ಕ್ಷೇತ್ರ ಸೇವೆಗಾಗಿ ಅರ್ಥಪೂರ್ಣ ಕೂಟಗಳು
1 ಲೂಕ 10:1-11 ರಲ್ಲಿ, ಅವರು ಕ್ಷೇತ್ರ ಸೇವೆಗಾಗಿ ತಯಾರಿಸುವಂತೆ ಸಹಾಯ ಮಾಡಲಿಕ್ಕಾಗಿ ಯೇಸು, ಹೊಸದಾಗಿ ನೇಮಿಸಲ್ಪಟ್ಟ 70 ಮಂದಿ ಶಿಷ್ಯರೊಂದಿಗೆ ನಡೆಸಿದ ಒಂದು ಕೂಟದ ದಾಖಲೆಯು ನಮಗಿದೆ. ಅವರನ್ನು ಸಂಘಟಿತಗೊಳಿಸಲು, ಅವರೇನನ್ನು ಹೇಳಬೇಕೆಂಬುದನ್ನು ತಯಾರಿಸಲು, ಮತ್ತು ಕಷ್ಟದ ಸನ್ನಿವೇಶಗಳೊಂದಿಗೆ ವ್ಯವಹರಿಸುವಂತೆ ಸಹಾಯಮಾಡಲು, ಆತನು ನಿರ್ದಿಷ್ಟ ಮಾರ್ಗದರ್ಶನಗಳನ್ನು ಒದಗಿಸಿದನು. ಈ ವೃತ್ತಾಂತವನ್ನು ಪರೀಕ್ಷಿಸುವ ಮೂಲಕ ನಾವು ಕಲಿಯಬಲ್ಲೆವು.
2 ಯೇಸುವಿನೊಂದಿಗೆ ಕೂಟಕ್ಕಾಗಿ ಎಲ್ಲಾ 70 ಮಂದಿ ಶಿಷ್ಯರು ಹಾಜರಾಗಿದ್ದರು ಎಂಬುದು ಸುವ್ಯಕ್ತ. ಕೆಲವು ವ್ಯಕ್ತಿಗಳು ರೂಢಿಯಾಗಿ ತಡವಾಗಿ ಬರುವುದಾದರೆ ಕ್ಷೇತ್ರ ಸೇವೆಗಾಗಿ ಕೂಟದಲ್ಲಿ ಹೆಚ್ಚಿನ ಸಮಯವು ವ್ಯರ್ಥವಾಗುತ್ತದೆ. ಅವರ ತಡವಾದ ಆಗಮಿಸುವಿಕೆಯು ಸಾಮಾನ್ಯವಾಗಿ ಗುಂಪುಗಳನ್ನು ಹಾಗೂ ಟೆರಿಟೊರಿ ನೇಮಕಗಳನ್ನು ಪುನಃ ಸಂಘಟಿಸುವುದನ್ನು ಅವಶ್ಯಪಡಿಸುತ್ತದೆ. ಇದು ಅನೇಕ ವೇಳೆ ಇಡೀ ಗುಂಪು ನಿಧಾನಿಸುವಂತೆ ಮಾಡುತ್ತದೆ. ಸಮಯಕ್ಕೆ ಸರಿಯಾಗಿ ಆಗಮಿಸುವ ಮೂಲಕ ಮತ್ತು ಟೆರಿಟೊರಿಗೆ ವಿಳಂಬಿಸದೆ ಮುಂದುವರಿಯಲು ಸಿದ್ಧರಾಗಿರುವ ಮೂಲಕ ನಾವೆಲ್ಲರೂ ನಮ್ಮ ಪಾಲನ್ನು ಮಾಡಬಲ್ಲೆವು.
