ಕಿರುಹೊತ್ತಗೆಗಳನ್ನು ಇತರ ಸಾಹಿತ್ಯಗಳೊಂದಿಗೆ ಜೋಡಿಸಿರಿ
1 ಇಂದು ಪ್ರಕಾಶಿಸಲ್ಪಡುತ್ತಿರುವ ಎಲ್ಲಾ ಪತ್ರಿಕೆಗಳಲ್ಲಿ, ಕೇವಲ ಕಾವಲಿನಬುರುಜು ಮತ್ತು ಎಚ್ಚರ! ಮಾತ್ರವೇ ನಿತ್ಯ ಜೀವದ ಪಥವನ್ನು ಕಂಡುಹುಡುಕಲು ಯಥಾರ್ಥ ವಾಚಕರಿಗೆ ಸಹಾಯ ಮಾಡಬಲ್ಲದು. ಎಪ್ರಿಲ್ ಮತ್ತು ಮೇಯಲ್ಲಿ ನೀವು ಜನರೊಂದಿಗೆ ಸಂಭಾಷಿಸುತ್ತಿರುವಂತೆಯೇ, ರಾಜ್ಯ ಸಂದೇಶದಲ್ಲಿ ಕೆಲವರು ಸುಸ್ಪಷ್ಟವಾಗಿಗಿ ಆಸಕ್ತಿಯನ್ನು ತೋರಿಸುವರು, ಮತ್ತು ಅವರ ಗಮನವನ್ನು ನೀವು ನೇರವಾಗಿ ಇತ್ತೀಚೆಗಿನ ಪತ್ರಿಕೆಗಳೆಡೆಗೆ ಸೆಳೆದು, ಅವರಿಗೆ ಚಂದಾವನ್ನು ನೀಡಬಹುದು. ಇತರರು ಮೊದಲು ತುಸು ಆಸಕ್ತಿಯನ್ನು ತೋರಿಸಬಹುದು. ಅಂತಹ ಸಂದರ್ಭಗಳಲ್ಲಿ, ಮೊದಲು ನೀವು ಕಿರುಹೊತ್ತಗೆಯ ಒಂದೆರಡು ವಿಷಯಗಳನ್ನು ಚರ್ಚಿಸಬಹುದು; ಅನಂತರ ಕಿರುಹೊತ್ತಗೆಯಲ್ಲಿರುವುದನ್ನು ಪತ್ರಿಕೆಗೆ ಜೋಡಿಸಿ, ಚಂದಾವೊಂದನ್ನು ನೀಡುವುದಕ್ಕೆ ನಡಿಸಬಹುದು.
2 ನೀವು ಹೀಗನ್ನಸಾಧ್ಯವಿದೆ:
▪ “ಇಂದಿನ ಲೋಕದಲ್ಲಿ ಪರಿಹಾರಗಳಿಗಿಂತಲೂ ಅಧಿಕವಾಗಿ ಸಮಸ್ಯೆಗಳು ಇವೆಯೆಂದು ಅನೇಕ ಜನರು ಒಪ್ಪುವರು. ನಮ್ಮ ಸಮಸ್ಯೆಗಳೆಲ್ಲದರ ಅಂತ್ಯವನ್ನು ಬೈಬಲ್ ಮುಂತಿಳಿಸಿದೆ ಎಂದು ನೀವು ಬಲ್ಲಿರೋ?” ಅನಂತರ ನೀವು ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಕಿರುಹೊತ್ತಗೆಯ ಪುಟಗಳು 3 ಮತ್ತು 4ಕ್ಕೆ ತಿರುಗಿ, ಬೈಬಲಿನ ಕೆಲವು ವಾಗ್ದಾನಗಳ ಕುರಿತು ಚರ್ಚಿಸಬಹುದು.
