ತಾಳ್ಮೆ—ಅಷ್ಟೇಕೆ ವಿರಳ?
ಎಮಿಲ್ಯೊ ತನ್ನ 60 ಗಳ ವಯಸ್ಸಿನಲಿದ್ಲನ್ದು.a ಅವನು ಒಅಹುಗೆ ಬಂದದ್ದು ಒಂದು ದುಃಖದ ನಿಯೋಗದಲ್ಲಿ—ತನ್ನ ಪ್ರಾಪ್ತ ವಯಸ್ಕ ಮಗನ ಶವ ಸಂಸ್ಕಾರಮಾಡಲು. ಒಂದು ಶಾಂತ ಬೆಟ್ಟಪ್ರದೇಶದ ದಾರಿಯಲ್ಲಿ ಕೆಲವು ಮಿತ್ರರೊಂದಿಗೆ ಮಾತನಾಡುತ್ತಾ ನಡೆಯುತ್ತಿದ್ದಾಗ ಒಂದು ಕಾರು ಹಿಮ್ಮೊಗವಾಗಿ ವೇಗದಿಂದ ದಾರಿಯಿಳಿದು ಬರುತ್ತಿರುವುದು ಎಮಿಲ್ಯೊನನ್ನು ಬೆಚ್ಚು ಬೀಳಿಸಿತು. ಕಾರು ಬಹುಮಟ್ಟಿಗೆ ಎಮಿಲ್ಯೊನನ್ನು ಹೊಡೆಯಲು ಹತ್ತಿರವಾಯಿತು, ಎಮಿಲ್ಯೊ ಕೋಪ ಮತ್ತು ಅಸಹನೆಯಿಂದ ಚಾಲಕನಿಗೆ ಅಬ್ಬರಿಸಿ, ತನ್ನ ಕೈಯಿಂದ ಕಾರಿನ ಹಿಂಬದಿಯನ್ನು ಹೊಡೆದನು. ವಾಗ್ವಾದ ಆರಂಭವಾಯಿತು. ಚಾಲಕನು ಕೊನೆಗೆ ಎಮಿಲ್ಯೊನನ್ನು ಹಿಡಿದು ದೂಡಿದನೆಂದು ತೋರುತ್ತದೆ, ಅವನು ಬಿದ್ದನು ಮತ್ತು ಅವನ ತಲೆ ಕಲ್ಲಿನ ನೆಲಗಟ್ಟಿಗೆ ಬಡೆಯಿತು. ಕೆಲವೆ ದಿನಗಳಲ್ಲಿ ಎಮಿಲ್ಯೊ ತನ್ನ ತಲೆಗೆ ಬಿದ್ದ ಪೆಟ್ಟಿನಿಂದಾಗಿ ಸತ್ತನು. ಎಂತಹ ಶೋಚನೀಯ ಫಲಿತಾಂಶ!
ತಾಳ್ಮೆಯು ವಿರಳ ಗುಣವಾಗಿರುವ ಒಂದು ಲೋಕದಲ್ಲಿ ನಾವು ಜೀವಿಸುತ್ತೇವೆ. ಅಧಿಕಾಧಿಕ ವಾಹನ ಚಾಲಕರು ಮಿತಿಮೀರಿದ ವೇಗದಲ್ಲಿ ಧಾವಿಸುತ್ತಾರೆ. ಸೀಮಿತ ವೇಗದಲ್ಲಿ ಚಲಿಸುವ ಕಾರುಗಳನ್ನು—ಇತರ ಕಾರುಗಳು ಹತ್ತರಿಸಿ—ತೀರ ಒತ್ತಾಗಿ ಹಿಂಬಾಲಿಸುತ್ತವೆ. ಇನ್ನೂ ಇತರರು ಒಂದೇ ರಸ್ತೆಯ ಒಂದು ವಾಹನ ಪಥದಿಂದ ಇನ್ನೊಂದಕ್ಕೆ ತಮ್ಮ ವಾಹನವನ್ನು ತಿರುಗಿಸಿ ಚಲಾಯಿಸುತ್ತಾರೆ ಯಾಕಂದರೆ ಇನ್ನೊಂದು ವಾಹನದ ಹಿಂದುಳಿಯುವ ತಾಳ್ಮೆ ಅವರಿಗಿಲ್ಲ. ಮನೆಯಲ್ಲಿ ಕುಟುಂಬ ಸದಸ್ಯರು ಕೋಪೋದ್ರೇಕಗಳಿಗೆ ಎಡೆಗೊಟ್ಟು ಹಿಂಸಾತ್ಮಕವಾಗಿ ವರ್ತಿಸ್ಯಾರು. ಕೆಲವು ಕ್ರೈಸ್ತರು ಕೂಡ ತಮ್ಮ ಆತ್ಮಿಕ ಸಹೋದರರ ಕುಂದುಕೊರತೆಗಳ ಅಥವಾ ತಪ್ಪುಗಳ ಕಾರಣದಿಂದಾಗಿ ಅತಿರೇಕ ತಲೆಕೆಡಿಸಿಕೊಳ್ಳಬಹುದು.
ತಾಳ್ಮೆಯು ಅಷ್ಟು ವಿರಳವೇಕೆ? ಅದು ಯಾವಾಗಲೂ ಆ ರೀತಿಯಾಗಿಯೆ ಇತ್ತೊ? ನಮ್ಮ ಸಮಯದಲ್ಲಿ ಸಹನೆಯಿಂದಿರುವುದು ಅಷ್ಟು ಕಷ್ಟವೇಕೆ?
