ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/07 ಪು. 18
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—2007
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಳ್ಳೇ ಸ್ನೇಹಿತರಿದ್ದರೆ ದೀರ್ಘಾಯುಸ್ಸು
  • ಇಂಧನಕ್ಕಾಗಿ ಗೋಧಿಯೋ?
  • ಆ್ಯಮಸಾನ್‌ನಲ್ಲಿ ಕೀಟಗಳನ್ನು ಲೆಕ್ಕಿಸುವುದು
  • ಶಕ್ತಿಯ ಕೊರತೆ
  • ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ತಿಳಿದಿರಬೇಕು?
    ಎಚ್ಚರ!—2009
  • ನಮ್ಮ ಅಧಿಕೃತ ವೆಬ್‌ ಸೈಟ್‌—ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನಕ್ಕೆ ಬಳಸಿ
    2012 ನಮ್ಮ ರಾಜ್ಯದ ಸೇವೆ
  • ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ಮಾಡಬೇಕು?
    ಎಚ್ಚರ!—2009
  • ಪ್ರಶ್ನಾ ಚೌಕ
    2007 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಎಚ್ಚರ!—2007
g 10/07 ಪು. 18

ಜಗತ್ತನ್ನು ಗಮನಿಸುವುದು

◼ “ಇಂದು ಸಾಗರದ ಪ್ರತಿಯೊಂದು ಚದರಮೈಲಿನಲ್ಲಿ 46,000 ಪ್ಲ್ಯಾಸ್ಟಿಕ್‌ ಕಸದ ಚೂರುಗಳು ತೇಲುತ್ತಿವೆ.”​—⁠ವಿಶ್ವ ಸಂಸ್ಥೆ ಪರಿಸರ ಕಾರ್ಯಕ್ರಮ. (g 7/07)

◼ ದಕ್ಷಿಣ ಆಫ್ರಿಕದಾದ್ಯಂತ ನ್ಯಾಯಾಲಯಗಳಲ್ಲಿ ಪ್ರತಿದಿನ 82 ಮಕ್ಕಳು “ಇತರ ಮಕ್ಕಳ ಮೇಲೆ ಅತ್ಯಾಚಾರ ಇಲ್ಲವೆ ಅಶ್ಲೀಲ ಆಕ್ರಮಣಮಾಡಿದ್ದಾರೆಂಬ” ಆರೋಪಕ್ಕೊಳಗಾಗುತ್ತಾರೆ. ಈ ಆಪಾದಿತ ಮಕ್ಕಳಲ್ಲಿ ಹೆಚ್ಚಿನವರು ಈ ದೌರ್ಜನ್ಯಗಳನ್ನು ನಡೆಸಲು ತಮಗೆ “ಟಿ.ವಿ.ಯಲ್ಲಿ ನೋಡಿದ ಕೃತ್ಯಗಳು ಸ್ಫೂರ್ತಿ ನೀಡಿದವು” ಎಂದನ್ನುತ್ತಾರೆಂದು ಕೆಲವರ ಹೇಳಿಕೆ.​—⁠ದ ಸ್ಟಾರ್‌, ದಕ್ಷಿಣ ಆಫ್ರಿಕ. (g 8/07)

◼ ಹೋಟೇಲ್‌ ರೂಮ್‌ಗಳ ಬಾಗಿಲಿನ ಗುಬುಟಗಳು, ದೀಪಗಳು, ಟೆಲಿಫೋನ್‌ಗಳು ಮತ್ತು ಟಿವಿ ರಿಮೋಟ್‌ ಕಂಟ್ರೋಲ್‌ಗಳನ್ನು ಮುಟ್ಟುವುದರಿಂದ ಹೋಟೇಲ್‌ ಅತಿಥಿಗಳು “ನೆಗಡಿಯ ವೈರಸನ್ನು ಸೋಂಕಿಸಿಕೊಳ್ಳುವ ಸಾಧ್ಯತೆ 50%” ಆಗಿರುತ್ತದೆ.​—⁠ಮ್ಯಾಕ್ಲೀನ್ಸ್‌, ಕೆನಡ. (g 9/07)

