ಅಪಕರ್ಷಣೆಗಳನ್ನು ವರ್ಜಿಸುತ್ತಾ ನಾವು ಎಚ್ಚರದಿಂದಿದ್ದೇವೊ?
1 ಖಂಡಿತವಾಗಿ ಬರಲಿಕ್ಕಿದ್ದ ವಿಪತ್ತುಗಳಿಂದ “ತಪ್ಪಿಸಿಕೊಳ್ಳುವುದರಲ್ಲಿ ನೀವು ಯಶಸ್ಸನ್ನು ಪಡೆದುಕೊಳ್ಳುವಂತೆ . . . ಎಚ್ಚರವಾಗಿರ್ರಿ” ಎಂಬ ಒಂದು ಎಚ್ಚರಿಕೆಯನ್ನು ಯೇಸು ಕೊಟ್ಟನು. (ಲೂಕ 21:36, NW) ಮಾನವ ಇತಿಹಾಸದಲ್ಲಿನ ಅತ್ಯಂತ ಗಂಡಾಂತರದ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ತಮ್ಮನ್ನು ಆತ್ಮಿಕ ಜಡತ್ವಕ್ಕೆ ಒಪ್ಪಿಸಿಕೊಡುವವರಿಗೆ ವಿಪತ್ತು ಕಾದಿದೆ. ಇದು ನಮ್ಮಲ್ಲಿ ಪ್ರತಿಯೊಬ್ಬರಿಗೆ ಒಂದು ಅಪಾಯವನ್ನು ಒಡ್ಡುತ್ತದೆ. ತಿನ್ನುವುದು, ಕುಡಿಯುವುದು, ಮತ್ತು ಪ್ರತಿದಿನದ ಜೀವನೋಪಾಯದ ಚಿಂತೆಗಳನ್ನು ಯೇಸು ಪ್ರಸ್ತಾಪಿಸಿದನು. ಏಕೆ? ಈ ವಿಷಯಗಳು ಸಹ ನಮ್ಮನ್ನು ಪೂರ್ವಾಕ್ರಮಿಸಿ, ಅಪಕರ್ಷಣೆಗಳಾಗಿ ಪರಿಣಮಿಸಿ, ಅಪಾಯಕರವಾದ ಆತ್ಮಿಕ ಜಡತ್ವವನ್ನು ಉಂಟುಮಾಡಸಾಧ್ಯವಿರುವುದರಿಂದಲೇ.
2 ಸರ್ವಸಾಮಾನ್ಯ ಅಪಕರ್ಷಣೆಗಳು: ಕೆಲವರು ವಿಪರೀತ ಅಥವಾ ಸಂದೇಹಾಸ್ಪದ ಮನೋರಂಜನೆಯಿಂದ ಪೂರ್ವಾಕ್ರಮಿಸಲ್ಪಟ್ಟು, ಟಿವಿ ವ್ಯಸನಿಗಳಾಗಿಯೂ ಪರಿಣಮಿಸಿದ್ದಾರೆ. ರಾಜ್ಯವನ್ನು ಪ್ರಥಮವಾಗಿ ಹುಡುಕುವುದು, ನಾವು ಎಲ್ಲಾ ರೀತಿಯ ಮನೋರಂಜನೆಯನ್ನು ದೂರಮಾಡಬೇಕೆಂಬುದನ್ನು ಅರ್ಥೈಸುವುದಿಲ್ಲ ನಿಶ್ಚಯ. ವಿವೇಚನಾ ಶಕ್ತಿ ಮತ್ತು ಮಿತವರ್ತನೆಯನ್ನು ನಾವು ಉಪಯೋಗಿಸುವಾಗ, ಮನೋರಂಜನೆಯು ಪ್ರಯೋಜನಕರವಾಗಿರಸಾಧ್ಯವಿದೆ. (1 ತಿಮೊಥೆಯ 4:8ನ್ನು ಹೋಲಿಸಿರಿ.) ಆದರೆ, ನಮ್ಮ ಸಮಯ, ನಮ್ಮ ಸಾಧನೋಪಾಯಗಳು, ಅಥವಾ ರಾಜ್ಯ ಸಾರುವಿಕೆಯ ಕೆಲಸದಲ್ಲಿನ ನಮ್ಮ ಪಾಲುತೆಗೆದುಕೊಳ್ಳುವಿಕೆಯಲ್ಲಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಾ, ಅದು ನಮ್ಮ ಜೀವಿತಗಳಲ್ಲಿ ಅತ್ಯಂತ ಪ್ರಾಮುಖ್ಯವಾದ ಭಾಗವಾಗಿ ಪರಿಣಮಿಸುವಾಗ, ಅದು ಒಂದು ಅಪಕರ್ಷಣೆಯಾಗುತ್ತದೆ.
