ಫೆಬ್ರವರಿಗಾಗಿ ಸೇವಾ ಕೂಟಗಳು
ಫೆಬ್ರವರಿ 3ರಿಂದ ಆರಂಭವಾಗುವ ವಾರ
ಸಂಗೀತ 27 (7)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಸಭಿಕರೊಂದಿಗೆ “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ” ಲೇಖನವನ್ನು ಚರ್ಚಿಸಿರಿ.
15 ನಿ: “ಇನ್ನೆಂದಿಗೂ ಪುನರಾವರ್ತಿಸಲ್ಪಡದ ಕೆಲಸದಲ್ಲಿ ಪಾಲ್ಗೊಳ್ಳಿರಿ.” ಪ್ರಶ್ನೋತ್ತರಗಳು. ಸಮಯವು ಅನುಮತಿಸಿದಂತೆ, ಘೋಷಕರು (ಇಂಗ್ಲಿಷ್) ಪುಸ್ತಕದ 714-15ನೆಯ ಪುಟಗಳಲ್ಲಿರುವ “ಎಚ್ಚರವಾಗಿರುವುದು—ಹೇಗೆ?” ಎಂಬ ಉಪಶೀರ್ಷಿಕೆಯಿಂದ ಅಂಶಗಳನ್ನು ಸೇರಿಸಿರಿ.
20 ನಿ: “ತುರ್ತು ಪ್ರಜ್ಞೆಯಿಂದ ಸುವಾರ್ತೆಯನ್ನು ಸಾದರಪಡಿಸುವುದು.” (1-5ನೆಯ ಪ್ಯಾರಗ್ರಾಫ್ಗಳು) 1ನೆಯ ಪ್ಯಾರಗ್ರಾಫ್ನ ಕುರಿತಾಗಿ ಸಂಕ್ಷಿಪ್ತವಾದ ಹೇಳಿಕೆಗಳನ್ನು ನುಡಿದ ನಂತರ, ಅಧ್ಯಕ್ಷನು 2-5ನೆಯ ಪ್ಯಾರಗ್ರಾಫ್ಗಳನ್ನು ಇಬ್ಬರು ಅಥವಾ ಮೂವರು ಪ್ರಚಾರಕರೊಂದಿಗೆ ಚರ್ಚಿಸುತ್ತಾನೆ. ಸೂಚಿಸಲ್ಪಟ್ಟಿರುವ ನಿರೂಪಣೆಗಳ ಮುಖ್ಯ ಅಂಶಗಳನ್ನು ಅವರು ಪುನರ್ವಿಮರ್ಶಿಸುತ್ತಾರೆ ಮತ್ತು ಇವುಗಳಂತಹ ಅಥವಾ ತದ್ರೀತಿಯ ನಿರೂಪಣೆಗಳು, ಸ್ಥಳಿಕ ಟೆರಿಟೊರಿಯಲ್ಲಿ ಏಕೆ ಪರಿಣಾಮಕಾರಿಯಾಗಿರಬಹುದು ಎಂಬುದರ ಕುರಿತಾಗಿ ಹೇಳಿಕೆಯನ್ನು ನೀಡುತ್ತಾರೆ. ಪ್ರಚಾರಕರು ಸರದಿ ಪ್ರಕಾರ ನಿರೂಪಣೆಗಳನ್ನು ಅಭ್ಯಾಸಮಾಡಿಕೊಳ್ಳುತ್ತಾರೆ. ಅಧ್ಯಕ್ಷನು ಪ್ರಶಂಸೆಯನ್ನು ನೀಡುತ್ತಾನೆ, ನಿರೂಪಣೆಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ವಿಧಗಳನ್ನು ಸೂಚಿಸುತ್ತಾನೆ. ಅನಂತರ ಅವನು, ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ಗುರಿಯನ್ನು ತಲಪಸಾಧ್ಯವಿರುವ ಮಾರ್ಗಗಳ ಕುರಿತಾಗಿ ಸಭಿಕರಿಗೆ ಕೇಳುತ್ತಾನೆ. ಕಟ್ಟಕಡೆಗೆ ಜ್ಞಾನ ಪುಸ್ತಕದಲ್ಲಿ ಒಂದು ಅಭ್ಯಾಸವನ್ನು ಆರಂಭಿಸುವ ವಿಧದ ಕುರಿತಾಗಿ ನಿರ್ದಿಷ್ಟ ಉಪಾಯಗಳನ್ನು ಕೊಡುತ್ತಾನೆ.
