ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 3 ಪು. 89-ಪು. 91 ಪ್ಯಾ. 5
  • ಸರಿಯಾದ ಉಚ್ಚಾರಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸರಿಯಾದ ಉಚ್ಚಾರಣೆ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ದೇವರ ನಾಮದ ಉಚ್ಚಾರವು ಅನಿಶ್ಚಿತವಾಗಿರುವಾಗ ಅದನ್ನೇಕೆ ಬಳಸಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • “ಯೆಹೋವ” ಅಥವಾ “ಯಾಹ್ವೆ”?
    ಕಾವಲಿನಬುರುಜು—1999
  • 1996ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ—ಭಾಗ 3
    1996 ನಮ್ಮ ರಾಜ್ಯದ ಸೇವೆ
  • “ಯೆಹೋವ ಯಾರು?”
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 3 ಪು. 89-ಪು. 91 ಪ್ಯಾ. 5

ಅಧ್ಯಾಯ 3

ಸರಿಯಾದ ಉಚ್ಚಾರಣೆ

ನೀವೇನು ಮಾಡುವ ಅಗತ್ಯವಿದೆ?

ಒಂದೊಂದು ಪದವನ್ನೂ ಸರಿಯಾಗಿ ಹೇಳಿರಿ. ಇದರಲ್ಲಿ (1) ಪದಗಳನ್ನು ಉಚ್ಚರಿಸಲು ಸರಿಯಾದ ಧ್ವನಿಗಳನ್ನು ಉಪಯೋಗಿಸುವುದು, (2) ಸರಿಯಾದ ಉಚ್ಚಾರಾಂಶವನ್ನು(ಗಳನ್ನು) ಒತ್ತಿಹೇಳುವುದು, ಮತ್ತು (3) ಅನೇಕ ಭಾಷೆಗಳಲ್ಲಿ, ಉಚ್ಚಾರಣಾಚಿಹ್ನೆಗಳಿಗೆ ಸರಿಯಾದ ಗಮನವನ್ನು ಕೊಡುವುದು ಸೇರಿದೆ.

ಇದು ಪ್ರಾಮುಖ್ಯವೇಕೆ?

ಸರಿಯಾದ ಉಚ್ಚಾರಣೆಯು ನಾವು ಸಾರುವ ಸಂದೇಶಕ್ಕೆ ಘನತೆಯನ್ನು ಕೊಡುತ್ತದೆ. ಅದು, ನಮಗೆ ಕಿವಿಗೊಡುವಂಥ ವ್ಯಕ್ತಿಯ ಗಮನವು ಉಚ್ಚಾರಣೆಯಲ್ಲಿನ ತಪ್ಪುಗಳ ಕಡೆಗಲ್ಲ, ಬದಲಾಗಿ ನಾವು ಸಾರುವ ಸಂದೇಶದ ಕಡೆಗೆ ಕೇಂದ್ರೀಕರಿಸುವಂತೆ ಮಾಡುತ್ತದೆ.

ಎಲ್ಲ ಕ್ರೈಸ್ತರು ಅನೇಕ ವರುಷಗಳ ಐಹಿಕ ವಿದ್ಯೆಯನ್ನು ಪಡೆದಿರುವುದಿಲ್ಲ. ಅಪೊಸ್ತಲರಾದ ಪೇತ್ರ ಯೋಹಾನರನ್ನು ಸಹ “ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು” ವರ್ಣಿಸಲಾಯಿತು. (ಅ. ಕೃ. 4:13) ವಿಷಯವು ಏನೇ ಇರಲಿ, ಪದಗಳನ್ನು ತಪ್ಪಾದ ರೀತಿಯಲ್ಲಿ ಉಚ್ಚರಿಸುವ ಮೂಲಕ ಬೈಬಲ್‌ ಸತ್ಯದ ಕುರಿತಾದ ನಿಮ್ಮ ನಿರೂಪಣೆಗೆ ಕುಂದು ತರುವುದರಿಂದ ದೂರವಿರುವುದು ಪ್ರಾಮುಖ್ಯವಾಗಿದೆ.

