ಯೆಹೋವನು ನಮ್ಮ ಸೃಷ್ಟಿಕರ್ತನು
1 ಜೀವವನ್ನು ದೇವರು ಸೃಷ್ಟಿಸಿದನೆಂದು ಲಕ್ಷಾಂತರ ಜನರು ನಂಬುತ್ತಾರೆ. ಇತರ ಅನೇಕ ಜನರು ವಿಕಾಸದಲ್ಲಿ ನಂಬುತ್ತಾರೆ. ಯಾವುದನ್ನು ನಂಬಬೇಕೆಂಬ ಖಾತ್ರಿಯಿಲ್ಲದವರೂ ಇದ್ದಾರೆ. ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಎಂಬ ಪುಸ್ತಕವು ಅಂಥ ಜನರೆಲ್ಲರಿಗಾಗಿ ಇದೆ. ಈ ಪ್ರಕಾಶನವು ಜೀವ ಇಲ್ಲಿಗೆ ಹೇಗೆ ಬಂತು ಮತ್ತು ಇದು ನಮ್ಮ ಭವಿಷ್ಯತ್ತಿಗಾಗಿ ಏನು ಅರ್ಥೈಸುತ್ತದೆ ಎಂಬುದರ ಕುರಿತಾದ ಒಂದು ಪರಿಷ್ಕಾರಕ ಸಂಶೋಧಿತ ವಿವರಣೆಯನ್ನು ಸಾದರಪಡಿಸುತ್ತದೆ. ಜೂನ್ನ ಅವಧಿಯಲ್ಲಿ, ಸಾಧ್ಯವಾದಾಗಲೆಲ್ಲಾ ಈ ಉತ್ಕೃಷ್ಟವಾದ ಪುಸ್ತಕದ ಪ್ರಧಾನ ನೀಡುವಿಕೆಯನ್ನು ನಾವು ಮಾಡಲಿರುವೆವು. ಮನೆಯವನಿಗೆ ಇಂಗ್ಲಿಷ್ ಗೊತ್ತಿಲ್ಲದಿರುವಲ್ಲಿ, ಯಾವುದಾದರೂ 192 ಪುಟದ ಹೊಸ ಪುಸ್ತಕಗಳು ನೀಡಲ್ಪಡಬೇಕು.
2 ವೈಜ್ಞಾನಿಕ ಸಮುದಾಯದಲ್ಲಿರುವ ಪ್ರಮುಖರು ಕೂಡ ಪುಸ್ತಕದ ತರ್ಕವನ್ನು ಅಂಗೀಕರಿಸಿದ್ದಾರೆ. ನೆದರ್ಲೆಂಡ್ಸ್ನಲ್ಲಿರುವ ಒಬ್ಬ ವೈಜ್ಞಾನಿಕ ಸಂಶೋಧಕನು ಬರೆದದ್ದು: “ಈ ಪುಸ್ತಕವು ನಿಜವಾಗಿಯೂ ಎಲ್ಲ ನಿರೀಕ್ಷಣೆಗಳನ್ನು ಅತಿಶಯಿಸುತ್ತದೆ. ಅಧ್ಯಾಯಗಳ ತರ್ಕಶುದ್ಧತೆಯ ವರ್ಧಿಸುವಿಕೆ ಮತ್ತು ದೃಷ್ಟಾಂತಗಳು ವೈಜ್ಞಾನಿಕವಾಗಿ ಎಷ್ಟೊಂದು ಸದ್ಯೋಚಿತವಾಗಿವೆಯೆಂದರೆ ಅವುಗಳಿಗೆ ಯಾವುದೇ ಆಕ್ಷೇಪಣೆಗಳನ್ನು ಎತ್ತಲು ನೀವು ಅಶಕ್ತರಾಗಲೇಬೇಕು.” ಒಬ್ಬ ವಕೀಲನು ಘೋಷಿಸಿದ್ದು: “ನಾನು ಅದನ್ನು ನಾಲ್ಕು ಬಾರಿ ಓದಿದ್ದೇನೆ ಮತ್ತು ಅದರ ಉತ್ಪನ್ನದಲ್ಲಿರುವ ಸಂಶೋಧನೆಯ ಆಳ, ಪಾಂಡಿತ್ಯ, ಮತ್ತು ಸಾಕ್ಷ್ಯ ಸಂಗ್ರಹಣದೊಂದಿಗೆ ಪ್ರಭಾವಿತನಾಗುತ್ತಾ ಮುಂದುವರಿದಿದ್ದೇನೆ.” ಆದುದರಿಂದ ಈ ಪುಸ್ತಕವನ್ನು ಇನ್ನೂ ಇತರರು ಗಣ್ಯಮಾಡಲಿರುವರೆಂದು ನಾವು ಭರವಸೆಯಿಂದಿರಸಾಧ್ಯವಿದೆ.
