ಯುವಕರು “ಆನಂದಿಸ” ಬಹುದಾದ ವಿಧವನ್ನು ಅವರಿಗೆ ತಿಳಿಸುವುದು
1 ವಿಪತ್ಕಾರಕ ಪರಿಸ್ಥಿತಿಗಳನ್ನು ಸೂಚಿಸುವ ಬೈಬಲ್ ಪ್ರವಾದನೆಗಳು ನೆರವೇರುತ್ತಿರುವ ಒಂದು ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಯುವ ಜನರನ್ನು ಒಳಗೊಂಡು, ಅನೇಕರು ನೆಮ್ಮದಿಯ, ಶಾಂತ ಜೀವಿತಗಳನ್ನು ಜೀವಿಸಲಿಕ್ಕಾಗಿ, ಕಾಡಿಸುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ‘ಹೃದಯದಿಂದ ಕರಕರೆಯನ್ನು ಮತ್ತು ವಿಪತ್ತನ್ನು ತೊಲಗಿ’ ಸುವ ವಿಧದ ಕುರಿತಾದ ಬೈಬಲಿನ ಸಲಹೆಯಿಂದ ಅವರು ಲಾಭಪಡೆಯಬಲ್ಲರು. (ಪ್ರಸಂ. 11:9, 10) ಮಾರ್ಚ್ ತಿಂಗಳಲ್ಲಿ, ಯುವ ಜನರು ಕೇಳುವ ಪ್ರಶ್ನೆಗಳು (ಇಂಗ್ಲಿಷ್) ಪುಸ್ತಕವನ್ನು ಪ್ರದರ್ಶಿಸುವ ಮೂಲಕ ಅವರು “ಆನಂದಿಸು” ವಂತೆ ಸಹಾಯಮಾಡಲು ನಮಗೆ ಅವಕಾಶವಿದೆ. ಅದನ್ನು ನೀಡುತ್ತಿರುವಾಗ, ಸಾಮಾನ್ಯವಾಗಿ ಇಂದು ಯುವಕರನ್ನು ಮತ್ತು ಮಾನವಕುಲವನ್ನು ಎದುರಿಸುತ್ತಿರುವ ಸಮಸ್ಯೆಗಳು ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿದ್ದವು ಮತ್ತು ಬೈಬಲ್ ಪರಿಹಾರಗಳನ್ನು ನೀಡುತ್ತದೆಂದು ನಾವು ಮನಸ್ಸಿನಲ್ಲಿಡಬೇಕು. ಹಾಗಾದರೆ, ನಾವೇನನ್ನು ಹೇಳಬಲ್ಲೆವು?
2 ಈ ಪ್ರಸ್ತಾವನೆಯು ಪರಿಣಾಮಕಾರಿಯಾಗಿರಬಹುದು:
▪ “ಕುಟುಂಬ ಅನೈಕ್ಯತೆ, ವಿವಾಹ ವಿಚ್ಛೇದಗಳು, ಒಂಟಿತನ, ರತಿ ರವಾನಿತ ರೋಗಗಳು, ಅಮಲೌಷಧ ಮತ್ತು ಮದ್ಯಪಾನ ಸಂಬಂಧಿತ ಸಮಸ್ಯೆಗಳು, ಮತ್ತು ಇತರ ಅನೇಕ ಸಮಸ್ಯೆಗಳು ಈ 20 ನೆಯ ಶತಮಾನದಲ್ಲಿ ಯುವ ಜನರನ್ನು ಬಾಧಿಸಿವೆ. ಈ ಸಮಸ್ಯೆಗಳಿಗೆ ಯಾವುದಾದರೂ ಪರಿಹಾರವಿದೆಯೆಂದು ನಿಮಗನ್ನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಎಲ್ಲಾ ಸಮಸ್ಯೆಗಳು ಬೈಬಲಿನಲ್ಲಿ ಸಂಬೋಧಿಸಲ್ಪಟ್ಟಿವೆಯೆಂಬದನ್ನು ತಿಳಿಯಲು ಅನೇಕರು ಆಶ್ಚರ್ಯಪಡುತ್ತಾರೆ. ಉದಾಹರಣೆಗಾಗಿ, ಸ್ನೇಹಿತರನ್ನು ಮಾಡಿಕೊಳ್ಳುವ ಮತ್ತು ಸ್ನೇಹದಿಂದಿರುವ ವಿಷಯದ ಕುರಿತು, ತನ್ನ ಪ್ರಖ್ಯಾತ ಪ್ರಸಂಗಗಳಲ್ಲೊಂದರಲ್ಲಿ ಯೇಸುವಿನಿಂದ ಕೊಡಲ್ಪಟ್ಟ ಸುವರ್ಣ ನಿಯಮದ ಕುರಿತಾಗಿ ನೀವು ಕೇಳಿರಬಹುದು. [ಯುವ ಜನರು ಕೇಳುವ ಪ್ರಶ್ನೆಗಳು ಪುಸ್ತಕವನ್ನು ತೆರೆಯಿರಿ ಮತ್ತು ಪುಟ 163 ರಲ್ಲಿ ಪ್ಯಾರಗ್ರಾಫ್ 1 ರಿಂದ ಸುವರ್ಣ ನಿಯಮವನ್ನು ಓದಿರಿ.] ಕುಟುಂಬದೊಳಗೆ ಮತ್ತು ಇತರರೊಂದಿಗೆ ಶಾಂತಿ ಮತ್ತು ಐಕ್ಯವನ್ನು ಕಾಪಾಡಿಕೊಳ್ಳಲು ಸಹಾಯಮಾಡುವ ಇನ್ನೊಂದು ಸೂತ್ರವು ರೋಮಾಪುರ 12:17, 18 ರಲ್ಲಿ ಕೊಡಲ್ಪಟ್ಟಿದೆ. [ಅದೇ ಪುಟದಲ್ಲಿ ಪ್ಯಾರಗ್ರಾಫ್ 3 ರಿಂದ ಇದನ್ನು ಓದಿರಿ.] ನಿಮ್ಮ ದಿನನಿತ್ಯದ ಜೀವಿತವನ್ನು ಹೆಚ್ಚು ಸುಗಮ ಮತ್ತು ಹೆಚ್ಚು ಆನಂದಕರವನ್ನಾಗಿ ಮಾಡುವ ಈ ಸೂತ್ರಗಳನ್ನು ಮತ್ತು ಇನ್ನಿತರ ಸೂತ್ರಗಳನ್ನು ಹೇಗೆ ಅನ್ವಯಿಸಬೇಕೆಂಬದರ ಕುರಿತಾಗಿ ಕಲಿಯಲು ನೀವು ಇಷ್ಟಪಡುವಿರೋ?” ಪುಟ 8 ಮತ್ತು 9 ರಲ್ಲಿರುವ ಪರಿವಿಡಿಯಿಂದ ಆವರಿಸಲ್ಪಟ್ಟಿರುವ ಕೆಲವು ವಿಷಯಗಳನ್ನು ತೋರಿಸಿರಿ, ನಂತರ ಪುಸ್ತಕವನ್ನು ನೀಡಿರಿ.
3 ಪ್ರಾಯಶಃ ಈ ಪ್ರಶ್ನೆಯು ಒಂದು ಆಸಕ್ತಿಕರ ಚರ್ಚೆಯನ್ನು ಪ್ರಚೋದಿಸಬಹುದು:
▪ “ಯುವ ಜನರು ತಮ್ಮ ಸಮಸ್ಯೆಗಳನ್ನು ಯಶಸ್ವಿಕರವಾಗಿ ನಿಭಾಯಿಸಿಕೊಳ್ಳಲು ಸಹಾಯ ಮಾಡುವಂತೆ ಏನಾದರೂ ಮಾಡಲು ಇದೆಯೆಂದು ನೀವು ಆಲೋಚಿಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಂದು ಬೇಕಾದಷ್ಟು ಶಾಲಾ ಶಿಕ್ಷಣವು ಲಭ್ಯವಿದೆಯೆಂದು ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ನೈತಿಕ ಶಿಕ್ಷಣ, ಅಂದರೆ ಜೀವನಕ್ಕಾಗಿ ಶಿಕ್ಷಣದ ಕುರಿತಾಗಿ ಏನು? ಹೆಚ್ಚು ಉತ್ತಮವಾದ ಮತ್ತು ಸಂತೋಷಿತ ಜೀವಿತಗಳನ್ನು ಜೀವಿಸಲು ಯುವ ಜನರು ಮತ್ತು ವೃದ್ಧ ಜನರಿಗಾಗಿ ಸಹಾಯ ಮಾಡುವ ಭರವಸಾರ್ಹವಾದ ಬುದ್ಧಿವಾದದ ಉಗಮ ಯಾವದಾದರೂ ಇದೆಯೇ?” ಯೆಶಾಯ 48:17, 18ನ್ನು ಓದಿರಿ ಮತ್ತು ಯುವ ಜನರು ಕೇಳುವ ಪ್ರಶ್ನೆಗಳು ಪುಸ್ತಕದ ಪುಟ 6 ರಲ್ಲಿರುವ ಪ್ಯಾರಗ್ರಾಫ್ 2ರ ಕೊನೆಯ ಅರ್ಧ ಭಾಗದ ಮೇಲೆ ಹೇಳಿಕೆಯನ್ನು ನೀಡಿರಿ. ಈ ಪುಸ್ತಕದಲ್ಲಿ ನೀಡಲ್ಪಟ್ಟಿರುವ ಬೈಬಲ್ ಆಧರಿತ ಸಲಹೆಯಿಂದ ಮನೆಯವನು ವೈಯಕ್ತಿಕವಾಗಿ ಹೇಗೆ ಲಾಭ ಪಡೆಯಬಹುದೆಂದು ವಿವರಿಸಿರಿ.
