ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/95 ಪು. 2
  • ಪ್ರಶ್ನಾ ಪೆಟ್ಟಿಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಪೆಟ್ಟಿಗೆ
  • 1995 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಸುವಾರ್ತೆಯನ್ನು ನೀಡುವದು-ಟ್ರೇಕ್ಟ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ
    1990 ನಮ್ಮ ರಾಜ್ಯದ ಸೇವೆ
  • ಬ್ರೋಷರ್‌ಗಳನ್ನು ಉಪಯೋಗಿಸಲು ನೆನಪಿಡಿರಿ
    1993 ನಮ್ಮ ರಾಜ್ಯದ ಸೇವೆ
  • ಕ್ಷೇತ್ರಸೇವೆಗಾಗಿ ಕೂಟಗಳು
    1991 ನಮ್ಮ ರಾಜ್ಯದ ಸೇವೆ
  • ನಮ್ಮ ಪತ್ರಿಕೆಗಳ ಅತ್ಯುತ್ತಮ ಉಪಯೋಗವನ್ನು ಮಾಡಿರಿ
    1996 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1995 ನಮ್ಮ ರಾಜ್ಯದ ಸೇವೆ
km 3/95 ಪು. 2

ಪ್ರಶ್ನಾ ಪೆಟ್ಟಿಗೆ

▪ ನಮ್ಮ ಸಾಕ್ಷಿ ಕಾರ್ಯದಲ್ಲಿ ನಾವು ಉಪಯೋಗಿಸುವ ಉಪಕರಣಗಳಿಗೆ ಯಾವ ಗಮನವನ್ನು ಕೊಡುವುದು ಆವಶ್ಯಕವಾಗಿದೆ?

1 ತಕ್ಕದ್ದಾದ ಶಾಸ್ತ್ರೀಯ ನಿರೂಪಣೆಯು ಮನಸ್ಸಿನಲ್ಲಿ ಇರುವದಾದರೂ, ತಾನು ಉಪಯೋಗಿಸುತ್ತಿರುವ ಉಪಕರಣಗಳ ವಿಷಯಕ್ಕೆ ಬರುವಾಗ ಸುವಾರ್ತೆಯ ಒಬ್ಬ ಪ್ರಚಾರಕನು ತಯಾರಾಗಿರದೆ ಇರಬಹುದು. ಮನೆ ಬಾಗಲಲ್ಲಿ ಇರುವಾಗ, ಸದ್ಯದ ಸಾಹಿತ್ಯ ನೀಡುವಿಕೆ ಅವನಲ್ಲಿ ಇರಲಿಕ್ಕಿಲ್ಲ. ಅವನ ಸೇವೆಯ ಬ್ಯಾಗ್‌ನಲ್ಲಿರುವ ಪತ್ರಿಕೆಗಳು, ಬ್ರೋಷರ್‌ಗಳು ಮತ್ತು ಕಿರುಹೊತ್ತಗೆಗಳು ಮಡಚಿ ಸುರುಳಿಹೊಂದಿರಬಹುದು ಮತ್ತು ಚೂರುಪಾರು ಆದವುಗಳು ಆಗಿರಬಹುದು. ಅವನ ಬ್ಯಾಗ್‌ ಸರಿಯಾಗಿ ವ್ಯವಸ್ಥಾಪಿಸಲ್ಪಡದೆ ಇರುವದರಿಂದ ಅವನಿಗೆ ಒಂದು ಪೆನ್ನು ಅಥವಾ ಮನೆಮನೆಯ ಒಂದು ರೆಕಾರ್ಡನ್ನು ಕಂಡುಕೊಳ್ಳಲು ಸಾಧ್ಯವಾಗದಿರಬಹುದು. ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗುವ ಮುಂಚೆ ನಿಮ್ಮ ಉಪಕರಣಗಳೆಡೆಗೆ ಜಾಗರೂಕತೆಯ ಗಮನಕೊಡುವುದು ಮಹತ್ವದ್ದಾಗಿದೆ.

2 ಚೆನ್ನಾಗಿ ಸಜ್ಜಾಗಿರಿಸಿದ ಸೇವಾ ಬ್ಯಾಗಿನಲ್ಲಿ ಯಾವುದು ಇರಬೇಕು? ಒಂದು ಬೈಬಲು ಆವಶ್ಯಕವಾಗಿದೆ. ಅನೇಕ ಟೆರಿಟೊರಿಗಳಲ್ಲಿ ನೀವು ಹೆಚ್ಚು ಸಂಭವನೀಯವಾಗಿ ಸಂಧಿಸಬಹುದಾದಂತಹ ಎರಡು ಅಥವಾ ಹೆಚ್ಚಿನ ಭಾಷೆಗಳಲ್ಲಿನ ಬೈಬಲನ್ನು ಒಯ್ಯುವುದು ಕಾರ್ಯಸಾಧಕವಾಗಿದೆ. ಮನೆಮನೆಯ ರೆಕಾರ್ಡುಗಳ ಒಂದು ಸಂಗ್ರಹವನ್ನು ಒಳಗೂಡಿಸಿರಿ. ಆ ತಿಂಗಳಿಗೆ ಪ್ರದರ್ಶಿಸಲ್ಪಡುವ ಪ್ರಕಾಶನವು ನಿಮ್ಮಲ್ಲಿ ಇರುವದನ್ನು ಖಚಿತಪಡಿಸಿಕೊಳ್ಳಿರಿ. ಪತ್ರಿಕೆಗಳ ಸದ್ಯದ ಸಂಚಿಕೆಗಳು, ಹಾಗೂ ಪ್ರಾಯಶಃ ಹಲವಾರು ಭಾಷೆಗಳಲ್ಲಿ ಕಿರುಹೊತ್ತಗೆಗಳು ಮತ್ತು ಬ್ರೋಷರ್‌ಗಳು ಸಹ ಆವಶ್ಯಕವಾಗಿವೆ. ರೀಸನಿಂಗ್‌ ಪುಸ್ತಕದ ಒಂದು ಪ್ರತಿಯನ್ನು ಒಯ್ಯಿರಿ. ಇತ್ತೀಚೆಗಿನ ನಮ್ಮ ರಾಜ್ಯದ ಸೇವೆ ಯನ್ನಿಡುವುದು, ಮನೆ ಬಾಗಲಿಗೆ ಹೋಗುವ ಮುಂಚೆ ಸೂಚಿಸಲ್ಪಟ್ಟ ನಿರೂಪಣೆಗಳನ್ನು ಪುನರ್ವಿಮರ್ಶಿಸಲು ನಿಮಗೆ ಅನುಮತಿಸುವುದು. ನಿಮಗೆ ತಿಳಿದಿರದ ಒಂದು ಭಾಷೆಯನ್ನು ಮಾತಾಡುವ ಜನರನ್ನು ನೀವು ಭೇಟಿಯಾಗುವ ಸಂಭವವಿರುವ ಒಂದು ಟೆರಿಟೊರಿಯಲ್ಲಿ ನೀವು ಕೆಲಸಮಾಡುತ್ತಿರುವಾಗ, ಗುಡ್‌ ನ್ಯೂಸ್‌ ಫಾರ್‌ ಆಲ್‌ ನೇಷನ್ಸ್‌ ಪುಸ್ತಿಕೆಯನ್ನು ಹೊಂದಿರುವುದು ಒಳ್ಳೆಯದು. ಯುವ ಜನರಿಗಾಗಿ ರಚಿಸಲ್ಪಟ್ಟ ನಮ್ಮ ಪ್ರಕಾಶನಗಳಲ್ಲಿ ಒಂದರ ಪ್ರತಿಯನ್ನು ಇಡುವದರಿಂದ ಹದಿವಯಸ್ಕರೊಡನೆ ಮಾತಾಡಲು ನಿಮ್ಮನ್ನು ಸಜ್ಜಾಗಿರಿಸುವುದು.

3 ಉಪಯೋಗಿಸಲ್ಪಟ್ಟಂತಹದ್ದೆಲ್ಲವೂ ಓರಣವಾಗಿ ನಿಮ್ಮ ಬ್ಯಾಗಿನಲ್ಲಿ ಜೋಡಿಸಲ್ಪಟ್ಟಿರಬೇಕು. ಬ್ಯಾಗ್‌ ತಾನೇ ಹೊಸತಾಗಿರಬೇಕೆಂದಿಲ್ಲ, ಆದರೆ ಅದು ಸ್ವಚ್ಛ ಮತ್ತು ಸುಸ್ಥಿತಿಯಲ್ಲಿರಬೇಕು. ನಿಮ್ಮ ಸೇವಾ ಬ್ಯಾಗ್‌ ಸುವಾರ್ತೆಯನ್ನು ಘೋಷಿಸುವದರಲ್ಲಿ ಉಪಯೋಗಿಸುವ ನಿಮ್ಮ ಉಪಕರಣಗಳ ಒಂದು ಭಾಗವಾಗಿದೆ. ಅದನ್ನು ಸುವ್ಯವಸ್ಥಿತವಾಗಿಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