3 ಆತ್ಮಿಕ ಜಡತ್ವವನ್ನು ಉಂಟುಮಾಡುವ ಸರ್ವಸಾಮಾನ್ಯವಾದ ಇನ್ನೊಂದು ಅಪಕರ್ಷಣೆಯು, ಅನಗತ್ಯವಾದ ಪ್ರಾಪಂಚಿಕ ವಸ್ತುಗಳ ಆಶೆಯಾಗಿದೆ. ಇದು ಒಬ್ಬ ವ್ಯಕ್ತಿಯನ್ನು ಐಹಿಕ ಉದ್ಯೋಗದಲ್ಲಿ ಹೆಚ್ಚು ಸಮಯ ಕೆಲಸ ಮಾಡುವಂತೆ ಅಗತ್ಯಪಡಿಸುತ್ತದೆ ಮತ್ತು ಆತ್ಮಿಕ ಬೆನ್ನಟ್ಟುವಿಕೆಗಳು ಹೊರದಬ್ಬಲ್ಪಡುವಂತೆ ಮಾಡುತ್ತದೆ. ಹೆಚ್ಚು ಸಂತೃಪ್ತಿಕರವಾದ ಜೀವನ ಮಾರ್ಗವನ್ನು ಪಡೆಯಲಿಕ್ಕಾಗಿ ಪ್ರಾಪಂಚಿಕ ಸಂಪತ್ತನ್ನು ಸಂಪಾದಿಸುವುದರಲ್ಲಿ ಮಗ್ನರಾಗುವ ಮೂಲಕ, ಕೆಲವರು ಆತ್ಮಿಕ ಗುರಿಗಳ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ನಮಗೆ “ಅನ್ನವಸ್ತ್ರ” ಗಳ ಅಗತ್ಯವಿರುವುದಾದರೂ, ನಮ್ಮನ್ನು ನಂಬಿಕೆಯಿಂದ ದಾರಿತಪ್ಪುವಂತೆ ನಡಿಸಸಾಧ್ಯವಿರುವ ಹಣದಾಸೆಯನ್ನು ವಿಕಸಿಸಿಕೊಳ್ಳುವುದರ ವಿರುದ್ಧ ನಾವು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. (1 ತಿಮೊ. 6:8-10) ರಾಜ್ಯಾಭಿರುಚಿಗಳ ಮೇಲೆ ನಮ್ಮ ಕಣ್ಣುಗಳನ್ನು ಕೇಂದ್ರೀಕರಿಸಲು ತಪ್ಪಿಹೋಗುವುದರ ಮೂಲಕ, ನಮ್ಮ ಕುಟುಂಬದ ಆತ್ಮಿಕ ಆವಶ್ಯಕತೆಗಳನ್ನು ಪರಾಮರಿಸುವುದರಲ್ಲಿ ನಾವು ಅಜಾಗರೂಕರಾಗಸಾಧ್ಯವಿದೆ ಮತ್ತು ನಮ್ಮ ಶುಶ್ರೂಷೆಯನ್ನು ಪೂರೈಸಲು ತಪ್ಪಿಬೀಳಸಾಧ್ಯವಿದೆ.—1 ತಿಮೊ. 5:8; 2 ತಿಮೊ. 4:5.
4 ಇನ್ನೂ ಅನೇಕರು, ತಾವು ಆತ್ಮಿಕವಾಗಿ ನಿದ್ರಿಸುವ ಒಂದು ಮಟ್ಟದ ವರೆಗೆ, ತಮ್ಮ ‘ಹೃದಯಗಳು ಜೀವನದ ಚಿಂತೆಗಳಿಂದ ಭಾರವಾಗುವಂತೆ’ ಬಿಡುತ್ತಾರೆ. (ಲೂಕ 21:34) ಅನೇಕವೇಳೆ, ಚಿಂತೆಯು ಆರೋಗ್ಯ ಸಮಸ್ಯೆಗಳು ಅಥವಾ ಕ್ಷೋಭೆಗೊಳಿಸುವ ಕುಟುಂಬ ಸನ್ನಿವೇಶಗಳ ಕಾರಣದಿಂದ ಅನುಭವಿಸಲ್ಪಡುತ್ತದೆ. ಆದರೆ ಅಂತಹ ವೈಯಕ್ತಿಕ ಚಿಂತೆಗಳು, ಈ ವಿಷಯಗಳ ವ್ಯವಸ್ಥೆಯ ವೇಗವಾಗಿ ಸಮೀಪಿಸುತ್ತಿರುವ ಅಂತ್ಯದ ಕುರಿತಾದ ನಮ್ಮ ಪರಿಜ್ಞಾನವನ್ನು ಕುಂದಿಸುವಂತೆ ಅನುಮತಿಸಬಾರದು.—ಮಾರ್ಕ 13:33.