ಪರಿಗಣಿಸತಕ್ಕ ವಿಷಯಗಳು. ಉಚ್ಚಾರಣೆಯ ಕುರಿತಾದ ನಿಯಮಗಳ ಒಂದೇ ಪಟ್ಟಿಯು ಎಲ್ಲ ಭಾಷೆಗಳಿಗೆ ಅನ್ವಯಿಸುವುದಿಲ್ಲ. ಅನೇಕ ಭಾಷೆಗಳು ಅಕ್ಷರಮಾಲೆಯ ಅಕ್ಷರಗಳಿಗನುಸಾರ ಬರೆಯಲ್ಪಡುತ್ತವೆ. ದ್ರಾವಿಡ ಭಾಷೆಯ ಅಕ್ಷರಮಾಲೆಯಲ್ಲದೆ—ಕನ್ನಡದಲ್ಲಿ ಈ ಅಕ್ಷರಮಾಲೆ ಉಪಯೋಗಿಸಲ್ಪಡುತ್ತದೆ—ಲ್ಯಾಟಿನ್‌, ಆ್ಯರಬಿಕ್‌, ಗ್ರೀಕ್‌, ಮತ್ತು ಹೀಬ್ರುಗಳಂಥ ಅಕ್ಷರಮಾಲೆಗಳಿವೆ. ಚೈನೀಸ್‌ ಬರವಣಿಗೆಯು, ಅಕ್ಷರಮಾಲೆಯ ಬದಲಿಗೆ ಅನೇಕ ಮೂಲಪದಗಳನ್ನು ಒಳಗೊಂಡಿರುವ ವಿಶೇಷ ಅಕ್ಷರ ಸಂಕೇತಗಳನ್ನು ಉಪಯೋಗಿಸುತ್ತದೆ. ಈ ಅಕ್ಷರ ಸಂಕೇತಗಳು ಸಾಮಾನ್ಯವಾಗಿ ಒಂದು ಪದವನ್ನು ಅಥವಾ ಪದದ ಒಂದು ಭಾಗವನ್ನು ಸೂಚಿಸುತ್ತವೆ. ಜಪಾನೀ ಮತ್ತು ಕೊರಿಯ ಭಾಷಾ ಲಿಪಿಗಳು ಚೈನೀಸ್‌ ಭಾಷೆಯ ಅಕ್ಷರಗಳನ್ನು ಉಪಯೋಗಿಸುತ್ತವಾದರೂ, ಈ ವಿಶೇಷ ಅಕ್ಷರ ಸಂಕೇತಗಳು ತೀರ ವಿಭಿನ್ನವಾದ ಧ್ವನಿಗಳನ್ನು ಪ್ರತಿನಿಧಿಸಲು ಉಪಯೋಗಿಸಲ್ಪಡಬಹುದು ಮಾತ್ರವಲ್ಲ, ಅವು ಒಂದೇ ಅರ್ಥವನ್ನು ಕೊಡದೆಯೂ ಇರಬಹುದು.

