ಬೇಸರಕ್ಕೆ ಒಂದು ಸುಲಭ ಪರಿಹಾರವೊ?
ಲಕ್ಷಾಂತರ ನೀರಸ ಗಿರಾಕಿಗಳಿಗೆ ಕೊನೆಯಿಲ್ಲದ ವಿನೋದಗಳನ್ನು ಒದಗಿಸುವುದು ಇಂದಿನ ಒಂದು ದೊಡ್ಡ ವ್ಯಾಪಾರ. ಅಸಾಧಾರಣ ರಜೆಗಳು, ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಲಕರಣೆಗಳು, ಪರಿಷ್ಕಾರವಾದ ಅಡಕ್ಡಸಬುಗಳು, ಇವೆಲ್ಲ ಗಿರಾಕಿಗಳ ಹೊತ್ತುಗಳೆಯುವುದಕ್ಕೆ ನೆರವಾಗಲು ಕಾರ್ಯನಡಿಸುತ್ತವೆ. ಆದರೂ ಬೇಸರವು ಇನ್ನೂ ಒಂದು ದೊಡ್ಡ ಸಮಸ್ಯೆ. ರಜೆಯಲ್ಲೂ ಜನರನ್ನು ಸಂತೋಷದಲ್ಲಿಡಲು ಅವರಿಗೆ ಬಾಹ್ಯ ಪ್ರಚೋದನೆಯ ಅಗತ್ಯವಿರುತ್ತದೆ. ಮತ್ತು ಅನೇಕ ದಕ್ಷ ಓಡುಗರಿಗೆ ಅವರ ಒಯ್ಯಲಾಗುವ ರೇಡಿಯೊ ಜೊತೆಯಲ್ಲಿರುವ ಹೊರತು ಯಾವುದೊ ಗಮನಾರ್ಹ ವಿಷಯವನ್ನು ಕಳೆದುಕೊಂಡಂತೆ ಭಾಸವಾಗುತ್ತದೆ.
ಟೆಲಿವಿಷನ್ನಂತಹ ಮನೋರಂಜನೆಯು ಉದ್ರೇಕವನ್ನು ಹುಟ್ಟಿಸಿ ಬೇಸರವನ್ನು ಓಡಿಸುತ್ತದೆಂಬದಕ್ಕೆ ಸಂದೇಹವಿಲ್ಲ, ಆದರೆ ಎಷ್ಟು ಕಾಲದ ತನಕ? ಕೆಲವರಿಗೆ ಅದು ಚಟ ಹಿಡಿಸುವ ಔಷಧದಂತೆ ಇರುತ್ತದೆ. ಮುಂದಿನ ಸಲ, ಇನ್ನು ಹೆಚ್ಚಿನ ಪ್ರೇರೇಪಕವು ಮತ್ತು ಇನ್ನು ಹೆಚ್ಚಿನ ಪ್ರಚೋದನೆಯು ಬೇಕಾಗುತ್ತವೆ. ಇಲ್ಲವಾದರೆ ಇದೆಲ್ಲವನ್ನು ಈ ಮೊದಲೆ ನೋಡಿಯಾಗಿದೆ ಎಂಬ ಬೇಸರದ ಭಾವನೆಯು ಪುನಃ ಬಲಗೊಳ್ಳುತ್ತದೆ. ಅಂತಹ ಮನೋರಂಜನೆಯು ಒಂದು ಪರಿಹಾರ ಮಾರ್ಗವಾಗಿ ಇರುವ ಬದಲಿಗೆ, ಕೊನೆಗೆ ಬೇಸರಕ್ಕೆ ನೆರವಾಗುವ ಕಾರಣಾಂಶಗಳಲ್ಲಿ ಒಂದಾಗಿ ಪರಿಣಮಿಸಬಲ್ಲದು.
ಟಿವಿ ತಾನಾಗಿಯೆ ಬೇಸರವನ್ನು ಉಂಟುಮಾಡುವುದಿಲ್ಲವಾದರೂ, ಅತಿರೇಕ ಟೆಲಿವಿಷನ್ ಬೇಸರವನ್ನು ತೊಲಗಿಸುವುದೂ ಇಲ್ಲ. ಇನ್ನೂ ಕೆಟ್ಟದಾಗಿ, ಟಿವಿ ವೀಕ್ಷಣೆಯಲ್ಲಿ ನೀವೆಷ್ಟು ಹೆಚ್ಚು ಸಮಯವನ್ನು ಕಳೆಯುತ್ತೀರೊ ಅಷ್ಟು ಹೆಚ್ಚಾಗಿ ವಾಸ್ತವಿಕತೆಯಿಂದ ವಿಸಂಗತವಾಗಿ ಹೋಗಬಲ್ಲಿರಿ. ಮಕ್ಕಳ ವಿಷಯದಲ್ಲಿ ಇದು ಅತಿ ಹೆಚ್ಚು ಸಾರಿ ಸಂಭವಿಸುತ್ತದೆ. ನಾಲ್ಕು ಮತ್ತು ಐದು ವರ್ಷ ಪ್ರಾಯದ ಮಕ್ಕಳ ಅಧ್ಯಯನ ಒಂದರಲ್ಲಿ, ಅವರು ಟಿವಿಯನ್ನು ತ್ಯಜಿಸಿಬಿಡಲು ಇಷ್ಟಪಡುತ್ತಾರೊ ಅಥವಾ ಅವರ ತಂದೆಯನ್ನೊ ಎಂದು ಕೇಳಿದಾಗ, ತಂದೆಯಿಲ್ಲದಿದ್ದರೆ ಜೀವನವು ಹೆಚ್ಚು ಸಹನೀಯವಾಗಿರುವುದೆಂದು ಮೂವರಲ್ಲಿ ಒಬ್ಬನು ನಿರ್ಣಯಿಸಿದನು!
