈಬಲ್ ಹೇಳುತ್ತೆ. (ಇಬ್ರಿ 11:27) ಮೋಶೆ ಮತ್ತು ಆರೋನನಿಗೆ ಯೆಹೋವನ ಮೇಲೆ ತುಂಬ ನಂಬಿಕೆ ಇತ್ತು ಮತ್ತು ಅವ್ರು ಯೆಹೋವನ ಮೇಲೆ ಆತುಕೊಂಡಿದ್ರು. ಹಾಗಾಗಿ ಹೆದರದೆ ಧೈರ್ಯದಿಂದ ಮಾತಾಡಿದ್ರು.
ಯಾವೆಲ್ಲ ಸನ್ನಿವೇಶಗಳಲ್ಲಿ ಅಧಿಕಾರಿಗಳ ಹತ್ರ ನಮ್ಮ ನಂಬಿಕೆ ಬಗ್ಗೆ ಮಾತಾಡಲು ಧೈರ್ಯ ಬೇಕು?