ಬೈಬಲಿನಲ್ಲಿರುವ ನಿಧಿ
ಯೆಹೋವನ ತಾಳ್ಮೆಗೆ ಮಿತಿ ಇದೆ
ಅಶ್ಶೂರದವರು ಇಸ್ರಾಯೇಲ್ಯರನ್ನ ವಶಮಾಡಿಕೊಳ್ಳೋಕೆ ಯೆಹೋವ ಬಿಟ್ಟುಬಿಟ್ಟನು (2ಅರ 17:5, 6; it-2-E ಪುಟ 908 ಪ್ಯಾರ 5)
ತನ್ನ ಜನರು ಯಾವಾಗಲೂ ತನ್ನ ಮನಸ್ಸನ್ನ ನೋಯಿಸಿದ್ರಿಂದ ಯೆಹೋವ ಅವರಿಗೆ ಶಿಸ್ತು ಕೊಟ್ಟನು (2ಅರ 17:9-12; it-1-E ಪುಟ 414-415)
ಯೆಹೋವ ಇಸ್ರಾಯೇಲ್ಯರಿಗೆ ತುಂಬ ತಾಳ್ಮೆ ತೋರಿಸಿದನು. ಅವರಿಗೆ ಪದೇಪದೇ ಎಚ್ಚರಿಕೆ ಕೊಟ್ಟನು (2ಅರ 17:13, 14)
ಅಪರಿಪೂರ್ಣ ಮನುಷ್ಯರಿಗೆ ನಮ್ಮ ಸ್ವರ್ಗೀಯ ಅಪ್ಪ ಯೆಹೋವ ತುಂಬ ತಾಳ್ಮೆ ತೋರಿಸ್ತಾನೆ. (2ಪೇತ್ರ 3:9) ಆದ್ರೆ ತಾನು ಅಂದುಕೊಂಡಿದ್ದನ್ನ ಸಾಧಿಸೋಕೆ, ಕೆಟ್ಟವರನ್ನ ನಾಶಮಾಡೋಕೆ ಅವರ ವಿರುದ್ಧ ಕ್ರಮ ತಗೊಳ್ತಾನೆ. ಹಾಗಾಗಿ ‘ನಮ್ಮನ್ನ ಯಾರಾದ್ರೂ ತಿದ್ದಿದಾಗ ನಾವು ಸರಿ ಮಾಡಿಕೊಳ್ತೀವಾ? ಸಿಹಿಸುದ್ದಿಯನ್ನ ಆದಷ್ಟು ಬೇಗ ಜನರಿಗೆ ತಲುಪಿಸೋಕೆ ನೋಡ್ತೀವಾ?’ ಅಂತ ನಮ್ಮನ್ನೇ ಕೇಳಿಕೊಳ್ಳಬೇಕು.