ಪ್ರತಿಯೊಂದು ಇಷ್ಟವನ್ನು ತೀರಿಸಲು ಪ್ರಯತ್ನಿಸುವುದು ಸಹ ಪರಿಹಾರ ಮಾರ್ಗವಲ್ಲ. ಅನೇಕ ಯುವ ಜನರು ಇಂದು “ಪ್ರತಿಯೊಂದು ಆಟಿಕೆ, ಪ್ರತಿಯೊಂದು ರಜೆ, ಪ್ರತಿಯೊಂದು ಹೊಸ ಫ್ಯಾಷನನ್ನು ಪಡೆದುಕೊಳ್ಳಲು ಸಾಧ್ಯವಿರುವ ಒಂದು ಭೌತಿಕ ಸಮೃದ್ಧಿಯ ಕಾಲಾವಧಿಯಲ್ಲಿ ಬೆಳೆಸಲ್ಪಡುತ್ತಾರೆ” ಎಂದು ಜರ್ಮನ್ ಪಾರ್ಲಿಮೆಂಟಿನ ಸೋಷಲ್ ಡೆಮೊಕ್ರ್ಯಾಟಿಕ್ ಪಾರ್ಟಿಯ ಒಬ್ಬ ಪ್ರತಿನಿಧಿ ಗಮನಿಸಿದರು. ಯುವ ಜನರು ಉತ್ತೇಜಿತರಾಗಬಲ್ಲ ಏನಾದರೂ ಹೊಸ ವಿಷಯ ಇನ್ನಿದೆಯೆ? ತಮ್ಮ ಮಕ್ಕಳಿಗೆ ಹೊಚ್ಚ ಹೊಸ ಸಾಧನಗಳೆಲ್ಲವನ್ನು ಧಾರಾಳವಾಗಿ ಒದಗಿಸುವ ಸುಸ್ವಭಾವಿಗಳಾದ ಹೆತ್ತವರು, ತಮ್ಮ ಮಕ್ಕಳನ್ನು ಅಸ್ಥಿಗತ ಬೇಸರದಿಂದ ಬಾಧಿತವಾದ ಒಂದು ವಯಸ್ಕ ಜೀವನಕ್ಕೆ ನಿಜವಾಗಿ ನಡಿಸುತ್ತಿರಲೂಬಹುದು.
ಬೇಸರದ ಮೂಲ ಕಾರಣಗಳು
ಬೇಸರವನ್ನು ಪೂರ್ಣವಾಗಿ ತಪ್ಪಿಸಿಕೊಳ್ಳುವುದು ಒಂದು ಅವಾಸ್ತವಿಕವಾದ ಗುರಿ. ಈ ಲೋಕದಲ್ಲಿನ ಜೀವನವು ಸದಾ ಉತ್ಸಾಹದ ಮತ್ತು ಆನಂದದ ಜೀವನವಾಗಿ ಎಂದಿಗೂ ಇರಸಾಧ್ಯವಿಲ್ಲ. ಅಂತಹ ಅವಾಸ್ತವಿಕ ನಿರೀಕ್ಷಣೆಯು ಅನಾವಶ್ಯಕ ಅಸಂತುಷ್ಟಿಯನ್ನು ಉಂಟುಮಾಡುವುದು ಸಂಭವನೀಯ. ಅದೇ ಸಮಯದಲ್ಲಿ, ವಿಷಯಗಳನ್ನು ದೊಡ್ಡದುಮಾಡುವ ನಿಶ್ಚಿತ ಕಾರಣಾಂಶಗಳು ಇರುತ್ತವೆ.