3 ನೀವು ಎಪ್ರಿಲ್ 1ರ ಇಂಗ್ಲಿಷ್ ವಾಚ್ಟವರ್ನ್ನು ಮುಖ್ಯನೋಟವಾಗಿ ತೋರಿಸುವುದಾದರೆ, “ಲೋಕದ ಬೆಳಕನ್ನು ಅನುಸರಿಸಿರಿ” ಎಂಬ ನಾಮಾಂಕಿತ ಲೇಖನವನ್ನು ನೀವು ತೋರಿಸಿ, ಮಾನವನ ಎಲ್ಲಾ ಸಮಸ್ಯೆಗಳನ್ನು ಕಟ್ಟಕಡೆಗೆ ಯೇಸು ಕ್ರಿಸ್ತನು ಬಗೆಹರಿಸುವ ವಿಧವನ್ನು ವಿವರಿಸಬಹುದು. ದೇಶಭಾಷೆಗಳ ಎಪ್ರಿಲ್ 1ರ ಕಾವಲಿನಬುರುಜು ನಲ್ಲಿ “ಲೋಕಕ್ಕೆ ಒಬ್ಬ ಮೆಸ್ಸೀಯನ ಆವಶ್ಯಕತೆಯಿದೆಯೆ?” ಎಂಬ ಪ್ರಶ್ನೆಯ ಮೇಲೆ ಲೇಖನಗಳ ತದ್ರೀತಿಯ ಸರಣಿಯನ್ನು ಮುಖ್ಯನೋಟವಾಗಿ ಕೊಡಲಾಗಿದೆ. ಅನೇಕ ಜನರು ‘ಮೆಸ್ಸೀಯ’ ಶಬ್ದದ ಅರ್ಥ ‘ರಕ್ಷಕ’ನು ಎಂದೆಣಿಸುತ್ತಾರೆ. ಯೇಸು ಕ್ರಿಸ್ತನು ಖಂಡಿತವಾಗಿಯೂ ಮಾನವ ಕುಲದ ಒಬ್ಬ ರಕ್ಷಕನು, ಏಕಮಾತ್ರ ರಕ್ಷಕನಾಗಿರುವುದಾದರೂ, ‘ಮೆಸ್ಸೀಯ’ ಅಂದರೆ ‘ಅಭಿಷಿಕ್ತ’ನು ಎಂದು ಅವರಿಗೆ ತೋರಿಸಸಾಧ್ಯವಿದೆ. ಪುಟ 12ರ “ಮೆಸ್ಸೀಯನು ಭೂಮಿಯನ್ನಾಳುವಾಗ” ಉಪಶೀರ್ಷಿಕೆಯ ಕೆಳಗೆ, ಪ್ಯಾರಗ್ರಾಫ್ 14 ರಿಂದ 16ಕ್ಕೆ ತೆರಳಿ, ಆತನ ಆಳಿಕೆಯು ತರುವ ಕೆಲವು ಪ್ರಯೋಜನಗಳನ್ನು ತೋರಿಸಿರಿ.
4 ಅನಂತರ ಪುಟ 13 ರಲ್ಲಿರುವ ನಂತರದ “ಅವನ ಆಳಿಕ್ವೆಯು ನಿಮ್ಮನ್ನು ಪ್ರಭಾವಿಸುವ ವಿಧ” ಉಪಶೀರ್ಷಿಕೆಯನ್ನು ಮನೆಯವನಿಗೆ ತೋರಿಸಿರಿ. ಕಾವಲಿನಬುರುಜು ಕ್ರಮಾನುಗತವಾಗಿ ಬೈಬಲಿನ ಅದ್ಭುತಕರ ವಾಗ್ದಾನಗಳನ್ನು ಹೇಗೆ ಚರ್ಚಿಸುತ್ತದೆ ಮತ್ತು ನಾವದನ್ನು ಹೇಗೆ ಪಡೆಯಸಾಧ್ಯವಿದೆ ಎಂದು ನಮಗೆ ತೋರಿಸುತ್ತದೆ ಎಂದು ನಿರ್ದೇಶಿಸಿರಿ. ಅಂಚೆಯ ಮೂಲಕ ಅವನ ಮನೆಗೆ ಕ್ರಮಾನುಗತವಾಗಿ ಬರುವಂತೆ ಅವನು ಮಾಡ ಸಾಧ್ಯವಿರುವುದನ್ನು ವಿವರಿಸಿರಿ. ಕೊನೆಗೆ, ಅವನು ಚಂದಾವನ್ನು ಯಾ ಪತ್ರಿಕೆಗಳನ್ನು ತೆಗೆದುಕೊಳ್ಳಲಿ ಯಾ ಬಿಡಲಿ, ಅವನು ಆಸಕ್ತಿ ತೋರಿಸುವುದಾದರೆ, ಈ ವಿಷಯವನ್ನು ಇನ್ನೊಂದು ಅನುಕೂಲ್ಯ ಸಮಯದಲ್ಲಿ ಚರ್ಚಿಸಲು ಪುನಃ ನೀವು ಬರಲು ಸಿದ್ಧರೆಂದು ಹೇಳಿರಿ.
