ದಶಂಬರ ತಿಂಗಳಿನಲ್ಲಿ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು
1 ಯೇಸು ತನ್ನ ಶಿಷ್ಯರಿಗೆ ಸುವಾರ್ತೆಯ ಬೋಧಕರಾಗಿರಬೇಕೆಂದು ಆಜ್ಞಾಪಿಸಿದನು. (ಮತ್ತಾಯ 28:19, 20) ಇತರರಿಗೆ ಕಲಿಸುವ ನಮ್ಮ ಪ್ರಾಥಮಿಕ ವಿಧಾನವು ಬೈಬಲ್ ಅಧ್ಯಯನಗಳನ್ನು ನಡೆಸುವ ಮೂಲಕವೇ ಆಗಿದೆ. ಈ ಕೆಲಸದಲ್ಲಿ ನೀವು ಭಾಗವಹಿಸುತ್ತಿದ್ದೀರೊ? ಇಲ್ಲದಿದ್ದರೆ, ಇತರರಿಗೆ ಕಲಿಸುವುದರಲ್ಲಿ ಹೆಚ್ಚಿನ ಪಾಲನ್ನು ನೀವು ಅನುಭವಿಸಸಾಧ್ಯವಾಗುವಂತೆ ಒಂದು ಅಧ್ಯಯನವನ್ನು ನೀವು ಹೇಗೆ ಆರಂಭಿಸಬಲ್ಲಿರಿ?
2 ಪ್ರಾಯಶಃ ನಾವು ಮನೆಯವನಿಗೆ ಈ ಲೋಕವು ಪಾರಾಗುವುದೊ? ಎಂಬ ಕಿರುಹೊತ್ತಗೆಯನ್ನು ಕೊಟ್ಟು, ಅದರ ಒಳವಿಷಯವನ್ನು ಚರ್ಚಿಸಲು ಹಿಂದಿರುಗುತ್ತೇವೆಂದು ವಾಗ್ದಾನಿಸಿದ್ದೇವೆ.
“ಈ ಲೋಕವು ಪಾರಾಗುವುದೊ?” ಎಂಬ ಕಿರುಹೊತ್ತಗೆಯನ್ನು ನಾವು ಬಿಟ್ಟು ಬಂದ ಮನೆಯವನನ್ನು ಪುನಃ ಸಂದರ್ಶಿಸುವಾಗ, ನಾವು ಹೀಗೆ ಹೇಳಬಹುದು:
▪ “ಕೆಲವು ದಿನಗಳ ಹಿಂದೆ ನಾನು ಇಲ್ಲಿ ಇದ್ದಾಗ, ನಮ್ಮ ಸಮಯಗಳ ತುರ್ತಿನ ಕುರಿತು ಮತ್ತು ನಮ್ಮ ದಿನದಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳ ಕುರಿತು ಯೇಸು ನಿಷ್ಕೃಷ್ಟವಾಗಿ ವರ್ಣಿಸಿದನೆಂಬುದಾಗಿ ನಾವು ಚರ್ಚಿಸಿದೆವು. ಕೆಲವೊಂದು ನಿಮಿಷಗಳನ್ನು ವ್ಯಯಿಸಿ ನಿಮ್ಮೊಂದಿಗೆ ನಾನು ಬಿಟ್ಟು ಹೋದ ಕಿರುಹೊತ್ತಗೆಯಿಂದ ಸ್ವಲ್ಪ ಮಾಹಿತಿಯನ್ನು ಸಂಕ್ಷಿಪ್ತವಾಗಿ ಪರಿಗಣಿಸಲು ಬಯಸುತ್ತೇನೆ. ‘ಸೂಚನೆ’ ಎಂಬ ಉಪಶೀರ್ಷಿಕೆಯ ಕೆಳಗೆ ತಿಳಿಸಲಾದ ವಿಷಯವನ್ನು ಗಮನಿಸಿರಿ.” ಕಿರುಹೊತ್ತಗೆಯ 3 ನೆಯ ಪುಟಕ್ಕೆ ತೆರಳಿ, ಸಮಯವು ಅನುಮತಿಸಿದಂತೆ ನಮೂದಿಸಲಾದ ಶಾಸ್ತ್ರವಚನಗಳನ್ನು ಓದುತ್ತಾ, ಆ ಉಪಶೀರ್ಷಿಕೆಯ ಕೆಳಗೆ ಇರುವ ಮೊದಲ ಎರಡು ಯಾ ಮೂರು ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ. ಯೇಸುವಿನ ಪ್ರವಾದನೆ ಇಂದು ಹೇಗೆ ನೆರವೇರುತ್ತಿದೆ ಎಂಬುದನ್ನು ಎತ್ತಿತೋರಿಸಿರಿ. ಹಿಂದಿರುಗಲು ಮತ್ತು ಈ ಉಪಶೀರ್ಷಿಕೆಯ ಕೆಳಗೆ ಇರುವ ಬೇರೆ ಪ್ಯಾರಗ್ರಾಫ್ಗಳನ್ನು ಚರ್ಚಿಸಲು ಏರ್ಪಾಡುಗಳನ್ನು ಮಾಡಿರಿ. ನೀವು ಹಿಂದಿರುಗುವ ಮುಂಚೆ ವಿಷಯವನ್ನು ಓದುವಂತೆ ಮನೆಯವನನ್ನು ಉತ್ತೇಜಿಸಿರಿ.