ಉದಾಹರಣೆಗಾಗಿ, ಇಂದು ಅಧಿಕಾಧಿಕ ಕುಟುಂಬಗಳು ಒಡೆದುಹೋಗುತ್ತಾ ಇವೆ. ಅಮ್ಮ ಮತ್ತು ಅಪ್ಪ ತಮ್ಮ ಸ್ವಂತ ಮನೋರಂಜನೆಯಲ್ಲಿ ಬಹಳಷ್ಟು ತಲ್ಲೀನರಾಗಿರುವುದೇ ತಮ್ಮ ಮಕ್ಕಳೊಂದಿಗೆ ಇನ್ನು ಮುಂದೆ ಸಾಕಷ್ಟು ಸಮಯವನ್ನು ಕಳೆಯದೆ ಇರುವುದಕ್ಕೆ ಕಾರಣವಾಗಿರಬಹುದೊ? ಹದಿಹರೆಯದವರು ಡಿಸ್ಕೊಗಳಲ್ಲಿ, ವೀಡಿಯೊ ಪಾರ್ಲರ್ಗಳಲ್ಲಿ, ಶಾಪಿಂಗ್ ಕೇಂದ್ರಗಳೇ ಮುಂತಾದವುಗಳಲ್ಲಿ ತಮ್ಮನ್ನು ವಿನೋದಗೊಳಿಸುವ ತಮ್ಮ ಸ್ವಂತ ವಿಧಾನಗಳಿಗಾಗಿ ಹುಡುಕುವುದೇನೂ ಆಶ್ಚರ್ಯವಲ್ಲ. ಫಲಿತಾಂಶವಾಗಿ, ಅನೇಕ ಮನೆಗಳಲ್ಲಿ ಕುಟುಂಬ ಸಂತೋಷ ಸಂಚಾರಗಳು ಮತ್ತು ಕೂಡಿ ಮಾಡುವ ಬೇರೆ ಚಟುವಟಿಕೆಗಳು ಗತ ವಿಷಯಗಳಾಗಿವೆ.
ಇನ್ನೂ ಇತರರು ತಮ್ಮ ನೀರಸ ಜೀವನಗಳಲ್ಲಿ ಎಷ್ಟು ಅಸಂತುಷ್ಟರೆಂದರೆ ಅವರು ತಮಗೆ ಸಂತೋಷ ತರುವ ತಮ್ಮ ಸ್ವಂತ ವಿಷಯಗಳನ್ನೆ ಮಾಡುವವರಾಗಿ ಬೇರೊಬ್ಬರನ್ನು ಮರೆತುಬಿಡುತ್ತಾ, ಅಪ್ರಜ್ಞಾಪೂರ್ವಕವಾಗಿ ಏಕಾಂತವಾಸದೊಳಗೆ ತೆವಳುತ್ತಾರೆ. ಮತ್ತು ಅವರು ತಮ್ಮನ್ನು ಅಧಿಕಾಧಿಕವಾಗಿ ಏಕಾಂತವಾಸಕ್ಕೆ ಹಾಕುವಾಗ, ಯಾವುದನ್ನು ಆತ್ಮಸಿದ್ಧಿಯೆಂದು ಕರೆಯಸಾಧ್ಯವೊ ಅದನ್ನು ಸಾಧಿಸುವ ವ್ಯರ್ಥ ನಿರೀಕ್ಷೆಗೆ ಎಡೆಗೊಡುತ್ತಾರೆ. ಆದರೆ ಅದಂತೂ ಆ ರೀತಿಯಾಗಿ ಪರಿಣಮಿಸುವುದಿಲ್ಲ. ಎಷ್ಟೆಂದರೂ ಯಾವ ಮನುಷ್ಯನೂ ಬೇರೆ ಜನರಿಂದ ಪೂರ್ಣ ಪ್ರತ್ಯೇಕತೆಯಲ್ಲಿ ಏಳಿಗೆಯನ್ನು ಹೊಂದಲಾರನು. ನಮಗೆ ಸಹವಾಸ ಮತ್ತು ಸಂಸರ್ಗದ ಅಗತ್ಯವಿದೆ. ಆದುದರಿಂದ ಯಾರು ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೋ ಆ ವ್ಯಕ್ತಿಗಳು ಬೇಸರವನ್ನು ಹೆಚ್ಚಿಸಿಕೊಂಡು, ತಮಗಾಗಿಯೂ ತಮ್ಮ ಸುತ್ತಲಿರುವವರಿಗಾಗಿಯೂ ಜೀವನವನ್ನು ಬುದ್ಧಿಪೂರ್ವಕವಾಗಿ ನೀರಸವಾಗಿ ಮಾಡಿಕೊಳ್ಳುತ್ತಾರೆಂಬುದು ಅನಿವಾರ್ಯ.
ಆದರೂ, 17ನೆಯ ಶತಮಾನದ ಒಬ್ಬ ಫ್ರೆಂಚ್ ತತ್ವಜ್ಞಾನಿ ಬ್ಲ್ಯಾಜ್ ಪಾಸ್ಕಲ್ ಸ್ಪಷ್ಟವಾಗಿಗಿ ಗಮನಿಸಿರುವಂತೆ, ಸಮಸ್ಯೆಯು ತುಸು ಆಳವಾಗಿರುತ್ತದೆ: “ಬಳಲಿಕೆ ಮತ್ತು ಬೇಸರವು ಹೃದಯದಾಳದಿಂದ, ಎಲ್ಲಿ ಅದಕ್ಕೆ ಅದರ ಸಹಜವಾದ ಮೂಲಗಳಿದ್ದು ಮನಸ್ಸನ್ನು ಅದರ ವಿಷದಿಂದ [ತುಂಬಿಸುತ್ತದೊ] ಅಲ್ಲಿಂದ [ಏಳುತ್ತದೆ].” ಎಷ್ಟು ಸತ್ಯ!