ಅಸಹನೆಯ ಉದಾಹರಣೆಗಳು
ಒಂದು ಕಠಿನವಾದ ನಿರ್ಣಯವನ್ನು ಮಾಡುವ ಮುಂಚೆ ತನ್ನ ಗಂಡನನ್ನು ಸಂಪರ್ಕಿಸಲು ಕಾಯದೆ ಹೋದ ಒಬ್ಬ ಸ್ತ್ರೀಯ ಕುರಿತು ಬೈಬಲು ತಿಳಿಸುತ್ತದೆ. ಅವಳ ಹೆಸರು ಹವ್ವ. ಪ್ರಾಯಶಃ ಆಂಶಿಕವಾಗಿ ಅಸಹನೆಯ ಕಾರಣ, ಅವಳು ಆದಾಮನಿಗಾಗಿ ಕಾಯದೆ, ನಿಷೇಧಿತ ಹಣ್ಣನ್ನು ತಿಂದಳು. (ಆದಿಕಾಂಡ 3:1-6) ಅವಳ ಗಂಡನ ಕುರಿತೇನು? ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಮೊದಲಾಗಿ ತನ್ನ ಸ್ವರ್ಗೀಯ ತಂದೆಯಾದ ಯೆಹೋವನನ್ನು ಸಮೀಪಿಸದೆ, ಹವ್ವಳನ್ನು ಪಾಪದಲ್ಲಿ ಹಿಂಬಾಲಿಸಿದ ಮೂಲಕ ಅವನೂ ಅಸಹನೆಯನ್ನು ಪ್ರದರ್ಶಿಸಿರಬಹುದು. ಅವರ ದುರಾಶೆಯು, ಪ್ರಾಯಶಃ ಅಸಹನೆಯಿಂದ ಜತೆಗೂಡಿ ಪಾಪಕ್ಕೆ ನಡಿಸಿತು, ನಮ್ಮೆಲ್ಲರ ಮೇಲೆ ಪ್ರಾಣಾಂತಕ ಪರಿಣಾಮಗಳನ್ನು ತಂದಿತು. ಅವರಿಂದ ದುರಭಿಮಾನ ಮತ್ತು ಅಸಹನೆಯ ಪಾಪಗಳನ್ನೂ ಒಳಗೊಂಡು, ನಾವು ಪಾಪಗಳನ್ನು ಗೈಯುವ ಪ್ರವೃತ್ತಿಯನ್ನು ಸಹ ಬಾಧ್ಯವಾಗಿ ಹೊಂದಿದೆವು.—ರೋಮಾಪುರ 5:12.
ನಮ್ಮ ಪ್ರಥಮ ಹೆತ್ತವರು ಪಾಪಮಾಡಿದ ಸುಮಾರು 2,500 ವರ್ಷಗಳ ಅನಂತರ, ದೇವರಾದುಕೊಂಡ ಜನರಾದ ಇಸ್ರಾಯೇಲ್ಯರು ನಂಬಿಕೆಯಲ್ಲಿ ಒಂದು ಆಳವಾದ, ಪಟ್ಟುಹಿಡಿದ ಕೊರತೆಯನ್ನು ಹಾಗೂ ತಾಳ್ಮೆಯಲ್ಲಿ ಕೊರತೆಯನ್ನು ತೋರಿಸಿದರು. ಯೆಹೋವನು ಅವರನ್ನು ಆಗಲೆ ಐಗುಪ್ತದ ದಾಸ್ಯದಿಂದ ಅದ್ಭುತಕರವಾಗಿ ಬಿಡಿಸಿದ್ದನಾದರೂ, ಅವರು “ಬೇಗನೆ ಆತನ ಕೆಲಸಗಳನ್ನು ಮರೆತು” ಬಿಟ್ಟರು ಮತ್ತು “ಆತನ ಸಂಕಲ್ಪವನ್ನು ಕಾದಿರದೆ” ಹೋದರು. (ಕೀರ್ತನೆ 106:7-14) ಪದೇ ಪದೇ ಅವರು ಗಂಭೀರವಾದ ಕೆಟ್ಟತನಕ್ಕೆ ಬಿದ್ದರು ಯಾಕಂದರೆ ಅವರು ತಾಳ್ಮೆಯುಳ್ಳವರಾಗಲಿಲ್ಲ. ಅವರು ಒಂದು ಚಿನ್ನದ ಬಸವನನ್ನು ಮಾಡಿ ಅದನ್ನು ಪೂಜಿಸಿದರು; ಅವರಿಗಾಗಿ ಯೆಹೋವನ ಭೌತಿಕ ಒದಗಿಸುವಿಕೆಯಾದ ಮನ್ನದ ಕುರಿತು ಅವರು ಗುಣುಗುಟ್ಟಿದರು; ಮತ್ತು ಅವರಲ್ಲಿ ಅನೇಕರು ದೈವಿಕವಾಗಿ ನೇಮಕಗೊಂಡ ಯೆಹೋವನ ಪ್ರತಿನಿಧಿಯಾದ ಮೋಶೆಯ ವಿರುದ್ಧವಾಗಿಯೂ ದಂಗೆಯೆದ್ದರು. ನಿಜವಾಗಿಯೂ ಅವರ ತಾಳ್ಮೆಯ ಕೊರತೆಯು ಅವರನ್ನು ದುಃಖಕ್ಕೆ ಮತ್ತು ವಿಪತ್ತಿಗೆ ನಡಿಸಿತು.
ಇಸ್ರಾಯೇಲಿನ ಮೊದಲನೆಯ ಮಾನವ ಅರಸನಾದ ಸೌಲನು, ಅವನ ಪುತ್ರರಿಗೆ ಅವನ ರಾಜವಂಶದ ವಾರಸುದಾರರಾಗುವ ಸಂದರ್ಭವನ್ನು ನಷ್ಟಗೊಳಿಸಿದನು. ಯಾಕೆ? ಯಾಕಂದರೆ ಯೆಹೋವನಿಗೆ ಯಾರು ಒಂದು ಯಜ್ಞವನ್ನು ಸಮರ್ಪಿಸಬೇಕಿತ್ತೊ, ಆ ಪ್ರವಾದಿ ಸಮುವೇಲನಿಗಾಗಿ ಕಾಯಲು ಅವನು ತಪ್ಪಿದನು. ಸಮುವೇಲನಿಗಾಗಿ ಕಾಯದೆ ಯಜ್ಞವನ್ನರ್ಪಿಸಲು ಮುಂದುವರಿಯುವಂತೆ ಸೌಲನನ್ನು ಮಾಡಿದ್ದು ಮನುಷ್ಯನ ಭಯ. ಅವನು ಆ ಸಂಸ್ಕಾರವನ್ನು ನಡಿಸಿದ ಸ್ವಲ್ಪದರಲ್ಲೆ ಸಮುವೇಲನು ಬಂದಾಗ ಸೌಲನಿಗೆ ಹೇಗೆನಿಸಿದ್ದರಬೇಕೆಂದು ತುಸು ಊಹಿಸಿರಿ! ಅವನು ಕೆಲವೇ ನಿಮಿಷ ಹೆಚ್ಚು ಕಾದಿದ್ದರೆ ಎಷ್ಟು ಒಳ್ಳೆಯದಿತ್ತು!—1 ಸಮುವೇಲ 13:6-14.
