ಹೊಸಬರು ಪ್ರಗತಿ ಮಾಡಲು ಸಹಾಯ ಮಾಡಿರಿ
1 ಎಪ್ರಿಲ್ 17, 1992ರಲ್ಲಿ ಲೋಕವ್ಯಾಪಕವಾಗಿ ಬಹುಮಟ್ಟಿಗೆ 1 ಕೋಟಿ, 15 ಲಕ್ಷದಷ್ಟು ಜನರು ಕ್ರಿಸ್ತನ ಮರಣದ ಸ್ಮಾರಕಾಚರಣೆಗೆ ಕೂಡಿಬಂದರು. ಇದು ಯೆಹೋವನ ಸಾಕ್ಷಿಗಳ ಸಭೆಗಳೊಂದಿಗೆ ನೆರೆಯುತ್ತಿರುವ ಪ್ರಚಾರಕರ ಜುಮ್ಲಾ ಮೊತ್ತದ ಎರಡೂವರೆ ಪಟ್ಟುಗಳಿಗಿಂತಲೂ ಅಧಿಕವಾಗಿತ್ತು. “ಯೆಹೋವನ ಪರ್ವತಕ್ಕೆ” ಅಂತಹ ಜನಸ್ತೋಮಗಳು ಹಿಂಡುಗೂಡುವುದನ್ನು ನೋಡುವುದು ತಾನೇ ಎಂತಹ ಸುಖಾನುಭವವಾಗಿರುತ್ತದೆ! (ಮೀಕ 4:2) ಪ್ರಸ್ತುತದಲ್ಲಿ ಸುಮಾರು ಎಪ್ಪತ್ತು ಲಕ್ಷ ಜನರು ಸತ್ಯಾರಾಧನೆಯಲ್ಲಿ ಒಂದು ಪ್ರಮಾಣದ ಆಸಕ್ತಿಯನ್ನು ತೋರಿಸುವವರು, ಮತ್ತು ಇನ್ನೂ ಯೆಹೋವನ ಸಾರ್ವಜನಿಕ ಸ್ತುತಿಗಾರರಾಗಿರದವರು ಇದ್ದಾರೆ. ನಿಶ್ಚಯವಾಗಿ “ಬೆಳೆಯು ಬಹಳ” ಎಂಬ ಯೇಸುವಿನ ಮಾತುಗಳು ಇದಕ್ಕಿಂತಲೂ ಅಧಿಕ ಅರ್ಥಭರಿತವಾಗಿ ಎಂದೂ ಇದ್ದಿರಲಿಲ್ಲ!—ಮತ್ತಾ. 9:37, 38.
2 ಎಪ್ರಿಲ್ ತಿಂಗಳಲ್ಲಿ, ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗಲು ಯೋಗ್ಯತೆಯುಳ್ಳವರೆಲ್ಲರಿಗೆ ಸಹಾಯ ನೀಡಲು ನಾವು ವಿಶೇಷ ಪ್ರಯತ್ನಗಳನ್ನು ಮಾಡುವೆವು. ಸಭಾ ಪುಸ್ತಕ ಅಧ್ಯಯನ ನಿರ್ವಾಹಕನು, ತನ್ನ ಗುಂಪಿನಲ್ಲಿರುವ ಸಾಮರ್ಥ್ಯವುಳ್ಳ ಇತರ ಪ್ರಚಾರಕರ ಮತ್ತು ಪಯನೀಯರರಿಂದ ನೆರವು ಕೊಡಲ್ಪಟ್ಟು ಇದರಲ್ಲಿ ಪ್ರಮುಖ ಪಾತ್ರವನ್ನು ಆಡುವನು. ನಮ್ಮ ಮೂರು ಬಗೆಯ ಧ್ಯೇಯ (1) ಈ ವರ್ಷದ ವಿಶೇಷ ಸಾರ್ವಜನಿಕ ಭಾಷಣ ಮತ್ತು ಸ್ಮಾರಕಾಚರಣೆಗೆ ಹಾಜರಾಗುವ ಹೊಸಬರಿಗೆ ಒಂದು ಮನೆ ಬೈಬಲ್ ಅಧ್ಯಯನಕ್ಕಾಗಿ ಏರ್ಪಡಿಸುವದು; (2) ಅಧ್ಯಯನ ಮಾಡುತ್ತಿರುವವರನ್ನು ಅಸ್ನಾನಿತ ಪ್ರಚಾರಕರಾಗಲು ಯೋಗ್ಯತೆ ಪಡೆಯಲು ಉತ್ತೇಜಿಸುವದು; ಮತ್ತು (3) ಕ್ಷೇತ್ರ ಶುಶ್ರೂಷೆಯಲ್ಲಿ ನಮ್ಮ ವೈಯಕ್ತಿಕ ಭಾಗವಹಿಸುವಿಕೆಯನ್ನು ವರ್ಧಿಸುವುದು ಆಗಿದೆ.