5 ಎಪ್ರಿಲ್ 8 ಇಂಗ್ಲಿಷ್ “ಅವೇಕ್!” ನೀವು ಮುಖ್ಯನೋಟವಾಗಿಡುವುದಾದರೆ, ಈ ಲೇಖನದ 2 ನೆಯ ಪ್ಯಾರಗ್ರಾಫ್ನಲ್ಲಿ ವಿವರಿಸಲ್ಪಟ್ಟ ಪೀಠಿಕೆಯನ್ನು ನೀವು ಉಪಯೋಗಿಸಸಾಧ್ಯವಿದೆ ಮತ್ತು ಅನಂತರ ಇದನ್ನು ಕೂಡಿಸಬಹುದು:
▪ “ನಮ್ಮ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಧರ್ಮ ಮತ್ತು ರಾಜಕೀಯದ ಸಾಮರ್ಥ್ಯದ ಕುರಿತು ಅನೇಕರು ಸಂದೇಹಿಸುತ್ತಾರೆ, ಆದರೆ ವಿಜ್ಞಾನದ ಹತ್ತಿರ ಉತ್ತರವೇನಾದರೂ ಇದೆಯೋ ಎಂದು ಅಚ್ಚರಿ ಪಡುತ್ತಾರೆ.” ಅನಂತರ “ವಿಜ್ಞಾನವು 21 ನೆಯ ಶತಕದ ಪಂಥಾಹ್ವಾನಗಳನ್ನು ಎದುರಿಸಲು ಶಕವ್ತೋ?” ಲೇಖನದಲ್ಲಿನ ತಕ್ಕದಾದ ವಿಷಯವೊಂದನ್ನು ಓದಿರಿ. ಈ ಲೇಖನವು ಎಳೆಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಆಕರ್ಷಿತವಾಗಬಹುದಾದ ಸಾಧ್ಯತೆ ಇದೆ.
6 ದೇಶಭಾಷೆಗಳ ಎಪ್ರಿಲ್ 8ರ ಎಚ್ಚರ! ಪತ್ರಿಕೆಗಳ ಮುಖಪುಟದಲ್ಲಿ ಅನೇಕ ಜನರು ಕೇಳುವ “ನಮ್ಮ ಮಾರ್ಪಡುತ್ತಿರುವ ಜಗತ್ತು—ನಾವೆತ್ತ ಸಾಗುತ್ತಿದ್ದೇವೆ?” ಎಂಬ ಪ್ರಶ್ನೆಯೊಂದು ಇದೆ. ಆ ಸಂಚಿಕೆಯ 11 ನೆಯ ಪುಟದ “ನಮ್ಮ ಮಾರ್ಪಡುತ್ತಿರುವ ಜಗತ್ತು—ಭವಿಷ್ಯತ್ತು ನಿಜವಾಗಿಯೂ ಏನು ಕಾದಿರಿಸಿದೆ?” ಲೇಖನದಲ್ಲಿ ಕೊಟ್ಟಿರುವ ಉತ್ತರಗಳಿಗೆ ಮನೆಯವನ ಗಮನವನ್ನು ನೀವು ಸೆಳೆಯಬಹುದು. ಪುಟ 11 ರಿಂದ 13 ರಲ್ಲಿ ಕೊಟ್ಟಿರುವ ಉಪಶೀರ್ಷಿಕೆಗಳನ್ನು ತೋರಿಸುತ್ತಾ, ಈ “ನಿಭಾಯಿಸಲು ಕಷ್ಟಕರವಾದ ಕಠಿಣ ಕಾಲಗಳಲ್ಲಿ” “ಭರವಸಾರ್ಹ ಮಾಹಿತಿಯ ಒಂದು ಅದ್ವಿತೀಯ ಮೂಲ”ವು ಬೈಬಲ್ ಆಗಿದೆ, ಮತ್ತು ಅದು “ಹೆಚ್ಚು ಉತ್ತಮವಾದ ಮಾರ್ಗ” ವನ್ನು ಒದಗಿಸುತ್ತದೆ ಎಂದೂ, ಆ ಮೂಲಕ “ಆಶಾವಾದಕ್ಕೆ ಕಾರಣಗಳನ್ನು” ಒದಗಿಸುತ್ತದೆ ಎಂದು ನೀವು ತೋರಿಸಬಹುದು. ಯುವಜನರಿಗೆ ಪುಟ 22 ರಲ್ಲಿರುವ ‘ಯುವಜನರು ಪ್ರಶ್ನಿಸುವುದು . . . ’ ಲೇಖನವನ್ನು ತೋರಿಸಬಹುದು: “ಮದ್ಯಪಾನ ನಿಜವಾಗಿಯೂ ನನ್ನನ್ನು ವ್ಯಸನಿಯಾಗಿ ಮಾಡಬಲ್ಲದೊ?” ಅನಂತರ ಎಚ್ಚರ!ಕ್ಕೆ ಯಾ ಎಚ್ಚರ! ಮತ್ತು ಕಾವಲಿನಬುರುಜು ಎರಡು ಪತ್ರಿಕೆಗಳಿಗೂ ಚಂದಾವೊಂದನ್ನು ನೀಡಿರಿ.
7 ನೀವು ಹೊಸ ಪ್ರಚಾರಕರಾಗಿರುವುದಾದರೆ, ನಿಸ್ಸಂದೇಹವಾಗಿ ನೀವೊಂದು ಸರಳವಾದ ಸಮೀಪಿಸುವಿಕೆಯನ್ನು ಗಣ್ಯಮಾಡುತ್ತೀರಿ. ಶಾಂತಿಭರಿತ ಹೊಸ ಲೋಕದಲ್ಲಿ ಜೀವನ, ಯಾ ಇತರ ಕಿರುಹೊತ್ತಗೆಗಳಲ್ಲೊಂದರ ಸಂಗ್ರಹವನ್ನು ನೀವು ಯಾಕೆ ಪಡೆಯಬಾರದು, ಮತ್ತು ಪ್ಯಾರಗ್ರಾಫ್ 2 ರಲ್ಲಿ ವಿವರಿಸಲ್ಪಟ್ಟ ಸಲಹೆಗಳನ್ನು ಯಾಕೆ ಅನುಸರಿಸಕೂಡದು?
8 ನಾವು ಜನರ ಮನೆಗಳಿಗೆ ರಕ್ಷಣೆಯ ಸಂದೇಶವನ್ನು ತರುವಂತೆ ಸನ್ಮಾನಿಸಲ್ಪಟ್ಟಿದ್ದೇವೆ. ‘ಯೋಗ್ಯರಾಗಿರುವವರ’ ನಮ್ಮ ಶೋಧನೆಯಲ್ಲಿ, ನಮ್ಮ ಕಿರುಹೊತ್ತಗೆಗಳ ಸದುಪಯೋಗವನ್ನು ನಾವು ಮಾಡೋಣ ಮತ್ತು ಎಪ್ರಿಲ್ ಮತ್ತು ಮೇಯಲ್ಲಿ ಚಂದಾದ ನೀಡುವಿಕೆಯೊಂದಿಗೆ ಅವುಗಳನ್ನು ಜೋಡಿಸೋಣ.—ಮತ್ತಾ. 10:13.