ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 12
ಪಸ್ಕ ಹಬ್ಬದ ಮಹತ್ವ
ಹತ್ತನೇ ಬಾಧೆಯಿಂದ ಬಚಾವಾಗಬೇಕಂದ್ರೆ ಇಸ್ರಾಯೇಲ್ಯರು ಯೆಹೋವನ ಮಾತನ್ನ ಕೇಳಲೇ ಬೇಕಿತ್ತು. (ವಿಮೋ 12:28) ನೈಸಾನ್ 14 ರ ರಾತ್ರಿ ಇಸ್ರಾಯೇಲ್ ಕುಟುಂಬದ ಪ್ರತಿಯೊಬ್ರೂ ತಮ್ಮ ತಮ್ಮ ಮನೆಯಲ್ಲಿ ಸೇರಿಬರಬೇಕಿತ್ತು. ಆರೋಗ್ಯವಾಗಿರೋ ಒಂದು ವರ್ಷದ ಕುರಿ ಅಥವಾ ಆಡನ್ನು ಕಡಿದು ರಕ್ತವನ್ನ ಮನೆ ಬಾಗಿಲಿನ ಚೌಕಟ್ಟಿನ ಮೇಲೆ ಮತ್ತು ಬಾಗಿಲಿನ ಮೇಲಿನ ಭಾಗಕ್ಕೆ ಹಚ್ಚಬೇಕಿತ್ತು. ಆಮೇಲೆ ಅದ್ರ ಮಾಂಸವನ್ನು ಬೆಂಕಿಯಲ್ಲಿ ಸುಟ್ಟು ಆದಷ್ಟು ಬೇಗ ತಿನ್ನಬೇಕಿತ್ತು. ಬೆಳಗಾಗುವ ತನಕ ಯಾರೂ ಮನೆಯಿಂದ ಹೊರಗೆ ಬರಬಾರದಿತ್ತು.—ವಿಮೋ 12:9-11, 22.
ಯೆಹೋವನ ಆಜ್ಞೆ ಪಾಲಿಸೋದ್ರಿಂದ ನಮಗೆ ಹೇಗೆಲ್ಲಾ ಸಂರಕ್ಷಣೆ ಸಿಗುತ್ತೆ?