ಹವ್ವಳು ದುಡುಕಿ ಹಣ್ಣನ್ನು ತೆಗೆದು ತಿನ್ನುವ ಬದಲಾಗಿ ಆದಾಮನಿಗಾಗಿ ಕಾದಿದ್ದರೆ ಎಷ್ಟು ಉತ್ತಮವಾಗಿರುತ್ತಿತ್ತು! ಯೆಹೋವನ ಸಲಹೆಗಾಗಿ ಕಾಯಲು ಇಸ್ರಾಯೇಲ್ಯರು ಜ್ಞಾಪಿಸಿಕೊಂಡಿದ್ದರೆ ಅದೆಷ್ಟು ಯುಕ್ತವಾಗಿರುತ್ತಿತ್ತು! ಹೌದು ತಾಳ್ಮೆಯು ಅವರನ್ನು ಮತ್ತು ನಮ್ಮನ್ನು ಬಹಳ ದುಃಖ ಮತ್ತು ಬೇನೆಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡಬಹುದಿತ್ತು.
ಅಸಹನೆಯ ಕಾರಣಗಳು
ಇಂದಿನ ಅಸಹನೆಗೆ ಒಂದು ಮುಖ್ಯ ಕಾರಣವನ್ನು ತಿಳಿಯಲು ಬೈಬಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಸಂತತಿಯು “ನಿಭಾಯಿಸಲು ಕಷ್ಟಕರವಾದ ಕಡೆಯ ಕಾಲಗಳಲ್ಲಿ” (NW) ಜೀವಿಸುತ್ತಿರುವುದಾಗಿ ಎರಡನೆಯ ತಿಮೊಥೆಯ 3 ನೆಯ ಅಧ್ಯಾಯವು ವರ್ಣಿಸುತ್ತದೆ. ಮನುಷ್ಯರು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ . . . ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ . . . ಆಗಿರುವರು” ಎಂದು ಅದು ಹೇಳುತ್ತದೆ. (ವಚನಗಳು 2, 3) ಅಂತಹ ಲೋಭ ಮತ್ತು ಸ್ವಾರ್ಥಪರ ಮನೋಭಾವವು ಅನೇಕ ಜನರ ಹೃದಯ ಮತ್ತು ಮನಸ್ಸುಗಳಲ್ಲಿ ನೆಲೆಸಿದ್ದು, ಎಲ್ಲರಿಗೆ, ನಿಜ ಕ್ರೈಸ್ತರಿಗೆ ಸಹ, ತಾಳ್ಮೆ ತೋರಿಸಲು ಕಷ್ಟಕರವನ್ನಾಗಿ ಮಾಡುತ್ತಿದೆ. ಲೌಕಿಕ ಜನರು ತೀರ ವೇಗದಿಂದ ವಾಹನ ನಡಿಸುವಾಗ ಅಥವಾ ಸಾಲುಗಳಲ್ಲಿ ನಿಂತು ಕಾಯುತ್ತಿರುವವರ ಎದುರಿಗೆ ಹೋಗಿ ನಿಲ್ಲುವಾಗ, ಅಥವಾ ನಮ್ಮನ್ನು ಬಯ್ದು ಅವಮಾನಿಸುವಾಗ ನಮ್ಮ ತಾಳ್ಮೆಯು ಅತಿಯಾಗಿ ಪರಿಶೋಧಿಸಲ್ಪಡಬಲ್ಲದು. ನಾವು ಅವರನ್ನು ಅನುಕರಿಸುವ ಯಾ ಅವರಿಗೆ ವಿರುದ್ಧ ಪ್ರತೀಕಾರ ಸಲ್ಲಿಸುವ ಶೋಧನೆಗೆ ಒಳಗಾದೇವು, ಆ ಮೂಲಕ ಅವರ ಸ್ವಾರ್ಥಪರ ದುರಭಿಮಾನದ ನೀಚಮಟ್ಟಕ್ಕೆ ಬಾಗಿಬಿಟ್ಟೇವು.
ಕೆಲವು ಸಲ ನಾವು ತಾಳ್ಮೆ ತಪ್ಪುವಂತೆ ಮಾಡುವುದು ನಮ್ಮ ಸ್ವಂತ ತಪ್ಪು ತೀರ್ಮಾನಗಳೇ. ದುಡುಕಿಮಾಡುವ ತಪ್ಪು ವಿವೇಚನೆ ಮತ್ತು ತಾಳ್ಮೆರಹಿತ, ಕುಪಿತ ವರ್ತನೆಯ ನಡುವಣ ಸಂಬಂಧವನ್ನು ಜ್ಞಾನಿ ಅರಸ ಸೊಲೊಮೋನನು ಹೇಗೆ ಚಿತ್ರಿಸಿದ್ದಾನೆಂಬುದನ್ನು ಗಮನಿಸಿರಿ: “ಹಮ್ಮುಗಾರನಿಗಿಂತ ತಾಳ್ಮೆಯುಳ್ಳವನು ಉತ್ತಮ. ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.” (ಪ್ರಸಂಗಿ 7:8, 9) ಒಂದು ಸನ್ನಿವೇಶಕ್ಕೆ ಪ್ರತಿಕ್ರಿಯೆ ತೋರಿಸುವ ಮೊದಲು ಅದರ ಕುರಿತ ಪೂರ್ಣ, ನಿಷ್ಕೃಷ್ಟ ಸ್ವರೂಪವನ್ನು ತಿಳಿದುಕೊಳ್ಳಲು ನಾವು ಸಮಯವನ್ನು ತೆಗೆದುಕೊಳ್ಳುವಲ್ಲಿ, ಇತರರ ಕಡೆಗೆ ನಾವು ಹೆಚ್ಚು ತಿಳಿವಳಿಕೆಯುಳ್ಳವರೂ, ಹೆಚ್ಚು ಅನುಕಂಪವುಳ್ಳವರೂ, ಹೆಚ್ಚು ತಾಳ್ಮೆಯುಳ್ಳವರೂ ಆಗಿರುವ ಸಂಭವವಿರುವುದು. ಇನ್ನೊಂದು ಕಡೆ, ಒಂದು ಗರ್ವದ, ಸ್ವಾರ್ಥಮಗ್ನ ಸ್ವಭಾವವು, ಮೋಶೆಯನ್ನು ಗೋಳುಗುಟ್ಟಿಸಿದ ಆ ಗೊಣಗಾಟಿಗಳೂ ಮೊಂಡರೂ ಆದ ಇಸ್ರಾಯೇಲ್ಯರಂತೆ, ನಮ್ಮನ್ನು ಸಣ್ಣ ಮನಸ್ಸಿನವರೂ, ಸಹನೆಯಿಲ್ಲದವರೂ ನಿಷ್ಠುರರೂ ಆಗುವಂತೆ ಮಾಡಬಹುದು.—ಅರಣ್ಯಕಾಂಡ 20:2-5, 10.
