ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 125
  • ದೇವರಿಗೆ ಎಷ್ಟು ಹೆಸರಿದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರಿಗೆ ಎಷ್ಟು ಹೆಸರಿದೆ?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡೋ ಉತ್ತರ
  • ದೇವರ ಹೆಸರು
    ಎಚ್ಚರ!—2017
  • ದೇವರ ಹೆಸರೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಸತ್ಯ ದೇವರು ಯಾರು?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಬೈಬಲ್‌ ಕೊಡುವ ಉತ್ತರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 125
ಒಬ್ಬ ವ್ಯಕ್ತಿ ಬೈಬಲ್‌ ಓದುತ್ತಿದ್ದಾನೆ

ದೇವರಿಗೆ ಎಷ್ಟು ಹೆಸರಿದೆ?

ಬೈಬಲ್‌ ಕೊಡೋ ಉತ್ತರ

ದೇವರಿಗೆ ಒಂದೇ ಒಂದು ವೈಯಕ್ತಿಕ ಹೆಸರಿದೆ. ಹೀಬ್ರೂ ಭಾಷೆಯಲ್ಲಿ ದೇವರ ಹೆಸರನ್ನ יהוה ಹೀಗೆ ಬರಿತಾರೆ. ಕನ್ನಡದಲ್ಲಿa “ಯೆಹೋವ” ಅಂತ ಕರೀತಾರೆ. ತನ್ನ ಪ್ರವಾದಿಯಾದ ಯೆಶಾಯನ ಮೂಲಕ ದೇವರು ಹೇಳಿದ್ದು: “ನಾನು ಯೆಹೋವ. ಇದು ನನ್ನ ಹೆಸ್ರು.” (ಯೆಶಾಯ 42:8) ಪ್ರಾಚೀನ ಬೈಬಲ್‌ ಹಸ್ತ ಪ್ರತಿಗಳಲ್ಲಿ ಈ ಹೆಸರು ಸುಮಾರು 7,000 ಬಾರಿ ಕಂಡುಬರುತ್ತೆ. ಯಾವುದೇ ವ್ಯಕ್ತಿಯ ಹೆಸರುಗಳಿಗಿಂತb ಮತ್ತು ದೇವರಿಗಿರುವ ಬಿರುದುಗಳಿಗಿಂತ ಯೆಹೋವ ಅನ್ನೋ ಹೆಸರನ್ನ ಬೈಬಲಿನಲ್ಲಿ ತುಂಬ ಸಲ ಬಳಸಲಾಗಿದೆ.

ದೇವರಿಗೆ ಬೇರೆ ಹೆಸರುಗಳು ಇದ್ಯಾ?

ಬೈಬಲ್‌ ದೇವರನ್ನ ಒಂದೇ ಒಂದು ಹೆಸರಿನಿಂದ ಮಾತ್ರ ಗುರುತಿಸುತ್ತೆ. ಆದ್ರೆ ಬೇರೆ ಬೇರೆ ಬಿರುದುಗಳಿಂದ ಕರೆಯುತ್ತೆ ಮತ್ತು ವರ್ಣಿಸುತ್ತೆ. ಕೆಳಗೆ ದೇವರ ಕೆಲವು ಬಿರುದುಗಳನ್ನ ಮತ್ತು ವರ್ಣನೆಗಳನ್ನ ಕೊಡಲಾಗಿದೆ. ಪ್ರತಿಯೊಂದು ಬಿರುದು ಕೂಡ ದೇವರ ಗುಣ ಮತ್ತು ವ್ಯಕ್ತಿತ್ವದ ಬಗ್ಗೆ ವಿವರಿಸುತ್ತೆ.

