ಹೊಸ ಬ್ರೋಷರನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು
1 ಇತ್ತೀಚೆಗಿನ ನಮ್ಮ ಜಿಲ್ಲಾ ಅಧಿವೇಶನದಲ್ಲಿ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಹೊಸ ಬ್ರೋಷರನ್ನು ಪಡೆಯಲು ನಾವು ತುಂಬಾ ಸಂತೋಷಿಸಿದೆವು. ಅನೇಕರು ಒಬ್ಬ ಪ್ರಿಯ ವ್ಯಕ್ತಿಯ ನಷ್ಟಕ್ಕಾಗಿ ದುಃಖಿಸಿರುವದರಿಂದ, ಅದು ಎಲ್ಲಾ ಕಸಬುಗಳ ಜನರಿಗೆ ಆಕರ್ಷಿತವಾಗಿರಬೇಕು. ಅದರ ಕಣ್ಸೆಳೆಯುವ ಛಾಯಚಿತ್ರಗಳು ಮತ್ತು ವರ್ಣಚಿತ್ರಗಳು ಅದನ್ನು ನೀಡಲು ಸುಲಭವನ್ನಾಗಿ ಮಾಡಬೇಕು. ಪುಟ 29 ರಲ್ಲಿ ಸತ್ತವರಿಂದ ಲಾಜರನು ಎಬ್ಬಿಸಲ್ಪಡುವ ಮನಮುಟ್ಟುವಂತಹ ವರ್ಣಚಿತ್ರವು “ಮರಣದ ಹಾವಳಿಗಳನ್ನು ತೊಡೆದು ಹಾಕುವ” ಯೇಸುವಿನ “ತೀವ್ರ ಬಯಕೆಯನ್ನು” ತೋರಿಸುತ್ತದೆ. ಮುಂದಿನ ಇಡೀ ಪುಟದ ಚಿತ್ರವು, ಹೊಸ ಲೋಕದಲ್ಲಿ ಒಂದು ಆನಂದಕರ ಪುನರುತ್ಥಾನದ ದೃಶ್ಯವನ್ನು ಚಿತ್ರಿಸುತ್ತದೆ. ದುಃಖಿಸುವವರ ಹೃದಯಗಳನ್ನು ಇದು ಎಷ್ಟು ಹುರಿದುಂಬಿಸಬೇಕು!
2 ವಿಯೋಗ ಹೊಂದಿದವರನ್ನು ಸಾಂತ್ವನಗೊಳಿಸುವದರಲ್ಲಿ ಈ ಬ್ರೋಷರ್ ಒಂದು ಮಹತ್ತರವಾದ ಸಹಾಯಕವಾಗಬಲ್ಲದು. ಅದು ಸಂಭಾಷಣಾತ್ಮಕ ಚರ್ಚೆಗಾಗಿ ರಚಿಸಲ್ಪಟ್ಟಿದೆ. ಮುಖ್ಯಾಂಶಗಳನ್ನು ಸೂಚಿಸಲು ಪ್ರಶ್ನೆಗಳು ಪುಟದ ಅಂತ್ಯದಲ್ಲಿರುವದಕ್ಕಿಂತ ಪ್ರತಿಯೊಂದು ವಿಭಾಗದ ಅಂತ್ಯದಲ್ಲಿ ಒಂದು ಚೌಕಟ್ಟಿನಲ್ಲಿ ತೋರಿಬರುತ್ತವೆ. “ಚಿಂತನೆಗೆ ಪ್ರಶ್ನೆಗಳು” ಇದನ್ನು, ನಿಮ್ಮ ವಿದ್ಯಾರ್ಥಿಗೆ ಅತಿ ಸಹಾಯಕಾರಿಯೆಂದು ನೀವು ಎಣಿಸುವ ಯಾವುದೇ ವಿಧದಲ್ಲಿ ಉಪಯೋಗಿಸಬಹುದು.
