ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಈ ವಾರ
ಜುಲೈ 21-27
ಜೀವನ ಮತ್ತು ಸೇವೆ ಕೂಟದ ಕೈಪಿಡಿ—2025 | ಜುಲೈ

ಜುಲೈ 21-27

ಜ್ಞಾನೋಕ್ತಿ 23

ಗೀತೆ 97 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಮದ್ಯಪಾನದ ಬಗ್ಗೆ ಕೆಲವು ಕಿವಿಮಾತು

(10 ನಿ.)

ನೀವು ಕುಡಿಬೇಕು ಅಂದ್ಕೊಂಡಿದ್ರೆ ಅತಿಯಾಗಿ ಕುಡಿಯೋಕೆ ಹೋಗಬೇಡಿ (ಜ್ಞಾನೋ 23:20, 21; w04 12/1 19 ¶5-6)

ಅತಿಯಾಗಿ ಕುಡಿಯೋದ್ರಿಂದ ಏನೆಲ್ಲಾ ತೊಂದ್ರೆ ಆಗುತ್ತೆ ಅನ್ನೋದನ್ನ ಮನಸ್ಸಲ್ಲಿಡಿ (ಜ್ಞಾನೋ 23:29, 30, 33-35; it-1-E 656)

ಕುಡಿಯೋದ್ರಿಂದ ಏನೂ ಆಗಲ್ಲ ಅಂತ ನಿಮ್ಮನ್ನ ನೀವೇ ಮೋಸ ಮಾಡ್ಕೊಬೇಡಿ (ಜ್ಞಾನೋ 23:31, 32)

ಒಬ್ಬ ಸಹೋದರಿ ಸೋಫಾ ಮೇಲೆ ಕೂತ್ಕೊಂಡು ದೂರದಲ್ಲಿರೋ ಮದ್ಯದ ಬಾಟಲ್‌ನ ನೋಡ್ತಿದ್ದಾರೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 23:21—ಹೊಟ್ಟೆಬಾಕತನಕ್ಕೂ ಬೊಜ್ಜಿಗೂ ಇರೋ ವ್ಯತ್ಯಾಸ ಏನು? (w04 11/1 31 ¶2)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 23:1-24 (th ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(2 ನಿ.) ಸಾರ್ವಜನಿಕ ಸಾಕ್ಷಿ. (lmd ಪಾಠ 3 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(5 ನಿ.) ಮನೆ-ಮನೆ ಸೇವೆ. ಬೈಬಲ್‌ ಸ್ಟಡಿ ಹೇಗೆ ನಡಿಯುತ್ತೆ ಅಂತ ತೋರಿಸಿ. (lmd ಪಾಠ 9 ಪಾಯಿಂಟ್‌ 5)

6. ಶಿಷ್ಯರಾಗೋಕೆ ಕಲಿಸಿ

(5 ನಿ.) ಯೆಹೋವನಿಗೆ ಇಷ್ಟ ಇಲ್ಲದ ಅಭ್ಯಾಸ ಬಿಡೋಕೆ ಕಷ್ಟಪಡ್ತಿರೋ ಬೈಬಲ್‌ ವಿದ್ಯಾರ್ಥಿನ ಪ್ರೋತ್ಸಾಹಿಸಿ. (lmd ಪಾಠ 12 ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 35

7. ಮದುವೆಯಲ್ಲಿ ಮದ್ಯ ಕೊಡಬೇಕಾ ಬೇಡ್ವಾ?

(8 ನಿ.) ಚರ್ಚೆ.

ಮದುವೆ ಸಮಾರಂಭ ಅಥವಾ ಬೇರೆ ಯಾವುದಾದ್ರೂ ಕಾರ್ಯಕ್ರಮದಲ್ಲಿ ಮದ್ಯ ಕೊಡಬಹುದಾ? ಅದನ್ನ ಕೊಡಬೇಕಾ ಬೇಡ್ವಾ ಅಂತ ಕಾರ್ಯಕ್ರಮನ ಏರ್ಪಾಡು ಮಾಡೋರು ನಿರ್ಧಾರ ಮಾಡಬಹುದು. ಆದ್ರೆ ಅದಕ್ಕೂ ಮುಂಚೆ ಬೈಬಲ್‌ ತತ್ವಗಳನ್ನ ಮತ್ತು ಇನ್ನೂ ಬೇರೆ ವಿಷ್ಯಗಳನ್ನ ಮನಸ್ಸಲ್ಲಿಡಬೇಕು.

