ಆಸಕ್ತಿಯನ್ನು ಕೆರಳಿಸುವ ಪ್ರತಿಪಾದನೆಗಳು
1 ಕ್ಷೇತ್ರ ಸೇವೆಯಲ್ಲಿ ನಾವು ಭೇಟಿಯಾಗುವ ಮನುಷ್ಯರಲ್ಲಿ ಬೆಚ್ಚಗೆನ, ವ್ಯಕ್ತಿಗತ ಅಭಿರುಚಿಯನ್ನು ನಾವು ಯಾವಾಗಲೂ ಪ್ರದರ್ಶಿಸತಕ್ಕದ್ದು. ವಿಷಯಗಳ ಮೇಲೆ ಅವರ ಅಭಿಪ್ರಾಯವನ್ನು ವಿಚಾರಿಸುವಂಥದ್ದು ಅವರ ದೃಷ್ಟಿಕೋನಕ್ಕೆ ನಮಗಿರುವ ಗೌರವವನ್ನು ಪ್ರದರ್ಶಿಸುತ್ತದೆ. ನಾವು ಪ್ರಸ್ತಾಪಿಸುವ ವಿಷಯ ಮತ್ತು ನಾವು ಕೇಳುವ ಪ್ರಶ್ನೆಗಳು ಅವರ ಯೋಚನೆಯನ್ನು ಕೆರಳಿಸಬಹುದು ಮತ್ತು ದೇವರ ಮತ್ತು ಮಾನವ ಕುಲದ ಕಡೆಗೆ ಅವನ ಉದ್ದೇಶಗಳ ಕುರಿತು ಹೆಚ್ಚನ್ನು ಕಲಿಯಲು ಅವರಿಗೆ ಕಾರಣವಾಗಬಹುದು.
2 ಅಕ್ಟೋಬರಿನಲ್ಲಿ, ನಾವು ಲೈಫ್—ಹೌ ಡಿಡ್ ಇಟ್ ಗೆಟ್ ಹಿಯರ್? ಬೈ ಎವಲ್ಯೂಶನ್ ಆರ್ ಬೈ ಕ್ರಿಯೇಶನ್? ಪುಸ್ತಕವನ್ನು ನೀಡುತ್ತಿರುವಾಗ, ಸೃಷ್ಟಿಯ ಕುರಿತ ಸತ್ಯದೆಡೆಗೆ ಗಮನವನ್ನು ನಾವು ಹರಿಸಲಿದ್ದೇವೆ. ವೈಯಕ್ತಿಕವಾಗಿ ಪ್ರಕಾಶನವನ್ನು ಪರಾಮರ್ಶಿಸಲು ಸಮಯವನ್ನು ತಕ್ಕೊಳ್ಳಿರಿ, ಮತ್ತು ಎತ್ತಿತೋರಿಸಲು ನಿರ್ದಿಷ್ಟ ವಿಚಾರಗಳನ್ನು ಆರಿಸಿರಿ. ಕ್ರಿಯೇಶನ್ ಪುಸ್ತಕದಿಂದ ಸಮಾಚಾರವನ್ನು ಚರ್ಚಿಸುತ್ತಿರುವಾಗ, ಅದನ್ನು ತೆರೆಯಿರಿ ಮತ್ತು ಮನೆಯವನ ಕೈಗೆ ಅದನ್ನು ಕೊಡಿರಿ. ನಿರ್ದಿಷ್ಟ ವಿಷಯಗಳನ್ನು ಮತ್ತು ಚಿತ್ರಗಳನ್ನು ಸೂಚಿಸಿರಿ. ಈ ಆಕರ್ಷಕ ಪ್ರಕಾಶನದ ಮೌಲ್ಯವನ್ನು ಪ್ರದರ್ಶಿಸುವಾಗ ಉತ್ಸುಕತೆಯುಳ್ಳವರಾಗಿರ್ರಿ.
