ಕುಟುಂಬ ಬೈಬಲಧ್ಯಯನ—ಕ್ರೈಸ್ತರಿಗಾಗಿ ಒಂದು ಆದ್ಯತೆ
(There is no corresponding article in English)
1 ಕುಟುಂಬ ಏಕಾಂಶವು ಎಲ್ಲಾ ಮಾನವ ಸಂಘಗಳಲ್ಲಿ ಅತಿ ಹಳೆಯದ್ದಾಗಿರುತ್ತದೆ. ಅದು ಯೆಹೋವನಿಗೆ ಅಮೂಲ್ಯವಾಗಿದೆ, ಯಾಕಂದರೆ ಆತನಿಗೆ “ಭೂಪರಲೋಕಗಳಲ್ಲಿರುವ ಪ್ರತಿ ಕುಟುಂಬವೂ ತನ್ನ ಹೆಸರಿಗಾಗಿ ಋಣಿಯಾಗಿದೆ.” (ಎಫೆ. 3:15, NW) ಒಬ್ಬ ಪುರುಷ ಮತ್ತು ಸ್ತ್ರೀಯು ಮದುವೆಯಾಗುವಾಗ ಒಂದು ಕುಟುಂಬವು ಅಸ್ತಿತ್ವಕ್ಕೆ ಬರುತ್ತದೆ. ಮಕ್ಕಳು ಯೆಹೋವನಿಂದ ಬರುವ ಒಂದು ಸ್ವಾಸ್ಥ್ಯವಾಗಿದ್ದಾರೆ. (ಆದಿ. 2:24; ಕೀರ್ತ. 127:3) ಆದುದರಿಂದ, ಕುಟುಂಬದ ಆತ್ಮಿಕತೆಯು ಒಂದು ಪ್ರಮುಖ ಚಿಂತೆಯಾಗಿದೆ. ತೀರ ಅನೇಕವೇಳೆ, ವಿಶ್ವಾಸದಲ್ಲಿರುವ ಕುಟುಂಬ ಸದಸ್ಯರಲ್ಲಿ—ವಿಶೇಷವಾಗಿ ಹದಿವಯಸ್ಕರಲ್ಲಿ—ಗಂಭೀರ ಸಮಸ್ಯೆಗಳಿರುವಾಗ, ಆ ಮನೆಯಲ್ಲಿ ಒಂದು ಕುಟುಂಬ ಬೈಬಲಧ್ಯಯನವು ನಡಿಸಲ್ಪಡುತ್ತಿರಲಿಲ್ಲವೆಂದು ಕಂಡುಕೊಳ್ಳಲಾಗಿದೆ. ಇದನ್ನು ಹೇಳಲು ದುಃಖವಾಗುವುದಾದರೂ, ಹಿರಿಯರು ಮತ್ತು ಶುಶ್ರೂಷಾ ಸೇವಕರ ಕುಟುಂಬಗಳನ್ನು ಸೇರಿಸಿ, ಅನೇಕ ಕುಟುಂಬಗಳು, ತಮ್ಮ ಶಾಲಾ ವಯಸ್ಸಿನ ಮಕ್ಕಳು ಲೌಕಿಕ ಪ್ರಭಾವಗಳಿಂದ ವಶಪಡಿಸಿಕೊಳ್ಳಲ್ಪಡುವುದನ್ನು ಕಂಡುಕೊಳ್ಳುತ್ತಿದ್ದಾರೆ. ಬಹುಮಟ್ಟಿಗೆ ಯಾವಾಗಲೂ, ಸಮಸ್ಯೆಯ ಮೂಲವು, ಮನೆಯಲ್ಲಿ ಬೈಬಲ್ ಉಪದೇಶಕ್ಕೆ ಗಮನದ ಕೊರತೆಯಾಗಿರುತ್ತದೆ.