ಈ ಲೋಕದ ತಾಳ್ಮೆಯ ನ್ಯೂನತೆಯ ವೃದ್ಧಿಯಾಗುವಿಕೆಗೆ ಇನ್ನೊಂದು ಕಾರಣ, ಯೆಹೋವನಿಂದ ವಿಮುಖಗೊಂಡ ಪರಿಣಾಮವಾಗಿ ಬಂದ ಅದರ ಆಶಾರಹಿತ ಸ್ಥಿತಿಯೆ. ಮನುಷ್ಯನು ಯೆಹೋವನಲ್ಲಿ ನಿರೀಕ್ಷೆಯಿಡುವ ಅಗತ್ಯವನ್ನು ದಾವೀದನು ವ್ಯಕ್ತಪಡಿಸಿದನು: “ನನ್ನ ಮನವೇ ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆಯು ನೆರವೇರುವದು ಆತನಿಂದಲೇ.” (ಕೀರ್ತನೆ 62:5) ಯೆಹೋವನನ್ನು ತಿಳಿಯದೆ ಇರುವ ಅನೇಕರಿಗೆ ಒಂದು ಸೀಮಿತವಾದ, ಆಶಾಶೂನ್ಯ ಹೊರನೋಟವಿರುತ್ತದೆ. ಆದುದರಿಂದ ತಾವು ಗತಿಸಿಹೋಗುವ ಮುಂಚೆ ಅವರು ತಮಗೆ ಸಾಧ್ಯವಿರುವ ಸುಖಾನುಭವದ ಮತ್ತು ಲಾಭದ ಪ್ರತಿಯೊಂದು ತುಣುಕನ್ನು ಬಾಚಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ಆತ್ಮಿಕ ಪಿತನಾದ ಪಿಶಾಚ ಸೈತಾನನಂತೆ, ತಮ್ಮ ಕೃತ್ಯಗಳು ಇತರರನ್ನು ಹೇಗೆ ನೋಯಿಸಿಯಾವು ಎಂಬುದರ ಬಗೆಗೆ ಅವರಿಗೆ ಹೆಚ್ಚಾಗಿ ಪರಿವೆಯಿಲ್ಲ.—ಯೋಹಾನ 8:44; 1 ಯೋಹಾನ 5:19.
ಇಂದು ತಾಳ್ಮೆಯು ಅಷ್ಟು ವಿರಳವಾಗಿರುವುದೇನೂ ಆಶ್ಚರ್ಯವಲ್ಲ. ಈ ದುಷ್ಟ, ಸ್ವಾರ್ಥಪರ ವಿಷಯಗಳ ವ್ಯವಸ್ಥೆ, ಅದರ ದೇವರಾದ ಸೈತಾನ, ಮತ್ತು ನಮ್ಮ ಪಾಪಮಯ ಶರೀರದ ಪಾಪಪೂರ್ಣ ಪ್ರವೃತ್ತಿಗಳು ಪ್ರತಿಯೊಬ್ಬರಿಗೆ, ಪ್ರಾಮಾಣಿಕ ಜನರಿಗೆ ಸಹ, ತಾಳ್ಮೆಯಿಂದಿರುವುದನ್ನು ಕಷ್ಟಕರವಾಗಿ ಮಾಡುತ್ತದೆ. ಆದರೂ ಬೈಬಲು, ವಿಶೇಷವಾಗಿ ದೇವರ ಉದ್ದೇಶಗಳು ಪೂರ್ಣಗೊಳ್ಳುವ ಸಂಬಂಧದಲ್ಲಿ, ‘ತಾಳ್ಮೆಯಿಂದಿರು’ ವಂತೆ, ನಮಗೆ ಪ್ರಬೋಧಿಸುತ್ತದೆ. (ಯಾಕೋಬ 5:8) ತಾಳ್ಮೆಯು ಅಷ್ಟು ಅಮೂಲ್ಯವೇಕೆ? ಅದು ನಮಗೆ ಯಾವ ಪ್ರತಿಫಲಗಳನ್ನು ತರಬಲ್ಲದು?
ತಾಳ್ಮೆ—ಅಷ್ಟೇಕೆ ಅಮೂಲ್ಯ?