ಎಷ್ಟರ ತನಕ ಹೃದಯವು ಜೀವನದ ಏಕೆ ಎತ್ತಗಳ ಸಂಬಂಧದಲ್ಲಿ ಕಾಡುವ ಸಂಶಯಗಳಿಂದ ತುಂಬಿರುತ್ತದೊ, ಆ ತನಕ ಬೇಸರವು ಉಳಿಯುವುದು ಖಂಡಿತ. ಒಬ್ಬನ ವೈಯಕ್ತಿಕ ಜೀವನಕ್ಕೆ ಅರ್ಥವಿದೆ ಎಂಬ ಹೃದಯಪೂರ್ವಕ ಮನವರಿಕೆಯು ಬೇಕು. ಆದರೂ, ಅವನು ಏಕೆ ಅಸ್ತಿತ್ವದಲ್ಲಿದ್ದಾನೆ ಎಂದು ತಿಳಿದ ಹೊರತು, ಗುರಿಗಳನ್ನು ಹೊಂದಿದ ಹೊರತು, ಭವಿಷ್ಯತ್ತಿಗಾಗಿ ಸರಿಯಾದ ಆಧಾರವುಳ್ಳ ನಿರೀಕ್ಷೆಗಳ ಹೊರತು ಯಾವನಾದರೂ ಜೀವನವನ್ನು ಸಕಾರಾತ್ಮಕ ಹೊರನೋಟದಿಂದ ಹೇಗೆ ಎದುರಿಸಬಲ್ಲನು?
ಇಲ್ಲಿಯೆ ಮೂಲಭೂತ ಪ್ರಶ್ನೆಗಳು ಏಳುತ್ತವೆ: ಜೀವನದ ಅರ್ಥವೇನು? ನನ್ನ ಅಸ್ತಿತ್ವದ ಉದ್ದೇಶವೇನು? ನನ್ನ ಭವಿಷ್ಯತ್ತು ಏನಾಗಿರುವುದು? “ಒಬ್ಬನ ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಿಸುವುದು ಮನುಷ್ಯನಲ್ಲಿರುವ ಪ್ರಧಾನ ಪ್ರೇರಕ ಶಕ್ತಿ” ಎಂದು ಡಾ. ವಿಕರ್ಟ್ ಫ್ರಾಂಕೆಲ್ ಗಮನಿಸಿದರು. ಆದರೂ, ಅಂತಹ ಒಂದು ಅರ್ಥವನ್ನು ಎಲ್ಲಿ ಕಂಡುಕೊಳ್ಳುವುದು ಸಾಧ್ಯ? ಈ ಪ್ರಶ್ನೆಗಳು ಎಲ್ಲಿ ತೃಪ್ತಿಕರವಾಗಿ ಉತ್ತರಿಸಲ್ಪಡಬಲ್ಲವು?
ಕಡಿಮೆ ಬೇಸರ—ಹೇಗೆ?
ಅಂತಹ ಮೂಲಭೂತ ಪ್ರಶ್ನೆಗಳ ಮೇಲೆ ಸಕಲ ಪುಸ್ತಕಗಳಲ್ಲಿ ಅತಿ ಪುರಾತನ ಪುಸ್ತಕವು ಜ್ಞಾನೋದಯವನ್ನು ಒದಗಿಸುತ್ತದೆ. ಹೈನ್ರಿಕ್ ಹೈನ ಎಂಬ 19ನೆಯ ಶತಮಾನದ ಜರ್ಮನ್ ಕವಿ ಹೇಳಿದ್ದು: “ನಾನು ನನ್ನ ಜ್ಞಾನೋದಯಕ್ಕೆ ತೀರ ಸರಳವಾಗಿ ಒಂದು ಪುಸ್ತಕದ ವಾಚನಕ್ಕೆ ಋಣಿಯಾಗಿದ್ದೇನೆ.” ಯಾವ ಪುಸ್ತಕ? ಬೈಬಲ್. ಚಾರ್ಲ್ಸ್ ಡಿಕನ್ಸ್ ತದ್ರೀತಿ ಹೇಳಿದ್ದು: “ಅದು ಜಗತ್ತಿನಲ್ಲಿರುವ ಪುಸ್ತಕಗಳಲ್ಲಿಯೇ ಅತ್ಯುತ್ತಮವಾದದ್ದಾಗಿದೆ ಮತ್ತು ಯಾವಾಗಲೂ ಆಗಿರುವುದು, ಯಾಕಂದರೆ ಯಾವನೆ ಮಾನವ ಜೀವಿಯು ಮಾರ್ಗದರ್ಶಿಸಲ್ಪಡಸಾಧ್ಯವಿರುವ . . . ಅತ್ಯುತ್ತಮ ಪಾಠಗಳನ್ನು ಅದು ನಮಗೆ ಕಲಿಸುತ್ತದೆ.”