ಅಕ್ಷರಮಾಲೆಯುಳ್ಳ ಭಾಷೆಗಳಲ್ಲಿ, ಸರಿಯಾದ ಉಚ್ಚಾರಣೆಯು ಪ್ರತಿಯೊಂದು ಅಕ್ಷರಕ್ಕೆ ಅಥವಾ ಅಕ್ಷರಗಳ ಸಂಯೋಜನೆಗೆ ಸರಿಯಾದ ಧ್ವನಿಯನ್ನು ಉಪಯೋಗಿಸುವುದನ್ನು ಅಗತ್ಯಪಡಿಸುತ್ತದೆ. ಇಂತಹ ಭಾಷೆಯು, ಗ್ರೀಕ್‌, ಸ್ಪ್ಯಾನಿಷ್‌ ಮತ್ತು ಸೂಲು ಭಾಷೆಗಳಂತೆ ಸಮಂಜಸವಾದ ನಿಯಮಗಳನ್ನು ಅನುಸರಿಸುವಲ್ಲಿ, ಸೂಕ್ತವಾದ ಉಚ್ಚಾರಣೆಯು ಅಷ್ಟೇನೂ ಕಷ್ಟಕರವಾಗಿರುವುದಿಲ್ಲ. ಆದರೂ ಒಂದು ಭಾಷೆಯ ಮೇಲೆ ಬರುವ ವಿದೇಶೀ ಪ್ರಭಾವಗಳು, ಆ ಪದಗಳ ಮೂಲವನ್ನು ಪ್ರತಿಬಿಂಬಿಸುವ ಉಚ್ಚಾರಣೆಗಳಲ್ಲಿ ಪರಿಣಮಿಸಬಹುದು. ಇದರ ಪರಿಣಾಮವಾಗಿ, ಒಂದು ನಿರ್ದಿಷ್ಟ ಅಕ್ಷರವನ್ನು ಅಥವಾ ಅಕ್ಷರಗಳ ಗುಂಪನ್ನು ಒಂದಕ್ಕಿಂತ ಹೆಚ್ಚು ರೀತಿಗಳಲ್ಲಿಯೂ ಉಚ್ಚರಿಸಸಾಧ್ಯವಾಗಬಹುದು, ಇಲ್ಲವೆ ಕೆಲವು ಬಾರಿ ಅವು ಉಚ್ಚರಿಸಲ್ಪಡದೆಯೂ ಹೋಗಬಹುದು. ಇಂತಹ ವಿನಾಯಿತಿಗಳನ್ನು ನೀವು ಬಾಯಿಪಾಠ ಮಾಡಿಕೊಳ್ಳಬೇಕಾಗಬಹುದು ಮತ್ತು ಆ ಬಳಿಕ ನೀವು ಮಾತಾಡುವಾಗಲೆಲ್ಲ ಅವುಗಳನ್ನು ಅನೇಕಾವರ್ತಿ ಉಪಯೋಗಿಸಬೇಕಾಗಬಹುದು. ಚೈನೀಸ್‌ ಭಾಷೆಯಲ್ಲಿ, ಸರಿಯಾದ ಉಚ್ಚಾರಣೆಯು ಸಾವಿರಾರು ಅಕ್ಷರ ಸಂಕೇತಗಳನ್ನು ಬಾಯಿಪಾಠ ಮಾಡುವುದನ್ನು ಅಗತ್ಯಪಡಿಸುತ್ತದೆ. ಕೆಲವು ಭಾಷೆಗಳಲ್ಲಿ ಸ್ವರದಲ್ಲಿ ಬದಲಾವಣೆಯಾದಾಗ ಪದದ ಅರ್ಥವೂ ಬದಲಾಗುತ್ತದೆ. ಭಾಷೆಯ ಈ ಅಂಶಕ್ಕೆ ಸಾಕಷ್ಟು ಗಮನಕೊಡಲು ತಪ್ಪಿಹೋಗುವುದು, ತಪ್ಪಾದ ವಿಚಾರಗಳನ್ನು ನಾವು ತಿಳಿಯಪಡಿಸುವಂತೆ ಮಾಡಬಲ್ಲದು.

ಒಂದು ಭಾಷೆಯ ಪದಗಳು ಉಚ್ಚಾರಾಂಶಗಳಿಂದ ನಿರ್ಮಿತವಾಗಿರುವಲ್ಲಿ, ಸರಿಯಾದ ಉಚ್ಚಾರಾಂಶದ ಮೇಲೆ ಮುಖ್ಯ ಒತ್ತನ್ನು ಹಾಕುವುದು ಪ್ರಾಮುಖ್ಯವಾಗಿದೆ. ಇಂತಹ ರಚನೆಯನ್ನು ಉಪಯೋಗಿಸುವ ಅನೇಕ ಭಾಷೆಗಳಲ್ಲಿ, ಮೌಖಿಕ ಒತ್ತಿನ ಹೆಚ್ಚುಕಡಿಮೆ ಸಾಮಾನ್ಯವಾದ ನಮೂನೆಯಿದೆ. ಈ ನಮೂನೆಗೆ ವಿನಾಯಿತಿಗಳಿರುವಲ್ಲಿ, ಒತ್ತನ್ನು ಸೂಚಿಸುವ ಚಿಹ್ನೆಯು ಲಿಖಿತ ಪದದ ಜೊತೆಯಲ್ಲಿ ಬರೆಯಲ್ಪಟ್ಟಿರಬಹುದು. ಇದು ಸರಿಯಾದ ಉಚ್ಚಾರಣೆಯನ್ನು ಬಹಳಷ್ಟು ಸುಲಭಗೊಳಿಸಲು ಸಹಾಯಮಾಡುತ್ತದೆ. ಆದರೆ, ಆ ನಮೂನೆಯು ಹೊಂದಿಕೆಯಾಗಿರದೆ ಇರುವಲ್ಲಿ ಸಮಸ್ಯೆಯು ಹೆಚ್ಚು ಕಷ್ಟಕರವಾಗಿರುತ್ತದೆ. ಇದನ್ನು ಯಶಸ್ವಿದಾಯಕವಾಗಿ ನಿಭಾಯಿಸಬೇಕಾದರೆ ಹೆಚ್ಚು ಸಂಗತಿಗಳನ್ನು ಬಾಯಿಪಾಠ ಮಾಡಿಕೊಳ್ಳುವ ಅಗತ್ಯವಿರುತ್ತದೆ.