3 ಈ ರೀತಿಯ ಒಂದು ಸಂಕ್ಷಿಪ್ತ ಸಾದರಪಡಿಸುವಿಕೆಯನ್ನು ಮಾಡಲು ನೀವು ಆರಿಸಿಕೊಳ್ಳಬಹುದು:
◼ ಪುಟ 6ನ್ನು ತೆರೆಯಿರಿ, ಮತ್ತು ಹೀಗೆ ಹೇಳಿರಿ: “ನಮ್ಮ ಮನೋಹರವಾದ ಭೂಮಿ ಮತ್ತು ಅದರ ಮೇಲಿರುವ ಜೀವವು ಆಕಸ್ಮಿಕವಾಗಿ ಫಲಿಸಿತು ಎಂದು ಅನೇಕ ಜನರು ಆಲೋಚಿಸುತ್ತಾರೆ. ಇದೆಲ್ಲವು ಹೇಗೆ ಬಂತು ಎಂಬುದರ ವಿಷಯದಲ್ಲಿ ಯಾವುದನ್ನು ನೀವು ಒಂದು ಸಮಂಜಸವಾದ ವಿವರಣೆಯನ್ನಾಗಿ ಪರಿಗಣಿಸುವಿರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕೇವಲ ಬಹು ಶಕಿಶಾಲ್ತಿಯು ಮಾತ್ರವಲ್ಲದೆ ನಮ್ಮನ್ನು ಅತಿಯಾಗಿ ಪ್ರೀತಿಸುವವನಾದ ಸೃಷ್ಟಿಕರ್ತನೊಬ್ಬನಿದ್ದಾನೆಂಬ ಬೈಬಲ್ ವೃತ್ತಾಂತವನ್ನು ಅಧಿಕ ಪ್ರಮಾಣದ ಪುರಾವೆಯು ಸಮರ್ಥಿಸುತ್ತದೆ. ಆತನ ಹೆಸರು ಯೆಹೋವ ಎಂದು ಬೈಬಲ್ ಹೇಳುತ್ತದೆ.” ಕೀರ್ತನೆ 83:18ನ್ನು ಓದಿರಿ, ಮತ್ತು ಇಡೀ ಭೂಮಿಯನ್ನು ಒಂದು ಪ್ರಮೋದವನವಾಗಿ ಪರಿವರ್ತಿಸಲಿರುವ ಆತನ ಉದ್ದೇಶವು ಏನಾಗಿದೆ ಎಂಬುದರ ಕುರಿತು ಸಂಕ್ಷಿಪ್ತವಾಗಿ ವಿವರಿಸಿರಿ.
4 ಶೀಘ್ರವಾಗಿ ಮುಖ್ಯ ಅರ್ಥಕ್ಕೆ ಬರಲು ನೀವು ಬಯಸುವುದಾದರೆ, ನೀವು ಹೀಗೆ ಹೇಳಬಹುದು:
◼ “ಈ ಪ್ರಶ್ನೆಯ ಕುರಿತು ನೀವೆಂದಾದರೂ ಕೌತುಕಗೊಂಡಿದ್ದೀರೋ?” ಪುಸ್ತಕದ ಶಿರೋನಾಮಕ್ಕೆ ಸೂಚಿಸಿರಿ, ಪುಟ 7ಕ್ಕೆ ತಿರುಗಿಸಿರಿ, ಪ್ಯಾರಗ್ರಾಫ್ 2ರ ಪ್ರಶ್ನೆಗಳನ್ನು ಓದಿರಿ, ಮತ್ತು ಪುಸ್ತಕವು ತೃಪ್ತಿದಾಯಕವಾದ ಉತ್ತರಗಳನ್ನು ಬೈಬಲಿನಿಂದ ಒದಗಿಸುತ್ತದೆ ಎಂಬುದನ್ನು ವಿವರಿಸಿರಿ.
5 ಅಥವಾ ಇದನ್ನು ನೀವು ಪ್ರಯತ್ನಿಸಬಹುದು:
◼ “ಭೂಮಿಯು ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದರ ಕುರಿತು ನೀವೆಂದಾದರೂ ಕೌತುಕಗೊಂಡಿದ್ದೀರೋ? ಯಾವುದೋ ಬೃಹತ್ ಪ್ರಮಾಣ ಕಾಸ್ಮಿಕ್ ಸ್ಫೋಟದ ಫಲಿತಾಂಶವು ಇದಾಗಿದೆ ಎಂದು ಅನೇಕರು ಪಟ್ಟುಹಿಡಿಯುತ್ತಾರೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮ್ಮ ಅನಂತಕಾಲದ ಗೃಹವಾಗಿ ಭೂಮಿಯನ್ನು ದೇವರು ಸೃಷ್ಟಿಸಿದನೆಂದು ಬೈಬಲ್ ಕಲಿಸುತ್ತದೆ. ನಮ್ಮ ಸೌರವ್ಯೂಹದಲ್ಲಿರುವ ಇತರ ಗ್ರಹಗಳಿಗಿಂತ ಇದು ಭಿನ್ನವಾಗಿದೆ. ನಮಗೆ ತಿಳಿದಿರುವಷ್ಟು ಮಟ್ಟಿಗೆ, ವಿಶ್ವದಲ್ಲೇ ಏಕಮಾತ್ರವಾದ ಇದು ಜೀವವನ್ನು ಪೋಷಿಸಲಿಕ್ಕೆ ಬೇಕಾಗಿರುವ ಎಲ್ಲ ಜಟಿಲ ಒದಗಿಸುವಿಕೆಗಳನ್ನು ಹೊಂದಿದೆ.” ಪುಟ 130 ರಲ್ಲಿರುವ 5 ನೆಯ ಪ್ಯಾರಗ್ರಾಫ್ಗೆ ತಿರುಗಿಸಿರಿ, ಮತ್ತು ಭೂಮಿಯು ಏಕೆ ಒಬ್ಬ ಕುಶಲ ವಿನ್ಯಾಸಕನ ಕೆಲಸವಾಗಿರಲೇಬೇಕೆಂಬುದನ್ನು ವಿವರಿಸಿರಿ.