3 ನಿಮ್ಮನ್ನು ಸ್ವತಃ ಪರಿಚಯಪಡಿಸಿಯಾದ ನಂತರ, ನೀವು ಹೀಗನ್ನಸಾಧ್ಯವಿದೆ:
▪ “ಇಂದಿನ ಆಧುನಿಕ, ವೈಜ್ಞಾನಿಕ ಲೋಕದಲ್ಲಿ, ನಮ್ಮನ್ನು ಮತ್ತು ನಾವು ಜೀವಿಸುತ್ತಿರುವ ಈ ಸುಂದರವಾದ ಭೂಮಿಯನ್ನು ಸೃಷ್ಟಿಸಿದ ಒಬ್ಬ ದೇವರ ಇದ್ದಾನೆ ಎಂದು ನಂಬುವದು ತಾರ್ಕಿಕವಾಗಿದೆಯೊ? [ಪ್ರತಿವರ್ತನೆಗೆ ಅನುಮತಿಸಿರಿ.] ಭೂಮಿಯ ಮತ್ತು ಸಮಗ್ರ ವಿಶ್ವದ ವಿಸ್ತಾರತೆಯನ್ನು ಮತ್ತು ಅದ್ಭುತಗಳನ್ನು ನಾವು ಗಮನಿಸುವಾಗ, ಅದರ ಕ್ರಮತೆ ಮತ್ತು ವಿನ್ಯಾಸದಿಂದಾಗಿ ನಾವು ಪ್ರಭಾವಿತರಾಗುತ್ತೇವೆ. ಇದು ಒಬ್ಬ ಸೃಷ್ಟಿಕರ್ತನ ಅಸ್ತಿತ್ವವನ್ನು ರುಜುಪಡಿಸುವದಿಲ್ಲವೇ? ಈ ವಿಷಯದ ಮೇಲೆ ಬೈಬಲಿನ ವಾದವನ್ನು ಗಮನಿಸಿರಿ. [ಇಬ್ರಿಯ 3:4 ಓದಿರಿ.] ತಾರ್ಕಿಕವಾಗಿಯೇ, ಪ್ರತಿಯೊಂದು ಕಟ್ಟಡಕ್ಕೆ ಒಬ್ಬ ವಿನ್ಯಾಸಗಾರನು ಮತ್ತು ಕಟ್ಟಿದಾತನು ಇದ್ದಾನೆ. [ಕ್ರಿಯೇಶನ್ ಪುಸ್ತಕ ಹೊರತೆಗೆದು, ಪುಟ 114 ರಲ್ಲಿರುವ ಚಿತ್ರಕ್ಕೆ ತೆರಳಿರಿ.] ನಮ್ಮ ವಿಶ್ವವು ಭಯಚಕಿತಗೊಳಿಸುವಂಥದ್ದು! ಅದು ತನ್ನಿಂದ ತಾನೇ ಅಸ್ತಿತ್ವಕ್ಕೆ ಬರಸಾಧ್ಯವಿದೆ ಎಂದು ನೀವೆಣಿಸುವಿರೋ?” ಅನಂತರ ಪುಟ 122 ಕ್ಕೆ ತೆರಳಿರಿ ಮತ್ತು ಒಂದು ಗಡಿಯಾರದ ಚಿತ್ರದ ಕೆಳಗಿರುವ ಚಿತ್ರಶೀರ್ಷಿಕೆಯನ್ನು ಓದಿರಿ. ಪುಟ 127 ರಲ್ಲಿರುವ ಚಿತ್ರ ಮತ್ತು ಉದ್ಧರಿತ ಶಾಸ್ತ್ರವಚನವನ್ನೂ ಉಪಯೋಗಿಸಬಹುದು. ಹೆಚ್ಚಿನ ಸಹಾಯವಾಗುವ ವಿಚಾರಗಳು ರೀಸನಿಂಗ್ ಪುಸ್ತಕದ ಪುಟ 84-8 ರಲ್ಲಿ ಕಾಣಬಹುದು.
4 ಯಾ ನೀವು ಹೀಗನ್ನಬಹುದು:
▪ “ಈ ಭೂಮಿಯ ಮೇಲೆ ಮಾನವರಿಗಾಗಿ ನಿಜ ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳಲು ಯಾವುದು ಅಗತ್ಯವೆಂದು ನೀವೆಣಿಸುವಿರಿ? [ಪ್ರತಿವರ್ತನೆಗೆ ಅನುಮತಿಸಿರಿ.] ನಾವು ದೇವರಿಗೆ ಭಯಪಡತಕ್ಕದ್ದು ಮತ್ತು ಭೂಮ್ಯಾಕಾಶಗಳ ಸೃಷ್ಟಿಕರ್ತನೆಂದು ಅವನನ್ನು ಅಂಗೀಕರಿಸತಕ್ಕದ್ದು ಎಂದು ಬೈಬಲು ಹೇಳುತ್ತದೆ.” ಪ್ರಕಟನೆ 14:7 ನ್ನು ಓದಿರಿ ಮತ್ತು ಅನಂತರ ಕ್ರಿಯೇಶನ್ ಪುಸ್ತಕದ ಪುಟ 140 ಮತ್ತು 141 ತೆರೆಯಿರಿ, ಸಾಧ್ಯವಾದರೆ ಪ್ಯಾರಗ್ರಾಫ್ 24 ಮತ್ತು 25 ನ್ನು ಓದಿರಿ, ಅಲ್ಲಿ ಮಾನವ ನಿವಾಸಕ್ಕಾಗಿ ಭೂಮಿಯು ರೂಪಿಸಲ್ಪಟ್ಟಿದೆ ಎಂದು ಅದು ವಿವರಿಸುತ್ತದೆ. ಮನೆಯವನ ಆಸಕ್ತಿಯು ಅಧಿಕ ಸಂಭಾಷಣೆಯನ್ನು ಆವಶ್ಯಕಪಡಿಸುವದಾದರೆ, ಅಧ್ಯಾಯ 19 ಕ್ಕೆ ತೆರಳಿರಿ ಮತ್ತು ಒಂದು ಐಹಿಕ ಪ್ರಮೋದವನವು ಬೇಗನೆ ಒಂದು ವಾಸ್ತವ ಸಂಗತಿಯಾಗಲಿರುವದು ಹೇಗೆ ಎಂದು ವಿವರಿಸಿರಿ.