3 ಭೇಟಿಗಳನ್ನು ಮಾಡುವಾಗ, ಬ್ರೋಷರಿನಲ್ಲಿ ಕಂಡು ಬರುವ ಅಂಶಗಳನ್ನು ಚರ್ಚಿಸುವದರಲ್ಲಿ ಆಯ್ಕೆಯುಳ್ಳವರಾಗಿರ್ರಿ. ಪುಟ 2 ರಲ್ಲಿರುವ ಒಳವಿಷಯಗಳ ಪಟ್ಟಿಯನ್ನು ತೋರಿಸುವುದು ಮತ್ತು ಆತನಿಗೆ ಯಾವುದು ಆಸಕ್ತಿಯದ್ದಾಗಿದೆಯೋ ಅದನ್ನು ಸೂಚಿಸುವಂತೆ ಮನೆಯವನಿಗೆ ಕೇಳುವುದು ತಕ್ಕದ್ದಾಗಿರುವುದೆಂದು ನಿಮಗನಿಸಬಹುದು. ಪ್ರತಿಯೊಂದು ವ್ಯಕ್ತಿಯ ಅಗತ್ಯಗಳಿಗೆ ಸೂಕ್ಷ್ಮಗ್ರಾಹಿಗಳಾಗಿರ್ರಿ. ಅವನು ತನ್ನ ಭಾವನೆಗಳನ್ನು ವ್ಯಕ್ತಪಡಿಸಲಿ ಮತ್ತು ಅನಂತರ ಬ್ರೋಷರ್ ಸಾಂತ್ವನವನ್ನು ಒದಗಿಸುವ ವಿಧವನ್ನು ತೋರಿಸಿರಿ. ಪ್ರತಿಯೊಂದು ವಿಭಾಗವು ನಮ್ಮ ನಿರೀಕ್ಷೆಗೆ ಆಧಾರವನ್ನು ಒದಗಿಸುವ ಬೈಬಲ್ ವಚನಗಳ ಹೇರಳವಾದ ಉಪಯೋಗವನ್ನು ಮಾಡುತ್ತದೆ.
4 “ಒಂದು ನಿಜ ನಿರೀಕ್ಷೆ ಇದೆ” ಎಂಬ ಪುಟ 5 ರಲ್ಲಿರುವ ಉಪಶೀರ್ಷಿಕೆಯು, ಸತ್ತವರಿಗಾಗಿರುವ ಸಾಂತ್ವನದಾಯಕ ಬೈಬಲಾಧಾರಿತ ನಿರೀಕ್ಷೆಯನ್ನು ಎತ್ತಿತೋರಿಸುತ್ತದೆ. ಇದು ಪುಟ 26-31 ರಲ್ಲಿರುವ “ಮೃತರಿಗೊಂದು ಖಾತ್ರಿಯಾದ ನಿರೀಕ್ಷೆ”ಯ ಚರ್ಚೆಗಾಗಿ ಅಪೇಕ್ಷೆಯನ್ನು ಕೆರಳಿಸಬೇಕು. ಪುಟ 27 ರಲ್ಲಿರುವ ಚೌಕಟ್ಟು ಇನ್ನೂ ಹೆಚ್ಚಾದ “ದುಃಖೋಪಶಮನ ಮಾಡುವ ಶಾಸ್ತ್ರ ವಚನಗಳ”ನ್ನು ಕೊಡುತ್ತದೆ. ಯೆಹೋವನು ನಿಜವಾಗಿಯೂ “ಸಕಲವಿಧವಾಗಿ ಸಂತೈಸುವ ದೇವರು” ಎಂದು ದುಃಖಿಸುತ್ತಿರುವ ಮನೆಯವನು ಬಲು ಬೇಗನೇ ಕಾಣುವನು.—2 ಕೊರಿಂ. 1:3-7.