ಕೆಲವು ಭಾಷೆಗಳಲ್ಲಿ, ಉಚ್ಚಾರಣಾಚಿಹ್ನೆಗಳು ಪರಿಗಣಿಸಲ್ಪಡಬೇಕಾದ ಪ್ರಮುಖ ಅಂಶವಾಗಿವೆ. ಇವುಗಳಲ್ಲಿ ಕೆಲವು ಅಕ್ಷರಗಳ ಮೇಲೆ ಮತ್ತು ಕೆಳಗೆ ಕೊಡಲ್ಪಟ್ಟಿರುವ è, é, ô, ñ, ō, ŭ, č, ö, ç ಇಂತಹ ಚಿಹ್ನೆಗಳು ಸೇರಿಕೊಂಡಿವೆ. ಈ ಉಚ್ಚಾರಣಾಚಿಹ್ನೆಗಳು ಬರೆಯಲ್ಪಟ್ಟಿರಬಹುದು, ಇಲ್ಲವೆ ಆ ಪದವು ಕಂಡುಬರುವ ಪೂರ್ವಾಪರದ ಆಧಾರದ ಮೇಲೆ ಅವುಗಳನ್ನು ಓದುಗನೇ ಒದಗಿಸುವಂತೆ ನಿರೀಕ್ಷಿಸಲಾಗಬಹುದು. ಓದುಗನೇ ಅವುಗಳನ್ನು ಒದಗಿಸಬೇಕಾಗಿರುವ ಸಂದರ್ಭದಲ್ಲಿ, ಅವನು ಸಾರ್ವಜನಿಕವಾಗಿ ಓದುವ ನೇಮಕವನ್ನು ಪಡೆಯುವಾಗ, ಜಾಗರೂಕತೆಯ ತಯಾರಿಯನ್ನು ಮಾಡಬೇಕಾಗಿರುವುದು ಸಂಭವನೀಯ.

ಉಚ್ಚಾರಣೆಯ ಸಂಬಂಧದಲ್ಲಿ, ಕೆಲವು ಅಡ್ಡಿತಡೆಗಳನ್ನು ತ್ಯಜಿಸುವ ಅಗತ್ಯವಿದೆ. ವಿಪರೀತವಾಗಿ ನಿಷ್ಕೃಷ್ಟವಾದ ಉಚ್ಚಾರಣೆಯು, ಕೃತಕತೆ ಮತ್ತು ದೊಡ್ಡಸ್ತಿಕೆಯನ್ನು ತೋರಿಸುತ್ತಿರುವ ಅಭಿಪ್ರಾಯವನ್ನೂ ಕೊಡಬಲ್ಲದು. ಈಗ ಸಾಮಾನ್ಯವಾಗಿ ಉಪಯೋಗಿಸಲ್ಪಡದಿರುವ ಉಚ್ಚಾರಣೆಗಳ ವಿಷಯದಲ್ಲಿಯೂ ಇದನ್ನೇ ಹೇಳಸಾಧ್ಯವಿದೆ. ಇದರ ಏಕಮಾತ್ರ ಪರಿಣಾಮವು ಭಾಷಣಕಾರನ ಕಡೆಗೆ ಗಮನ ಸೆಳೆಯುವುದಾಗಿದೆ. ಇನ್ನೊಂದು ಕಡೆಯಲ್ಲಿ, ನಿರ್ಲಕ್ಷ್ಯದಿಂದ ಕೂಡಿದ ಪದಗಳು ಮತ್ತು ಉಚ್ಚಾರಣೆಯನ್ನು ಉಪಯೋಗಿಸಿ ಮಾತನಾಡುವ ವೈಪರೀತ್ಯವನ್ನು ತ್ಯಜಿಸುವುದೂ ಉತ್ತಮವಾಗಿರುವುದು. ಈ ವಿಷಯಗಳಲ್ಲಿ ಕೆಲವನ್ನು ಈಗಾಗಲೇ “ಪದಗಳನ್ನು ಸ್ಪಷ್ಟವಾಗಿ ಆಡುವುದು” ಎಂಬ ಪಾಠದಲ್ಲಿ ಚರ್ಚಿಸಲಾಗಿದೆ.