ಒಳ್ಳೇ ಸ್ನೇಹಿತರಿದ್ದರೆ ದೀರ್ಘಾಯುಸ್ಸು

ಒಳ್ಳೇ ಸ್ನೇಹಿತರ ಒಂದು ಗುಂಪು ಇರುವಲ್ಲಿ ಅದು ವ್ಯಕ್ತಿಯೊಬ್ಬನ ಆಯುಸ್ಸನ್ನು ಹೆಚ್ಚಿಸಬಹುದೆಂದು ಸೋಂಕುಶಾಸ್ತ್ರ ಹಾಗೂ ಸಮುದಾಯ ಆರೋಗ್ಯ ಪತ್ರಿಕೆ (ಇಂಗ್ಲಿಷ್‌) ವರದಿಸುತ್ತದೆ. ಮಾನವ ಸಂಬಂಧಗಳು ದೀರ್ಘಾಯುಸ್ಸಿನ ಮೇಲೆ ಹೇಗೆ ಪರಿಣಾಮ ಬೀರಿದವೆಂಬುದನ್ನು, ಹತ್ತು ವರ್ಷಗಳ ಅವಧಿಯಾದ್ಯಂತ 70 ಅಥವಾ ಅದಕ್ಕಿಂತಲೂ ಹೆಚ್ಚು ವಯಸ್ಸಿನ 1,500 ಮಂದಿ ಆಸ್ಟ್ರೇಲಿಯನರ ಮಧ್ಯೆ ನಡೆಸಲ್ಪಟ್ಟ ಸಮೀಕ್ಷೆಯಲ್ಲಿ ಪರಿಶೀಲಿಸಲಾಯಿತು. ಪರಸ್ಪರ ಸಂಪರ್ಕವಿರುವ ಅನೇಕ ಸ್ನೇಹಿತರಿದ್ದ ವ್ಯಕ್ತಿಗಳ ಮರಣ-ಪ್ರಮಾಣವು, ಕೆಲವೇ ಸ್ನೇಹಿತರಿದ್ದವರಿಗಿಂತ 22% ಕಡಿಮೆಯಾಗಿತ್ತು. ಕ್ರಿಯಾಶೀಲ ಗೆಳೆತನವು ವೃದ್ಧರ ಮೇಲೆ, ವಿಶೇಷವಾಗಿ “ಖಿನ್ನತೆ, ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ, ಆತ್ಮಗೌರವ, ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ, ಸ್ಥೈರ್ಯ ಅಥವಾ ತಮ್ಮ ಜೀವನವನ್ನು ನಿಯಂತ್ರಣದಲ್ಲಿಡುವ” ವಿಷಯದಲ್ಲೂ ಒಳ್ಳೇ ಪರಿಣಾಮ ಬೀರುತ್ತದೆ. (g 7/07)

ಇಂಧನಕ್ಕಾಗಿ ಗೋಧಿಯೋ?

ಇಂಧನಕ್ಕಾಗಿ ಗೋಧಿ ಸುಡುವುದು ಸರಿಯೋ? ಫ್ರಾಂಕ್‌ಫರ್ಟರ್‌ ಆಲ್‌ಗೆಮೈನ್‌ ಸೋನ್ಟ್‌ಸೀಟ್ಸಂಗ್‌ ಎಂಬ ಜರ್ಮನ್‌ ವಾರ್ತಾಪತ್ರಿಕೆ ವಿವರಿಸಿದ್ದೇನೆಂದರೆ, ಗೋಧಿಯ ಬೆಲೆ ಇಳಿಯುತ್ತಾ ಇದ್ದು, ಇಂಧನದ ಬೆಲೆ ಏರುತ್ತಾ ಇರುವುದರಿಂದ, ಒಬ್ಬ ರೈತನಿಗೆ ಗೋಧಿಯನ್ನು ಮಾರಿ ಇಂಧನದ ಎಣ್ಣೆ ಖರೀದಿಸುವುದಕ್ಕಿಂತಲೂ ಗೋಧಿಯನ್ನೇ ಉರಿಸುವುದು ಹೆಚ್ಚು ಲಾಭದಾಯಕ. ಎರಡೂವರೆ ಕೆ.ಜಿ. ಗೋಧಿ ಬೆಳೆಸಲಿಕ್ಕಾಗಿ ಅವನಿಗೆ 20 ಸೆಂಟ್ಸ್‌ ಖರ್ಚಾಗುತ್ತದೆ. ಆದರೆ ಗೋಧಿಯನ್ನೇ ಸುಡುವಲ್ಲಿ, ಅದು 60 ಸೆಂಟ್ಸ್‌ಗೆ ಸಿಗುವ 1 ಲೀಟರ್‌ ಇಂಧನದ ಎಣ್ಣೆಯಷ್ಟೇ ಶಾಖವನ್ನು ಉತ್ಪಾದಿಸುತ್ತದೆ. ಆದರೆ “ಇತರ ಜನರಿಗೆ ಹೊಟ್ಟೆಗೇ ಇಲ್ಲದಿರುವಾಗ ಧಾನ್ಯವನ್ನು ಸುಟ್ಟುಹಾಕಲು” ಹೇಗಾದೀತು? ಎಂಬ ಉಭಯಸಂಕಟದ ಬಗ್ಗೆ ವಾರ್ತಾಪತ್ರದಲ್ಲಿ ತಿಳಿಸಲಾಗಿತ್ತು. (g 8/07)

