ಗೀತೆ 112
ಮಹಾ ದೇವರಾದ ಯೆಹೋವನು
1. ಯೆಹೋವ ದೇವಾ, ನೀನತಿ ಅರ್ಹ,
ಮಹಾ ಸ್ತುತಿಗೆ ಪಾತ್ರ,
ನಿನ್ನ ಮಾರ್ಗವು ನ್ಯಾಯ,
ಸಿಂಹಾಸನವು ನ್ಯಾಯಾಧಾರಿತ,
ನೀನು ಅಂತ್ಯರಹಿತ.
2. ಪಾಪಗಳ ಕ್ಷಮಿಸುವಾತನೇ,
ಕರುಣಾಶೀಲರಿಗೆ
ನೀನು ಕರುಣಾಮಯಿ.
ನಿನ್ನ ನಿರ್ಣಯ, ಅಪಾರ ಕೃಪೆ,
ವ್ಯಕ್ತ ನಿನ್ನ ಕ್ರಿಯೇಲಿ.
3. ಜನ, ದೂತಗಣ ಕೊಂಡಾಡಲಿ,
ನಾಮ ಪೂಜ್ಯವಾಗಲಿ,
ನಾಸ್ತಿ ಎನ್ನದಿರಲಿ,
ಸ್ವರ್ಗದಿಂದಾಳ್ವ ರಾಜ್ವವು ಇಲ್ಲಿ
ನಿನ್ನ ಚಿತ್ತ ಮಾಡಲಿ.
(ಧರ್ಮೋ. 32:4; ಜ್ಞಾನೋ. 16:12; ಮತ್ತಾ. 6:10; ಪ್ರಕ. 4:11 ಸಹ ನೋಡಿ.)