“ಬರೇ ನಿಂತು ಕಾಯುವವರೂ ಸೇವೆ ಸಲ್ಲಿಸುತಾರ್ತೆ.” ಈ ಮಾತುಗಳನ್ನು, “ಅವನ ಅಂಧತೆಯ ಮೇಲೆ” (ಇಂಗ್ಲಿಷ್) ಎಂಬ ತನ್ನ ಭಾವಗೀತೆಯಲ್ಲಿ ಆಂಗ್ಲ ಕವಿ ಜಾನ್ ಮಿಲ್ಟನ್ ನುಡಿದದ್ದು ಸುಮಾರು ಮುನ್ನೂರು ವರ್ಷಗಳಿಗಿಂತಲೂ ಹೆಚ್ಚು ಪೂರ್ವದಲ್ಲಿ. ಅವನು ತನ್ನ 40 ಗಳ ವಯಸ್ಸಿನಲ್ಲಿ ಅಂಧನಾಗಿದ್ದ ಕಾರಣ ದೇವರನ್ನು ಪೂರ್ಣವಾಗಿ ಸೇವಿಸಲು ಶಕ್ತನಾಗದ ತನ್ನ ಭಾವನೆಯ ಕುರಿತು ಆಶಾಭಂಗ ಮತ್ತು ವ್ಯಾಕುಲತೆಯನ್ನು ಕಾವ್ಯದ ಆರಂಭದ ಭಾಗದಲ್ಲಿ ವ್ಯಕ್ತಪಡಿಸಿದನು. ಆದರೆ, ಮೇಲೆ ಪ್ರತಿಬಿಂಬಿಸಲ್ಪಟ್ಟ ಕಾವ್ಯದ ಕೊನೆಯ ಸಾಲಿನಲ್ಲಿ ಕಂಡುಬರುವ ಪ್ರಕಾರ, ಸಂಕಟವನ್ನು ಸಹನೆಯಿಂದ ತಾಳಿಕೊಳ್ಳುವ ಮೂಲಕ ಮತ್ತು ದೊರೆಯುವ ಸೇವಾ ಸಂದರ್ಭಗಳನ್ನು ಶಾಂತ ಮನಸ್ಸಿನಿಂದ ಹುಡುಕುವ ಮೂಲಕ, ಒಬ್ಬನು ದೇವರನ್ನು ಆರಾಧಿಸಶಕ್ತನೆಂದು ಅವನು ಗ್ರಹಿಸುವವನಾದನು. ದೇವರ ಮೇಲೆ ತಾಳ್ಮೆಯಿಂದ ಆತುಕೊಳ್ಳುವ ಮಹತ್ವವನ್ನು ಮಿಲ್ಟನ್ ಕಂಡುಕೊಂಡನು.
ನಮ್ಮಲ್ಲಿ ಹೆಚ್ಚಿನವರಿಗೆ ಒಳ್ಳೆಯ ನೇತ್ರ ದೃಷ್ಟಿಯು ಇರಬಹುದು, ಆದರೆ ನಮ್ಮನ್ನು ಕುಪಿತರನ್ನಾಗಿ ಅಥವಾ ವ್ಯಾಕುಲಿತರನ್ನಾಗಿ ಮಾಡಬಲ್ಲ ಸಿಮಿತಿಗಳು ನಮಗೆಲ್ಲರಿಗೆ ಇವೆ. ತಾಳ್ಮೆಯನ್ನು ನಾವು ಗಳಿಸುವುದೂ ಮತ್ತು ಅದನ್ನು ಅಭ್ಯಾಸಿಸುವುದೂ ಹೇಗೆ?
ಪ್ರೋತ್ಸಾಹಕರ ಮಾದರಿಗಳು
ತಾಳ್ಮೆಯ ಹಲವಾರು ಉತ್ತಮ ಮಾದರಿಗಳನ್ನು ಬೈಬಲು ನಮಗೆ ಒದಗಿಸುತ್ತದೆ. ಯೆಹೋವನ ತಾಳ್ಮೆಯು ಕೋಟ್ಯಂತರ ಮಾನವರಿಗೆ ನಿತ್ಯಜೀವವನ್ನು ಶಕ್ಯವನ್ನಾಗಿ ಮಾಡುತ್ತದೆ. (2 ಪೇತ್ರ 3:9, 15) ನಾವು ಆತನ ನೊಗವನ್ನು ತೆಗೆದುಕೊಂಡು ‘[ನಮ್ಮ] ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳು’ ವಂತೆ ಯೇಸು ಕೊಟ್ಟ ದಯೆಯುಳ್ಳ ಆಮಂತ್ರಣದಲ್ಲಿ ಆತನು, ತನ್ನ ತಂದೆಯ ಆಶ್ಚರ್ಯಕರ ತಾಳ್ಮೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಾನೆ. (ಮತ್ತಾಯ 11:28-30) ಯೆಹೋವನ ಮತ್ತು ಯೇಸುವಿನ ಮಾದರಿಗಳ ಮನನ ಮಾಡುವಿಕೆಯು ನಮಗೆ ಹೆಚ್ಚು ತಾಳ್ಮೆಯುಳ್ಳವರಾಗುವಂತೆ ಸಹಾಯ ಮಾಡಬಲ್ಲದು.