ಒಂದು ಭಾಷೆಯ ಅಂಗೀಕಾರಾರ್ಹವಾದ ಉಚ್ಚಾರಣೆಯು, ಒಂದು ದೇಶದಿಂದ ಇನ್ನೊಂದಕ್ಕೆ ಮಾತ್ರವಲ್ಲ, ಒಂದೇ ದೇಶದ ವಿವಿಧ ಭಾಗಗಳಲ್ಲಿಯೂ ಭಿನ್ನವಾಗಿರಬಹುದು. ಇನ್ನೊಂದು ದೇಶದ ಒಬ್ಬ ವ್ಯಕ್ತಿಯು ಸ್ಥಳಿಕ ಭಾಷೆಯನ್ನು ಭಿನ್ನವಾದ ಶೈಲಿಯಲ್ಲಿ ಮಾತಾಡಬಹುದು. ಇದಲ್ಲದೆ, ಕೆಲವು ಭಾಷೆಗಳಲ್ಲಿ ಶಬ್ದಕೋಶಗಳು ಒಂದೇ ಪದಕ್ಕೆ ಅಂಗೀಕಾರಾರ್ಹವಾದ ಒಂದಕ್ಕಿಂತ ಹೆಚ್ಚು ಉಚ್ಚಾರಣೆಗಳನ್ನು ಕೊಡಬಹುದು. ವಿಶೇಷವಾಗಿ, ಒಬ್ಬ ವ್ಯಕ್ತಿಗೆ ತೀರ ಸೀಮಿತವಾದ ಐಹಿಕ ವಿದ್ಯೆಯಿರುವಲ್ಲಿ, ಇಲ್ಲವೆ ಆ ವ್ಯಕ್ತಿಯು ಈಗ ಮಾತಾಡುವ ಭಾಷೆಯು ಅವನ ಸ್ವಂತ ಭಾಷೆಯಾಗಿಲ್ಲದೆ ಇರುವಲ್ಲಿ, ಯಾರು ಸ್ಥಳಿಕ ಭಾಷೆಯನ್ನು ಚೆನ್ನಾಗಿ ಮಾತಾಡುತ್ತಾರೋ ಅವರಿಗೆ ಜಾಗರೂಕತೆಯಿಂದ ಕಿವಿಗೊಡುವ ಮೂಲಕ ಮತ್ತು ಅವರ ಉಚ್ಚಾರಣೆಯನ್ನು ಅನುಸರಿಸುವ ಮೂಲಕ ಅವನು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುವನು. ಯೆಹೋವನ ಸಾಕ್ಷಿಗಳಾಗಿರುವ ನಾವು ಸಾರುವ ಸಂದೇಶಕ್ಕೆ ಘನತೆ ಬರುವ ರೀತಿಯಲ್ಲಿಯೂ ನಮ್ಮ ಕ್ಷೇತ್ರದಲ್ಲಿರುವ ಜನರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿಯೂ ಮಾತಾಡಲು ಬಯಸುತ್ತೇವೆ.

ದಿನನಿತ್ಯದ ಮಾತುಕತೆಯಲ್ಲಿ ಸಾಮಾನ್ಯವಾಗಿ ನಿಮಗೆ ಚೆನ್ನಾಗಿ ಪರಿಚಯವಿರುವ ಪದಗಳನ್ನು ಬಳಸುವುದು ಉತ್ತಮವಾಗಿದೆ. ಸಾಧಾರಣವಾಗಿ, ಸಾಮಾನ್ಯ ಸಂಭಾಷಣೆಯಲ್ಲಿ ಉಚ್ಚಾರಣೆಯು ದೊಡ್ಡ ಸಮಸ್ಯೆಯಾಗಿರುವುದಿಲ್ಲ. ಆದರೂ, ನೀವು ಗಟ್ಟಿಯಾಗಿ ಓದುವಾಗ, ದಿನಾಲೂ ನಿಮ್ಮ ಮಾತುಕತೆಯಲ್ಲಿ ನೀವು ಉಪಯೋಗಿಸದಿರುವಂಥ ಕೆಲವು ಪದಗಳು ನಿಮಗೆ ಎದುರಾಗಬಹುದು. ಮತ್ತು ಯೆಹೋವನ ಸಾಕ್ಷಿಗಳು ಅಧಿಕ ಪ್ರಮಾಣದಲ್ಲಿ ಗಟ್ಟಿಯಾದ ಸ್ವರದಲ್ಲಿ ವಾಚನವನ್ನು ಮಾಡುತ್ತಾರೆ. ನಾವು ಜನರಿಗೆ ಸಾಕ್ಷಿ ನೀಡುವಾಗ ಬೈಬಲನ್ನು ತೆರೆದು ಅವರಿಗಾಗಿ ಓದುತ್ತೇವೆ. ಕೆಲವು ಸಹೋದರರು ಕಾವಲಿನಬುರುಜು ಅಧ್ಯಯನದ ಸಮಯದಲ್ಲಿ ಅಥವಾ ಸಭಾ ಪುಸ್ತಕ ಅಧ್ಯಯನದ ಸಮಯದಲ್ಲಿ ಪ್ಯಾರಗ್ರಾಫ್‌ಗಳನ್ನು ಓದುವಂತೆ ಕೇಳಿಕೊಳ್ಳಲ್ಪಡುತ್ತಾರೆ. ಆದುದರಿಂದ, ನಾವು ನಿಷ್ಕೃಷ್ಟವಾಗಿ ಓದುವುದು ಮತ್ತು ಪದಗಳನ್ನು ತಪ್ಪಾಗಿ ಉಚ್ಚರಿಸುವ ಮೂಲಕ ಸಂದೇಶದ ಮಹತ್ವವನ್ನು ಕುಂಠಿತಗೊಳಿಸದಿರುವುದು ಪ್ರಾಮುಖ್ಯವಾದದ್ದಾಗಿದೆ.