ಕೆಳಗಿನ ವಿಷಯದ ಕುರಿತು ಏನೂ ಸಂದೇಹವಿರುವುದಿಲ್ಲ. ಬೈಬಲ್ ಒಂದು ಅರ್ಥಭರಿತ ಜೀವನದೆಡೆಗೆ ನಿಶ್ಚಿತ ಮಾರ್ಗದರ್ಶಕವಾಗಿರುತ್ತದೆ. ಆರಂಭದಿಂದ ಅಂತ್ಯದ ತನಕ, ದೇವರು ಮನುಷ್ಯನಿಗೆ ಮಾಡಲು ಕೆಲಸವನ್ನು ಕೊಟ್ಟನೆಂದು ಅದು ಸ್ಪಷ್ಟವಾಗಿಗಿ ತಿಳಿಸುತ್ತದೆ. ಮನುಷ್ಯನಿಗೆ ಭೂಮಿಯ ಪರಾಮರಿಕೆಯನ್ನು ಮಾಡಲಿಕ್ಕಿತ್ತು, ಅದನ್ನು ಸುಂದರಗೊಳಿಸಲಿಕ್ಕಿತ್ತು, ಪ್ರಾಣಿ ಜೀವಿಗಳ ಮೇಲೆ ಪ್ರೀತಿಯ ಮೇಲ್ವಿಚಾರಣೆಯನ್ನು ನಡಿಸಲಿಕ್ಕಿತ್ತು, ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ, ನಿರ್ಮಾಣಿಕನಾದ ಯೆಹೋವ ದೇವರನ್ನು ಸ್ತುತಿಸಲಿಕ್ಕಿತ್ತು. ಇದು ತೀರ ಗಮನಕೊಡಬೇಕಾದ ಕೆಲಸವಾಗಿ, ಬೇಸರಕ್ಕೆ ಅವಕಾಶವನ್ನು ಕೊಡದ ಕೆಲಸವಾಗಿತ್ತು! ಲಕ್ಷಾಂತರ ಕ್ರಿಯಾಶೀಲ ಕ್ರೈಸ್ತರು, ವಿವಾದಾಂಶದಲ್ಲಿ ದೇವರ ಪಕ್ಷವನ್ನು ಬೆಂಬಲಿಸುವುದು, ಆತನಿಗೆ ಸಮರ್ಪಿತರೂ ಪೂರ್ಣವಾಗಿ ಮೀಸಲಾದವರೂ ಆಗಿರುವುದು, ಜೀವನಕ್ಕೆ ಖಂಡಿತವಾಗಿ ಅರ್ಥವನ್ನು ಕೂಡಿಸುತ್ತದೆ ಮತ್ತು ಬೇಸರವನ್ನು ತಡೆಯುತ್ತದೆ ಎಂದು ಕಂಡುಹಿಡಿದಿರುತ್ತಾರೆ.
ಬಹುವ್ಯಾಪಕವಾದ ಬೇಸರವು ಒಂದು ಆಧುನಿಕ ಪ್ರಕೃತಿ ಘಟನೆಯಾಗಿರಬಹುದು—ಹೆಚ್ಚಿನ ಪುರಾತನ ಭಾಷೆಗಳಲ್ಲಿ ಅದಕ್ಕೆ ಸಮಾನಾರ್ಥಕ ಪದವು ಇರುವಂತೆ ತೋರುವುದಿಲ್ಲ. ಆದರೂ ಬೈಬಲು, ಜೀವನದ ಅರ್ಥವನ್ನು ನಮಗೆ ತೋರಿಸುತ್ತದಲ್ಲದೆ, ಬೇಸರವನ್ನು ಎದುರಿಸುವುದಕ್ಕಾಗಿ ಪ್ರಾಯೋಗಿಕ ಸಲಹೆಗಳನ್ನೂ ಒಳಗೊಂಡಿರುತ್ತದೆ. ಉದಾಹರಣೆಗಾಗಿ, ‘ಜನರಲ್ಲಿ ಸೇರದವನು ಸಮಸ್ತ ಪ್ರಾಯೋಗಿಕ ಜ್ಞಾನವನ್ನೂ ಎದುರಿಸುವನು’ ಎಂದು ಅದು ಹೇಳುತ್ತದೆ. (ಜ್ಞಾನೋಕ್ತಿ 18:1, NW) ಬೇರೊಂದು ಮಾತಿನಲ್ಲಿ, ಏಕಾಂತವಾಸದೊಳಗೆ ತೆವಳಬೇಡಿರಿ!
