ಅಭಿರುಚಿಯನ್ನು ಬೆಳೆಯಿಸುವ ವಿಧ
1 “ಬೆಳೆಯಿಸುವುದು” ಅಂದರೆ ಬೆಳವಣಿಗೆಗೆ ತಯಾರಿಸುವುದು ಯಾ ಪೋಷಿಸುವುದು ಎಂದು ಒಂದು ನಿಘಂಟುವಿನಿಂದ ನಾವು ಕಲಿಯುತ್ತೇವೆ. ಆದರೆ ಈ ಪದವು ಶ್ರಮ, ಜಾಗ್ರತೆ, ಯಾ ಅಧ್ಯಯನದ ಮೂಲಕ ಪ್ರಗತಿ ಮಾಡುವುದು ಎಂದು ಕೂಡ ಅರ್ಥೈಸಬಲ್ಲದು. ಶಿಷ್ಯರನ್ನಾಗಿ ಮಾಡುವುದು ನಮ್ಮ ಶುಶ್ರೂಷೆಯ ಒಂದು ಪ್ರಾಮುಖ್ಯ ಉದ್ದೇಶವಾಗಿದೆ. (ಮತ್ತಾಯ 28:19, 20) ಆದಕಾರಣ, ಕ್ಷೇತ್ರ ಸೇವೆಯಲ್ಲಿ ನಾವು ಕಂಡುಕೊಳ್ಳುವ ಅಭಿರುಚಿಯನ್ನು ಬೆಳೆಸಲು ನಾವು ಪ್ರಯತ್ನ ಹಾಕುವ ಅಗತ್ಯವಿದೆ.
2 ಪ್ರಾಮಾಣಿಕ ಹೃದಯದ ವ್ಯಕ್ತಿಗಳ ಆತ್ಮಿಕ ಬೆಳವಣಿಗೆಯನ್ನು ಪೋಷಿಸಲು ಪುನರಾವೃತ್ತಿತ ಭೇಟಿಗಳು ಸಾಮಾನ್ಯವಾಗಿ ಅವಶ್ಯವಾಗಿವೆ. ಫಲದಾಯಕ ಪುನರ್ ಭೇಟಿಗಳು ಕ್ರಮದ ಬೈಬಲ್ ಅಭ್ಯಾಸಕ್ಕೆ ನಡಿಸಲ್ಪಡಬೇಕು.
3 ಮಹತ್ತಾದ ಅಭಿರುಚಿಯನ್ನು ತೋರಿಸಿದವರನ್ನು ಮಾತ್ರ ನೀವು ಪುನಃ ಸಂದರ್ಶಿಸುತ್ತೀರೋ? ನೀವು ಮರಳಿ ಹೋಗಲು ಸಾಹಿತ್ಯವನ್ನು ನೀಡುವ ಅಗತ್ಯವಿಲ್ಲ. ಆರಂಭದ ಭೇಟಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಾಹಿತ್ಯವನ್ನು ನೀಡದ ಒಬ್ಬ ಪಯನೀಯರರು ಸ್ನೇಹ ಭಾವದಿಂದಿರುವ ಪ್ರತಿಯೊಬ್ಬರಿಗೆ ಪುನಃ ಸಂದರ್ಶಿಸುತ್ತಾರೆ. ಶಾಸ್ತ್ರೀಯ ಆಲೋಚನೆಯನ್ನು ಹಂಚುವಲ್ಲಿ ಒಂದು ಒಳ್ಳೇ ಚರ್ಚೆಯು ಪುನರ್ ಭೇಟಿಗೆ ಒಂದು ಉತ್ತಮ ಆಧಾರವನ್ನು ಒದಗಿಸುತ್ತದೆ.