5 ಸೃಷ್ಟಿಕರ್ತನೊಬ್ಬನಲ್ಲಿ ಮನೆಯವನು ಸಂದೇಹವನ್ನು ವ್ಯಕ್ತಪಡಿಸುವದಾದರೆ, ನೀವು ಹೀಗನ್ನಬಹುದು:
▪ “ಅನೇಕರು ನಿಮ್ಮ ಅನಿಸಿಕೆಗಳಲ್ಲಿ ಪಾಲಿಗರಾಗುತ್ತಾರೆ, ವಿಶೇಷವಾಗಿ ಇಂದು ಲೋಕದಲ್ಲಿರುವ ಎಲ್ಲಾ ನರಳಾಟದ ನೋಟದಲ್ಲಿ. ಒಂದು ವೇಳೆ ಒಬ್ಬ ದೇವರು ಇರುವದಾದರೆ, ನರಳಾಟವನ್ನು ಅವನು ಯಾಕೆ ಅನುಮತಿಸುತ್ತಿದ್ದನು? ಯಾವುದಾದರೊಂದು ತಾರ್ಕಿಕವಾದ ವಿವರಣೆಯನ್ನು ನೀವು ಯೋಚಿಸಬಲ್ಲಿರೋ?” ಪ್ರತಿವರ್ತನೆಯ ಮೇಲೆ ಹೊಂದಿಕೊಂಡು, ಕ್ರಿಯೇಶನ್ ಪುಸ್ತಕದ ಅಧ್ಯಾಯ 16 ನ್ನು ಬಳಸುವದರ ಮೂಲಕ ಚರ್ಚೆಯನ್ನು ನೀವು ಮುಂದರಿಸಶಕ್ತರಾಗಬಹುದು. ಯಾ ಅವನು ಮಿತ ಆಸಕ್ತಿಯಿಂದ ಆಲಿಸುತ್ತಿರುವದಾದರೆ, ಸಪ್ಟಂಬರ್ 15, 1992 ರ ಇಂಗ್ಲಿಷ್ ವಾಚ್ಟವರ್ ನಲ್ಲಿರುವ “ವೈ ಡು ಗುಡ್ ಪೀಪಲ್ ಸಫರ್?” ಲೇಖನದಿಂದ ಒಂದೆರಡು ನಿರ್ದಿಷ್ಟ ವಿಚಾರಗಳನ್ನು ಮಾತ್ರ ಎತ್ತಿ ತೋರಿಸಬಹುದು. ಈ ಪ್ರಶ್ನೆಗೆ ನೆರವಾಗುವ ಅಧಿಕ ಉತ್ತರಗಳು ರೀಸನಿಂಗ್ ಪುಸ್ತಕದ ಪುಟ 399-400 ಕಂಡುಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ ಟ್ರ್ಯಾಕ್ಟ್ನ್ನು ಬಿಟ್ಟು ಬರುವದು ಕೂಡ ಯುಕ್ತವಾಗಿರಬಹುದು.
6 ನಮ್ಮ ಉದ್ದೇಶವು ರಾಜ್ಯ ಸಂದೇಶದಲ್ಲಿ ಆಸಕ್ತಿಯನ್ನು ಕೆರಳಿಸುವದು ಮಾತ್ರವಲ್ಲದೆ, ಬೈಬಲ್ ಅಭ್ಯಾಸಗಳನ್ನು ಆರಂಭಿಸುವದು ಕೂಡ ಆಗಿರುತ್ತದೆ. ಸೃಷ್ಟಿಯ ಕುರಿತು ಮತ್ತು ನಮ್ಮ ಮಹಾ ಸೃಷ್ಟಿಕರ್ತನನ್ನು ಮಹಿಮೆಪಡಿಸುವ ಸತ್ಯವನ್ನು ವಿವರಿಸುವ ಇಂಥ ಸುಂದರವಾದ ಚಿತ್ರಗಳನ್ನೊಳಗೊಂಡ ಪುಸ್ತಕವು ನಮಗಿರುವದಕ್ಕಾಗಿ ನಾವೆಷ್ಟು ಆನಂದಿತರು! ಅಕ್ಟೋಬರಿನಲ್ಲಿ ಭೇಟಿಯಾಗುವ ಪ್ರಾಮಾಣಿಕ ಹೃದಯದ ಜನರ ಆಸಕ್ತಿಯನ್ನು ಕೆರಳಿಸುವದರಲ್ಲಿ ಇದರ ಉತ್ತಮ ಉಪಯೋಗವನ್ನು ನಾವು ಮಾಡೋಣ.