ಬಿರುದು

ವಚನ

ಅರ್ಥ

ಅಲ್ಲಾ

(ಇಲ್ಲ)

“ಅಲ್ಲಾ” ಅನ್ನೋ ಅರೆಬಿಕ್‌ ಪದದ ಅರ್ಥ “ದೇವರು” ಅಂತ. ಆದ್ರೆ ಇದು ದೇವರ ವೈಯಕ್ತಿಕ ಹೆಸರಲ್ಲ. ಅರೆಬಿಕ್‌ ಭಾಷೆ ಮತ್ತು ಇತರ ಬೈಬಲ್‌ ಭಾಷಾಂತರಗಳಲ್ಲಿ “ಅಲ್ಲಾ” ಅನ್ನೋ ಪದವನ್ನ “ದೇವರು” ಪದಕ್ಕೆ ಸಮಾನಾರ್ಥಕವಾಗಿ ಬಳಸಲಾಗಿದೆ.

ಸರ್ವಶಕ್ತ

ಆದಿಕಾಂಡ 17:1

ಅಂದ್ರೆ ಅಪರಿಮಿತ ಶಕ್ತಿ ಇರೋ ದೇವರು. ಹೀಬ್ರುನ ‘ಎಲ್‌ಶದೈ,’ ಅಂದ್ರೆ ‘ಸರ್ವಶಕ್ತ ದೇವರು’ ಅನ್ನೋ ಪದ ಬೈಬಲಿನಲ್ಲಿ 7 ಸಲ ಇದೆ.

ಆಲ್ಫ ಮತ್ತು ಒಮೇಗ

ಪ್ರಕಟನೆ 1:8; 21:6; 22:13

“ನಾನೇ ಆರಂಭ, ನಾನೇ ಅಂತ್ಯ” ಅಥವಾ “ನಾನೇ ಮೊದಲನೆಯವನು, ನಾನೇ ಕೊನೆಯವನು.” ಅಂದ್ರೆ ಯೆಹೋವ ದೇವರಿಗಿಂತ ಮುಂಚೆ ಯಾವ ಸರ್ವಶಕ್ತ ದೇವರೂ ಇರಲಿಲ್ಲ. ನಂತ್ರನೂ ಯಾವ ದೇವರೂ ಇರಲ್ಲ. (ಯೆಶಾಯ 43:10) ಆಲ್ಫ ಮತ್ತು ಒಮೇಗ ಗ್ರೀಕ್‌ ಅಕ್ಷರಮಾಲೆಯ ಮೊದಲನೇ ಮತ್ತು ಕೊನೇ ಅಕ್ಷರಗಳು.

ಮಹಾ ವೃದ್ಧ

ದಾನಿಯೇಲ 7:9, 13, 22

ದೇವರಿಗೆ ಆರಂಭ ಇಲ್ಲ ಅಂತ ಅರ್ಥ. ಯಾವುದೇ ವ್ಯಕ್ತಿ ಅಥವಾ ಯಾವುದೇ ವಸ್ತುಗಳು ಅಸ್ತಿತ್ವದಲ್ಲಿ ಇರೋದಕ್ಕಿಂತ ಮುಂಚಿನಿಂದಲೂ ದೇವರು ಇದ್ದಾನೆ.—ಕೀರ್ತನೆ 90:2.

ಸೃಷ್ಟಿಕರ್ತ

ಯೆಶಾಯ 40:28

ಭೂಮಿ ಮೇಲಿರೋ ಎಲ್ಲವನ್ನ ದೇವರೇ ಸೃಷ್ಟಿಮಾಡಿದನು.

ಅಪ್ಪಾ ಅಥವಾ ತಂದೆ

ಮತ್ತಾಯ 6:9

ಜೀವ ಕೊಟ್ಟವನು.

ದೇವರು

ಆದಿಕಾಂಡ 1:1

ಆರಾಧನೆಯ ಒಂದು ವಸ್ತು. ‘ಎಲೋಹಿಮ್‌’ ಅನ್ನೋ ಹೀಬ್ರು ಪದ ಬಹುವಚನವಾಗಿದ್ದು ಯೆಹೋವ ದೇವರ ಘನತೆ, ಮಹಿಮೆ ಮತ್ತು ಗೌರವವನ್ನ ಇದು ಸೂಚಿಸುತ್ತೆ.

