ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 5
  • ಅಗತ್ಯ ಇರೋ ಕಡೆ ಸೇವೆ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಗತ್ಯ ಇರೋ ಕಡೆ ಸೇವೆ ಮಾಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಬ್ರಾಂಚ್‌ ಆಫೀಸ್‌ನಲ್ಲಿ ಏನೆಲ್ಲ ಕೆಲಸಕಾರ್ಯ ನಡೆಯುತ್ತದೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ಸೇವೆ ಹೆಚ್ಚಿಸಲು ನಮಗಿರುವ ಅವಕಾಶಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ನೀವು “ಮಕೆದೋನ್ಯಕ್ಕೆ” ಹೋಗಬಲ್ಲಿರೊ?
    2011 ನಮ್ಮ ರಾಜ್ಯದ ಸೇವೆ
  • “ನಾನು ಬೇರೆ ದೇಶಕ್ಕೆ ಹೋಗಿ ನೆಲೆಸಬೇಕೋ?”
    2000 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 5
“ನಂಬಿಕೆ ತೋರಿಸಲು ನಿಮ್ಮ ಮುಂದೆ ಇರುವ ಅವಕಾಶಗಳು—ಅಗತ್ಯ ಇರೋ ಕಡೆ ಹೋಗಿ” ಅನ್ನೋ ವಿಡಿಯೋ ಮೇಲೆ ಆಧರಿಸಿದ ಚಿತ್ರಗಳು. ಕೊಲಾಜ್‌: 1. ಗ್ಯಾಬ್ರಿಯೇಲ್‌ ಅಧ್ಯಯನ ಮಾಡುತ್ತಿದ್ದಾನೆ. 2. ಶಾಖಾ ಕಚೇರಿಯನ್ನ ಹೇಗೆ ಸಂಪರ್ಕಿಸಬೇಕು ಅಂತ ಅವನು ಒಬ್ಬ ಹಿರಿಯನನ್ನು ಕೇಳುತ್ತಿದ್ದಾನೆ. 3. ವಿಶೇಷ ಅಭಿಯಾನದ ಸಮಯದಲ್ಲಿ ತನ್ನ ಗೆಳೆಯ ಸ್ಯಾಮುವೇಲ್‌ ಜೊತೆ ಸಾರುತ್ತಿದ್ದಾನೆ.

ಕ್ರೈಸ್ತ ಜೀವನ | ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ

ಅಗತ್ಯ ಇರೋ ಕಡೆ ಸೇವೆ ಮಾಡಿ

ಗೊತ್ತಿರುವ ಜಾಗದಲ್ಲಿ ಸೇವೆ ಮಾಡೋದು ಸುಲಭ. ಆದ್ರೆ ಹೊಸ ಜಾಗಕ್ಕೆ ಹೋಗಿ ಸೇವೆ ಮಾಡೋಕೆ ತುಂಬಾ ನಂಬಿಕೆ ಬೇಕು. (ಇಬ್ರಿ 11:8-10) ಅಗತ್ಯ ಇರುವ ಕಡೆ ಹೋಗಿ ಸೇವೆ ಮಾಡಬೇಕು ಅನ್ನೋ ಗುರಿ ನಿಮಗಿದ್ರೆ ಹಿರಿಯರ ಜೊತೆ ಮಾತಾಡಿ. ಖರ್ಚು ಎಷ್ಟಾಗುತ್ತೆ, ಎಲ್ಲಿಗೆ ಹೋಗಿ ಸೇವೆ ಮಾಡಬೇಕಂತಾನೂ ಯೋಚನೆ ಮಾಡಬೇಕು. ಇದಕ್ಕೋಸ್ಕರ ನೀವೇನು ಮಾಡಬೇಕು? ಅಗತ್ಯ ಇರುವ ಕಡೆ ಸೇವೆ ಮಾಡೋದರ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಓದಿ. ಈಗಾಗಲೇ ಹೋಗಿ ಸೇವೆ ಮಾಡುತ್ತಿರುವವರ ಜೊತೆನೂ ಮಾತಾಡಿ. (ಜ್ಞಾನೋ 15:22) ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಪ್ರಾರ್ಥಿಸಿ. (ಯಾಕೋ 1:5) ನೀವು ಹೋಗಬೇಕು ಅಂದುಕೊಂಡಿರೋ ಜಾಗದ ಬಗ್ಗೆ ತಿಳ್ಕೊಳ್ಳಿ. ಸಾಧ್ಯವಾದರೆ ಒಂದೆರಡು ದಿನ ಹೋಗಿ ಅಲ್ಲಿದ್ದು ಜಾಗವನ್ನ ನೋಡಿಕೊಂಡು ಬನ್ನಿ.

ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು—ಅಗತ್ಯ ಇರೋ ಕಡೆ ಹೋಗಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಅಗತ್ಯ ಇರುವ ಕಡೆ ಹೋಗಿ ಸೇವೆ ಮಾಡೋಕೆ ಗ್ಯಾಬ್ರಿಯೇಲ್‌ ಏನ್‌ ಮಾಡಿದ?

ನಿಮ್ಮ ಸಭೆ ಹತ್ತಿರ ಎಲ್ಲಿ ಅಗತ್ಯ ಇದೆ ಅಂತ ತಿಳಿದುಕೊಳ್ಳೋಕೆ ಸರ್ಕಿಟ್‌ ಮೇಲ್ವಿಚಾರಕರ ಹತ್ತಿರ ಮಾತಾಡಿ. ದೂರದಲ್ಲಿರುವ ಯಾವುದಾದರೂ ಸಭೆಗೆ ಅಗತ್ಯ ಇದೆಯಾ ಅಂತ ತಿಳಿದುಕೊಳ್ಳೋಕೆ ಸಭೆಯ ಸರ್ವಿಸ್‌ ಕಮಿಟಿ ಮೂಲಕ ಬ್ರಾಂಚ್‌ ಆಫೀಸಿಗೆ ಪತ್ರ ಬರೆಯಿರಿ. ಬೇರೆ ಬ್ರಾಂಚ್‌ ಆಫೀಸಿನ ಟೆರಿಟೊರಿಗೆ ಸೇರಿರುವ ಸಭೆಗಳ ಬಗ್ಗೆ ಮಾಹಿತಿ ಬೇಕಂದ್ರೆ ಆ ಬ್ರಾಂಚ್‌ ಆಫೀಸಿಗೆ ಪತ್ರ ಬರೆದು ತಿಳಿದುಕೊಳ್ಳಿ. ಒಂದುವೇಳೆ ನಿರ್ದಿಷ್ಟವಾಗಿ ಯಾವುದಾದರೂ ಜಾಗಕ್ಕೆ ಹೋಗಬೇಕು ಅಂತಿದ್ದರೆ ಅದನ್ನೂ ಪತ್ರದಲ್ಲಿ ಬರೆಯಿರಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