5 ನಡುವಿನ ವಿಭಾಗಗಳು ಜಾಣ್ಮೆಯಿಂದ, ಒಬ್ಬ ಪ್ರಿಯ ವ್ಯಕ್ತಿಯ ಮರಣಕ್ಕೆ ವಿಭಿನ್ನ ಪ್ರತಿಕ್ರಿಯೆಗಳನ್ನು ಆವರಿಸುತ್ತವೆ. ದುಃಖದೊಂದಿಗೆ ನಿಭಾಯಿಸಿಕೊಳ್ಳುವ ವಿಧ ಮತ್ತು ಅಂತಹ ಸಂಕಟಮಯ ಸಮಯಗಳಲ್ಲಿ ಇತರರು ಹೇಗೆ ಸಹಾಯ ಮಾಡಬಹುದೆಂಬದನ್ನು ಅವು ತೋರಿಸುತ್ತವೆ. “ಮಕ್ಕಳು ಮರಣವನ್ನು ನಿಭಾಯಿಸುವಂತೆ ಸಹಾಯ ಮಾಡುವುದು” ಎಂಬ ಶೀರ್ಷಿಕೆಯುಳ್ಳ ಒಂದು ರೇಖಾಚೌಕ ಪುಟ 25 ರಲ್ಲಿದೆ. ಈ ಸಮಸ್ಯೆಯೊಂದಿಗೆ ನಿಭಾಯಿಸಬೇಕಾದ ಹೆತ್ತವರಿಗೆ ಇದೊಂದು ನಿಜ ಸಹಾಯಕವಾಗಿರಬೇಕು.
6 ಒಂದು ಹೆಚ್ಚಿನ ಪ್ರತಿಯನ್ನು ನಿಮ್ಮೊಂದಿಗಿಡಿರಿ, ಮತ್ತು ಅದನ್ನು ಅನೌಪಚಾರಿಕ ಸಾಕ್ಷಿಗಾಗಿ ಉಪಯೋಗಿಸಿರಿ. ನಿಮ್ಮ ಟೆರಿಟೊರಿಯಲ್ಲಿರಬಹುದಾದ ಯಾವುದಾದರೂ ಶವಸಂಸ್ಕಾರದ ಮನೆಗಳನ್ನು ನೀವು ಸಂದರ್ಶಿಸಿ, ವಿಯೋಗ ಹೊಂದಿದ ಕುಟುಂಬಗಳನ್ನು ಸಾಂತ್ವನಗೊಳಿಸಲು ಅವರು ಕೆಲವು ಪ್ರತಿಗಳನ್ನು ಇಡಲು ಇಷ್ಟಪಡುವರೋ ಎಂಬದನ್ನು ನೀವು ನೋಡಬಹುದು. ಇಲ್ಲವೆ, ಒಬ್ಬ ಪ್ರಿಯ ವ್ಯಕ್ತಿಯ ಸಮಾಧಿಗೆ ಭೇಟಿ ನೀಡಲು ಹಿಂದಿರುಗುವ ಸಂದರ್ಭಗಳಲ್ಲಿ ಸ್ಮಶಾನಗಳಲ್ಲಿ ದುಃಖಿಸುತ್ತಿರುವವರನ್ನು ನೀವು ಜಾಣ್ಮೆಯಿಂದ ಸಮೀಪಿಸಬಹುದು.
7 ಯೆಹೋವನು “ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ” ದೇವರು ಆಗಿದ್ದಾನೆಂಬದಕ್ಕೆ ನಾವು ಉಲ್ಲಾಸಿಸುತ್ತೇವೆ. (2 ಕೊರಿಂ. 7:6) ‘ದುಃಖಿತರೆಲ್ಲರನ್ನು ಸಂತೈಸು’ ವುದರಲ್ಲಿ ಒಂದು ಪಾಲು ಇರುವದನ್ನು ನಾವು ಒಂದು ಸುಯೋಗವಾಗಿ ಎಣಿಸುತ್ತೇವೆ.—ಯೆಶಾ. 61:2.