ಬೈಬಲಿನ ಕೆಲವು ಅಂಕಿತ ನಾಮಗಳನ್ನು ಉಚ್ಚರಿಸುವುದು ಕಷ್ಟಕರವೆಂದು ನಿಮಗನಿಸುತ್ತದೊ? ಇಂಗ್ಲಿಷ್‌ ಭಾಷೆಯಲ್ಲಿ, ಪ್ರಧಾನ ಒತ್ತನ್ನು ಕೊಡಬೇಕಾಗಿರುವ ಉಚ್ಚಾರಾಂಶದ ಬೆನ್ನಿಗೆ ಒತ್ತುಸೂಚಕ ಚಿಹ್ನೆ ಕೊಡಲ್ಪಡುತ್ತದೆ. ಒತ್ತುಸೂಚಕ ಉಚ್ಚಾರಾಂಶವು ಸ್ವರಾಕ್ಷರದಲ್ಲಿ ಕೊನೆಗೊಳ್ಳುವಲ್ಲಿ, ಆ ಸ್ವರಾಕ್ಷರವನ್ನು ದೀರ್ಘವಾಗಿ ಎಳೆದು ಉಚ್ಚರಿಸಬೇಕು. ಆದರೆ ಉಚ್ಚಾರಾಂಶವು ವ್ಯಂಜನಾಕ್ಷರದಲ್ಲಿ ಕೊನೆಗೊಳ್ಳುವಲ್ಲಿ, ಆ ಉಚ್ಚಾರಾಂಶದ ವ್ಯಂಜನಾಕ್ಷರವನ್ನು ಹ್ರಸ್ವವಾಗಿ ಉಚ್ಚರಿಸಬೇಕು. Morˈde·cai (ಮೊರ್ದೆಕೈ) ಮತ್ತು Siˈnai (ಸೈನಾಯ್‌) ಎಂಬ ಪದಗಳಲ್ಲಿರುವಂತೆ, a ಮತ್ತು i ಎಂಬ ಎರಡು ಸ್ವರಾಕ್ಷರಗಳನ್ನು ಜೋಡಿಸುವಲ್ಲಿ ಬರು ai ಅನ್ನು ದೀರ್ಘ i (ಆಯ್‌) ಆಗಿ ಉಚ್ಚರಿಸಲಾಗುತ್ತದೆ ಅಷ್ಟೆ. Rachel (ರೇಚಲ್‌) ಎಂಬ ಹೆಸರನ್ನು ಬಿಟ್ಟರೆ, ch ಎಂಬ ಜೋಡಕ್ಷರಗಳ ಉಚ್ಚಾರವು Mel·chizʹe·dek (ಮೆಲ್ಕಿಸೆದೆಕ್‌) ಎಂಬ ಹೆಸರಿನಲ್ಲಿರುವಂತೆ ಬಿರುಸಾದ ಕ್‌ ಎಂಬ ಸ್ವರದಿಂದ ಉಚ್ಚರಿಸಲ್ಪಡುತ್ತದೆ.