3 ಯೇಸು ಆ ಗುಂಪಿಗೆ ಉಪಯೋಗಿಸಲಿಕ್ಕಾಗಿ ಒಂದು ನಿರ್ದಿಷ್ಟವಾದ ಸಂಭಾಷಣೆಗಾಗಿ ವಿಷಯವನ್ನು ಕೊಟ್ಟನು, ಅದೇನಂದರೆ, “ದೇವರ ರಾಜ್ಯ.” (ಲೂಕ 10:9) ಅದೇ ಸಂದೇಶವನ್ನು ಸಾರಲಿಕ್ಕಾಗಿ ನಾವು ನೇಮಿಸಲ್ಪಟ್ಟಿದ್ದೇವೆ, ಮತ್ತು ನಾವು ಹೇಳಬೇಕಾದ ವಿಷಯದಲ್ಲಿ ಕೆಲವು ಸಹಾಯಕಾರಿ ಸಲಹೆಗಳನ್ನು ನಾವು ಸಾಮಾನ್ಯವಾಗಿ ಗಣ್ಯಮಾಡುತ್ತೇವೆ. ನಾಲ್ವತ್ತಕ್ಕಿಂತಲೂ ಹೆಚ್ಚಿನ ವಿವಿಧ ಪೀಠಿಕೆಗಳನ್ನು ಮತ್ತು ವಿಸ್ತಾರವಾದ ವೈವಿಧ್ಯಮಯ ಸನ್ನಿವೇಶಗಳಲ್ಲಿ ಉಪಯೋಗಿಸಸಾಧ್ಯವಿರುವ ಸೂಕ್ತವಾದ ಶಾಸ್ತ್ರ ವಚನಗಳನ್ನು ಒದಗಿಸುವ, ರೀಸನಿಂಗ್ ಪುಸ್ತಕಕ್ಕೆ ನಿರ್ವಾಹಕನು ನಿರ್ದೇಶಿಸಬಹುದು. ಒಂದು ಅಥವಾ ಎರಡು ನೀಡುವಿಕೆಗಳ ಸಂಕ್ಷಿಪ್ತ ಪುನರ್ವಿಮರ್ಶೆಯು, ಹೇಳಲಿಕ್ಕಾಗಿ ಏನನ್ನಾದರೂ ನಮ್ಮ ಮನಸ್ಸಿನಲ್ಲಿಡಲು ನಮಗೆ ಸಹಾಯ ಮಾಡುವುದರ ಮೂಲಕ ಬಾಗಿಲುಗಳಲ್ಲಿ ಅಧಿಕ ಭರವಸೆಯಿಂದ ಮಾತಾಡಲು ಶಕ್ತರನ್ನಾಗಿ ಮಾಡುತ್ತದೆ.
4 ಯೇಸು ತನ್ನ ಶಿಷ್ಯರಿಗೆ ಏನನ್ನು ಹೇಳಬೇಕು ಎಂಬುದನ್ನು ಹೇಳಿದನು ಮಾತ್ರವಲ್ಲ, ಅದನ್ನು ಹೇಗೆ ಹೇಳಬೇಕೆಂಬುದನ್ನು ಅವರಿಗೆ ತಿಳಿಸಿದನು. (ಲೂಕ 10:5, 6) ನಾವು ನಮ್ಮನ್ನು ಪರಿಣಾಮಕಾರಿಯಾಗಿ ಹೇಗೆ ವ್ಯಕ್ತಪಡಿಸಿಕೊಳ್ಳಬಲ್ಲೆವು ಎಂಬುದನ್ನು ಸೇವಾ ಕೂಟದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲ್ಪಡುವ ಪ್ರತ್ಯಕ್ಷಾಭಿನಯಗಳು ನಮಗೆ ತೋರಿಸುತ್ತವೆ. ಕಳೆದ ಕೂಟದಲ್ಲಿ ಪ್ರಸ್ತುತಪಡಿಸಲ್ಪಟ್ಟ ವಿಷಯದ ಕುರಿತು ನಿರ್ವಾಹಕನು ಪುನರ್ವಿಮರ್ಶಿಸಬಹುದು ಮತ್ತು ಆ ದಿನ ಸೇವೆಯಲ್ಲಿ ಅದನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದರ ಕುರಿತು ಸಲಹೆಗಳನ್ನು ಕೊಡಬಹುದು. ನಮ್ಮ ಅಭಿಪ್ರಾಯಗಳನ್ನು ಕೇಂದ್ರೀಕರಿಸಲು ಮತ್ತು ಮಾತುಗಳಲ್ಲಿ ವ್ಯಕ್ತಪಡಿಸಲು ಒಂದು ಸರಳವಾದ ಶಾಸ್ತ್ರೀಯ ನೀಡುವಿಕೆಯ ಸಂಕ್ಷಿಪ್ತವಾಗಿ ತಯಾರಿಸಲ್ಪಟ್ಟ ಒಂದು ಪ್ರತ್ಯಕ್ಷಾಭಿನಯವು ನಮಗೆ ಸಹಾಯಮಾಡಬಲ್ಲದು.