ಬೇರೆಲ್ಲ ದೇವರುಗಳಿಗಿಂತ ತುಂಬಾ ದೊಡ್ಡವನು

ಧರ್ಮೋಪದೇಶಕಾಂಡ 10:17

ಕೆಲವರು ’ಪ್ರಯೋಜನಕ್ಕೆ ಬಾರದ ದೇವರುಗಳನ್ನ’ ಆರಾಧನೆ ಮಾಡ್ತಾರೆ. ಆದ್ರೆ ಯೆಹೋವ ಆ ತರ ದೇವರಲ್ಲ, ಆತನು ಅತ್ಯುನ್ನತ ದೇವರು.—ಯೆಶಾಯ 2:8.

ಮಹಾ ಬೋಧಕ

ಯೆಶಾಯ 30:20, 21

ಒಳ್ಳೇ ಮಾರ್ಗದರ್ಶನ ಕೊಡ್ತಾನೆ ಮತ್ತು ಬೋಧಿಸ್ತಾನೆ.—ಯೆಶಾಯ 48:17, 18.

ಮಹಾ ಸೃಷ್ಟಿಕರ್ತ

ಕೀರ್ತನೆ 149:2

ಎಲ್ಲವನ್ನ ಸೃಷ್ಟಿ ಮಾಡಿದಾತ.—ಪ್ರಕಟನೆ 4:11.

ಖುಷಿಯಾಗಿರೋ ದೇವರು

1 ತಿಮೊತಿ 1:11

ದೇವರು ಸಂತೋಷವಾಗಿ ಮತ್ತು ಖುಷಿ ಖುಷಿಯಾಗಿ ಇರ್ತಾನೆ.—ಕೀರ್ತನೆ 104:31.

ಪ್ರಾರ್ಥನೆ ಕೇಳುವವನು

ಕೀರ್ತನೆ 65:2

ನಂಬಿಕೆಯಿಂದ ಮಾಡುವ ಪ್ರತಿಯೊಬ್ಬರ ಪ್ರಾರ್ಥನೆಯನ್ನ ಆತನು ಕೇಳ್ತಾನೆ.

ನಾನು ಇರುವಾತನೇ ಆಗಿದ್ದೇನೆ

ವಿಮೋಚನಕಾಂಡ 3:14, ಕಿಂಗ್‌ ಜೇಮ್ಸ್‌ ವರ್ಷನ್‌

ದೇವರು ತನ್ನ ಉದ್ದೇಶವನ್ನ ನೆರವೇರಿಸೋದಕ್ಕೆ ಏನು ಬೇಕೋ ಹಾಗೇ ಆಗ್ತಾನೆ. ಈ ವಾಕ್ಯವನ್ನ “ನನಗೇನು ಇಷ್ಟವೋ ಹಾಗೆಯೇ ಆಗುವೆನು” ಅಥವಾ “ನಾನು ಏನಾಗಬೇಕು ಅಂತ ಇಷ್ಟಪಡ್ತಿನೋ ಹಾಗೇ ಆಗ್ತೀನಿ” ಅಂತನೂ ಭಾಷಾಂತರಿಸಲಾಗಿದೆ. (ಜೆ. ಬಿ. ರಾಥರ್‌ಹ್ಯಾಮ್‌ರವರ ದಿ ಎಂಫೆಸೈಸ್ಡ್‌ ಬೈಬಲ್‌, ಹೊಸ ಲೋಕ ಭಾಷಾಂತರ) ಈ ವಿವರಣೆ ಇದರ ನಂತರ ಬರುವ ವಚನದಲ್ಲಿ ಯೆಹೋವನ ವೈಯಕ್ತಿಕ ಹೆಸರನ್ನ ವಿವರಿಸಲು ಸಹಾಯ ಮಾಡುತ್ತೆ.—ವಿಮೋಚನಕಾಂಡ 3:15.