ಉತ್ತಮಗೊಳಿಸುವ ವಿಧಗಳು. ಉಚ್ಚಾರಣೆಯ ಸಮಸ್ಯೆಯಿರುವ ಅನೇಕರಿಗೆ ಅದರ ಪ್ರಜ್ಞೆ ಇರುವುದಿಲ್ಲ. ನೀವು ಗಮನಕೊಡುವ ಅಗತ್ಯವಿರುವ ಉಚ್ಚಾರಣೆಯ ಅಂಶಗಳನ್ನು ನಿಮ್ಮ ಶಾಲಾ ಮೇಲ್ವಿಚಾರಕನು ತೋರಿಸುವಲ್ಲಿ, ಅವನು ತೋರಿಸುವ ದಯೆಗೆ ಕೃತಜ್ಞರಾಗಿರಿ. ನಿಮಗೆ ಆ ಸಮಸ್ಯೆಯಿದೆ ಎಂಬುದು ತಿಳಿದುಬಂದಾಗ, ನೀವು ಅದನ್ನು ಹೇಗೆ ಉತ್ತಮಗೊಳಿಸಬಲ್ಲಿರಿ?

ಪ್ರಥಮವಾಗಿ, ಗಟ್ಟಿಯಾಗಿ ಓದುವಂಥ ಒಂದು ನೇಮಕವು ನಿಮಗೆ ಸಿಗುವುದಾದರೆ, ಶಬ್ದಕೋಶವನ್ನು ನೋಡಲು ಸಮಯವನ್ನು ತೆಗೆದುಕೊಳ್ಳಿ. ನಿಮಗೆ ತಿಳಿಯದಿರುವ ಪದಗಳನ್ನು ತೆರೆದು ನೋಡಿ. ಒಂದು ಶಬ್ದಕೋಶವನ್ನು ಉಪಯೋಗಿಸುವ ಅನುಭವ ನಿಮಗಿಲ್ಲದಿರುವಲ್ಲಿ, ಅದರ ಆರಂಭದ ಪುಟಗಳನ್ನು ತೆರೆದು, ಉಪಯೋಗಿಸಲ್ಪಟ್ಟಿರುವ ಚಿಹ್ನೆಗಳ ವಿವರಣೆಗಳನ್ನು ನೋಡಿರಿ ಅಥವಾ ಅದನ್ನು ನಿಮಗೆ ವಿವರಿಸುವಂತೆ ಯಾರನ್ನಾದರೂ ಕೇಳಿರಿ. ಒಂದು ಪದದಲ್ಲಿ ಎಲ್ಲಿ ಒತ್ತನ್ನು ಹಾಕಬೇಕೆಂಬುದನ್ನು ಒಂದು ಒಳ್ಳೇ ಶಬ್ದಕೋಶವು ನಿಮಗೆ ತೋರಿಸುವುದು. ಕೆಲವು ಸಂದರ್ಭಗಳಲ್ಲಿ, ಒಂದು ಪದವನ್ನು, ಅದರ ಸನ್ನಿವೇಶಕ್ಕೆ ಅನುಸಾರವಾಗಿ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಉಚ್ಚರಿಸಲಾಗಬಹುದು. ನೀವು ಯಾವುದೇ ಪದವನ್ನು ತೆರೆದು ನೋಡಲಿ, ಶಬ್ದಕೋಶವನ್ನು ಮುಚ್ಚಿಡುವ ಮೊದಲು ಅದನ್ನು ಹಲವು ಬಾರಿ ಗಟ್ಟಿಯಾಗಿ ನುಡಿಯಿರಿ.

ಉಚ್ಚಾರಣೆಯನ್ನು ಉತ್ತಮಗೊಳಿಸಸಾಧ್ಯವಿರುವ ಎರಡನೆಯ ವಿಧವು, ಇನ್ನೊಬ್ಬರಿಗೆ ಅಂದರೆ ಉತ್ತಮ ಉಚ್ಚಾರಣೆ ಗೊತ್ತಿರುವವರಿಗೆ ಓದಿಹೇಳಿ, ಅವರು ತಪ್ಪನ್ನು ತಿದ್ದುವಂತೆ ಕೇಳಿಕೊಳ್ಳುವುದೇ ಆಗಿದೆ.