6 ಇನ್ನೊಂದು ಸಮೀಪಿಸುವಿಕೆಯು ಇದಕ್ಕೆ ತದ್ರೀತಿಯದ್ದಾಗಿರಬಹುದು:
◼ “ನಾವು ಮಂಗಮಾನವನಿಂದ ವಿಕಸಿಸಿದೆವು ಎಂದು ಕೆಲವು ಜನರು ಯೋಚಿಸುತ್ತಾರೆ. ನಮ್ಮ ಪೂರ್ವಜರು ಈ ರೀತಿಯಲ್ಲಿ ಇದ್ದರೆಂದು ಅವರು ಪ್ರತಿಪಾದಿಸುತ್ತಾರೆ. [ಪುಟ 89ರಲ್ಲಿರುವ ಚಿತ್ರವನ್ನು ತೋರಿಸಿರಿ.] ಅದರ ಕುರಿತಾಗಿ ನೀವೇನು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪ್ಯಾರಗ್ರಾಫ್ 20 ರಲ್ಲಿ ಏನು ಹೇಳಿದೆ ಎಂಬುದನ್ನು ಸೂಚಿಸಿರಿ, ಮತ್ತು ಅನಂತರ ಯಾವುದು ನಮ್ಮ ಸೃಷ್ಟಿಕರ್ತನು ಮತ್ತು ಜೀವದಾಯಕನು ಯೆಹೋವನಾಗಿದ್ದಾನೆ ಎಂದು ಗುರುತಿಸುತ್ತದೋ, ಆ ಅ. ಕೃತ್ಯಗಳ 4:24ನ್ನು ಓದಿರಿ. “ಬೈಬಲಿನಲ್ಲಿ ಏನು ಹೇಳಲ್ಪಟ್ಟಿದೆಯೋ ಅದರ ಸಂಬಂಧದಲ್ಲಿರುವ ವಿಕಾಸ ವಾದದ ಇಡೀ ಭಾಗವನ್ನು ಈ ಪುಸ್ತಕವು ಪರಿಶೀಲಿಸುತ್ತದೆ.” ಪುಟ 5 ರಲ್ಲಿರುವ ಒಳಸೂಚಿಗಳ ಪಟ್ಟಿಯನ್ನು ಉಲ್ಲೇಖಿಸಿರಿ, ಮತ್ತು 1, 7, 15, ಮತ್ತು 19 ರಂತಹ ಅಧ್ಯಾಯಗಳ ಕೆಲವು ಶಿರೋನಾಮಗಳನ್ನು ಸೂಚಿಸಿರಿ.
7 ಯೆಹೋವನಲ್ಲಿ ಅಥವಾ ಆತನ ವಾಕ್ಯದಲ್ಲಿ ನಂಬಿಕೆಯಿಲ್ಲದವರಿಂದ ವಂಚಿಸಲ್ಪಟ್ಟಿರುವ ಪ್ರಾಮಾಣಿಕ ಜನರಿಗೆ ಈ ಪುಸ್ತಕವು ಒಂದು ಸಂತೋಷದ ವಿಷಯವಾಗಿರಸಾಧ್ಯವಿದೆ. ನಮಗಾಗಿ ಪ್ರೀತಿಪೂರ್ವಕವಾಗಿ ಕಾಳಜಿ ವಹಿಸುವ, ನಮ್ಮ ಸೃಷ್ಟಿಕರ್ತನಿಗಾಗಿ ಗಣ್ಯತೆಯನ್ನು ವೃದ್ಧಿಸಲು, ಅಂಥ ಜನರಿಗೆ ಸೃಷ್ಟಿ ಪುಸ್ತಕವು ಒಳಗೊಂಡಿರುವ ವಾಸ್ತವಿಕ ಮಾಹಿತಿಯು ಸಹಾಯ ಮಾಡಬಲ್ಲದು.