ರೋಷಗಾರ

ವಿಮೋಚನಕಾಂಡ 34:14, ಕಿಂಗ್‌ ಜೇಮ್ಸ್‌ ವರ್ಷನ್‌

ಬೇರೆಯವರನ್ನ ಆರಾಧಿಸೋದನ್ನ ಆತನು ಸಹಿಸಲ್ಲ. ಈ ವಾಕ್ಯವನ್ನ “ವಿರೋಧಿಗಳನ್ನ ಸಹಿಸದವನು” ಮತ್ತು “ಅನನ್ಯ ಭಕ್ತಿಯನ್ನ ಹಕ್ಕಿಂದ ಕೇಳೋನು”ಅಂತನೂ ಭಾಷಾಂತರಿಸಲಾಗಿದೆ.—ಗಾಡ್ಸ್‌ ವರ್ಡ್‌ ಬೈಬಲ್‌; ಹೊಸ ಲೋಕ ಭಾಷಾಂತರ.

ಯುಗಯುಗಾಂತರಕ್ಕೂ ರಾಜ

ಪ್ರಕಟನೆ 15:3

ಆತನ ಆಳ್ವಿಕೆಗೆ ಆರಂಭನೂ ಇಲ್ಲ ಅಂತ್ಯನೂ ಇಲ್ಲ.

ಒಡೆಯ

ಕೀರ್ತನೆ 135:5

ಯಜಮಾನ ಅಥವಾ ಪ್ರಭು. ಹೀಬ್ರೂನಲ್ಲಿ ‘ಅಧೋನ್‌’ ಮತ್ತು ‘ಅಧೋನಿಮ್‌’ ಅಂತಾರೆ.

ಸರ್ವೋನ್ನತ

ಕೀರ್ತನೆ 47:2

ಉನ್ನತ ಸ್ಥಾನವನ್ನ ಹೊಂದಿದ್ದಾನೆ.

ಅತಿ ಪವಿತ್ರ

ಜ್ಞಾನೋಕ್ತಿ 9:10

ಎಲ್ಲರಿಗಿಂತ ಅತೀ ಪವಿತ್ರನು. (ನೈತಿಕವಾಗಿ ಪವಿತ್ರನು ಮತ್ತು ಪರಿಶುದ್ಧನು)

ಕುಂಬಾರ

ಯೆಶಾಯ 64:8

ಮಣ್ಣಿನ ಮೇಲೆ ಕುಂಬಾರನಿಗೆ ಹೇಗೆ ಅಧಿಕಾರ ಇರುತ್ತೋ ಹಾಗೆ ಯೆಹೋವನಿಗೆ ಎಲ್ಲಾ ಮನುಷ್ಯರ ಮತ್ತು ದೇಶಗಳ ಮೇಲೆ ಅಧಿಕಾರ ಇದೆ.—ರೋಮನ್ನರಿಗೆ 9:20, 21.

ಬಿಡಿಸಿದವನೂ, ಕೊಂಡುಕೊಂಡವನು

ಯೆಶಾಯ 41:14; ಕಿಂಗ್‌ ಜೇಮ್ಸ್‌ ವರ್ಷನ್‌

ಯೇಸು ಕ್ರಿಸ್ತನ ಬಿಡುಗಡೆಯ ಬೆಲೆಯ ಮೂಲಕ ಮಾನವರನ್ನ ಪಾಪ ಮತ್ತು ಮರಣದಿಂದ ಬಿಡಿಸಿದನು.—ಯೋಹಾನ 3:16.

ಬಂಡೆ

ಕೀರ್ತನೆ 18:2, 46

ಆತನು ಆಶ್ರಯ ಕೋಟೆ ಮತ್ತು ರಕ್ಷಣೆಯ ಮೂಲನಾಗಿದ್ದಾನೆ.

ರಕ್ಷಕ

ಯೆಶಾಯ 45:21

ಅಪಾಯ ಮತ್ತು ನಾಶನದಿಂದ ಕಾಪಾಡ್ತಾನೆ.

ಕುರುಬ

ಕೀರ್ತನೆ 23:1

ತನ್ನ ಆರಾಧಕರ ಅಗತ್ಯಗಳನ್ನ ಪೂರೈಸ್ತಾನೆ.