ಉಚ್ಚಾರಣೆಯನ್ನು ಉತ್ತಮಗೊಳಿಸುವ ಮೂರನೆಯ ವಿಧವು, ಉತ್ತಮ ಭಾಷಣಕಾರರಿಗೆ ಜಾಗರೂಕತೆಯಿಂದ ಕಿವಿಗೊಡುವ ಮೂಲಕವೇ ಆಗಿದೆ. ನೂತನ ಲೋಕ ಭಾಷಾಂತರ (ಇಂಗ್ಲಿಷ್‌) ಅಥವಾ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಆಡಿಯೋಕ್ಯಾಸೆಟ್‌ಗಳಿರುವಲ್ಲಿ, ಅವುಗಳ ಸದುಪಯೋಗವನ್ನು ಮಾಡಿರಿ. ನೀವು ಆಲಿಸುವಾಗ, ನೀವು ಉಚ್ಚರಿಸುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ಉಚ್ಚರಿಸಲ್ಪಡುವ ಪದಗಳನ್ನು ಗಮನಿಸಿರಿ. ಇವನ್ನು ಬರೆದಿಟ್ಟುಕೊಂಡು ಅಭ್ಯಾಸ ಮಾಡಿರಿ. ಸಕಾಲದಲ್ಲಿ, ನಿಮ್ಮ ಮಾತು ತಪ್ಪು ಉಚ್ಚಾರಣೆಯ ದೋಷದಿಂದ ಮುಕ್ತವಾಗುವುದು ಮತ್ತು ನೀವು ನಿಮ್ಮ ಮಾತುಗಾರಿಕೆಯನ್ನು ಬಹಳವಾಗಿ ವರ್ಧಿಸುವಿರಿ.

ಉಚ್ಚಾರಣೆಯನ್ನು ಉತ್ತಮಗೊಳಿಸುವ ವಿಧ

  • ಶಬ್ದಕೋಶವನ್ನು ಸದುಪಯೋಗಿಸಲು ಕಲಿಯಿರಿ.

  • ಉತ್ತಮವಾಗಿ ಓದಬಲ್ಲವರು ನಿಮ್ಮ ವಾಚನವನ್ನು ಆಲಿಸಿ ಸಲಹೆ ನೀಡುವಂತೆ ಕೇಳಿಕೊಳ್ಳಿ.

  • ಉತ್ತಮ ಭಾಷಣಕಾರರು ಉಪಯೋಗಿಸುವ ಉಚ್ಚಾರಣೆಯನ್ನು ಗಮನಿಸಿರಿ; ನಿಮ್ಮ ಉಚ್ಚಾರಣೆಯನ್ನು ಅವರದ್ದಕ್ಕೆ ಹೋಲಿಸಿ ನೋಡಿ.

ಅಭ್ಯಾಸಪಾಠ: ಕೀರ್ತನೆ 83 ರಲ್ಲಿ ಅಥವಾ ನಿಮಗೆ ವಿಶೇಷ ಸವಾಲನ್ನೊಡ್ಡುವಂಥ ಬೈಬಲ್‌ ಭಾಗವೊಂದರಲ್ಲಿರುವ ಯಾವುದೇ ಅಪರಿಚಿತ ಪದಗಳ ಉಚ್ಚಾರಣೆಯನ್ನು ಪರೀಕ್ಷಿಸಿ ನೋಡಿ. ಒಂದು ಶಬ್ದಕೋಶವನ್ನು ಉಪಯೋಗಿಸಿ ಇಲ್ಲವೆ ಭಾಷೆಯನ್ನು ಚೆನ್ನಾಗಿ ತಿಳಿದಿರುವವನನ್ನು ವಿಚಾರಿಸಿ. ಈ ವಚನಗಳಲ್ಲಿರುವ ಅಂಕಿತ ನಾಮಗಳಲ್ಲಿ ಯಾವ ಉಚ್ಚಾರಾಂಶಗಳನ್ನು ಒತ್ತಿ ನುಡಿಯಬೇಕೆಂಬುದನ್ನು ಗಮನಿಸಿ; ಆ ಹೆಸರುಗಳಲ್ಲಿ ಪ್ರತಿಯೊಂದು ಉಚ್ಚಾರಾಂಶವನ್ನು ಗಟ್ಟಿಯಾಗಿ ನುಡಿಯಿರಿ. ಬಳಿಕ ಇಡೀ ಭಾಗವನ್ನು ಗಟ್ಟಿಯಾಗಿ ಓದಿರಿ.

ನನಗೆ ಈ ಪದಗಳ ಸರಿಯಾದ ಉಚ್ಚಾರಣೆಯನ್ನು ಅಭ್ಯಾಸ ಮಾಡುವ ಅಗತ್ಯವಿದೆ

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

․․․․․․․․․․․․․․․․․․․․ ․․․․․․․․․․․․․․․․․․․․ ․․․․․․․․․․․․․․․․․․․․

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