ಸಹವಾಸ ಪ್ರಿಯನಾಗಿರುವುದು ಮನುಷ್ಯನ ಸಹಜ ಪ್ರವೃತ್ತಿ. ಬೇರೆ ಜನರೊಂದಿಗೆ ಸಂಬಂಧ ಕಲ್ಪಿಸುವ ಅಗತ್ಯವು ಅವನಿಗಿರುತ್ತದೆ, ಮತ್ತು ಒಡನಾಟಕ್ಕಾಗಿ ಅವನಿಗೆ ಸ್ವಭಾವಸಿದ್ಧ ಆವಶ್ಯಕತೆಯಿದೆ. ಇತರ ಜನರೊಂದಿಗೆ ಬೆರೆಯುವ ಈ ಸಹಜವಾದ ಅಪೇಕ್ಷೆಯನ್ನು—ಒಬ್ಬಂಟಿಗನಾಗಿದ್ದು, ಬರಿಯ ಪ್ರೇಕ್ಷಕನಾಗಿದ್ದು—ಅದುಮಿಹಿಡಿಯುವುದು ಅವಿವೇಕತನವಾಗಿರುತ್ತದೆ. ತದ್ರೀತಿಯಲ್ಲಿ, ನಮ್ಮನ್ನು ಕೇವಲ ಆಳವಿಲ್ಲದ ವೈಯಕ್ತಿಕ ಸಂಬಂಧಗಳಿಗೆ ಸೀಮಿತಗೊಳಿಸುವುದು ಎಲ್ಲ ಪ್ರಾಯೋಗಿಕ ಜ್ಞಾನದ ಅಲಕ್ಷ್ಯಕ್ಕೆ ಸಮಾನವಾಗಿದೆ.
ನಿಶ್ಚೇಷವ್ಟಾಗಿ ಚಲನಚಿತ್ರಗಳನ್ನು ನೋಡುವುದು ಅಥವಾ ಕಂಪ್ಯೂಟರಿಗೆ ಮಾಹಿತಿಯನ್ನು ತುಂಬಿಸುವುದಕ್ಕೆ ನಮ್ಮ ಸಂಸರ್ಗವನ್ನು ಪರಿಮಿತಿಗೊಳಿಸುವುದು ಬಹಳ ಹೆಚ್ಚು ಸುಲಭವೆಂಬುದು ನಿಶ್ಚಯ. ಬೇರೆ ಜನರಿಗೆ ಹೊಂದಿಸಿಕೊಳ್ಳುವುದು ಒಂದು ತೀರ ಕಷ್ಟದ ಕೆಲಸವಾಗಿದೆ. ಆದರೂ, ಹೇಳಲು ಏನಾದರೂ ಉಪಯುಕ್ತ ವಿಷಯವಿರುವುದು ಮತ್ತು ಯೋಚನೆಗಳನ್ನು ಮತ್ತು ಭಾವನೆಗಳಲ್ಲಿ ಇತರರೊಂದಿಗೆ ಹಂಚಿಕೊಳ್ಳುವುದು ಪ್ರತಿಫಲದಾಯಕವಾಗಿದ್ದು ಬೇಸರಕ್ಕೆ ಕೊಂಚವೇ ಅವಕಾಶವನ್ನು ಕೊಡುತ್ತದೆ.—ಅ. ಕೃತ್ಯಗಳು 20:35.
ಮಾನುಷ ಸ್ವಭಾವವನ್ನು ಸೂಕ್ಷ್ಮವಾಗಿ ಗಮನಿಸುವವನಾಗಿದ್ದ ಸೊಲೊಮೋನನು ಈ ಆವೇಶಪೂರ್ಣ ಶಿಫಾರಸ್ಸನ್ನು ಮಾಡಿದ್ದಾನೆ: “ಆಶೆಯ ಲಗಾಮನ್ನು ಸಡಿಲುಬಿಡುವುದಕ್ಕಿಂತ ನಿನ್ನ ಕಣ್ಣೆದುರಿನಲ್ಲಿರುವುದರಲ್ಲಿ ತೃಪ್ತಿಯಿಂದಿರುವುದು ಲೇಸು.” (ಪ್ರಸಂಗಿ 6:9, ದ ನ್ಯೂ ಇಂಗ್ಲಿಷ್ ಬೈಬಲ್) ಬೇರೊಂದು ಮಾತಿನಲ್ಲಿ, ನಿಮ್ಮ ಪ್ರಸ್ತುತ ಪರಿಸ್ಥಿತಿಗಳಲ್ಲಿ ಅಧಿಕತಮ ಸಂತೃಪ್ತಿಯನ್ನು ಮತ್ತು ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ನೀವೀಗ ಏನನ್ನು ನೋಡುತ್ತೀರೊ ಅದರ ಮೇಲೆ ಮನಸ್ಸನ್ನು ನೆಡಿರಿ. ಅದು ವಾಸ್ತವಿಕತೆಯಿಂದ ದೂರಹೋಗಲು ಹಾತೊರೆಯುವುದಕ್ಕಿಂತ ಅಥವಾ ಸೊಲೊಮೋನನು ಅಂದಂತೆ, ‘ಆಶೆಯ ಲಗಾಮನ್ನು ಸಡಿಲುಬಿಡುವುದಕ್ಕಿಂತ’ ಎಷ್ಟೋ ಲೇಸು.