ಸಂಗೀತ 34 (8) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 10ರಿಂದ ಆರಂಭವಾಗುವ ವಾರ
ಸಂಗೀತ 29 (11)
5 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
10 ನಿ: “ತುರ್ತು ಪ್ರಜ್ಞೆಯಿಂದ ಸುವಾರ್ತೆಯನ್ನು ಸಾದರಪಡಿಸುವುದು.” (6-8ನೆಯ ಪ್ಯಾರಗ್ರಾಫ್ಗಳು) 6-7ನೆಯ ಪ್ಯಾರಗ್ರಾಫ್ಗಳಲ್ಲಿರುವ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಆಸಕ್ತಿಯು ತೋರಿಸಲ್ಪಡುವಲ್ಲಿ, ಒಂದು ಪುನರ್ಭೇಟಿಯನ್ನು ಮಾಡುವ ಅಗತ್ಯವನ್ನು ಒತ್ತಿಹೇಳಿರಿ.
30 ನಿ: “ಬೇಕಾಗಿದ್ದಾರೆ—4,000 ಆಕ್ಸಿಲಿಯರಿ ಪಯನೀಯರರು.” ಸೇವಾ ಮೇಲ್ವಿಚಾರಕನಿಂದ ಪ್ರಶ್ನೋತ್ತರ ಆವರಿಸುವಿಕೆ. 3ನೆಯ ಪುಟದಲ್ಲಿರುವ ರೇಖಾಚೌಕವನ್ನು ಎತ್ತಿತಿಳಿಸಿರಿ. 6ನೆಯ ಪುಟದಲ್ಲಿರುವ ಕಾರ್ಯತಖ್ತೆಗಳ ನಮೂನೆಗಳನ್ನು ಪುನರ್ವಿಮರ್ಶಿಸಿರಿ. ಪ್ರತಿಯೊಬ್ಬ ದೀಕ್ಷಾಸ್ನಾನಿತ ಪ್ರಚಾರಕನು, ತಾನು ಒಂದು ಅಥವಾ ಹೆಚ್ಚು ತಿಂಗಳುಗಳಿಗಾಗಿ ನಮೂದಿಸಿಕೊಳ್ಳಶಕ್ತನೊ ಎಂಬುದನ್ನು ವೈಯಕ್ತಿಕವಾಗಿ ಮತ್ತು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸತಕ್ಕದ್ದು. ಅಸ್ನಾನಿತ ಪ್ರಚಾರಕರು, ಪ್ರತಿ ತಿಂಗಳು ತಾಸುಗಳ ತಮ್ಮ ಸ್ವಂತ ಗುರಿಯನ್ನಿಡುವ ಮೂಲಕ ಶುಶ್ರೂಷೆಯಲ್ಲಿನ ತಮ್ಮ ಪಾಲನ್ನು ಹೆಚ್ಚಿಸಬಲ್ಲರು.
ಸಂಗೀತ 43 (4) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 17ರಿಂದ ಆರಂಭವಾಗುವ ವಾರ
ಸಂಗೀತ 30 (58)
10 ನಿ: ಸ್ಥಳಿಕ ತಿಳಿಸುವಿಕೆಗಳು. ಈ ವಾರ ಸೇವೆಯಲ್ಲಿ ಉಪಯೋಗಿಸಸಾಧ್ಯವಿರುವ, ಪ್ರಚಲಿತ ಪತ್ರಿಕೆಗಳಲ್ಲಿನ ಆಸಕ್ತಿಕರವಾದ ಮಾತನಾಡುವ ವಿಷಯಗಳನ್ನು ತಿಳಿಸಿರಿ.
13 ನಿ: “ಜ್ಞಾಪಕ—ವಿಶೇಷ ಮಹತ್ವವುಳ್ಳ ಒಂದು ಘಟನೆ!” ಪ್ರಶ್ನೋತ್ತರಗಳು. ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಮೂಲಕ, ಇಡೀ ಮಾರ್ಚ್ ತಿಂಗಳನ್ನು ವಿಶೇಷವನ್ನಾಗಿ ಮಾಡುವಂತೆ ಪ್ರೋತ್ಸಾಹ ನೀಡಿರಿ. ಜ್ಞಾಪಕ ಆಮಂತ್ರಣ ಚೀಟಿಗಳ ಉಪಯೋಗವನ್ನು ಎತ್ತಿಹೇಳಿರಿ.
