ಹೊಸ ಸರ್ಕಿಟ್ ಸಮ್ಮೇಳನದ ಕಾರ್ಯಕ್ರಮ
1 ಮತ್ತಾಯ 6:33 ರಲ್ಲಿರುವ ಯೇಸುವಿನ ಮಾತುಗಳಿಗೆ ವಿಧೇಯತೆ ತೋರಿಸುವಲ್ಲಿ, ನಿಜ ಕ್ರೈಸ್ತರು ರಾಜ್ಯವನ್ನು ಯಾವಾಗಲೂ ತಮ್ಮ ಜೀವಿತಗಳಲ್ಲಿ ಪ್ರಥಮವಾಗಿಟ್ಟಿದ್ದಾರೆ. ಆದಕಾರಣ, ಜನವರಿ 1994 ರಲ್ಲಿ ಆರಂಭವಾಗುವ ಸರ್ಕಿಟ್ ಸಮ್ಮೇಳನದ ಕಾರ್ಯಕ್ರಮಕ್ಕಾಗಿ, “ಮೊದಲು ರಾಜ್ಯವನ್ನು ಹುಡುಕುತ್ತಾ ಇರ್ರಿ” ಎಂಬ ಮುಖ್ಯ ವಿಷಯವು ಸೂಕ್ತವಾಗಿದೆ.
2 ಆರಂಭದಿಂದಲೇ ಕಾರ್ಯಕ್ರಮವು, ಒಂದು ರಾಜ್ಯ, ಪ್ರಭುಗಳು, ಪ್ರಜೆಗಳು, ಮತ್ತು ನಿಯಮಗಳೊಂದಿಗೆ ಅದು ಕಾರ್ಯಮಾಡುವ ಸರಕಾರವೆಂಬುದನ್ನು ಒತ್ತಿಹೇಳುತ್ತಾ, ರಾಜ್ಯದ ವಾಸ್ತವಿಕತೆಯನ್ನು ಎತ್ತಿತೋರಿಸುವುದು. ವಾಸ್ತವದಲ್ಲಿ, ಇಂದು ಸಮಾಜಕ್ಕೆ ಪ್ರಯೋಜನ ತರುವ ಮಾನವ ಸರಕಾರಗಳ ಅನೇಕ ನಿಯಮಗಳು ಬೈಬಲ್ ನಿಯಮಗಳ ಮೇಲೆ ಆಧಾರಿತವಾಗಿವೆ.
3 ನಮ್ಮ ಜೀವಿತಗಳ ಎಲ್ಲಾ ಹಂತಗಳಲ್ಲಿ ರಾಜ್ಯಕ್ಕೆ ಪ್ರಾಧಾನ್ಯ ಕೊಡುವುದರಿಂದ ನಾವು ಪಡೆಯುವ ಸಂರಕ್ಷಣೆ ಮತ್ತು ಆಶೀರ್ವಾದಗಳನ್ನು ಪರಿಗಣಿಸಲಾಗುವುದು. ಅನಾವಶ್ಯಕವಾದ ಚಿಂತೆಯನ್ನು ನಾವು ಹೇಗೆ ತೊರೆಯಬಲ್ಲೆವು ಎಂಬುದನ್ನು ತೋರಿಸಲು, ಸಹಾಯಕಾರಿ ಸಲಹೆಯನ್ನು ನೀಡಲಾಗುವುದು. ನಮ್ಮ ಕಣ್ಣನ್ನು ಸರಳವಾಗಿಡುವುದು ಯಾಕೆ ಅಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಭಾಷಣಗಳು, ಪ್ರತ್ಯಕ್ಷಾಭಿನಯಗಳು, ಮತ್ತು ಚರ್ಚೆಗಳು ತೋರಿಸುವವು.
4 ಸಮ್ಮೇಳನದ ಶನಿವಾರದಂದು, ಅರ್ಹರಾದ ದೀಕ್ಷಾಸ್ನಾನದ ಅಭ್ಯರ್ಥಿಗಳು, ಯೆಹೋವನಿಗೆ ತಮ್ಮ ಸಮರ್ಪಣೆಯ ಬಹಿರಂಗ ಘೋಷಣೆಯನ್ನು ಮಾಡಶಕ್ತರಾಗುವರು. ಆದಿತ್ಯವಾರದಂದು, “ಮಾನವಕುಲಕ್ಕಾಗಿ ದೇವರ ರಾಜ್ಯವು ಏನನ್ನು ಮಾಡುವುದು?” ಎಂಬ ವಿಷಯದ ಬಹಿರಂಗ ಭಾಷಣಕ್ಕಾಗಿ ಹಾಜರಾಗಿರಲು ನಮ್ಮಲ್ಲಿ ಎಲ್ಲರೂ ಬಯಸುವೆವು.
5 ಸರ್ಕಿಟ್ ಸಮ್ಮೇಳನದ ಎರಡೂ ದಿನಗಳಿಗೆ ಹಾಜರಾಗಿರುವಂತೆ ನಿಮ್ಮ ಯೋಜನೆಗಳನ್ನು ಮಾಡಲು ನಿಶ್ಚಯ ಮಾಡಿಕೊಳ್ಳಿರಿ. ಹಿತಕರವಾದ ಸಹೋದರ ಸಹವಾಸದೊಂದಿಗೆ ಜೊತೆಗೂಡಿರುವ ಸಮ್ಮೇಳನದ ಕಾರ್ಯಕ್ರಮವು, ನಮ್ಮಲ್ಲಿ ಯಾರೂ ಕೂಡ ತಪ್ಪಿಸಿಕೊಳ್ಳಲು ಬಯಸದಂತಹ ಭಕ್ತಿವೃದ್ಧಿಯನ್ನುಂಟುಮಾಡುವ ಮತ್ತು ವಿಶ್ರಾಂತಿದಾಯಕವಾದ ಪ್ರೋತ್ಸಾಹವನ್ನು ಒದಗಿಸುವುದು.