ನಮ್ಮ ಕ್ರೈಸ್ತ ಜೀವನ
ಸುಳ್ಳು ಸುದ್ದಿ ಹಬ್ಬಿಸದೆ ಜಾಗ್ರತೆವಹಿಸಿ
ಇಂದು ಜನರಿಗೆ ಪತ್ರಿಕೆ, ರೇಡಿಯೋ, ಟಿ.ವಿ ಮತ್ತು ಇಂಟರ್ನೆಟ್ ಮೂಲಕ ಮಾಹಿತಿಗಳು ಕ್ಷಣ ಮಾತ್ರದಲ್ಲಿ ಸಿಗುತ್ತಿದೆ. ಆದರೆ ನಂಬಿಕೆ ಸತ್ಯವುಳ್ಳ ದೇವರ ಆರಾಧಕರಾದ ನಾವು ಸುಳ್ಳು ಮಾಹಿತಿಗಳನ್ನು ತಮಾಷೆಗೆ ಅಥವಾ ಅಪ್ಪಿತಪ್ಪಿನೂ ಹರಡಿಸಲ್ಲ. (ಕೀರ್ತ 31:5; ವಿಮೋ 23:1) ಯಾಕೆಂದ್ರೆ ಗಾಳಿ ಮಾತುಗಳಿಂದ ಬೇರೆಯವರಿಗೆ ತುಂಬ ಹಾನಿ ಆಗುತ್ತೆ. ಒಂದು ಮಾಹಿತಿ ಸತ್ಯನಾ ಸುಳ್ಳಾ ಅಂತ ನಿರ್ಧರಿಸೋ ಮುಂಚೆ ನಿಮ್ಮನ್ನೇ ಕೇಳಿಕೊಳ್ಳಿ:
‘ಮಾಹಿತಿ ಕಟ್ಟುಕಥೆನಾ ಅಥವಾ ನಿಜವಾದದ್ದಾ?’ ಅಂತೆ-ಕಂತೆಗಳನ್ನ ಹೇಳೋರಿಗೆ ವಿಷ್ಯದ ಹಿಂದಿರೋ ಸತ್ಯ ಏನು ಅಂತನೇ ಗೊತ್ತಿರಲ್ಲ. ಅಷ್ಟೇ ಅಲ್ಲ ಸುದ್ದಿಗಳು ಒಬ್ಬರಿಂದ ಒಬ್ಬರಿಗೆ ಹರಡುವಾಗ ಕಥೆ ಬದಲಾಗ್ತಾನೇ ಹೋಗುತ್ತೆ. ಹಾಗಾಗಿ ಸುದ್ದಿಯ ಮೂಲ ನಿಮ್ಗೆ ಗೊತ್ತಿಲ್ಲದಿದ್ರೆ ಎಚ್ಚರ ವಹಿಸಿ. ಸಭೆಯಲ್ಲಿ ಸುಯೋಗ ಇರೋರು ಒಂದು ವಿಷ್ಯ ಹೇಳುವಾಗ, ದಾಟಿಸುವಾಗ ತುಂಬ ಜಾಗ್ರತೆ ವಹಿಸಬೇಕು. ಯಾಕೆಂದ್ರೆ ಇವ್ರು ಏನೇ ಹೇಳಿದ್ರೂ ಸಹೋದರರು ನಂಬ್ತಾರೆ
‘ಮಾಹಿತಿಯಿಂದ ಯಾರಿಗಾದ್ರೂ ಹಾನಿ ಆಗುತ್ತಾ?’ ಒಂದು ಸುದ್ದಿ, ವ್ಯಕ್ತಿಯ, ಗುಂಪಿನ, ಸಮುದಾಯದ ಹೆಸರನ್ನ ಹಾಳುಮಾಡುತ್ತಿದ್ರೆ ಅದನ್ನ ಯಾರಿಗೂ ಹೇಳದೇ ಇರೋದೇ ಒಳ್ಳೇದು.—ಜ್ಞಾನೋ 18:8; ಫಿಲಿ 4:8
‘ನಂಬಬಹುದಾದ ಮಾಹಿತಿನಾ?’ ಕುತೂಹಲ ಕೆರಳಿಸೋ ಘಟನೆ, ಅನುಭವದ ಬಗ್ಗೆ ಸುದ್ದಿ ಸಿಕ್ಕಿದಾಗ ಹುಷಾರಾಗಿರಿ
ಗಾಸಿಪ್ಗೆ ಬ್ರೇಕ್ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಮಾತು ಯಾವ ಹಾನಿ ಮಾಡುತ್ತೆ ಅಂತ ಜ್ಞಾನೋಕ್ತಿ 12:18 ಹೇಳುತ್ತೆ?
ಬೇರೆಯವರ ಬಗ್ಗೆ ಮಾತಾಡುವಾಗ ಫಿಲಿಪ್ಪಿ 2:4 ರಲ್ಲಿರೋ ಸಲಹೆ ಹೇಗೆ ಸಹಾಯ ಮಾಡುತ್ತೆ?
ಬೇರೆಯವರ ಬಗ್ಗೆ ಮಾತಾಡುವಾಗ, ರೆಕ್ಕೆಪುಕ್ಕ ಬೆಳೆದು ನಿಧಾನವಾಗಿ ಕೊಂಕು ಮಾತಿಗೆ ತಿರಿಗಿದ್ರೆ ಏನು ಮಾಡ್ಬೇಕು?
ಬೇರೆಯವರ ಬಗ್ಗೆ ಮಾತಾಡೋ ಮುಂಚೆ ನಮ್ಮನ್ನ ನಾವು ಯಾವ ಪ್ರಶ್ನೆ ಕೇಳ್ಕೋಬೇಕು?