ಜನವರಿಯಲ್ಲಿ ಒಬ್ಬ ಸಹಾಯಕ ಪಯನೀಯರರಾಗಿರಿ
1 ನಾವೆಲ್ಲರು ನಮ್ಮನ್ನು ನಾವೇ ಹೀಗೆ ಕೇಳಿಕೊಳ್ಳುವುದು ಔಚಿತ್ಯವುಳ್ಳದ್ದಾಗಿದೆ: ‘ಜನವರಿಯಲ್ಲಿ ನಾನು ಎಷ್ಟರಮಟ್ಟಿಗೆ ಬೆಳಕನ್ನು ಒಯ್ಯುವೆನು? ನಾನೊಬ್ಬ ಸಹಾಯಕ ಪಯನೀಯರರನಾಗಬಹುದೊ?’—ಮತ್ತಾ. 5:14, 16.
2 ಸ್ನಾನಿತ ಯುವಕರಿಗೆ ಶಾಲೆಯಿಂದ ಹೆಚ್ಚಿನ ರಜಾವಧಿ ಇರಬಹುದು. ಇವರೊಂದಿಗೆ ಕೆಲವು ಹೆತ್ತವರು ಮತ್ತು ಇನ್ನಿತರ ಪ್ರಾಯಸ್ಥ ಪ್ರಚಾರಕರು ಆ ತಿಂಗಳಲ್ಲಿ ವಿಸ್ತರಿತ ಕ್ಷೇತ್ರ ಸೇವೆಯಲ್ಲಿ ಜತೆ ಸೇರಲು ಸಾಧ್ಯವಾಗಬಹುದು. ಅಂತೆಯೆ ಪೂರ್ಣ ಸಮಯ ಕೆಲಸ ಮಾಡುವ ಅನೇಕರಿಗೆ ಈ ಜೀವರಕ್ಷಿಸುವ ಶುಶ್ರೂಷೆಗೆ ಸಮರ್ಪಿಸಲು ಸ್ವಲ್ಪ ಅಧಿಕ ಸಮಯವಿರಬಹುದು.
3 ಸಹಾಯಕ ಪಯನೀಯರರಾಗಿ ಸೇವೆ ಮಾಡಲು ಸಾಧ್ಯವಾಗುವುದರಲ್ಲಿ ಪ್ರಮುಖ ಅಂಶವು, ಅವಶ್ಯವಾದ ಹೆಚ್ಚಿನ ಪ್ರಯತ್ನವನ್ನು ಹಾಕಲು ನಮ್ಮ ಇಚ್ಛೆಯೆ ಆಗಿದೆ. (ಲೂಕ 13:24) ಕುಟುಂಬದ ಮತ್ತು ಸಭೆಯ ವಿಷಯಗಳನ್ನು ಸೇರಿಸಿ, ನಮ್ಮ ಕಾರ್ಯಾದಿಗಳನ್ನು ಬಹು ಜಾಗರೂಕತೆಯಿಂದ ಸಂಘಟಿಸುವುದಾದರೆ, ಸಹಾಯಕ ಪಯನೀಯರರಾಗಿ ಸೇವಿಸುವ ಸಂತೋಷವನ್ನು ನಾವು ಅನುಭವಿಸಲು ಸಮಯವು ದೊರಕುವಂತೆ ಮಾಡಬಹುದು.
4 ಜನವರಿಯಲ್ಲಿ ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಲು ನಿಮಗೆ ಸಾಧ್ಯವಾಗಬಹುದೋ? ಹಾಗೆ ಮಾಡುವುದು ಬಾಗಿಲುಗಳಲ್ಲಿ ಹೆಚ್ಚು ದಿಟ್ಟತನವನ್ನನುಭವಿಸುವಂತೆ ನಿಮಗೆ ಸಹಾಯ ಮಾಡುವುದು ಮತ್ತು ಆತ್ಮಿಕೋನ್ನತಿಯ ಅನುಭವಗಳು ಫಲಿಸುವವು.—ಅ. ಕೃತ್ಯಗಳು 20:35.