2 ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವ ನಿರ್ದೇಶನಗಳನ್ನು ಕುಟುಂಬಗಳು ಅನುಸರಿಸಬೇಕಿದ್ದಲ್ಲಿ, ಕುಟುಂಬ ಅಧ್ಯಯನಕ್ಕಾಗಿ ಸಮಯವು ಬದಿಗಿರಿಸಲ್ಪಡಲೇಬೇಕು. ಕುಟುಂಬ ಬೈಬಲಧ್ಯಯನವನ್ನು ಕ್ರಮವಾಗಿ ನಡಿಸುವುದರಲ್ಲಿ ಕುಟುಂಬದ ಶಿರಸ್ಸುಗಳು ಶ್ರದ್ಧೆಯಿಂದ ಪಟ್ಟುಹಿಡಿಯಬೇಕು, ಮತ್ತು ತದ್ರೀತಿಯಲ್ಲಿ ಕುಟುಂಬದ ಇತರ ಸದಸ್ಯರು ಇಡೀ ಕುಟುಂಬದ ಪ್ರಯೋಜನಕ್ಕಾಗಿ ಕುಟುಂಬ ಆರಾಧನೆಯ ಈ ಅಂಶವನ್ನು ಯಶಸ್ವಿಗೊಳಿಸಲು ಸಹಾಯ ಮಾಡಬೇಕು. ಮನೆತನದ ಆತ್ಮಿಕ ಅಗತ್ಯಗಳಿಗೆ ಈಗ ಯೋಗ್ಯವಾದ ಗಮನವನ್ನು ಅವರು ಕೊಡದಿದ್ದರೆ, ಭವಿಷ್ಯತ್ತಿನಲ್ಲಿ ಅವರು ಗಂಭೀರವಾದ ಮತ್ತು ವೇದನಾಮಯವೂ ಆಗಿರುವ ಸಮಸ್ಯೆಗಳೊಂದಿಗೆ ವ್ಯವಹರಿಸಬೇಕಾಗುವುದೆಂದು ಎಲ್ಲರೂ ಗಣ್ಯಮಾಡುವ ಅಗತ್ಯವಿದೆ.
3 ಒಂದು ಅಧ್ಯಯನವು ಹೇಗೆ ನಡಿಸಲ್ಪಡಬೇಕು? ಏನು ಅಧ್ಯಯನಿಸಲ್ಪಡಬೇಕು? ಅದು ಯಾವಾಗ ನಡಿಸಲ್ಪಡಬೇಕು ಮತ್ತು ಎಷ್ಟು ದೀರ್ಘ ಸಮಯ? ಮಗುವಿನ ಹೃದಯವನ್ನು ತಲಪುವ ವಿಷಯದಲ್ಲಿ ನೀವು ಹೇಗೆ ಖಾತರಿಯಿಂದಿರಬಲ್ಲಿರಿ? ಈ ಪ್ರಶ್ನೆಗಳಿಗೆ ಉತ್ತರಗಳಿಗಾಗಿ, ದಯವಿಟ್ಟು ಅಕ್ಟೋಬರ್ 1, 1994ರ ಕಾವಲಿನಬುರುಜು ವಿನ ಪುಟ 26ನ್ನು ಪರಿಗಣಿಸಿರಿ.
4 ಕುಟುಂಬ ಅಧ್ಯಯನವು ಕ್ರಮವಾಗಿ ನಡಿಸಲ್ಪಡಬೇಕು ಮತ್ತು ಕುಟುಂಬದ ಅಗತ್ಯಗಳಿಗನುಸಾರವಾಗಿ ತಯಾರಿಸಲ್ಪಟ್ಟಂಥದ್ದಾಗಿರಬೇಕು. ದಿನದ ವಚನದ ಪರಿಗಣನೆಯ ಕುರಿತಾಗಿಯೂ ಇದು ಸತ್ಯವಾಗಿರಬೇಕು. ದೇವರ ವಾಕ್ಯದ ಚರ್ಚೆಯೊಂದಿಗೆ ದಿನವನ್ನು ಆರಂಭಿಸುವುದು ಎಂತಹ ಒಂದು ಉತ್ತಮ ಸಂಗತಿಯಾಗಿದೆ! ದಿನದ ಸಮಯದಲ್ಲಿ ಅದರ ಕುರಿತಾಗಿ ಧ್ಯಾನಿಸುವುದು, ನಾವು ‘ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿರುವ ಸಂಗತಿಗಳನ್ನು ಲಕ್ಷ್ಯ’ ದಲ್ಲಿಡುವಂತೆ ನಮಗೆ ಸಹಾಯ ಮಾಡುವುದು. (ಫಿಲಿ. 4:8) ದಿನದ ವಚನದ ನಿಮ್ಮ ಪರಿಗಣನೆ ಮತ್ತು ನಿಮ್ಮ ಕುಟುಂಬ ಅಧ್ಯಯನವು ಕ್ರಮವಾಗಿವೆಯೊ? ನೀವು ಇದರಲ್ಲಿ ಅಭಿವೃದ್ಧಿಯನ್ನು ಮಾಡುವ ಅಗತ್ಯವಿದೆಯೊ?