ಕೋಪಗೊಂಡಿರಲು, ನಿಷ್ಠುರನಾಗಿರಲು ಅಥವಾ ಸೇಡುತೀರಿಸಲು ಹೇರಳ ಕಾರಣವಿರುವಂತೆ ಕಂಡುಬಂದ ಒಬ್ಬಾತನು ಯಾಕೋಬನ ಮಗನಾದ ಯೋಸೇಫನು. ಅವನ ಸಹೋದರರು ಅವನನ್ನು ಅತ್ಯಂತ ಅನ್ಯಾಯವಾಗಿ ಉಪಚರಿಸಿದ್ದರು, ಅವನನ್ನು ಕೊಂದುಹಾಕಲು ಸಂಚುಹೂಡಿ ಕೊನೆಗೆ ದಾಸ್ಯಕ್ಕೆ ಮಾರಿಬಿಟ್ಟರು. ಐಗುಪ್ತದಲ್ಲಿ ಫೋಟೀಫರನಿಗೆ ತನ್ನ ಶುದ್ಧಾಂತಃಕರಣದ, ನಿಷ್ಠಾವಂತ ಸೇವೆಯನ್ನಿತ್ತಾಗ್ಯೂ, ಯೋಸೇಫನು ಅನುಚಿತವಾಗಿ ದೂರುಹೊರಿಸಲ್ಪಟ್ಟು ಸೆರೆಮನೆಗೆ ಹಾಕಲ್ಪಟ್ಟನು. ಅವನು ತನ್ನೆಲ್ಲಾ ಸಂಕಟಗಳನ್ನು ಸಹನೆಯಿಂದ ತಾಳಿಕೊಂಡನು, ಅಂತಹ ಪರೀಕ್ಷೆಗಳು ಯೆಹೋವನ ಉದ್ದೇಶಗಳನ್ನು ನೆರವೇರಿಸಲು ನೆರವಾಗಬಲ್ಲವೆಂದು ಪ್ರಾಯಶಃ ಅವನು ತಿಳಿದುಕೊಂಡನು. (ಆದಿಕಾಂಡ 45:5) ದೈನ್ಯ ಮತ್ತು ತಿಳಿವಳಿಕೆಯೊಂದಿಗೆ ಅವನು ಯೆಹೋವನಲ್ಲಿ ನಂಬಿಕೆ ಮತ್ತು ನಿರೀಕ್ಷೆಯನ್ನು ಬೆಳೆಸಿಕೊಂಡ ಕಾರಣ, ಅತ್ಯಂತ ಕಷ್ಟಕರ ಪರಿಸ್ಥಿತಿಗಳ ಕೆಳಗೆ ಕೂಡ ಯೋಸೇಫನಿಗೆ ತಾಳ್ಮೆಯನ್ನು ತೋರಿಸಲು ಸಾಧ್ಯವಾಯಿತು.
ಇನ್ನೊಂದು ಪ್ರಾಮುಖ್ಯ ಸಹಾಯವು ಯೆಹೋವನ ಪವಿತ್ರ ಆತ್ಮ. ಉದಾಹರಣೆಗಾಗಿ, ನಾವು ಮುಂಗೋಪಿಗಳೂ ಚುಚ್ಚು ಮಾತಿನವರೂ ಆಗಿದ್ದಲ್ಲಿ, ಪವಿತ್ರಾತ್ಮದ ಸಹಾಯಕ್ಕಾಗಿ ಅದರ ಫಲಗಳನ್ನು ಬೆಳೆಸಿಕೊಳ್ಳಲು ಶಕ್ತರಾಗುವಂತೆ ನಾವು ಪ್ರಾರ್ಥನೆ ಮಾಡಬಲ್ಲೆವು. ದೀರ್ಘಶಾಂತಿ ಮತ್ತು ದಮೆಯಂತಹ ಈ ಫಲಗಳಲ್ಲಿ ಪ್ರತಿಯೊಂದನ್ನು ಮನನ ಮಾಡುವ ಮೂಲಕ, ಅವು ಹೇಗೆ ತಾಳ್ಮೆಗೆ ಆಳವಾಗಿ ಸಂಬಂಧಿಸಿವೆಯೆಂದು ಕಾಣಲು ನಮಗೆ ಸಹಾಯವಾಗುವುದು.—ಗಲಾತ್ಯ 5:22, 23.
ತಾಳ್ಮೆಯ ಪ್ರತಿಫಲಗಳು
ತಾಳ್ಮೆಯಿಂದಿರುವುದು ನಮಗೆ ಅನೇಕ ಪ್ರಯೋಜನಗಳನ್ನು ತರಬಲ್ಲದು. ಅದು ನಮ್ಮ ಶೀಲವನ್ನು ಬಲಪಡಿಸಿ, ಅವಿಚಾರದ, ಬುದ್ಧಿಗೇಡಿ ಕೃತ್ಯಗಳನ್ನು ಗೈಯುವುದರಿಂದ ನಮ್ಮನ್ನು ಕಾಪಾಡುತ್ತದೆ. ಕಷ್ಟದ ಯಾ ಶ್ರಮಭರಿತ ಪರಿಸ್ಥಿತಿಗಳಿಗೆ ನಾವು ತೀರ ದುಡುಕಿ ಪ್ರತಿಕ್ರಿಯೆ ತೋರಿಸುವುದರಿಂದಾಗಿ ಹಾನಿಕರ ತಪ್ಪುಗಳನ್ನು ಮಾಡದವರು ನಮ್ಮಲ್ಲಿ ಯಾರಿದ್ದಾರೆ? ಒಂದು ನಿರ್ದಯ ನುಡಿಯನ್ನು ನಾವು ಆಡಿರಬಹುದು ಅಥವಾ ಒರಟಾದ ವರ್ತನೆ ತೋರಿಸಿರಬಹುದು. ನಮ್ಮ ಪ್ರೀತಿಯ ಪ್ರಿಯ ವ್ಯಕ್ತಿಯೊಂದಿಗೆ ಒಂದು ಅಲ್ಪ ವಿಷಯವನ್ನು, ಎರಡೂ ಪಕ್ಷಗಳು ಮಣಿಯಲು ಜಗ್ಗದ ಒಂದು ದೊಡ್ಡ ಜಗಳವನ್ನಾಗಿ ಮಾಡಲು ನಾವು ಬಿಟ್ಟುಕೊಟ್ಟಿರಬಹುದು. ಬಹಳಷ್ಟು ಕೋಪ, ಆಶಾಭಂಗ, ಮತ್ತು ಬೇನೆಯ ಬಳಿಕ, ‘ನಾನು ತುಸು ಹೆಚ್ಚು ತಾಳ್ಮೆಯನ್ನು ತೋರಿಸಿದ್ದರೆ ಎಷ್ಟು ಒಳ್ಳೇದಿತ್ತು’ ಎಂದು ನಾವು ವಿಷಾದದಿಂದ ಆಲೋಚಿಸಿರಲೂಬಹುದು. ತಾಳ್ಮೆಯ ಪ್ರಯೋಗವು ನಮ್ಮನ್ನು ಎಲ್ಲ ರೀತಿಯ ವ್ಯಥೆಗಳಿಂದ ಕಾಪಾಡಬಲ್ಲದು. ಆ ನಿಜತ್ವವೊಂದೆ ನಮ್ಮ ಜೀವನಗಳಿಗೆ ಎಷ್ಟೊ ಹೆಚ್ಚು ಶಾಂತಿ, ದೃಢತೆ ಮತ್ತು ಸಂತೃಪ್ತಿಯನ್ನು ಕೊಡುತ್ತದೆ.—ಫಿಲಿಪ್ಪಿ 4:5-7.
