ಶುಕ್ರವಾರ, ಅಕ್ಟೋಬರ್ 31
ಅಪ್ಪನಿಗೂ ನಿಮ್ಮ ಮೇಲೆ ತುಂಬ ಪ್ರೀತಿ ಇದೆ. ಯಾಕಂದ್ರೆ ನೀವು ನನ್ನನ್ನ ಪ್ರೀತಿಸಿದ್ರಿ, ನಾನು ದೇವರ ಪ್ರತಿನಿಧಿ ಅಂತ ನಂಬಿದ್ರಿ.—ಯೋಹಾ. 16:27.
ಯೆಹೋವ ತನ್ನ ಸೇವಕರಾದ ನಮ್ಮನ್ನ ಪ್ರೀತಿಸ್ತಾನೆ, ಮೆಚ್ಕೊಳ್ತಾನೆ ಅಂತ ತೋರಿಸೋಕೆ ಇಷ್ಟಪಡ್ತಾನೆ. ತನ್ನ ಪ್ರೀತಿಯ ಮಗನಾದ ಯೇಸುವನ್ನೂ ಯೆಹೋವ ಮೆಚ್ಕೊಂಡನು. ಅಂಥ 2 ಸಂದರ್ಭದ ಬಗ್ಗೆ ಬೈಬಲ್ ಹೇಳುತ್ತೆ. (ಮತ್ತಾ. 3:17; 17:5) ಯೆಹೋವ ನಿಮ್ಮನ್ನೂ ಮೆಚ್ಕೊಂಡಿದ್ದೀನಿ ಅಂತ ಹೇಳೋದನ್ನ ಕೇಳಿಸ್ಕೊಳ್ಳೋಕೆ ನೀವು ಇಷ್ಟಪಡ್ತೀರಾ? ಆತನು ಯೇಸುಗೆ ಹೇಳಿದ ತರ ಸ್ವರ್ಗದಿಂದ ನೇರವಾಗಿ ನಿಮ್ಮ ಹತ್ರ ಹೇಳಲ್ಲ, ಆದ್ರೆ ಬೈಬಲಿಂದ ಹೇಳ್ತಾನೆ. ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತುಗಳು ಬೈಬಲಲ್ಲಿದೆ. ಅದನ್ನ ಓದುವಾಗ ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಹೇಳೋದನ್ನ “ಕೇಳಿಸ್ಕೊಳ್ಳೋಕೆ” ಆಗುತ್ತೆ. ತನ್ನ ಶಿಷ್ಯರು ಅಪರಿಪೂರ್ಣರಾಗಿದ್ರೂ ಯೆಹೋವನಿಗೆ ನಂಬಿಕೆಯಿಂದ ಸೇವೆ ಮಾಡೋದನ್ನ ನೋಡಿದಾಗ ಯೇಸು ಅವ್ರನ್ನ ಮೆಚ್ಕೊಂಡನು. ಯೆಹೋವನಲ್ಲಿರೋ ಈ ಗುಣನ ಯೇಸುನೂ ತೋರಿಸಿದ್ರಿಂದ ಯೆಹೋವ ನಮ್ಮನ್ನೂ ಮೆಚ್ಕೊಳ್ತಾನೆ ಅಂತ ಗೊತ್ತಾಗುತ್ತೆ. (ಯೋಹಾ. 15:9, 15) ಆದ್ರೆ ನಮಗೆ ಕಷ್ಟ ಬರ್ತಾ ಇದೆ ಅಂದ್ರೆ ಅದರರ್ಥ ಯೆಹೋವ ನಮ್ಮನ್ನ ಮೆಚ್ಕೊಂಡಿಲ್ಲ ಅಂತನಾ? ಅಲ್ಲ. ನಾವು ಯೆಹೋವ ದೇವ್ರನ್ನ ಎಷ್ಟು ಪ್ರೀತಿಸ್ತೀವಿ, ಆತನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದೀವಿ ಅಂತ ತೋರಿಸೋಕೆ ಆಗ ನಮಗೊಂದು ಅವಕಾಶ ಸಿಗುತ್ತೆ.—ಯಾಕೋ. 1:12. w24.03 28 ¶10-11
ಶನಿವಾರ, ನವೆಂಬರ್ 1
ಚಿಕ್ಕಮಕ್ಕಳು ಪುಟಾಣಿಗಳು ನಿನ್ನನ್ನ ಹೊಗಳೋ ಹಾಗೆ ಮಾಡಿದ್ದೀಯ.—ಮತ್ತಾ. 21:16.