4 ಪುನರ್ ಭೇಟಿಗಳಲ್ಲಿ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಟ್ರ್ಯಾಕ್ಟ್ಗಳನ್ನು ಉಪಯೋಗಿಸಿರಿ: ನಮ್ಮ ಟ್ರ್ಯಾಕ್ಟ್ಗಳ ವಿವಿಧ ವಿಷಯಗಳು ನಮ್ಮ ದಿನಗಳಿಗೆ ಸಂಬಂಧಪಟ್ಟಿವೆ. ಅವು ಬೈಬಲ್ ಜ್ಞಾನವನ್ನು ಪಡಕೊಳ್ಳುವ ಮತ್ತು ಅದನ್ನು ಅನ್ವಯಿಸುವ ಅಗತ್ಯತೆಯನ್ನು ಒತ್ತಿಹೇಳುತ್ತವೆ.
ನೀವು ಹೀಗನ್ನಬಹುದು:
▪ “ಹೋದ ಸಲ ನಾವು ಬೈಬಲಿನಲ್ಲಿ ನಂಬಿಕೆಯನ್ನಿಡುವ ಕೆಲವು ಕಾರಣಗಳ ಕುರಿತು ಮಾತಾಡಿದೆವು. ಯಾವ ತರಹದ ಭವಿಷ್ಯತ್ತಿನ ಕುರಿತು ಬೈಬಲ್ ಮಾತಾಡುತ್ತದೆ?” ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಟ್ರ್ಯಾಕ್ಟ್ನ ಪುಟ 3 ರ ಎರಡನೇ ಪ್ಯಾರಗ್ರಾಫ್ನಿಂದ ಓದಲಾರಂಭಿಸಿರಿ. ಶಾಸ್ತ್ರವಚನಗಳನ್ನು ತೆರೆದು ನೋಡಿರಿ. ಪುಟ 5 ರಲ್ಲಿರುವ “ನಿಮಗದು ಶಕ್ಯವಾಗುವ ವಿಧ”ವೆಂಬ ಉಪಶೀರೋನಾಮದ ಕೆಳಗಿನ ವಿಷಯವನ್ನು ಗಮನಿಸುವುದರ ಮೂಲಕ ಮುಕ್ತಾಯಗೊಳಿಸಿರಿ.
5 ಅದೇ ವಿಧದಲ್ಲಿ, ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? ಎಂಬ ಟ್ರ್ಯಾಕ್ಟನ್ನು ನೀವು ಉಪಯೋಗಿಸಬಹುದು.
ನೀವು ಹೀಗನ್ನಬಹುದು:
▪ “ನಾವು ಈ ಮುಂಚೆ ಚುಟುಕಾಗಿ ಗಮನಿಸಿದಂತೆ, ಅನೇಕ ಜನರಿಗೆ ದೇವರಲ್ಲಿ ಭರವಸೆಯ ಕೊರತೆಯಿದೆ. ಉದಾಹರಣೆಗಾಗಿ, ಅವರು ಕೇಳುವುದು, ‘ದೇವರು ಅಷ್ಟು ಶಕ್ತಿಶಾಲಿಯಾಗಿರುವುದಾದರೆ, ಜನರನ್ನು ಸಾಯುವಂತೆ ಆತನು ಯಾಕೆ ಬಿಡುತ್ತಾನೆ?’ ಆ ಪ್ರಶ್ನೆಗೆ ಉತ್ತರ ಈ ಟ್ರ್ಯಾಕ್ಟ್ ಸಹಾಯಿಸಬಲ್ಲದು.” ಪುಟ 2 ರ ನಾಲ್ಕನೇ ಪ್ಯಾರಗ್ರಾಫ್ದೊಂದಿಗೆ ಆರಂಭಿಸುವ ವಿಭಾಗಕ್ಕೆ ಗಮನ ಸೆಳೆಯಿರಿ. ಪ್ರತಿಯೊಂದು ಪ್ಯಾರಗ್ರಾಫ್ನ ನಂತರ ಸಂಬಂಧಿತ ಪ್ರಶ್ನೆಯನ್ನು ಕೇಳಿರಿ, ಮತ್ತು ಉಲ್ಲೇಖಿಸಲ್ಪಟ್ಟಿಲ್ಲದ ನಮೂದಿಸಲಾದ ಶಾಸ್ತ್ರವಚನಗಳನ್ನು ಗಮನಿಸಿರಿ. ನಿಮ್ಮ ಸಭೆಗಳಲ್ಲಿ ಸಮಸ್ಯೆಗಳು ಯಾ ಇಗೋ!ವಿನ ಸಂಗ್ರಹವಿರುವುದಾದರೆ, ಅವುಗಳನ್ನು ಅದೇ ವಿಧಾನದಲ್ಲಿ ಉಪಯೋಗಿಸಬಹುದು.
