ನಿಮ್ಮ ಶುಶ್ರೂಷೆಯಲ್ಲಿ ನಿಪುಣರಾಗಿ ಪರಿಣಮಿಸಿರಿ
1 ಶುಶ್ರೂಷೆಯಲ್ಲಿ ನೈಪುಣ್ಯವನ್ನು ಬೆಳೆಸುವಂತೆ ಅಪೋಸ್ತಲ ಪೌಲನು ಪ್ರೋತ್ಸಾಹಿಸಿದನು. ಅವನು ಬರೆದದ್ದು: “ನೀನು ದೇವರ ದೃಷ್ಟಿಯಲ್ಲಿ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.”—2 ತಿಮೋಥಿ 2:15.
2 ಶುಶ್ರೂಷೆಯಲ್ಲಿ ನೈಪುಣ್ಯವು ಸಂಪಾದಿಸಲ್ಪಡುತ್ತದೆ. ಆದುದರಿಂದ, ನಾವು ನಿಪುಣ ಶುಶ್ರೂಷಕರಾಗಬೇಕಾದರೆ ‘ಪ್ರಯಾಸಪಡುವ’— ಶ್ರದ್ಧೆಯಿಂದ ಪ್ರಯತ್ನವನ್ನು ಮಾಡುವ ಅಗತ್ಯವಿದೆ. ಆದರೆ ನಮಗೆ ಯಾವುದು ಸಹಾಯ ಮಾಡಬಲ್ಲದು?
ದೇವರ ವಾಕ್ಯದಿಂದ ಕಲಿಯಿರಿ
3 ದೇವರ ವಾಕ್ಯದ ಕುರಿತು ನಮಗಿರುವ ವೈಯಕ್ತಿಕ ಜ್ಞಾನವು ಶುಶ್ರೂಷಕರಾದ ನಮ್ಮ ಪರಿಣಾಮಕಾರತೆಯ ಮೇಲೆ ನೇರವಾಗಿ ಸಂಬಂಧಿಸಿದೆ. ಬೈಬಲ್ ಏನನ್ನು ಕಲಿಸುತ್ತದೋ ಆ ಕುರಿತು ಎಷ್ಟು ಹೆಚ್ಚು ಪರಿಚಯ ನಮಗಿದೆಯೋ ಅಷ್ಟು ಹೆಚ್ಚು ಪರಿಣಾಮಕಾರಿಯಾಗಿ ನಾವು “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವೆವು.” ಆದ್ದರಿಂದ, ವೈಯಕ್ತಿಕ ಅಭ್ಯಾಸಕ್ಕಾಗಿ ಸಮಯವನ್ನು ಬದಿಗಿಡುವುದು ಪ್ರಾಮುಖ್ಯವು.—1 ತಿಮೋಥಿ 4:15, 16.
4 ದೇವರ ವಾಕ್ಯದ ಪರಿಚಯವನ್ನು ಮಾಡುವ ಇನ್ನೊಂದು ವಿಧಾನವು ಸಭಾಕೂಟಗಳಲ್ಲಿ ಪಡೆಯುವ ಬೈಬಲಾಧರಿತ ಉಪದೇಶಗಳಿಗೆ “ಎಂದಿಗಿಂತಲೂ ಹೆಚ್ಚು ಗಮನವನ್ನು ಕೊಡುವ” ಮೂಲಕವೇ. (ಇಬ್ರಿ. 2:1) ಮಾತಾಡುವ ಅತ್ಯುತ್ತಮ ವಿಷಯಗಳನ್ನು ನಾವು ಬಹಿರಂಗ ಭಾಷಣಗಳಿಂದ ಅಥವಾ ಸಭಾ ಪುಸ್ತಕಭ್ಯಾಸಗಳಿಂದ ಹೆಕ್ಕ ಸಾಧ್ಯವಿದೆ. ದೇವಪ್ರಭುತ್ವ ಶಾಲೆಯು ನಿಪುಣ ಶಿಕ್ಷಕರಾಗುವಂತೆ ಬೆಲೆಯುಳ್ಳ ತರಬೇತಿಯನ್ನು ನಮಗೆ ಕೊಡುತ್ತದೆ ಮತ್ತು ಸೇವಾಕೂಟವು ಸಹಾಯಕಾರಿ ಸಲಹೆಗಳನ್ನೂ ವ್ಯಾವಹಾರ್ಯ ದೃಶ್ಯಗಳನ್ನೂ ಕೊಟ್ಟು ಶುಶ್ರೂಷಕರಾದ ನಮ್ಮ ನೈಪುಣ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಆದರೂ, ಅತಿ ಹೆಚ್ಚಿನ ಪ್ರಯೋಜನ ಹೊಂದಲು, ನಾವು ಚೆನ್ನಾಗಿ ತಯಾರಿಸುವ ಮತ್ತು ಎಲ್ಲಾ ಕೂಟಗಳಲ್ಲಿ ಕ್ರಿಯಾಶೀಲತೆಯಿಂದ ಪಾಲಿಗರಾಗುವ ಅಗತ್ಯವಿದೆ.