3 ಅಥವಾ ನೀವು ಹೀಗೆ ಏನಾದರೂ ಹೇಳಬಹುದು:
▪ “ಕಳೆದ ಬಾರಿ ನಾವು ಮಾತಾಡಿದಾಗ, ಈ ಲೋಕವು ಪಾರಾಗುವುದೊ? ಎಂಬ ಶೀರ್ಷಿಕೆಯ ಕಿರುಹೊತ್ತಗೆಯನ್ನು ನಿಮ್ಮಲ್ಲಿ ನಾನು ಬಿಟ್ಟುಹೋದೆ. ಲೌಕಿಕ ಕಾರ್ಯಗಳಲ್ಲಿ ಯೇಸು ಕ್ರಿಸ್ತನ ಪಾತ್ರದ ಕುರಿತು ನಾವು ಆ ಸಮಯದಲ್ಲಿ ಮಾತಾಡಿದೆವು. ಬೈಬಲಿನಲ್ಲಿ ಯೋಹಾನ 17:3 ರಲ್ಲಿ ದಾಖಲೆ ಮಾಡಲ್ಪಟ್ಟ ಅವನ ಮಾತುಗಳನ್ನು ನಾವು ಓದಿದೆವು. [ಓದಿರಿ.] ನಮಗೆ ನಿತ್ಯಜೀವವು ಬೇಕಾದಲ್ಲಿ, ದೇವರ ಮತ್ತು ಯೇಸುವಿನ ಕುರಿತು ನಾವು ಕಲಿಯುವುದು ಅಗತ್ಯವಾಗಿರುವುದರಿಂದ, ಅಂತಹ ಜ್ಞಾನವನ್ನು ತೆಗೆದುಕೊಳ್ಳಲು ನಮ್ಮಿಂದ ಸಾಧ್ಯವಾಗುವುದನ್ನು ಮಾಡುವುದು ಸಾರ್ಥಕವಾಗಿದೆ. ಯೇಸು ಭೂಮಿಯಲ್ಲಿದ್ದಾಗ, ದೇವರ ಅನೇಕ ಅದ್ಭುತಕರ ಗುಣಗಳನ್ನು ಅವನು ಪ್ರತಿಬಿಂಬಿಸಿದನು. ಯೇಸು ಮತ್ತು ಅವನ ಶುಶ್ರೂಷೆಯ ಕುರಿತು ನಾವು ಹೆಚ್ಚನ್ನು ತಿಳಿದಷ್ಟು, ಅವನ ತಂದೆಯ ಕುರಿತು ನಾವು ಹೆಚ್ಚನ್ನು ತಿಳಿದುಕೊಳ್ಳುತ್ತೇವೆ ಎಂಬುದನ್ನು ನಂಬುವುದು ವಿವೇಚನಾಪರವಾಗಿಲವ್ಲೆ? [ಪ್ರತಿಕ್ರಿಯೆಗಾಗಿ ಅನುಮತಿ ನೀಡಿರಿ.] ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಈ ಪುಸ್ತಕವು ಏನನ್ನು ತಿಳಿಸುತ್ತದೆ ಎಂಬುದನ್ನು ಗಮನಿಸಿರಿ.” ಅಧ್ಯಾಯ 116ರ ಹತ್ತನೆಯ ಪುಟದಲ್ಲಿರುವ ಮೊದಲನೆಯ ಹಾಗೂ ಎರಡನೆಯ ಪ್ಯಾರಗ್ರಾಫ್ಗಳನ್ನು ಓದಿರಿ. ಯೇಸುವಿನ ಕುರಿತು ನಾಲ್ಕು ಸುವಾರ್ತೆಯ ವೃತ್ತಾಂತಗಳಲ್ಲಿ ಇರುವ ಎಲ್ಲಾ ಮಾಹಿತಿಯು ಈ ಪುಸ್ತಕದಲ್ಲಿದೆ ಮತ್ತು ಘಟನೆಗಳು ಸಂಭವಿಸಿದ ಕ್ರಮದಲ್ಲಿ ವಿಷಯವನ್ನು ಇರಿಸುತ್ತದೆ ಎಂಬುದನ್ನು ಒತ್ತಿ ಹೇಳಿರಿ. ನಿರ್ದಿಷ್ಟ ಅಧ್ಯಾಯದ ಮುಖ್ಯವಿಷಯಗಳನ್ನು, ದೃಷ್ಟಾಂತಗಳನ್ನು, ಮತ್ತು ಪುಸ್ತಕದ ಆರಂಭದಲ್ಲಿರುವ ನಕ್ಷೆಯನ್ನು ತೋರಿಸಿರಿ. ರೂ. 40ರ ಕಾಣಿಕೆಗೆ ಒಂದು ಪ್ರತಿಯನ್ನು ಅವನು ತನಗಾಗಿಯೇ ಪಡೆಯಬಲ್ಲನೆಂದು ಮನೆಯವನಿಗೆ ಹೇಳಿರಿ ಮತ್ತು ಪುಸ್ತಕವನ್ನು ನೀಡಿರಿ.