ಒಂದು ನೆಮ್ಮದಿಯ, ಭರವಸಯೋಗ್ಯ ಹೃದಯವನ್ನು ಹೊಂದಲು ಸಹ ತಾಳ್ಮೆಯಿಂದಿರುವುದು ನಮಗೆ ನೆರವಾಗಬಲ್ಲದು. ನಾವು ಉತ್ತಮವಾದ ಶಾರೀರಿಕ, ಮಾನಸಿಕ, ಮತ್ತು ಆತ್ಮಿಕ ಆರೋಗ್ಯವನ್ನು ಅನುಭವಿಸುವುದಕ್ಕೆ ಇದು ನಮ್ಮನ್ನು ನಡಿಸಬಲ್ಲದು. (ಜ್ಞಾನೋಕ್ತಿ 14:30) ಕೋಪೋದ್ರೇಕವು ಅಂಕೆತಪ್ಪಿದಲ್ಲಿ ತೀವ್ರ ಮಾನಸಿಕ ಮತ್ತು ಶಾರೀರಿಕ ಅಸ್ವಸ್ಥತೆ ಮತ್ತು ಮರಣವು ಉಂಟಾಗಬಲ್ಲದು. ಇನ್ನೊಂದು ಕಡೆ, ತಾಳ್ಮೆಯಿಂದಿರುವ ಮೂಲಕ ಇತರರ ಕಡೆಗೆ, ವಿಶೇಷವಾಗಿ ನಮ್ಮ ಆತ್ಮಿಕ ಸಹೋದರರ ಮತ್ತು ಕುಟುಂಬ ಸದಸ್ಯರ ಕಡೆಗೆ ಒಂದು ಹೆಚ್ಚು ಸಕಾರಾತ್ಮಕ ಮನೋಭಾವವನ್ನು ನಾವು ಗಳಿಸಬಲ್ಲೆವು. ಆಗ ನಾವು ಸಿಡುಕಿನವರೂ ಟೀಕಿಸುವವರೂ ಆಗಿರುವ ಬದಲಿಗೆ ಪರಿಗಣನೆಯುಳ್ಳವರೂ ನೆರವಾಗುವವರೂ ಆಗಿರಲು ಹೆಚ್ಚು ಒಲವು ಉಳ್ಳವರಾಗಿರುವೆವು. ಪ್ರತಿಯಾಗಿ, ಇತರರು ನಮ್ಮೊಂದಿಗೆ ಸಹವಾಸಿಸುವುದನ್ನು ಹೆಚ್ಚು ಸುಲಭವೂ ಹೆಚ್ಚು ಹಿತಕರವೂ ಆಗಿ ಕಾಣುವರು.
ಕ್ರೈಸ್ತ ಸಭೆಯಲ್ಲಿ ಹಿರಿಯರು ತಾಳ್ಮೆಯನ್ನು ವಿಶೇಷವಾಗಿ ಅಭ್ಯಾಸಿಸುವ ಅಗತ್ಯವಿದೆ. ಕೆಲವೊಮ್ಮೆ, ಜೊತೆ ಕ್ರೈಸ್ತರು ಗುರುತರವಾದ ಸಮಸ್ಯೆಗಳೊಂದಿಗೆ ಅವರ ಬಳಿಗೆ ಬರುತ್ತಾರೆ. ಹಿರಿಯರು ಸ್ವತಃ ಬಳಲಿದವರೂ ಮತ್ತು ವೈಯಕ್ತಿಕ ಅಥವಾ ಕುಟುಂಬ ಸಮಸ್ಯೆಗಳಿಂದ ಅಪಕರ್ಷಿತರೂ ಆಗಿರುವಾಗ, ಈ ಪ್ರಾಮಾಣಿಕ ವ್ಯಕ್ತಿಗಳು ಗಲಿಬಿಲಿಗೊಂಡವರೂ ಮನಕಲಕಿದವರೂ ಖಿನ್ನರೂ ಆಗಿರಬಹುದು. ಆದರೂ, ಅಂತಹ ಪರಿಶೋಧಕ ಪರಿಸ್ಥಿತಿಗಳಲ್ಲಿ ಹಿರಿಯರು ತಾಳ್ಮೆಯನ್ನು ಬಳಸುವುದು ಎಷ್ಟು ಪ್ರಾಮುಖ್ಯ! ಈ ರೀತಿಯಲ್ಲಿ ಅವರು ‘ಸೌಮ್ಯತೆಯಿಂದ’ ಬೋಧಿಸುವವರೂ ‘ಹಿಂಡನ್ನು ಕೋಮಲವಾಗಿ ಪರಿಪಾಲಿಸುವವರೂ’ ಆಗಿರಬಲ್ಲರು. (2 ತಿಮೊಥೆಯ 2:24, 25; ಅ. ಕೃತ್ಯಗಳು 20:28, 29) ಅಮೂಲ್ಯ ಜೀವಗಳು ಗಂಡಾಂತರದಲ್ಲಿವೆ. ದಯಾಪರರೂ, ಪ್ರೀತಿಯುಳ್ಳವರೂ, ಸಹನೆಯುಳ್ಳವರೂ ಆಗಿರುವ ಹಿರಿಯರು ಸಭೆಗೆ ಎಂತಹ ಒಂದು ಆಶೀರ್ವಾದ!
ಕುಟುಂಬ ತಲೆಗಳು ತಮ್ಮ ಮನೆವಾರ್ತೆಗಳನ್ನು ತಾಳ್ಮೆ, ತಿಳಿವಳಿಕೆ, ಮತ್ತು ದಯೆಯಿಂದ ಸತ್ಕರಿಸಬೇಕು. ಕುಟುಂಬದ ಸದಸ್ಯರೆಲ್ಲರೂ ಇದೇ ರೀತಿಯ ಗುಣಗಳನ್ನು ಅಭ್ಯಾಸಿಸುವಂತೆ ಸಹ ಅವರು ಅಪೇಕ್ಷಿಸಬೇಕು ಮತ್ತು ಉತ್ತೇಜಿಸಬೇಕು. (ಮತ್ತಾಯ 7:12) ಇದು ಮನೆಯಲ್ಲಿ ಪ್ರೀತಿ ಮತ್ತು ಸಮಾಧಾನಕ್ಕೆ ಬಹಳವಾಗಿ ನೆರವಾಗುವುದು.