ವಿಶ್ವದ ರಾಜ

ಆದಿಕಾಂಡ 15:2

ಅತ್ಯುನ್ನತ ಅಧಿಕಾರ ಇರುವವನು. ಹೀಬ್ರುವಿನಲ್ಲಿ ‘ಅಡೊನೈ.’

ಮಹೋನ್ನತ ದೇವರು

ದಾನಿಯೇಲ 7:18, 27

ಅತ್ಯುನ್ನತ ಪರಮಾಧಿಕಾರಿ.

ಹೀಬ್ರು ಶಾಸ್ತ್ರಗಳಲ್ಲಿನ ಸ್ಥಳಗಳ ಹೆಸರುಗಳು

ಬೈಬಲಿನಲ್ಲಿ ಕೆಲವು ಸ್ಥಳಗಳ ಹೆಸರುಗಳಲ್ಲಿ ದೇವರ ಹೆಸರಿದೆ. ಆದರೆ ಅವು ಯಾವುದೂ ದೇವರಿಗಿರುವ ಬದಲಿ ಹೆಸರುಗಳಲ್ಲ.

ಸ್ಥಳದ ಹೆಸರು

ವಚನ

ಅರ್ಥ

ಯೆಹೋವ-ಯೀರೆ

ಆದಿಕಾಂಡ 22:13, 14

“ಯೆಹೋವ ಒದಗಿಸ್ತಾನೆ.”

ಯೆಹೋವ-ನಿಸ್ಸಿ

ವಿಮೋಚನಕಾಂಡ 17:15

“ಯೆಹೋವ ನನ್ನ ಸೂಚನಾ ಕಂಬ.” ತನ್ನ ಜನರು ಸಹಾಯ ಮತ್ತು ಸಂರಕ್ಷಣೆಗೆ ಯೆಹೋವನನ್ನ ಆಶ್ರಯಿಸ್ತಾರೆ.—ವಿಮೋಚನಕಾಂಡ 17:13-16.

ಯೆಹೋವ-ಷಾಲೋಮ್‌

ನ್ಯಾಯಸ್ಥಾಪಕರು 6:23, 24

“ಯೆಹೋವ ಶಾಂತಿಯಾಗಿದ್ದಾನೆ.”

ಯೆಹೋವ ಶಮ್ಮಾ

ಯೆಹೆಜ್ಕೇಲ 48:35, ಪಾದಟಿಪ್ಪಣಿ, ಅಮೆರಿಕನ್‌ ಸ್ಟ್ಯಾಂಡರ್ಡ್‌ ವರ್ಷನ್‌

“ಯೆಹೋವ ಅಲ್ಲಿದ್ದಾನೆ.”

ದೇವರ ಹೆಸರನ್ನ ತಿಳುಕೊಳ್ಳೋಕೆ ಮತ್ತು ಉಪಯೋಗಿಸೋಕೆ ಇರುವ ಕಾರಣಗಳು

  • ದೇವರಿಗೆ ಯೆಹೋವ ಅನ್ನೋ ತನ್ನ ವೈಯಕ್ತಿಕ ಹೆಸರು ತುಂಬ ಪ್ರಾಮುಖ್ಯ. ಹಾಗಾಗಿ ಬೈಬಲಿನಲ್ಲಿ ಅದನ್ನ ಸಾವಿರಾರು ಸಲ ಬರೆಸಿದ್ದಾನೆ.—ಮಲಾಕಿ 1:11.

  • ದೇವರ ಮಗನಾದ ಯೇಸು ಕೂಡ ದೇವರ ಹೆಸರಿನ ಪ್ರಾಮುಖ್ಯತೆನ ಪದೇ ಪದೇ ಒತ್ತಿ ಹೇಳಿದನು. ಉದಾಹರಣೆಗೆ ಯೇಸು, ಯೆಹೋವನಿಗೆ ಪ್ರಾರ್ಥಿಸುವಾಗ ಹೀಗಂದನು: “ನಿನ್ನ ಹೆಸ್ರು ಪವಿತ್ರವಾಗಲಿ.”—ಮತ್ತಾಯ 6:9; ಯೋಹಾನ 17:6.