5 ಅವರ ವೈಯಕ್ತಿಕ ನಡತೆಯ ಕುರಿತು ಸಹ ಯೇಸು ತನ್ನ ಶಿಷ್ಯರಿಗೆ ಬೋಧಿಸಿದನು. (ಲೂಕ 10:7, 8) ತದ್ರೀತಿಯಲ್ಲಿ ನಮ್ಮ ಕೆಲಸದಿಂದ ಅಪಕರ್ಷಿಸಬಹುದಾದ ಯಾವುದೇ ವಿಷಯವನ್ನು ನಾವು ತ್ಯಜಿಸುವಂತೆ ನಿರ್ದಿಷ್ಟ ಮಾರ್ಗದರ್ಶನವನ್ನು ನಿರ್ವಾಹಕನು ನಮಗೆ ಕೊಡಬಹುದು. ಬೀದಿಯ ತಿರುವುಗಳಲ್ಲಿ ಗುಂಪುಗೂಡುವ ಕುರಿತು ಅಥವಾ ವಿರೋಧಿಸುವವರೊಂದಿಗೆ ಚರ್ಚಿಸುತ್ತಾ ಕಾಲಹರಣ ಮಾಡುವುದರ ಕುರಿತು ಅವನು ನಮ್ಮನ್ನು ಎಚ್ಚರಿಸಬಹುದು. ಮನೆಯಿಂದ ಮನೆಯ ನಿಷ್ಕೃಷ್ಟವಾದ ರೆಕಾರ್ಡನ್ನು ಇಡುವ ಆವಶ್ಯಕತೆಯ ಕುರಿತು—ಮನೆಯವನ ಹೆಸರು ಹಾಗು ವಿಳಾಸವನ್ನು ಮಾತ್ರವಲ್ಲ, ಚರ್ಚಿಸಲ್ಪಟ್ಟ ವಿಷಯವನ್ನೂ ಗುರುತಿಸಿಕೊಳ್ಳುವುದು—ಅವನು ನಮಗೆ ಜ್ಞಾಪಿಸಬಹುದು. ತಮ್ಮ ಮಕ್ಕಳನ್ನು ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡುವುದರ ಕುರಿತು ಹೆತ್ತವರಿಗೆ ಒಂದು ಜ್ಞಾಪನದ ಆವಶ್ಯಕತೆಯಿರಬಹುದು.
6 ಯೇಸುವಿನ ಉಪದೇಶಗಳೊಂದಿಗೆ 70 ಮಂದಿ ಶಿಷ್ಯರು ಸಹಕರಿಸಿದರು ಮತ್ತು ತದನಂತರ “ಸಂತೋಷವುಳ್ಳವರಾಗಿ ಹಿಂತಿರುಗಿದರು.” (ಲೂಕ 10:17) ಸೇವೆಗಾಗಿರುವ ಕೂಟಗಳಲ್ಲಿ ನಮಗೆ ಕೊಡಲ್ಪಡುವ ಮಾರ್ಗದರ್ಶನಕ್ಕೆ ನಾವು ಪ್ರತಿಕ್ರಿಯಿಸುವುದಾದರೆ, ರಾಜ್ಯ ಸಂದೇಶವನ್ನು ಸಾರುವುದರಲ್ಲಿ ಅಧಿಕ ಸಂತೋಷವನ್ನು ನಾವು ಸಹ ನಿರೀಕ್ಷಿಸಬಲ್ಲೆವು.—ಅ. ಕೃತ್ಯಗಳು 13:48, 49, 52.