ಕ್ಷೇತ್ರ ಶುಶ್ರೂಷೆಯನ್ನು ನಡಿಸುವಾಗ ತಾಳ್ಮೆಯನ್ನು ಅಭ್ಯಾಸಿಸುವುದು ಕ್ರೈಸ್ತ ಶುಶ್ರೂಷಕರಿಗೆ ಈ ಸೇವೆಯನ್ನು ಅಧಿಕ ಪೂರ್ಣವಾಗಿ ಆನಂದಿಸುವಂತೆ ಸಹಾಯ ಮಾಡುವುದು. ಎದುರಾಗುವ ಯಾವುದೆ ನಿರಾಸಕ್ತಿಗಳನ್ನು ಮತ್ತು ವಿರೋಧವನ್ನು ತಾಳಿಕೊಳ್ಳಲು ಅವರು ಹೆಚ್ಚು ಶಕ್ತರಾಗಿರುವರು. ಕೋಪಗೊಂಡ ಮನೆಯವರೊಂದಿಗೆ ವಾದಮಾಡುವ ಬದಲಾಗಿ, ತಾಳ್ಮೆಯುಳ್ಳ ಶುಶ್ರೂಷಕರು ಮೃದು ಉತ್ತರವನ್ನು ಕೊಡಶಕ್ತರಾಗುವರು, ಇಲ್ಲವೆ ಮೌನವಾಗಿ ಬಿಟ್ಟುಹೋಗಿ, ಶಾಂತಿ ಮತ್ತು ಸಂತೋಷವನ್ನು ಉಳಿಸಿಕೊಳ್ಳುವರು. (ಮತ್ತಾಯ 10:12, 13) ಅಷ್ಟಲ್ಲದೆ, ಕ್ರೈಸ್ತರು ಪ್ರತಿಯೊಬ್ಬರನ್ನು ತಾಳ್ಮೆ ಮತ್ತು ದಯೆಯಿಂದ ಉಪಚರಿಸುವಾಗ, ಕುರಿಸದೃಶರು ರಾಜ್ಯ ಸಂದೇಶಕ್ಕೆ ಆಕರ್ಷಿಸಲ್ಪಡುವರು. ದೀನರಾದ ಲಕ್ಷಾಂತರ ಸತ್ಯಾನ್ವೇಷಕರು ಪ್ರತಿ ವರ್ಷ ಯೆಹೋವನ ಪ್ರೀತಿಯುಳ್ಳ ಸಭೆಗೆ ಹಿಂಡು ಹಿಂಡಾಗಿ ಬರುತ್ತಿರುವಾಗ, ನಮ್ಮ ತಾಳ್ಮೆಯ ಪ್ರಯತ್ನಗಳನ್ನು ಯೆಹೋವನು ಜಗದ್ವ್ಯಾಪಕ ಪ್ರಮಾಣದಲ್ಲಿ ಆಶೀರ್ವದಿಸಿದ್ದಾನೆ.
ನಿಜವಾಗಿಯೂ ತಾಳ್ಮೆಯನ್ನು ಅಭ್ಯಾಸಿಸುವುದು ಉತ್ತಮ ಪ್ರತಿಫಲಗಳನ್ನು ನಮಗೆ ಬರಮಾಡುವುದು. ದುಡುಕಿ ಮಾಡುವ ಕೃತ್ಯಗಳಿಂದ ಅಥವಾ ನಮ್ಮ ನಾಲಗೆಯನ್ನು ತೀರ ಸಡಿಲುಬಿಡುವ ಮೂಲಕ ಉಂಟಾಗುವ ಅನೇಕ ಅಪಘಾತಗಳನ್ನು ಮತ್ತು ಸಮಸ್ಯೆಗಳನ್ನು ನಾವು ವರ್ಜಿಸುವೆವು. ನಾವು ಹೆಚ್ಚು ಸಂತೋಷಿತರು, ಹೆಚ್ಚು ಶಾಂತರು, ಮತ್ತು ಪ್ರಾಯಶಃ ಹೆಚ್ಚು ಆರೋಗ್ಯವಂತರು ಆಗಿರುವೆವು. ನಮ್ಮ ಶುಶ್ರೂಷೆಯಲ್ಲಿ, ನಮ್ಮ ಸಭೆಯಲ್ಲಿ, ಮತ್ತು ಮನೆಯಲ್ಲಿ ಹೆಚ್ಚಿನ ಸಂತೋಷ ಮತ್ತು ಸಮಾಧಾನವನ್ನು ಅನುಭವಿಸುವೆವು. ಮತ್ತು ಅತಿ ಪ್ರಾಮುಖ್ಯವಾಗಿ, ದೇವರೊಂದಿಗೆ ಒಂದು ಹೆಚ್ಚು ಹತ್ತಿರದ ಸಂಬಂಧದಲ್ಲಿ ಆನಂದಿಸುವೆವು. ಆದುದರಿಂದ ಯೆಹೋವನನ್ನು ಕಾದುಕೊಂಡಿರ್ರಿ. ತಾಳ್ಮೆಯನ್ನು ಅಭ್ಯಾಸಿಸಿರಿ!
[ಅಧ್ಯಯನ ಪ್ರಶ್ನೆಗಳು]
a ಹೆಸರು ಬದಲಾಯಿಸಲ್ಪಟ್ಟಿದೆ
[ಪುಟ 10 ರಲ್ಲಿರುವ ಚಿತ್ರಗಳು]
ದಿನನಿತ್ಯದ ಜೀವನದಲ್ಲಿ ನೀವೆಷ್ಟು ತಾಳ್ಮೆಯಿಂದಿದ್ದೀರಿ?