ಸಲಹೆಗಳನ್ನು ಅನ್ವಯಿಸಿರಿ
5 ತನ್ನ ಸಂಬಂಧದಲ್ಲಿ ಅವರು ಕಲಿತ ವಿಷಯಗಳನ್ನು ಅವರು ಕಾರ್ಯರೂಪಕ್ಕೆ ಹಾಕುವಂತೆ ಪೌಲನು ಫಿಲಿಪ್ಪಿಯ ಸಭೆಗೆ ಹೇಳಿದ್ದನು. (ಫಿಲಿ. 4:9) ಯೆಹೋವನ ಸಂಸ್ಥೆಯ ಮೂಲಕವಾಗಿ ಕಲಿಯುವ ವಿಷಯಗಳನ್ನು ನಾವೂ ಕಾರ್ಯರೂಪಕ್ಕೆ ಹಾಕುವ ಅಗತ್ಯವಿದೆ. ಉದಾಹರಣೆಗೆ, ಜುಲೈ 15, 1988ರ ವಾಚ್ಟವರ್ ಸಂಚಿಕೆಯ ಪುಟ 15-20 ರಲ್ಲಿ, ಹೆಚ್ಚುಸಲ ಸೇವೆಯಾದ ಕ್ಷೇತ್ರದಲ್ಲಿ “ಹೊಸ” ಕ್ಷೇತ್ರವನ್ನು ವಿಕಾಸಿಸುವ ವಿಧಾನಗಳು ಹೇಗೆಂದು ನಾವು ಕಲಿತೆವು. ಹೊಸದಾದ, ಅಪ್ಪೀಲಾಗುವ ಹಾಗೂ ಸಕಾರಾತ್ಮಕ ಗೋಚರ ಮಾತ್ರವಲ್ಲದೆ, ನಾವು ಕ್ರಮವಾಗಿ ಸಂದರ್ಶಿಸುವುದನ್ನು ಮನೆಯವನು ನಿರೀಕ್ಷಿಸುವಂತೆ ಅವನನ್ನು ತಯಾರುಮಾಡುವ ಅಗತ್ಯವನ್ನೂ ಲೇಖನವು ಒತ್ತಿಹೇಳಿತ್ತು. ಯೋಗ್ಯರಾದವರನ್ನು ಹುಡುಕುವುದರಲ್ಲಿ ಪೂರಾ ಪ್ರಯತ್ನ ಮಾಡುತ್ತಾ, ಒಂದೇಮನೆಯಲ್ಲಿ ವಾಸಿಸುವ ಬೇರೆ ಬೇರೆ ವ್ಯಕ್ತಿಗಳಿಗಾಗಿ ನಾವು ಹುಡುಕುವಂತೆ ಸೂಚನೆ ಕೊಡಲಾಗಿತ್ತು. ಈ ಸಲಹೆಗಳನ್ನು ಅನ್ವಯಿಸುವ ಮೂಲಕ, ನಾವು ಕಲಿತ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವವರಾಗುವೆವು ಮತ್ತು ಶುಶ್ರೂಷೆಯಲ್ಲಿ ನಮ್ಮ ನೈಪುಣ್ಯವನ್ನು ಹೆಚ್ಚಿಸುವೆವು.
6 ನಾವು ಕ್ರಮವಾಗಿ ರೀಸನಿಂಗ್ ಪುಸ್ತಕವನ್ನು ಸೇವೆಯಲ್ಲಿ ಬಳಸುತ್ತೇವೋ? ಅದರಲ್ಲಿರುವ ಪೀಠಿಕೆಗಳು ಹಾಗೂ ಸಂಭಾಷಣಾ ತಡೆಗಟ್ಟುಗಳನ್ನು ನಿಭಾಯಿಸುವ ವಿಧಗಳು ನಮ್ಮ ಸಾಕ್ಷಿಕೊಡುವ ನಿಪುಣತೆಗಳನ್ನು ಚೂಪುಗೊಳಿಸುವುದು. ಅದಲ್ಲದೆ, ಸಂಭಾಷಣೆಗಾಗಿ ವಿಷಯವನ್ನು ತಯಾರಿಸಿ ರಿಹರ್ಸ್ ಮಾಡುವುದು ಹಾಗೂ ತಿಂಗಳ ನೀಡುವಿಕೆಯನ್ನು ನಾವು ನೀಡುವ ವಿಧವೂ ನಮ್ಮ ಶುಶ್ರೂಷೆಯ ಸಾಫಲ್ಯಕ್ಕೆ ನೆರವಾಗುತ್ತದೆ.
7 ನಿಮ್ಮ ಶುಶ್ರೂಷೆಯನ್ನು ಪ್ರಗತಿಸಲು ಅಧಿಕ ಸಲಹೆಗಳು ಬೇಕಿದ್ದರೆ, ಸೇವಾ ಮೇಲ್ವಿಚಾರಕನನ್ನು ಯಾ ನಿಮ್ಮ ಪುಸ್ತಕಭ್ಯಾಸ ಚಾಲಕನನ್ನು ಗೋಚರಿಸಿ ಸಹಾಯಕ್ಕಾಗಿ ಕೇಳಿರಿ. ಶುಶ್ರುಷಕರಾಗಿ ನಾವೆಲ್ಲರೂ ನಮ್ಮ ನೈಪುಣ್ಯವನ್ನು ಪ್ರಗತಿಮಾಡುತ್ತಾ, “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸು” ವವರಾಗಸಾಧ್ಯವಿದೆ. ಇನ್ನು ತುಸು ಸಮಯದೊಳಗೇ ಯೆಹೋವನು ಈ ದುಷ್ಟ ವ್ಯವಸ್ಥೆಗೆ ಅಂತ್ಯವನ್ನು ತರುವನು. ಆ ಸಮಯದ ತನಕ, ನಾವು ನಮ್ಮಿಂದಾದಷ್ಟು ಜನರಿಗೆ ರಕ್ಷಣೆ ಪಡೆಯಲು ಮತ್ತು ಆಮೂಲಕ ನಮ್ಮ ದೇವರಾದ ಯೆಹೋವನಿಗೆ ಗೌರವವನ್ನು ತರಲು ಹೃದಯಪೂರ್ವಕ ಅಪೇಕ್ಷೆಯನ್ನು ತೋರಿಸೋಣ.—1ಯೋಹಾನ 15:8.