ಅಪ್ಪಅಮ್ಮಂದಿರೇ, ನಿಮ್ಮ ಮಕ್ಕಳು ಚೆನ್ನಾಗಿ ಅರ್ಥ ಮಾಡ್ಕೊಂಡು ಉತ್ರ ಹೇಳೋ ತರ ಮನೆಯಲ್ಲೇ ತಯಾರಿ ಮಾಡಿಸಿ. ಕೆಲವೊಮ್ಮೆ ದೊಡ್ಡವರಿಗಂತಾನೇ ಕೆಲವು ಲೇಖನಗಳು ಬರುತ್ತೆ. ಅದ್ರಲ್ಲಿ ಗಂಡ-ಹೆಂಡತಿಯರ ಮಧ್ಯ ಆಗೋ ಸಮಸ್ಯೆಗಳ ಬಗ್ಗೆ, ನೈತಿಕತೆ ಬಗ್ಗೆ ಇರುತ್ತೆ. ಅದ್ರಲ್ಲೂ ಮಕ್ಕಳು ಉತ್ರ ಕೊಡೋ ತರ ಒಂದೆರಡು ಪ್ಯಾರಗಳು ಇರಬಹುದು. ಅದನ್ನ ಅವ್ರಿಗೆ ತಯಾರಿ ಮಾಡಿಸಿ. ಮಕ್ಕಳಿಗೆ ಇನ್ನೊಂದು ವಿಷ್ಯನೂ ಹೇಳಿಕೊಡಿ. ಅವರು ಕೈ ಎತ್ತಿದಾಗ ಕೆಲವೊಮ್ಮೆ ಯಾಕೆ ಅವ್ರಿಗೆ ಅವಕಾಶ ಸಿಗಲ್ಲ ಅನ್ನೋದನ್ನ ಅರ್ಥ ಮಾಡಿಸಿ. ಆಗ ಅವ್ರಿಗೆ ಅವಕಾಶ ಸಿಗಲಿಲ್ಲಾಂದ್ರೆ ಬೇಜಾರ್ ಮಾಡ್ಕೊಳಲ್ಲ. (1 ತಿಮೊ. 6:18) ನಾವು ಯೆಹೋವನಿಗೆ ಹೊಗಳಿಕೆ ಸಿಗೋ ತರ ಮತ್ತು ನಮ್ಮ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಕೊಡೋ ತರ ಉತ್ರಗಳನ್ನ ಹೇಳೋಣ. (ಜ್ಞಾನೋ. 25:11) ಕೆಲವೊಮ್ಮೆ ಉತ್ರ ಕೊಡುವಾಗ ನಮ್ಮ ಅನುಭವಗಳನ್ನ ಹೇಳಬಹುದು. ಆದ್ರೆ ಆಗ ನಮ್ಮ ಬಗ್ಗೆನೇ ತುಂಬ ಮಾತಾಡಬಾರದು. (ಜ್ಞಾನೋ. 27:2; 2 ಕೊರಿಂ. 10:18) ಬದಲಿಗೆ ಜನ್ರ ಗಮನ ಯೆಹೋವನ ಮೇಲೆ, ಆತನ ವಾಕ್ಯದ ಮೇಲೆ, ಆತನ ಜನ್ರ ಮೇಲೆ ಹೋಗೋ ತರ ಉತ್ರ ಹೇಳಬೇಕು.—ಪ್ರಕ. 4:11. w23.04 24-25 ¶17-18
ಭಾನುವಾರ, ನವೆಂಬರ್ 2
ನಾವು ಬೇರೆಯವ್ರ ತರ ನಿದ್ದೆ ಮಾಡೋದು ಬೇಡ, ಎಚ್ಚರವಾಗಿ ಇರೋಣ.—1 ಥೆಸ. 5:6.