4 ಸಾಧಾರಣ ಈ ರೀತಿ ಹೇಳುವದರಿಂದ ನಿಮಗೆ ಹೆಚ್ಚು ಹಿತಕರವೆನಿಸಬಹುದು:
▪ “ಅನೇಕ ಯುವ ಜನರು ತಮ್ಮ ಭವಿಷ್ಯದ ಕುರಿತಾಗಿ ಖಿನ್ನರಾಗಿದ್ದಾರೆ ಮತ್ತು ಅವರ ಹೆತ್ತವರು ತಮ್ಮ ಮಕ್ಕಳ ಹಿತಚಿಂತನೆಯ ಕುರಿತಾಗಿ ಅಷ್ಟೇ ಚಿಂತಿತರಾಗಿದ್ದಾರೆ. ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು ಎಂಬ ಈ ಪುಸ್ತಕವು, ಯುವಜನರು ಈಗಲೇ ತೃಪ್ತಿಕರವಾದ, ಅರ್ಥಪೂರ್ಣವಾದ ಜೀವಿತಗಳನ್ನು ಜೀವಿಸಲು ಶಕ್ತರನ್ನಾಗಿ ಮಾಡುತ್ತದೆ ಮತ್ತು ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆಯನ್ನು ಒದಗಿಸುತ್ತದೆ.” ಅಧ್ಯಾಯ 38ನ್ನು ಒಳಗೊಂಡು ಕೆಲವು ಅಧ್ಯಾಯಗಳ ಶೀರ್ಷಿಕೆಗಳನ್ನು ತೋರಿಸಿರಿ, ನಂತರ ಪುಟ 306ಕ್ಕೆ ತಿರುಗಿಸಿರಿ ಮತ್ತು ಭವಿಷ್ಯತ್ತಿಗಾಗಿರುವ ಯೆಹೋವನ ಉದ್ದೇಶದ ಕುರಿತಾಗಿ ತಿಳಿಸಿರಿ. ಮನೆಯವನು ಪುಸ್ತಕದ ಒಂದು ಪ್ರತಿಯನ್ನು ಪಡೆಯುವಂತೆ ಆಮಂತ್ರಿಸಿರಿ ಮತ್ತು ಅದರ ಪ್ರಾಯೋಗಿಕ ಮಾಹಿತಿಯು ಹೇಗೆ ಕುಟುಂಬದಲ್ಲಿ ಓದಲ್ಪಡಬಹುದು ಮತ್ತು ಚರ್ಚಿಸಲ್ಪಡಬಹುದೆಂದು, ಹೀಗೆ ಎಲ್ಲರಿಗೆ ಪ್ರಯೋಜನಗಳನ್ನು ತರುತ್ತಾ ಇಂದು ಯುವ ಜನರು ಎದುರಿಸುತ್ತಿರುವ ಇಷ್ಟೊಂದು ಸಮಸ್ಯೆಗಳಿಂದ ದೂರವಿರಲು ಅವರಿಗೆ ಸಹಾಯ ಮಾಡುವುದೆಂದು ತೋರಿಸಿರಿ.
5 ದೇವರ ವಾಕ್ಯದಲ್ಲಿರುವ ಬುದ್ಧಿವಾದವು ಎಲ್ಲಾ ಮಾನವಕುಲಕ್ಕಾಗಿ ಪ್ರಾಯೋಗಿಕವಾಗಿದೆ. ಪ್ರತಿಯೊಬ್ಬರೂ ಬೈಬಲಿನ ಮಾತುಗಳನ್ನು ಕೇಳುವ ಅಗತ್ಯವಿದೆ. ಈ ಆನಂದಿಸುವಿಕೆಯ ಮೂಲದ ಕುರಿತು ಯುವಕರಿಗೆ ಮತ್ತು ಇತರರಿಗೆ ತಿಳಿಸಲು ನಮ್ಮಿಂದಾದದ್ದೆಲ್ಲವನ್ನು ನಾವು ಮಾಡೋಣ.