ಸುಯೋಜಿತ ದಿನಗಳು, ನಿಶ್ಚಿತ ಗುರಿಗಳು, ಮತ್ತು ಕಲಿಯುತ್ತಾ ಹೋಗುವ ತೀವ್ರವಾದ ಅಪೇಕ್ಷೆಯು ಸಹ ನಿಮ್ಮ ಬೇಸರವನ್ನು ಗೆಲ್ಲಲಿಕ್ಕೆ ನಿಮಗೆ ಸಹಾಯ ಮಾಡುವುವು. ಅಷ್ಟೇಕೆ, ನಿವೃತ್ತಿಯ ಬಳಿಕವೂ, ಒಬ್ಬ ವ್ಯಕ್ತಿಯು ಅನೇಕ ವಿಷಯಗಳನ್ನು ಇನ್ನೂ ನಿರ್ವಹಿಸಬಲ್ಲನು. ಬಲೀಆ್ಯರಿಕ್ ದ್ವೀಪಗಳಲ್ಲಿ, 70 ವಯಸ್ಸಿನ ಆಧಿಭಾಗದಲ್ಲಿರುವ ಒಬ್ಬ ನಿವೃತ್ತ ಯೆಹೋವನ ಸಾಕ್ಷಿಯು, ಜರ್ಮನ್ ಭಾಷೆಯನ್ನು ಆತುರದಿಂದ ಕಲಿಯುತ್ತಿದ್ದಾನೆ. ಅವನ ಗುರಿ ಏನು? ಜರ್ಮನಿಯಿಂದ ಬರುವ ಅನೇಕ ನೀರಸ ರಜಾ ಸಂದರ್ಶಕರಲ್ಲಿ ಯಾರೊಂದಿಗಾದರೂ ದೇವರ ವಾಕ್ಯದ ಕುರಿತು ಮಾತಾಡಲು ಅವನು ಬಯಸುತ್ತಾನೆ. ಬೇಸರವು ಅವನಿಗೆ ಒಂದು ಸಮಸ್ಯೆಯಾಗಿರುವುದಿಲ್ಲ ನಿಶ್ಚಯ!
ಕೊನೆಯದಾಗಿ, ನಿಮ್ಮ ಕೈಗಳಿಂದ ಏನನ್ನಾದರೂ ಮಾಡುವುದರ ಕುರಿತೇನು? ಕೆಲವು ಕೈಕಸಬಿನಲ್ಲಿ, ವರ್ಣಚಿತ್ರದಲ್ಲಿ, ಅಥವಾ ಒಂದು ಸಂಗೀತ ವಾದ್ಯವನ್ನು ನುಡಿಸುವುದರಲ್ಲಿ ಕೌಶಲವನ್ನು ಏಕೆ ಗಳಿಸಬಾರದು? ಕಾರ್ಯಸಿದ್ಧಿಯ ಭಾವವು ಇರುವಾಗ ಆತ್ಮ-ಗೌರವವು ಬೆಳೆಯುತ್ತದೆ. ಶ್ರದ್ಧೆಯಿಂದ ಕೆಲಸಮಾಡುವ ಸಿದ್ಧಮನಸ್ಸನ್ನು ಮತ್ತು ಮನೆಯಲ್ಲಿ ನಿಮ್ಮ ಸಹಾಯವನ್ನು ನೀಡುವುದರ ಕುರಿತು ಯಾಕೆ ಯೋಚಿಸಬಾರದು? ಯಾವುದೆ ಮನೆಯಲ್ಲಿ ಸಾಮಾನ್ಯವಾಗಿ ದುರುಸ್ತಿಯ ಅಗತ್ಯವಿರುವ ಚಿಕ್ಕ ಪುಟ್ಟ ವಿಷಯಗಳು ಎಷ್ಟೊ ಇರುತ್ತವೆ. ನಿಮ್ಮ ಬೇಸರಕರ ಜೀವನದ ಕುರಿತು ಮರುಗುವ ಬದಲಿಗೆ, ನಿಮ್ಮನ್ನು ದೊರಕಿಸಿಕೊಂಡು, ಮನೆಯಲ್ಲಿ ಅರ್ಥಭರಿತ ಕೆಲಸವನ್ನು ಮಾಡಿರಿ, ಯಾವುದೆ ಕೈಕಲೆಯಲ್ಲಿ ಕೌಶಲವನ್ನು ಹೊಂದಿರಿ. ನಿಮಗೆ ಪ್ರತಿಫಲ ದೊರೆಯದೆ ಹೋಗದು.—ಜ್ಞಾನೋಕ್ತಿ 22:29.