3 ನಮ್ಮ ಯಾವುದೇ ಕೂಟಗಳಿಗೆ ಹೊಸಬರನ್ನು ಸುಸ್ವಾಗತಿಸಲು ಮತ್ತು ಅವರ ಪರಿಚಯ ಮಾಡಿಕೊಳ್ಳಲು ಎಲ್ಲರೂ ಒಂದು ವಿಶೇಷ ಪ್ರಯತ್ನವನ್ನು ಮಾಡತಕ್ಕದ್ದು. ಒಂದು ಕ್ರಮದ ಮನೆ ಬೈಬಲ್ ಅಧ್ಯಯನ ಇರುವಂತೆ ಈ ಆಸಕ್ತ ಜನರನ್ನು ಇನ್ನು ಹೆಚ್ಚಾಗಿ ಉತ್ತೇಜಿಸುವುದರಲ್ಲಿ ನಾವೇನು ಮಾಡಬಲ್ಲೆವು?
4 ಭಾರತದಲ್ಲಿ 1992 ನೇ ಸೇವಾ ವರ್ಷದ ಪ್ರತಿ ತಿಂಗಳಲ್ಲಿ ಸರಾಸರಿಯಾಗಿ 9,594 ಬೈಬಲ್ ಅಭ್ಯಾಸಗಳು ನಡೆಸಲ್ಪಟ್ಟಿವೆ. ವಿದ್ಯಾರ್ಥಿಗಳೊಂದಿಗೆ ಪರಿಚಯವುಳ್ಳವರಾಗುವಂತೆ ಬೈಬಲ್ ಅಧ್ಯಯನಗಳಲ್ಲಿ ತಮ್ಮೊಂದಿಗೆ ಜತೆಗೂಡುವಂತೆ ತಮ್ಮ ಪುಸ್ತಕ ಅಧ್ಯಯನ ನಿರ್ವಾಹಕನನ್ನು ಪ್ರಚಾರಕರು ಆಮಂತ್ರಿಸಬಹುದು. (ರಾ.ಸೇ. 4 ⁄ 81 ಪು. 4) ಈ ಬೈಬಲ್ ವಿದ್ಯಾರ್ಥಿಗಳಲ್ಲಿ ಕೆಲವರು ಈಗಾಗಲೇ ಕೂಟಗಳಿಗೆ ಹಾಜರಾಗುತ್ತಿರಬಹುದು ಮತ್ತು ಮನೆಯಿಂದ ಮನೆಯ ಕಾರ್ಯದಲ್ಲಿ ಪಾಲು ಪಡೆಯುವ ಅರ್ಹತೆಯುಳ್ಳವರಾಗಿರಬಹುದು. ಹೊಸಬರು ತುಸು ಕ್ರಮಭರಿತ ರೀತಿಯಲ್ಲಿ ಅವಿಧಿಯಾಗಿ ಸಾಕ್ಷಿಯನ್ನೀಯುತ್ತಾರೋ? ನಮ್ಮ ಶುಶ್ರೂಷೆಯ ಪುಟ 97-9 ರಲ್ಲಿ ವಿವರಿಸಲ್ಪಟ್ಟಂತೆ, ಅಸ್ನಾನಿತ ಪ್ರಚಾರಕರಿಗಾಗಿರುವ ಅರ್ಹತೆಗಳನ್ನು ಅವರು ಮುಟ್ಟುತ್ತಾರೋ? ಹಾಗಿರುವುದಾದರೆ, ಅಸ್ನಾನಿತ ಪ್ರಚಾರಕರಾಗಿ ಅನುಮೋದಿಸಲ್ಪಟ್ಟಾದ ನಂತರ ಮನೆಯಿಂದ ಮನೆಯ ಕಾರ್ಯದಲ್ಲಿ ಅವರು ಹೇಗೆ ಆರಂಭಿಸಬಹುದು ಎಂದವರಿಗೆ ವಿವರಿಸಿರಿ.