6 ಅಧ್ಯಯನವನ್ನು ಮುಂದುವರಿಸುವುದು: ಇಲ್ಲಿ ಸೂಚಿಸಲಾದ ವಿಧಾನಗಳನ್ನು ಅನುಸರಿಸುವುದರ ಮೂಲಕ, ನೀವು ಒಂದು ಮನೆ ಬೈಬಲ್ ಅಭ್ಯಾಸವನ್ನು ಆರಂಭಿಸುತ್ತಿರಿ. ಕ್ರಮವಾಗಿ ಚರ್ಚೆಯನ್ನು ಮುಂದುವರಿಸಲು, ನಿಮ್ಮ ಸಂದರ್ಶನೆಯ ಕೊನೆಯಲ್ಲಿ ಮನೆಯವರಿಗೆ ಕೇಳಿರಿ: “ಕೇವಲ ಕೆಲವೇ ನಿಮಿಷಗಳಲ್ಲಿ ಪ್ರಾಮುಖ್ಯ ಪ್ರಶ್ನೆಗಳನ್ನು ನಾವು ಉತ್ತರಿಸಿದ್ದನ್ನು ನೀವು ಗಮನಿಸಿದೀರೊ? ಬರುವ ವಾರ ಪುನರುತ್ಥಾನದ ನಿರೀಕ್ಷೆ ಯಾ ನಿಮಗೆ ಅಭಿರುಚಿಕರವಾದ ಯಾವದೇ ವಿಷಯದ ಕುರಿತು ಮಾತಾಡುವಲ್ಲಿ ಸ್ವಲ್ಪ ಹೆಚ್ಚು ಸಮಯವನ್ನು ಕಳೆಯಬಹುದು.” ಪ್ರತಿಯೊಂದು ಸಲ ನೀವು ಭೇಟಿ ನೀಡುವಾಗ ಈ ಲೇಖನಗಳಲ್ಲಿ ಕೊಡಲಾದ ಪ್ರಶ್ನೆಗಳಲ್ಲಿ ಕೇವಲ ಒಂದನ್ನು ನೀವು ಉಪಯೋಗಿಸಬಹುದು. ಒಂದು ತಕ್ಕ ಸಮಯದಲ್ಲಿ, ಬ್ರೊಷರ್ ಯಾ ಸದಾ ಜೀವಿಸಬಲ್ಲಿರಿ ಪುಸ್ತಕದಿಂದ ಅಧ್ಯಯನವನ್ನು ಆರಂಭಿಸಲು ನೀವು ಬದಲಾಯಿಸಬಹುದು.
7 ನಿಜವಾದ ಸತ್ಯ ಅನ್ವೇಷಕರೊಂದಿಗೆ ಬೈಬಲ್ ಅಧ್ಯಯನವನ್ನು ನಡಿಸುವುದು ಎಷ್ಟೊಂದು ತೃಪ್ತಿದಾಯಕವಾಗಿದೆ! ನಮಗೆ ದೊರಕುವ ಅಭಿರುಚಿಯನ್ನು ಹೇಗೆ ಬೆಳೆಯಿಸುವುದು ಎಂಬದರ ಮೇಲೆ ಕೊಡಲ್ಪಟ್ಟ ಸಲಹೆಗಳನ್ನು ಅನ್ವಯಿಸುವುದರ ಮೂಲಕ ಉತ್ಪನ್ನಕಾರಕ ಶುಶ್ರೂಷೆಯೊಂದಿಗೆ ನಾವು ಆಶೀರ್ವದಿಸಲ್ಪಡುವೆವು.