22 ನಿ: ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು. ಇತ್ತೀಚಿನ ತಿಂಗಳುಗಳಲ್ಲಿ, ನೂರಾರು ಸಾವಿರ ಬೌಂಡ್ ಪುಸ್ತಕಗಳು ನೀಡಲ್ಪಟ್ಟಿವೆ. ಇದು ಇನ್ನೂ ಅನೇಕ ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಒಂದು ಆಧಾರವನ್ನು ಒದಗಿಸುತ್ತದೆ. ಪುಸ್ತಕಗಳು ಮತ್ತು ಇತರ ಸಾಹಿತ್ಯವನ್ನು ನೀಡುವುದರಲ್ಲಿ ಸ್ಥಳಿಕವಾಗಿ ಏನು ಪೂರೈಸಲ್ಪಟ್ಟಿದೆಯೊ ಅದನ್ನು ಪುನರ್ವಿಮರ್ಶಿಸಿರಿ. ಎಲ್ಲಾ ಆಸಕ್ತಿಯನ್ನು ಮುಂದುವರಿಸಿಕೊಂಡುಹೋಗುವಂತೆ ಪ್ರಚಾರಕರನ್ನು ಉತ್ತೇಜಿಸಿರಿ. ಹೊಸ ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ತಮ್ಮ ವತಿಯಿಂದ ಅವಶ್ಯವಾಗಿರುವ ಪ್ರಯತ್ನವನ್ನು ಹಲವಾರು ಪ್ರಚಾರಕರು ನಿರ್ದಿಷ್ಟವಾಗಿ ತಿಳಿಸುವಂತೆ ಮಾಡಿರಿ. ನಮ್ಮ ಕಾರ್ಯಭಾರದ ಒಂದು ಅವಿಭಾಜಿತ ಭಾಗವು, ಶಿಷ್ಯರನ್ನಾಗಿ ಮಾಡುವುದಾಗಿದೆ ಎಂಬುದನ್ನು ಒತ್ತಿಹೇಳಿರಿ. (ಮತ್ತಾ. 28:19, 20) ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ನೀಡಲ್ಪಟ್ಟಿರುವ ಸಲಹೆಗಳನ್ನು ನಾವು ಅನ್ವಯಿಸಲು ಪ್ರಯತ್ನಿಸುವಲ್ಲಿ, ಇದನ್ನು ಪರಿಣಾಮಕಾರಿಯಾಗಿ ಮಾಡಸಾಧ್ಯವಿದೆ.
ಸಂಗೀತ 47 (21) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 24ರಿಂದ ಆರಂಭವಾಗುವ ವಾರ
ಸಂಗೀತ 32 (10)
18 ನಿ: ಸ್ಥಳಿಕ ತಿಳಿಸುವಿಕೆಗಳು. ಮಾರ್ಚ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವವರೆಲ್ಲರ ಹೆಸರುಗಳನ್ನು ಪ್ರಕಟಿಸಿರಿ. ಅರ್ಜಿಯನ್ನು ಹಾಕಲು ಇನ್ನೂ ತೀರ ತಡವಾಗಿಲ್ಲವೆಂದು ವಿವರಿಸಿರಿ. ಶನಿವಾರ, ಮಾರ್ಚ್ 1ರಂದು ಎಲ್ಲರೂ ಕ್ಷೇತ್ರ ಸೇವೆಯಲ್ಲಿ ಒಂದು ಪೂರ್ಣ ಪಾಲನ್ನು ಹೊಂದುವಂತೆ ಉತ್ತೇಜಿಸಿರಿ. ಆ ತಿಂಗಳಿನಲ್ಲಿ ಸೇವೆಗಾಗಿ ಕೂಟಗಳಿಗೋಸ್ಕರ ಸ್ಥಳಿಕವಾಗಿ ಮಾಡಲ್ಪಡುವ ಹೆಚ್ಚಿನ ಏರ್ಪಾಡುಗಳನ್ನು ತಿಳಿಸಿರಿ. “ಸರಿಯಾದ ಸಮಯದಲ್ಲಿ ಸಹಾಯ” ಲೇಖನವನ್ನು ಪ್ರಶ್ನೋತ್ತರಗಳ ಮೂಲಕ ಆವರಿಸಿರಿ. ಹೊಸ ಪ್ರಕಾಶನಗಳಲ್ಲಿ ಪ್ರತಿಯೊಂದರಿಂದ ಅಮೂಲ್ಯವಾದ ಮುಖ್ಯ ಅಂಶಗಳನ್ನು ತೋರಿಸಿರಿ.