ಆ್ಯಮಸಾನ್‌ನಲ್ಲಿ ಕೀಟಗಳನ್ನು ಲೆಕ್ಕಿಸುವುದು

ಕೀಟಶಾಸ್ತ್ರಜ್ಞರು, ಆ್ಯಮಸಾನ್‌ ವರ್ಷಾರಣ್ಯದಲ್ಲಿ ಸುಮಾರು 60,000 ಜಾತಿಯ ಕೀಟಗಳಿರುವುದನ್ನು ಈ ವರೆಗೆ ಗುರುತಿಸಿದ್ದಾರೆ. ಫೋಲ್ಹಾ ಆನ್‌ಲೈನ್‌ಗನುಸಾರ ಇನ್ನೂ ಗುರುತಿಸಬೇಕಾದ ಜಾತಿಗಳ ಸಂಖ್ಯೆ 1,80,000 ಆಗಿವೆಯೆಂದು ಅಂದಾಜುಮಾಡಲಾಗಿದೆ. ಆ ಕ್ಷೇತ್ರದಲ್ಲಿ ಸದ್ಯಕ್ಕೆ 20 ಮಂದಿ ಕೀಟಶಾಸ್ತ್ರಜ್ಞರು ಕೆಲಸಮಾಡುತ್ತಿದ್ದಾರೆ. ಈ ವಿಶೇಷಜ್ಞರು ಪ್ರತಿ ವರ್ಷ ಸರಾಸರಿ 2.7 ಕೀಟ ಜಾತಿಗಳನ್ನು ಗುರುತಿಸಿ ವರ್ಣಿಸುತ್ತಾರೆಂದು ಇತ್ತೀಚಿನ ಅಂಕಿಸಂಖ್ಯೆಗಳು ಪ್ರಕಟಿಸುತ್ತವೆ. ಈ ವೇಗದಲ್ಲಿ ಸಾಗಿದರೆ, ಈ ಗುರುತಿಸುವಿಕೆಯ ಕಾರ್ಯಗತಿಯನ್ನು ಮುಗಿಸಲಿಕ್ಕಾಗಿ ಕೀಟಶಾಸ್ತ್ರಜ್ಞರ 90 ತಲೆಮಾರುಗಳು ಬೇಕಾಗುವುವು. ಇವರಲ್ಲಿ ಪ್ರತಿಯೊಬ್ಬನು 35 ವರ್ಷ ಅಂದರೆ ಒಟ್ಟಿನಲ್ಲಿ ಸುಮಾರು 3,300 ವರ್ಷ ಕೆಲಸಮಾಡಬೇಕಾಗುವುದು! (g 9/07)

ಶಕ್ತಿಯ ಕೊರತೆ

“ಒಂದು ಅಂದಾಜಿಗನುಸಾರ 160 ಕೋಟಿ ಜನರು, ಅಂದರೆ ಮಾನವಜಾತಿಯಲ್ಲಿ ಕಾಲುಭಾಗದಷ್ಟು ಜನರಿಗೆ ವಿದ್ಯುಚ್ಛಕ್ತಿಯ ಸೌಲಭ್ಯ ದೊರಕಿಲ್ಲ. 240 ಕೋಟಿ ಜನರು ಅಡಿಗೆಗಾಗಿ ಮತ್ತು ಶಾಖಕ್ಕಾಗಿ ಮುಖ್ಯವಾಗಿ ಕಲ್ಲಿದ್ದಿಲು, ಸೆಗಣಿ ಇಲ್ಲವೆ ಕಟ್ಟಿಗೆಯನ್ನು ಉಪಯೋಗಿಸುತ್ತಾರೆ.” ಇದನ್ನು ‘ವಿಶ್ವ ಸಂಸ್ಥೆ ಪರಿಸರ ಕಾರ್ಯಕ್ರಮವು’ ಪ್ರಕಾಶಿಸಿರುವ ನಮ್ಮ ಭೂಗ್ರಹ ಎಂಬ ಪತ್ರಿಕೆ ಹೇಳುತ್ತದೆ. “ಇಂಥ ಇಂಧನಗಳನ್ನು ಉರಿಸುವಾಗ ಹೊರಡುವ ಹೊಗೆಯು ಪ್ರತಿ ವರ್ಷ ಸರಾಸರಿ 25 ಲಕ್ಷ ಸ್ತ್ರೀಯರನ್ನು ಮತ್ತು ಮಕ್ಕಳನ್ನು ಬಲಿತೆಗೆಯುತ್ತದೆ.” (g 9/07)

[ಪುಟ 18ರಲ್ಲಿರುವ ಚಿತ್ರ ಕೃಪೆ]

AP Photo/Thanassis Stavrakis

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