ಮದುವೆ ನಿಶ್ಚಯ ಆಗಿರೋ ಹುಡುಗ-ಹುಡುಗಿ ತಮ್ಮ ಮದುವೆಲಿ ಮದ್ಯ ಕೊಡಬೇಕಾ ಬೇಡ್ವಾ ಅಂತ ಮಾತಾಡ್ಕೊತಿದ್ದಾರೆ. ಅವ್ರ ಮುಂದೆ ಟೇಬಲ್‌ ಮೇಲೆ ತೆರೆದಿರೋ ಬೈಬಲ್‌ ಇದೆ, ಟ್ಯಾಬ್‌ನಲ್ಲಿ ವೈನ್‌ ಬಾಟಲ್‌ಗಳ ಚಿತ್ರ ಇದೆ.

ಮದುವೆಯಲ್ಲಿ ಮದ್ಯ ಕೊಡಬೇಕಾ? ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಮದ್ಯ ಕೊಡಬೇಕಾ ಬೇಡ್ವಾ ಅಂತ ನಿರ್ಧಾರ ಮಾಡೋಕೆ ಕೆಳಗೆ ಕೊಟ್ಟಿರೋ ಬೈಬಲ್‌ ತತ್ವಗಳು ಹೇಗೆ ಸಹಾಯ ಮಾಡುತ್ತೆ?

    • ಯೋಹಾ 2:9—ಯೇಸು ಒಂದು ಮದುವೆಯಲ್ಲಿ ನೀರನ್ನ ದ್ರಾಕ್ಷಾಮದ್ಯವಾಗಿ ಮಾಡಿದನು.

    • 1ಕೊರಿಂ 6:10—“ಕುಡುಕರು . . . ದೇವರ ಆಳ್ವಿಕೆಯಲ್ಲಿ ಇರಲ್ಲ.”

    • 1ಕೊರಿಂ 10:31, 32—“ನೀವು ತಿಂದ್ರೂ ಕುಡಿದ್ರೂ ಬೇರೇನೇ ಮಾಡಿದ್ರೂ ಅದನ್ನೆಲ್ಲ ದೇವರಿಗೆ ಗೌರವ ತರೋ ಹಾಗೆ ಮಾಡಿ . . . ಎಡವಿಸದ ಹಾಗೆ ಹುಷಾರಾಗಿರಿ.”

  • ಯಾವೆಲ್ಲ ವಿಷ್ಯಗಳನ್ನ ನಾವು ಮನಸ್ಸಲ್ಲಿ ಇಟ್ಕೊಬೇಕು?

  • ಬೈಬಲಿನಲ್ಲಿರೋ ಬೇರೆ ಬೇರೆ ತತ್ವಗಳನ್ನ ಅರ್ಥಮಾಡ್ಕೊಂಡು ಸರಿಯಾದ ತೀರ್ಮಾನ ಮಾಡೋಕೆ “ಯೋಚನಾ ಸಾಮರ್ಥ್ಯ” ಹೇಗೆ ಸಹಾಯ ಮಾಡುತ್ತೆ?—ರೋಮ 12:1; ಪ್ರಸಂ 7:16-18

8. ಸ್ಥಳೀಯ ಅಗತ್ಯಗಳು

(7 ನಿ.)

9. ಸಭಾ ಬೈಬಲ್‌ ಅಧ್ಯಯನ

(30 ನಿ.) lfb ಪಾಠ 2, ಭಾಗ 2ರ ಪರಿಚಯ ಮತ್ತು ಪಾಠ 3

ಸಮಾಪ್ತಿ ಮಾತುಗಳು (3 ನಿ.) | ಗೀತೆ 29 ಮತ್ತು ಪ್ರಾರ್ಥನೆ

ಪರಿವಿಡಿ
ಕಾವಲಿನಬುರುಜು (ಅಧ್ಯಯನ)—2025 | ಮೇ

ಅಧ್ಯಯನ ಲೇಖನ 20: ಜುಲೈ 21-27, 2025

8 ಯೆಹೋವನಿಂದ ಸಾಂತ್ವನ ಪಡ್ಕೊಳ್ಳಿ

ಹೆಚ್ಚು ಓದಲು

ಇದೇ ಸಂಚಿಕೆಯ ಬೇರೆ ಲೇಖನಗಳು

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