ನಮ್ಮಲ್ಲಿ ಪ್ರೀತಿ ಇದ್ರೆ ನಾವು ಯಾವಾಗ್ಲೂ ಎಚ್ಚರವಾಗಿ ಇರ್ತೀವಿ ಮತ್ತು ಸರಿಯಾಗಿ ಇರೋದನ್ನೇ ಮಾಡ್ತೀವಿ. (ಮತ್ತಾ. 22:37-39) ಯೆಹೋವ ದೇವರ ಮೇಲೆ ನಮಗೆ ಪ್ರೀತಿ ಇರೋದ್ರಿಂದ ಏನೇ ಕಷ್ಟ ಬಂದ್ರೂ ನಾವು ಸಾರೋದನ್ನ ನಿಲ್ಲಿಸಲ್ಲ. (2 ತಿಮೊ. 1:7, 8) ಯೆಹೋವ ದೇವರನ್ನ ಆರಾಧನೆ ಮಾಡದಿರೋ ಜನ್ರನ್ನೂ ನಾವು ಪ್ರೀತಿಸ್ತೀವಿ. ಪತ್ರ ಬರೆದು ಅಥವಾ ಫೋನ್ ಮಾಡಿಯಾದ್ರೂ ಸಿಹಿಸುದ್ದಿ ಸಾರ್ತೀವಿ. ಒಂದಲ್ಲ ಒಂದಿನ ಅವರು ಬದಲಾಗಿ ಸರಿಯಾಗಿ ಇರೋದನ್ನ ಮಾಡ್ತಾರೆ ಅಂತ ನಂಬ್ತೀವಿ. (ಯೆಹೆ. 18:27, 28) ಜನ್ರನ್ನ ಪ್ರೀತಿಸೋದ್ರ ಜೊತೆಗೆ ಸಹೋದರ ಸಹೋದರಿಯರನ್ನೂ ಪ್ರೀತಿಸಬೇಕು. ಹೇಗೆ? ನಾವು “ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ, ಬಲಪಡಿಸ್ತಾ” ಇರಬೇಕು. (1 ಥೆಸ. 5:11) ಸೈನಿಕರು ಯುದ್ಧದಲ್ಲಿ ಒಬ್ರಿಗೊಬ್ರು ಸಹಾಯ ಮಾಡೋ ತರ ಸಹೋದರ ಸಹೋದರಿಯರು ಒಬ್ಬರಿಗೊಬ್ರು ಸಹಾಯ ಮಾಡಬೇಕು. ಆದ್ರೂ ಕೆಲವೊಮ್ಮೆ ಅವ್ರು ಗೊತ್ತಿಲ್ಲದೇ ನಮಗೆ ನೋವು ಮಾಡಿಬಿಡಬಹುದು. ಹಾಗಂತ ನಾವು ಅದನ್ನೇ ಮನಸ್ಸಲ್ಲಿಟ್ಟು ಅವ್ರಿಗೆ ಸೇಡು ತೀರಿಸೋಕೆ ಹೋಗಬಾರದು. (1 ಥೆಸ. 5:13, 15) ಅಷ್ಟೇ ಅಲ್ಲ, ನಾವು ಸಭೆಯನ್ನ ನೋಡ್ಕೊಳ್ಳೋ ಸಹೋದರರನ್ನೂ ಪ್ರೀತಿಸಬೇಕು ಮತ್ತು ಗೌರವಿಸಬೇಕು.—1 ಥೆಸ. 5:12. w23.06 10 ¶6; 11 ¶10-11