ಅಷ್ಟಲ್ಲದೆ, ನಾವು ಕೈಕೊಳ್ಳಬಹುದಾದ ಯಾವುದೆ ಕೆಲಸವನ್ನು ಹೃದಯಪೂರ್ವಕವಾಗಿ ಮಾಡುವಂತೆ ಬೈಬಲು ಸಲಹೆ ನೀಡುತ್ತದೆ. (ಕೊಲೊಸ್ಸೆ 3:23) ನಾವು ಮಾಡುತ್ತಿರುವ ಯಾವುದೆ ಕೆಲಸದಲ್ಲಿ ಒಳಗೊಂಡಿರುವುದು, ನಿಜವಾಗಿ ಆಸಕ್ತರಾಗಿರುವುದು ಎಂದು ನಿಶ್ಚಯವಾಗಿ ಅದರ ಅರ್ಥ. ಇಂಗ್ಲಿಷ್ ಪದವಾದ “ಇಂಟರೆಸ್ಟ್” (ಆಸಕ್ತಿ), ಲ್ಯಾಟಿನ್ ಮೂಲ ಪದವಾದ ಇಂಟರೆಸೆಯಿಂದ ಬರುತ್ತದೆ. ಇದರ ಅಕ್ಷರಾರ್ಥವು “ನಡುವೆ ಅಥವಾ ಮಧ್ಯೆ ಇರುವುದು,” ಬೇರೊಂದು ಮಾತಿನಲ್ಲಿ ಹೇಳುವುದಾದರೆ, ನಡಿಯುತ್ತಿರುವ ಕೆಲಸದಲ್ಲಿ ತಲ್ಲೀನರಾಗಿರುವುದು ಎಂದಾಗಿರುತ್ತದೆ.
ಅನೇಕ ವರ್ಷಗಳ ಪೂರ್ವದಲ್ಲಿ ಬರೆಯಲ್ಪಟ್ಟ ಈ ಎಲ್ಲಾ ಒಳ್ಳೆಯ ಸಲಹೆಯು, ಅನ್ವಯಿಸಲ್ಪಟ್ಟಲ್ಲಿ, ವಿರಾಮ ಸಮಯದಲ್ಲಿ ಖಿನ್ನತೆಯಿಂದ ಬಾಧಿಸಲ್ಪಡುವ ಜನರಿಗೆ ನಿರ್ಣಾಯಕ ವ್ಯತ್ಯಾಸವನ್ನು ಮಾಡುವುದು. ಆದುದರಿಂದ ನೀವೇನನ್ನು ಮಾಡುತ್ತೀರೊ ಅದರಲ್ಲಿ ತಲ್ಲೀನರಾಗಿರಿ. ಬೇರೆ ಜನರೊಂದಿಗೆ ನಿಮ್ಮನ್ನು ಒಳಗೂಡಿಸಿರಿ. ಇತರರಿಗಾಗಿ ಕೆಲಸಗಳನ್ನು ಮಾಡಿರಿ. ಕಲಿಯುವುದನ್ನು ಮುಂದುವರಿಸುತ್ತಾ ಇರಿ. ಇತರರೊಂದಿಗೆ ಸರಾಗವಾಗಿ ಸಂಸರ್ಗ ಮಾಡಿರಿ. ಜೀವನದ ನಿಜ ಉದ್ದೇಶವನ್ನು ಕಂಡುಹಿಡಿಯಿರಿ. ಇವುಗಳನ್ನೆಲ್ಲ ಮಾಡುತ್ತಿರುವ ಮೂಲಕ, ‘ಜೀವನ ಇಷ್ಟು ಬೇಸರಕರವೇಕೆ?’ ಎಂದು ನಿಟ್ಟುಸಿರುಬಿಡುವ ಪ್ರವೃತ್ತಿಯವರು ನೀವಾಗದೆ ಇರುವಿರಿ.
[ಪುಟ 8 ರಲ್ಲಿರುವ ಚೌಕ]
ಬೇಸರವನ್ನು ನೀಗಿಸುವ ವಿಧ
1. ವ್ಯಕ್ತಿಪರ ಮೊದಲ ಹೆಜ್ಜೆಯು ಸಿದ್ಧ ಮನೋರಂಜನೆಯಿಂದ ನಿರ್ಬಲಗೊಳಿಸಲ್ಪಡುವಂತೆ ಬಿಡಬೇಡಿರಿ. ಅಪಕರ್ಷಣೆಗಳು ಮತ್ತು ಮನೋರಂಜನೆಯ ವಿಷಯದಲ್ಲಿ ಆಯ್ಕೆಯುಳ್ಳವರಾಗಿರಿ.
2. ಜನರೊಂದಿಗೆ ಸಂಬಂಧ ಕಲ್ಪಿಸಿರಿ.
3. ಕಲಿಯುತ್ತಾ ಇರ್ರಿ. ವೈಯಕ್ತಿಕ ಗುರಿಗಳನ್ನಿಡಿರಿ.
4. ರಚನಾತ್ಮಕ ಗುಣವುಳ್ಳವರಾಗಿರಿ. ನಿಮ್ಮ ಕೈಗಳಿಂದ ಏನನ್ನಾದರೂ ಮಾಡಿರಿ.
5. ಎಲ್ಲದಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಒಂದು ಉದ್ದೇಶವುಳ್ಳವರಾಗಿರಿ. ದೇವರನ್ನು ಪರಿಗಣನೆಗೆ ತೆಗೆದುಕೊಳ್ಳಿರಿ.