5 ಯಾವುದೋ ಲೌಕಿಕ ಭ್ರಾಂತಿಯನ್ನು ಬೆನ್ನಟ್ಟುತ್ತಾ, ಒಂದು ಸ್ವಪ್ನಾವಸ್ಥೆಯಲ್ಲಿ ನಮ್ಮನ್ನು ಇಡುವುದರಲ್ಲಿ ಯಶಸ್ವಿಯಾಗುವುದಕ್ಕಿಂತಲೂ ಹೆಚ್ಚಾಗಿ ಇನ್ನಾವುದೂ ಪಿಶಾಚನಿಗೆ ಸಂತೋಷವನ್ನುಂಟುಮಾಡುವುದಿಲ್ಲ. ಆತ್ಮಿಕವಾಗಿ ಎಚ್ಚರವಾಗಿರಲು ನಾವು ಹೋರಾಡಬೇಕಾಗಿದೆ. ‘ಯೆಹೋವನ ದಿನವು ಕಳ್ಳನೋಪಾದಿ ಬರುತ್ತಿದೆ’ ಎಂದು ನಮಗೆ ತಿಳಿದಿದೆ, ಮತ್ತು ನಾವು ‘ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿರುವುದು’ ಅತ್ಯಾವಶ್ಯಕವಾಗಿದೆ. (1 ಥೆಸ. 5:2, 6) ನಮ್ಮಲ್ಲಿ ಜಡತದ್ವ ಸೂಚನೆಗಳನ್ನು ನಾವು ಕಂಡುಕೊಳ್ಳುವುದಾದರೆ, ನಾವು “ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು” ಬಿಡುವುದು ಜರೂರಿಯದ್ದಾಗಿದೆ.—ರೋಮಾ. 13:11-13.
6 ಎಚ್ಚರದಿಂದಿರುವಂತೆ ನಮಗೆ ಸಹಾಯ ಮಾಡಲಿಕ್ಕಾಗಿರುವ ಸಹಾಯಕಗಳು: ಅಂತಹ ಸಹಾಯಕಗಳು ಯಾವುವು? ಪ್ರಾರ್ಥನೆಯು ಅಗತ್ಯವಾಗಿದೆ. ನಾವು ನಿರಂತರವಾಗಿ ಪ್ರಾರ್ಥಿಸಬೇಕು. (1 ಥೆಸ. 5:17) ಕ್ರೈಸ್ತ ಸಭೆಯೊಂದಿಗೆ ಆಪತ್ತೆಯಿಂದಿರುವುದು, ‘ಪ್ರೀತಿಯನ್ನು ಮತ್ತು ಸತ್ಕಾರ್ಯಗಳನ್ನು ಮಾಡುವಂತೆ ನಮ್ಮನ್ನು ಪ್ರೇರಿಸು’ ವುದು. (ಇಬ್ರಿ. 10:24) ಬಲಹೀನತೆಗಳನ್ನು ಜಯಿಸಲಿಕ್ಕಾಗಿರುವ ನಮ್ಮ ಅಗತ್ಯಕ್ಕಾಗಿ ನಮ್ಮನ್ನು ಎಚ್ಚರದಿಂದಿರಿಸಲು, ಒಂದು ಕ್ರಮವಾದ, ಪ್ರಾಮಾಣಿಕವಾದ ಸ್ವಪರೀಕ್ಷೆಯು ಸಹಾಯ ಮಾಡಬಲ್ಲದು. (2 ಕೊರಿಂ. 13:5) ಒಳ್ಳೆಯ ವೈಯಕ್ತಿಕ ಅಭ್ಯಾಸದ ಹವ್ಯಾಸಗಳು ನಮ್ಮನ್ನು “ನಂಬಿಕೆಯ ವಾಕ್ಯಗಳಿಂದ ಪೋಷಿಸುವವು.” (1 ತಿಮೊ. 4:6, NW) ನಾವು ಕಾರ್ಯನಿಷ್ಠರಾಗಿರುವುದಾದರೆ, ನಾವು ಅಪಕರ್ಷಣೆಗಳನ್ನು ದೂರಮಾಡಲು, ‘ಎಚ್ಚರವಾಗಿರಲು, ಮತ್ತು ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲಲು’ ಶಕ್ತರಾಗುವೆವೆಂದು ನಾವು ದೃಢಭರವಸೆಯಿಂದಿರಸಾಧ್ಯವಿದೆ.—1 ಕೊರಿಂ. 16:13.