5 ನಮ್ಮ ಕ್ರೈಸ್ತ ಸಹವಾಸದಲ್ಲಿ ಒಬ್ಬರನ್ನೊಬ್ಬರು ಉತ್ತೇಜಿಸುವುದನ್ನು ನಾವು ಉಪೇಕ್ಷಿಸಬಾರದು. (ಇಬ್ರಿ. 10:24, 25) ತಮ್ಮ ಶುಶ್ರೂಷೆಯಲ್ಲಿ ಯಾರಾದರೂ ನಿಧಾನಿಸಿರುವುದಾದರೆ, ಪುಸ್ತಕ ಅಧ್ಯಯ ನಿರ್ವಾಹಕರು ಸಹಾಯ ಮತ್ತು ಉತ್ತೇಜನವನ್ನು ಒದಗಿಸಲು ನಿಶ್ಚಿತ ಏರ್ಪಾಡುಗಳನ್ನು ಮಾಡತಕ್ಕದ್ದು. ಕೆಲವೊಮ್ಮೆ ಕ್ಷೇತ್ರ ಸೇವೆಯಲ್ಲಿ ನಮ್ಮೊಂದಿಗೆ ಜತೆಯಾಗಿ ಬರುವಂತೆ ಒಂದು ಬೆಚ್ಚನೆಯ ಆಮಂತ್ರಣವಷ್ಟೇ ಬೇಕಾಗಿರುವುದು.
6 ಎಪ್ರಿಲನ್ನು ಕ್ಷೇತ್ರ ಸೇವಾ ಚಟುವಟಿಕೆಯ ಒಂದು ಎದ್ದುಕಾಣುವ ತಿಂಗಳಾಗಿ ಮಾಡುವಂತೆ ಎಲ್ಲರ ಸಹಕಾರ ಬೇಕಾಗುತ್ತದೆ. ಶುಶ್ರೂಷೆಯಲ್ಲಿ ಒಂದು ಪೂರ್ಣ ಪಾಲು ಇರಲು ತನ್ನ ಗುಂಪಿನ ಪ್ರತಿಯೊಬ್ಬ ಸದಸ್ಯನನ್ನು ಪುಸ್ತಕ ಅಧ್ಯಯನ ನಿರ್ವಾಹಕನು ಸಹಾಯಿಸುವಾಗ, ಅವನ ಹುರುಪಿನ ಮುಂದಾಳುತನವು ವ್ಯತ್ಯಾಸವನ್ನುಂಟುಮಾಡಬಲ್ಲದು. ಸೇವೆಗಾಗಿ ಅಧಿಕ ಕೂಟಗಳನ್ನು ಏರ್ಪಡಿಸಬಹುದು. ವಯಸ್ಸಾದವರಿಗೆ ವಿಶೇಷ ಗಮನ ಹರಿಸಬಹುದು, ಮತ್ತು ವ್ಯಾವಹಾರಿಕ ವಿಧಾನಗಳಲ್ಲಿ ಎಳೆಯವರಿಗೆ ಸಹಾಯ ಕೊಡಸಾಧ್ಯವಿದೆ. ಎಪ್ರಿಲಿನಲ್ಲಿ ಇಡೀ ಕುಟುಂಬವು ಶುಶ್ರೂಷೆಯಲ್ಲಿ ಭಾಗವಹಿಸುವಂತೆ ಹೆತ್ತವರು ನೋಡಿಕೊಳ್ಳತಕ್ಕದ್ದು. ಕೊಯ್ಲಿನ ಈ ಸಮಯದಲ್ಲಿ ನಾವೆಲ್ಲರೂ ಯೆಹೋವನಿಗೆ ನಮ್ಮ ಅತ್ಯುತ್ತಮವಾದುದನ್ನು ಕೊಟ್ಟಲ್ಲಿ, ಅವನ ಸಮೃದ್ಧ ಆಶೀರ್ವಾದಗಳು ನಮ್ಮದಾಗುವವು.