  • ದೇವರ ಹೆಸರನ್ನ ತಿಳ್ಕೊಂಡು ಅದನ್ನ ಉಪಯೋಗಿಸೋದು ಆತನ ಜೊತೆ ಸ್ನೇಹವನ್ನ ಬೆಳೆಸಿಕೊಳ್ಳುವ ಮೊದಲ ಹೆಜ್ಜೆ. (ಕೀರ್ತನೆ 9:10; ಮಲಾಕಿ 3:16) ಇಂಥಾ ಸ್ನೇಹ ಬೆಳೆಸಿಕೊಂಡವರು ದೇವರ ಈ ಮಾತಿನಿಂದ ಪ್ರಯೋಜನ ಪಡ್ಕೊಬಹುದು. ಅದು ಹೇಳೋದು: “ಅವನು ನನ್ನನ್ನ ತುಂಬ ಪ್ರೀತಿಸೋದ್ರಿಂದ ನಾನು ಅವನನ್ನ ಕಾಪಾಡ್ತೀನಿ. ಅವನಿಗೆ ನನ್ನ ಹೆಸ್ರು ಗೊತ್ತಿರೋದ್ರಿಂದ ನಾನು ಅವನನ್ನ ಕಾಪಾಡ್ತೀನಿ.”—ಕೀರ್ತನೆ 91:14.

  • “ಸ್ವರ್ಗ ಮತ್ತು ಭೂಮಿಯಲ್ಲಿ ಎಷ್ಟೋ ದೇವರುಗಳು ಇದ್ದಾರೆ ಅಂತ ಜನ ಹೇಳ್ತಾರೆ. ಹಾಗಾದ್ರೆ ಜನ್ರಿಗೆ ತುಂಬ ದೇವರು, ಪ್ರಭುಗಳು ಇದ್ದಾರೆ” ಅಂತ ಬೈಬಲ್‌ ಹೇಳುತ್ತೆ. (1 ಕೊರಿಂಥ 8:5, 6) ಆದರೆ ಅದು ಸ್ಪಷ್ಟವಾಗಿ ಒಬ್ಬನೇ ಸತ್ಯ ದೇವರಿದ್ದಾನೆ ಅಂತ ಹೇಳುತ್ತೆ. ಆತನ ಹೆಸರು ಯೆಹೋವ.—ಕೀರ್ತನೆ 83:18.

a ದೇವರ ಹೆಸರಿಗೆ “ಯಾಹ್ವೆ” ಅಂತ ಉಪಯೋಗಿಸಬೇಕು ಅನ್ನೋದು ಕೆಲವು ಹೀಬ್ರು ವಿದ್ವಾಂಸರ ಅಭಿಪ್ರಾಯ.

b ದೇವರ ಹೆಸರನ್ನ ಚಿಕ್ಕದಾಗಿ “Jah” ಅಂತ ಕರಿತಾರೆ. ಇದನ್ನ ಸುಮಾರು 50 ಸಲ ಬೈಬಲ್‌ನಲ್ಲಿ ನೋಡಬಹುದು. “ಹಲ್ಲೆಲೂಯಾ” ಅಥ್ವಾ “ಅಲ್ಲೆಲೂಯಾ” ಅಂದರೆ “ಯಾಹುವನ್ನ ಸ್ತುತಿಸಿ!” ಅನ್ನೋದು ಅದ್ರಲ್ಲಿ ಸೇರಿದೆ.—ಪ್ರಕಟನೆ 19:1; ಅಮೆರಿಕನ್‌ ಸ್ಟ್ಯಾಂಡರ್ಡ್‌ ವರ್ಷನ್‌ ; ಕಿಂಗ್‌ ಜೇಮ್ಸ್‌ ವರ್ಷನ್‌.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