ಜ್ಞಾಪಕ—ವಿಶೇಷ ಮಹತ್ತ್ವವುಳ್ಳ ಒಂದು ಘಟನೆ!
1 ಮಾರ್ಚ್ 23ರ ಆದಿತ್ಯವಾರದಂದು, ಸೂರ್ಯಾಸ್ತಮಾನದ ನಂತರ ನಾವು ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸುವೆವು. (ಲೂಕ 22:19) ಇದು ನಿಜವಾಗಿಯೂ ವಿಶೇಷ ಮಹತ್ತ್ವವುಳ್ಳ ಒಂದು ಘಟನೆಯಾಗಿದೆ! ಮರಣದ ತನಕ ಯೆಹೋವನಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ, ಯೆಹೋವನ ಪರಮಾಧಿಕಾರದ ಸಮರ್ಪಕತೆಯನ್ನು ಎತ್ತಿಹಿಡಿಯುತ್ತಾ, ಒಬ್ಬ ಮನುಷ್ಯನು ಕಠಿನವಾದ ಒತ್ತಡದ ಕೆಳಗೂ ಪರಿಪೂರ್ಣವಾದ ದೈವಿಕ ಭಕ್ತಿಯನ್ನು ಕಾಪಾಡಿಕೊಳ್ಳುವುದು ಶಕ್ಯವೆಂಬುದನ್ನು ಯೇಸು ರುಜುಪಡಿಸಿದನು. (ಇಬ್ರಿ. 5:8) ಇದಕ್ಕೆ ಕೂಡಿಸಿ, ಕ್ರಿಸ್ತನ ಮರಣವು, ಮಾನವಕುಲವನ್ನು ವಿಮೋಚಿಸಲಿಕ್ಕಾಗಿ ಅಗತ್ಯವಾಗಿದ್ದ ಪರಿಪೂರ್ಣ ಮಾನವ ಯಜ್ಞವನ್ನು ಒದಗಿಸಿತು. ನಂಬಿಕೆಯನ್ನು ಇಡುವವರು ಸದಾಕಾಲ ಜೀವಿಸುವಂತೆ ಇದು ಸಾಧ್ಯಮಾಡುತ್ತದೆ. (ಯೋಹಾ. 3:16) ಜ್ಞಾಪಕಕ್ಕೆ ಉಪಸ್ಥಿತರಿರುವ ಮೂಲಕ, ಯೆಹೋವನ ಪ್ರೀತಿ ಮತ್ತು ನಮಗೋಸ್ಕರ ನೀಡಲ್ಪಟ್ಟ ಯೇಸುವಿನ ಯಜ್ಞಕ್ಕಾಗಿ ನಮಗಿರುವ ಹೃತ್ಪೂರ್ವಕ ಗಣ್ಯತೆಯನ್ನು ನಾವು ಪ್ರದರ್ಶಿಸಸಾಧ್ಯವಿದೆ.
2 1997 ಕ್ಯಾಲೆಂಡರ್ ಆಫ್ ಜೆಹೋವಾಸ್ ವಿಟ್ನೆಸಸ್ನಲ್ಲಿ ತೋರಿಸಲ್ಪಟ್ಟಂತೆ, ಮಾರ್ಚ್ 18-23ಕ್ಕಾಗಿ ಗೊತ್ತುಮಾಡಲ್ಪಟ್ಟಿರುವ ಬೈಬಲ್ ವಾಚನ ಕಾರ್ಯಕ್ರಮವನ್ನು ಅನುಸರಿಸಲು ಎಲ್ಲರನ್ನು ಉತ್ತೇಜಿಸಲಾಗುತ್ತದೆ. ಅಲ್ಲದೆ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕದ 112-16ನೆಯ ಅಧ್ಯಾಯಗಳ ಒಂದು ಕುಟುಂಬ ಚರ್ಚೆಯು, ಮಾನವ ಇತಿಹಾಸದಲ್ಲಿಯೇ ಅತಿ ಮಹತ್ತ್ವವಾದ ವಾರದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯಮಾಡುವುದು.
3 ಜ್ಞಾಪಕದ ಸಮಯಾವಧಿಯಲ್ಲಿ ನೀವು ಕ್ಷೇತ್ರ ಶುಶ್ರೂಷೆಯಲ್ಲಿ ಕಳೆಯುವ ಸಮಯವನ್ನು ಹೆಚ್ಚಿಸಸಾಧ್ಯವಿದೆಯೊ? ಅನೇಕ ಪ್ರಚಾರಕರು, ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಲು, ಮಾರ್ಚ್ ತಿಂಗಳಿನಲ್ಲಿರುವ ಐದು ವಾರಾಂತ್ಯಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವರು. ನೀವು ಅವರಲ್ಲಿ ಒಬ್ಬರಾಗಿರಬಾರದೇಕೆ? ಜ್ಞಾಪಕವನ್ನು ಹಾಜರಾಗುವ ಮಹತ್ತ್ವವನ್ನು ಒತ್ತಿಹೇಳುವುದರಲ್ಲಿ ನಮ್ಮಲ್ಲಿ ಎಲ್ಲರೂ ಒಂದು ಪೂರ್ಣ ಪಾಲನ್ನು ಹೊಂದಬಲ್ಲೆವು. ಅದು ಆದಿತ್ಯವಾರದಂದು ಇರುವುದರಿಂದ, ಅನೇಕರಿಗೆ ಹಾಜರಾಗಲು ಹೆಚ್ಚು ಸುಲಭವಾಗಿರುವುದು. ಎಲ್ಲಾ ಬೈಬಲ್ ವಿದ್ಯಾರ್ಥಿಗಳು ಮತ್ತು ಇತರ ಆಸಕ್ತ ವ್ಯಕ್ತಿಗಳು ನಮ್ಮನ್ನು ಜೊತೆಗೂಡುವಂತೆ ಆಮಂತ್ರಿಸಲು ಖಚಿತರಾಗಿರಿ. ವಿಶೇಷವಾಗಿ ಆಚರಿಸಲ್ಪಡಬೇಕಾದ, ವರ್ಷದ ಆ ಒಂದು ದಿನದ ಕುರಿತಾಗಿ ಜ್ಞಾನ ಪುಸ್ತಕದಲ್ಲಿ, 127ನೆಯ ಪುಟದ, 18ನೆಯ ಪ್ಯಾರಗ್ರಾಫ್ನಲ್ಲಿರುವ ವಿಷಯವನ್ನು ಅವರೊಂದಿಗೆ ಹಂಚಿಕೊಳ್ಳಿರಿ.
4 ಯೇಸುವಿನ ಮರಣವು ನಮಗಾಗಿ ಅರ್ಥೈಸುವ ಎಲ್ಲ ಸಂಗತಿಗಳಿಗಾಗಿ ಗಾಢವಾದ ಗಣ್ಯತೆಯೊಂದಿಗೆ, 1997ರ ಈ ಅತಿ ಮಹಾನ್ ಘಟನೆಯನ್ನು ಸಮೀಪಿಸಿರಿ. ಎಲ್ಲೆಡೆಯೂ ಇರುವ ನಿಜ ಕ್ರೈಸ್ತರು, ಜ್ಞಾಪಕವನ್ನು ನಂಬಿಗಸ್ತಿಕೆಯಿಂದ ಆಚರಿಸಲಿರುವ ಮಾರ್ಚ್ 23ರ ಸಾಯಂಕಾಲದಂದು ಉಪಸ್ಥಿತರಿರಿ.