12 ನಿ: “ನಿಮ್ಮ ಸಂಬಂಧಿಕರ ಕುರಿತಾಗಿ ಏನು?” ಗಂಡ ಮತ್ತು ಹೆಂಡತಿ ಲೇಖನವನ್ನು ಒಟ್ಟಿಗೆ ಚರ್ಚಿಸುತ್ತಾರೆ ಮತ್ತು ಅವಿಶ್ವಾಸಿ ಸಂಬಂಧಿಕರನ್ನು ಸುವಾರ್ತೆಯೊಂದಿಗೆ ಹೇಗೆ ಸಮೀಪಿಸುವುದೆಂಬುದನ್ನು ನಿರ್ಣಯಿಸುತ್ತಾರೆ.—ಫೆಬ್ರವರಿ 15, 1990ರ ವಾಚ್ಟವರ್ ಪತ್ರಿಕೆಯ 25-7ನೆಯ ಪುಟಗಳನ್ನು ನೋಡಿರಿ.
15 ನಿ: ಮಾರ್ಚ್ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ—ಕುಟುಂಬ ಸಂತೋಷದ ರಹಸ್ಯ ಪುಸ್ತಕ. ಆಧುನಿಕ ಸಮಾಜದಲ್ಲಿ ಕುಟುಂಬ ಕುಸಿತದ ಮರೆಯಲ್ಲಿರುವ ಕಾರಣಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ. (ಅಕ್ಟೋಬರ್ 15, 1992ರ ವಾಚ್ಟವರ್ ಪತ್ರಿಕೆಯ 4-7ನೆಯ ಪುಟಗಳನ್ನು ನೋಡಿರಿ.) ಪುಟ 3ರಲ್ಲಿರುವ ಪುಸ್ತಕದ ಒಳವಿಷಯವನ್ನು ಪುನರ್ವಿಮರ್ಶಿಸಿರಿ. ಒಂದು ನಿರೂಪಣೆಗಾಗಿ ಆಧಾರವನ್ನು ಒದಗಿಸಬಲ್ಲ ಅಧ್ಯಾಯಗಳನ್ನು ಆರಿಸಿಕೊಳ್ಳಲು ಸಭಿಕರನ್ನು ಆಮಂತ್ರಿಸಿರಿ. ಪ್ರತಿಯೊಂದು ಅಧ್ಯಾಯದ ಅಂತ್ಯದಲ್ಲಿ ತೋರಿಬರುವ ಸಹಾಯಕಾರಿಯಾದ ಕಲಿಸುವಿಕೆಯ ರೇಖಾಚೌಕವನ್ನು ತೋರಿಸಿರಿ. ಪುಸ್ತಕವನ್ನು ಹೇಗೆ ಸಾದರಪಡಿಸುವುದೆಂಬುದನ್ನು ಒಬ್ಬ ಸಮರ್ಥ ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ. ಈ ವಾರಾಂತ್ಯದಲ್ಲಿ ಉಪಯೋಗಕ್ಕಾಗಿ ಪ್ರತಿಗಳನ್ನು ಪಡೆದುಕೊಳ್ಳುವಂತೆ ಎಲ್ಲರಿಗೆ ಜ್ಞಾಪಕ ಹುಟ್ಟಿಸಿರಿ ಮತ್ತು ಸ್ಥಳಿಕ ಟೆರಿಟೊರಿಯಲ್ಲಿ ಸಿಗಬಹುದಾದ ಎಲ್ಲಾ ಭಾಷೆಗಳಲ್ಲಿನ ಪ್ರತಿಗಳನ್ನು ಒಯ್ಯುವುದನ್ನು ಪ್ರೋತ್ಸಾಹಿಸಿರಿ.
ಸಂಗೀತ 48 (28) ಮತ್ತು ಸಮಾಪ್ತಿಯ ಪ್ರಾರ್ಥನೆ.