5 ಒಂದು ಯಶಸ್ವಿ ಕುಟುಂಬ ಅಧ್ಯಯನಕ್ಕಾಗಿ ಅತ್ಯಾವಶ್ಯಕವಾದ ಅಂಶಗಳು, ಹೆತ್ತವರಿಂದ ಪ್ರದರ್ಶಿಸಲ್ಪಡುವ ಆನಂದ ಮತ್ತು ಉತ್ಸಾಹವಾಗಿವೆ. (ಕೀರ್ತನೆ 40:8ನ್ನು ಹೋಲಿಸಿ.) ಮತ್ತೂ, ಹೆತ್ತವರು ಮಕ್ಕಳ ಪ್ರಯತ್ನಗಳಿಗಾಗಿ ಅವರನ್ನು ಪ್ರಶಂಸಿಸಬೇಕು ಮತ್ತು ಯೆಹೋವನ ಸೂತ್ರಗಳನ್ನು ಅನ್ವಯಿಸಲು ಉತ್ತೇಜಿಸಬೇಕು.
6 ಕುಟುಂಬದ ಐಕ್ಯ ಮತ್ತು ಯೆಹೋವನಿಗೆ ವ್ಯಕ್ತಿಯೊಬ್ಬನ ನಿಷ್ಠೆಯ ವಿರುದ್ಧವಾಗಿ ಇಷ್ಟೊಂದು ಘಟಕಾಂಶಗಳು ಕೆಲಸ ಮಾಡುತ್ತಿರುವುದರೊಂದಿಗೆ, ಕುಟುಂಬದ ಶಿರಸ್ಸು ಒಂದು ಅಧ್ಯಯನವನ್ನು ನಡಿಸುವುದರಲ್ಲಿ ಮುಂದಾಳುತ್ವವನ್ನು ವಹಿಸುವುದು ಅತ್ಯಾವಶ್ಯಕ. ಊಟದ ಸಮಯಗಳಂತಹ, ಅನೌಪಚಾರಿಕ ಸನ್ನಿವೇಶಗಳಲ್ಲಿ ಆತ್ಮಿಕ ವಿಷಯಗಳು ಚರ್ಚಿಸಲ್ಪಡಸಾಧ್ಯವಿರುವುದಾದರೂ, ಮುನ್ನೇರ್ಪಡಿಸಲ್ಪಟ್ಟ ಕುಟುಂಬ ಬೈಬಲ್ ಚರ್ಚೆಗಳು ಕುಟುಂಬದ ಯಶಸ್ಸು ಮತ್ತು ಆತ್ಮಿಕ ಬೆಳವಣಿಗೆಗೆ ಅತ್ಯಾವಶ್ಯಕವಾಗಿವೆ.—ಧರ್ಮೋ. 6:6-9.
7 ಹೆತ್ತವರು ತಮ್ಮ ಮಕ್ಕಳ ಆತ್ಮಿಕ ಅಗತ್ಯಗಳಿಗೆ ಸತತವಾಗಿ ಗಮನವನ್ನು ಕೊಡುವಲ್ಲಿ, ಈಗಲೂ ಭವಿಷ್ಯತ್ತಿನಲ್ಲೂ ಅನೇಕ ಆಶೀರ್ವಾದಗಳು ಆನಂದಿಸಲ್ಪಡಸಾಧ್ಯವಿದೆ. ಮಕ್ಕಳು ದೇವರ ನಿಯಮದ ಮೌಲ್ಯವನ್ನು ಕಂಡಂತೆ ಮತ್ತು ಅದು ನಿಜವಾಗಿಯೂ ಒಳ್ಳೇದು ಮತ್ತು ಉಪಯುಕ್ತವೆಂದು ಮನಗಂಡಂತೆ, ನಿಮ್ಮೊಂದಿಗೆ ಕೇವಲ ನಿಯತಕ್ರಮವಾಗಿ ಕೂಟಗಳನ್ನು ಹಾಜರಾಗುವುದು ಮತ್ತು ಶುಶ್ರೂಷೆಯಲ್ಲಿ ಭಾಗವಹಿಸುವುದರ ಬದಲಾಗಿ, ಅವರು ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳುವರು. ಮತ್ತು ಅವರು ಸತ್ಯವನ್ನು ತಮ್ಮದಾಗಿ ಮಾಡಿಕೊಂಡ ಹೊರತು, ಸೈತಾನನ ಕುಟಿಲ ಕೃತ್ಯಗಳಿಗೆ ಅವರು ಬಲಿಯಾಗುವ ತಕ್ಕಮಟ್ಟಿನ ಸಂಭವವಿದೆ. ಆದುದರಿಂದ ಹೆತ್ತವರೇ, ಆನಂದಭರಿತರಾಗಿ ನಿಮ್ಮ ಕುಟುಂಬ ಅಧ್ಯಯನಕ್ಕೆ, ಅದಕ್ಕೆ ಅರ್ಹವಾದ ಪ್ರಾಮುಖ್ಯ ಸ್ಥಾನವನ್ನು ಕೊಡಿರಿ.