4 “ಅತ್ಯಂತ ಮಹಾನ್ ಪುರುಷ” ಪುಸ್ತಕವನ್ನು ಸ್ವೀಕರಿಸಿದ ಒಬ್ಬ ಮನೆಯವನನ್ನು ವಂದಿಸಿದ ತರುವಾಯ, ನಾವು ಹೀಗೆ ಹೇಳಬಹುದು:
▪ “ನನ್ನ ಹಿಂದಿನ ಭೇಟಿಯಲ್ಲಿ ನಾನು ಹೇಳಿದಂತೆ, ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಬೈಬಲ್ ಅಧ್ಯಯನಕ್ಕಾಗಿ ರೂಪಿಸಲಾಗಿದೆ. ಅದನ್ನು ಅತಿ ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಸಾಧ್ಯವಿದೆ ಎಂದು ಸಂಕ್ಷಿಪ್ತವಾಗಿ ಪ್ರದರ್ಶಿಸಲು ನಾನು ಬಯಸುತ್ತೇನೆ.” ಪುಸ್ತಕವನ್ನು “ಪರಲೋಕದಿಂದ ಸಂದೇಶಗಳು,” ಎಂಬ ಒಂದನೆಯ ಅಧ್ಯಾಯಕ್ಕೆ ತೆರೆಯಿರಿ. ಮುದ್ರಿತ ಪ್ರಶ್ನೆಗಳ ಕಡೆಗೆ ಮನೆಯವನ ಗಮನವನ್ನು ಸೆಳೆಯಿರಿ. ಮೊದಲನೆಯ ಪ್ರಶ್ನೆಯನ್ನು ಓದಿರಿ, ಆಮೇಲೆ ಆರಂಭದ ಪ್ಯಾರಗ್ರಾಫ್ಗಳನ್ನು ಪರಿಗಣಿಸಿರಿ. ಎರಡನೆಯ ಪುಟದಲ್ಲಿರುವ ದೃಷ್ಟಾಂತವನ್ನು ಅದಕ್ಕೆ ಜೋಡಿಸಿರಿ. ಉಳಿದ ಪ್ರಶ್ನೆಗಳನ್ನು ಚರ್ಚಿಸಿರಿ, ಮತ್ತು ಸಮಯವು ಅನುಮತಿಸಿದಂತೆ ಉತ್ತರಗಳನ್ನು ಎತ್ತಿತೋರಿಸಿರಿ. ಭೇಟಿಯನ್ನು ಸಮಾಪ್ತಿಗೊಳಿಸುವ ಮುಂಚೆ, ಹಿಂದಿರುಗಲು ಮತ್ತು ಸಂಭಾಷಣೆಯನ್ನು ಮುಂದುವರಿಸಲು ಏರ್ಪಾಡನ್ನು ಮಾಡಿರಿ.
5 ಸಕಾರಾತ್ಮಕವಾದ ಒಂದು ಮನೋಭಾವವನ್ನು ಕಾಪಾಡಿಕೊಳ್ಳುವ ಮೂಲಕ, ಸರಿಯಾಗಿ ತಯಾರಿಸುವ ಮೂಲಕ, ಮತ್ತು ಪ್ರತಿಯೊಂದು ಅವಕಾಶದ ಲಾಭವನ್ನು ತೆಗೆದುಕೊಳ್ಳುವ ಮೂಲಕ, ದಶಂಬರ ತಿಂಗಳಿನಲ್ಲಿ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ನಾವು ಸುಸಜ್ಜಿತರಾಗಿರುವೆವು.