“ತಂದೆಯಿಲ್ಲದ ಹುಡುಗ”ರಲ್ಲಿ ಪ್ರೀತಿಭರಿತ ಆಸಕ್ತಿಯನ್ನು ತೋರಿಸಿರಿ
1 ಯೆಹೋವನು “ತಂದೆಯಿಲ್ಲದ ಹುಡುಗರಿಗೆ ತಂದೆಯಾಗಿದ್ದಾನೆ.” (ಕೀರ್ತ. 68:5, NW) ಅವರ ಹಿತಕ್ಷೇಮಕ್ಕಾಗಿರುವ ಆತನ ಚಿಂತೆಯು, ಪುರಾತನ ಇಸ್ರಾಯೇಲ್ ಜನಾಂಗಕ್ಕೆ ಆತನು ಕೊಟ್ಟಂಥ ಈ ಆಜ್ಞೆಯಲ್ಲಿ ವ್ಯಕ್ತಪಡಿಸಲ್ಪಟ್ಟಿದೆ: “ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು. ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು; ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ.” (ವಿಮೋ. 22:22, 23) ಅಂಥವರ ಭೌತಿಕ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಹಾಯಮಾಡಲಿಕ್ಕಾಗಿರುವ ಏರ್ಪಾಡುಗಳು ಸಹ ದೇವರ ಧರ್ಮಶಾಸ್ತ್ರದಲ್ಲಿ ಒಳಗೂಡಿದ್ದವು. (ಧರ್ಮೋ. 24:19-21) ಕ್ರೈಸ್ತ ಏರ್ಪಾಡಿನ ಕೆಳಗೆ, ಸತ್ಯಾರಾಧಕರಿಗೆ “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ [“ಅನಾಥರನ್ನೂ,” NW] ವಿಧವೆಯರನ್ನೂ ಪರಾಮರಿ”ಸುವಂತೆ ಬುದ್ಧಿವಾದವು ನೀಡಲ್ಪಟ್ಟಿದೆ. (ಯಾಕೋ. 1:27) ಒಂಟಿ ಹೆತ್ತವರುಳ್ಳ ಅಥವಾ ಧಾರ್ಮಿಕವಾಗಿ ವಿಭಾಜಿತವಾಗಿರುವ ಕುಟುಂಬಗಳಲ್ಲಿ ಬೆಳೆಯುತ್ತಿರುವವರಲ್ಲಿ ಯೆಹೋವನು ತೋರಿಸುವ ಪ್ರೀತಿಭರಿತ ಆಸಕ್ತಿಯನ್ನು ನಾವು ಹೇಗೆ ಅನುಕರಿಸಸಾಧ್ಯವಿದೆ?
2 ಆತ್ಮಿಕ ತರಬೇತಿ: ಒಂದುವೇಳೆ ನೀವು ಒಂಟಿ ಹೆತ್ತವರಾಗಿರುವಲ್ಲಿ ಅಥವಾ ಒಬ್ಬ ಅವಿಶ್ವಾಸಿ ಸಂಗಾತಿಯುಳ್ಳವರಾಗಿರುವಲ್ಲಿ, ನಿಮ್ಮ ಮಕ್ಕಳೊಂದಿಗೆ ಒಂದು ಕ್ರಮವಾದ ಮನೆ ಬೈಬಲ್ ಅಧ್ಯಯನವನ್ನು ನಡೆಸುವುದು ತುಂಬ ಕಷ್ಟಕರವಾದ ಪಂಥಾಹ್ವಾನವಾಗಿರಬಹುದು. ಆದರೆ ಅವರು ಸಮತೂಕ ಮನೋಭಾವದ, ಪ್ರೌಢ ವಯಸ್ಕರಾಗಿ ಬೆಳೆಯಬೇಕಾದರೆ, ಕ್ರಮವಾದ ಮತ್ತು ಅರ್ಥಭರಿತವಾದ ಒಂದು ಬೈಬಲ್ ಅಧ್ಯಯನವು ಅತ್ಯಗತ್ಯವಾಗಿದೆ. (ಜ್ಞಾನೋ. 22:6) ಆತ್ಮಿಕ ವಿಷಯಗಳ ಕುರಿತು ಅವರೊಂದಿಗೆ ದಿನಾಲೂ ಸಂಭಾಷಣೆಗಳನ್ನು ನಡೆಸುವುದು ಸಹ ಅತ್ಯಾವಶ್ಯಕವಾಗಿದೆ. (ಧರ್ಮೋ. 6:6-9) ಕೆಲವೊಮ್ಮೆ ನಿಮಗೆ ನಿರುತ್ಸಾಹದ ಅನಿಸಿಕೆಯಾಗಬಹುದಾದರೂ ಪ್ರಯತ್ನವನ್ನು ಬಿಟ್ಟುಬಿಡಬೇಡಿ. “[ನಿಮ್ಮ ಮಕ್ಕಳನ್ನು] ಯೆಹೋವನ ಶಿಸ್ತು ಹಾಗೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸು”ತ್ತಿರುವಾಗ, ಬಲ ಹಾಗೂ ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ತಿರುಗಿರಿ.—ಎಫೆ. 6:4, NW.
3 ನಿಮ್ಮ ಶಾಸ್ತ್ರೀಯ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ನಿಮಗೆ ಏನಾದರೂ ಸಹಾಯವು ಬೇಕಾಗಿರುವಲ್ಲಿ, ನಿಮ್ಮ ಆವಶ್ಯಕತೆಗಳನ್ನು ಹಿರಿಯರಿಗೆ ತಿಳಿಯಪಡಿಸಿರಿ. ಅವರು ನಿಮಗೆ ಪ್ರಾಯೋಗಿಕ ಸಲಹೆಗಳನ್ನು ಕೊಡಲು ಶಕ್ತರಾಗಿರಬಹುದು ಅಥವಾ ನಿಮ್ಮ ಮನೆವಾರ್ತೆಗಾಗಿ ಒಂದು ಒಳ್ಳೆಯ ಆತ್ಮಿಕ ನಿಯತ ಕ್ರಮವನ್ನು ಸ್ಥಾಪಿಸುವುದರಲ್ಲಿ ಅವರು ನಿಮಗೆ ಸಹಾಯಮಾಡಬಹುದು.
4 ಇತರರು ಸಹಾಯಮಾಡಸಾಧ್ಯವಿರುವ ವಿಧ: ಪ್ರಥಮ ಶತಮಾನದಲ್ಲಿ, ತಿಮೊಥೆಯನು ಧಾರ್ಮಿಕವಾಗಿ ವಿಭಾಜಿತವಾಗಿದ್ದ ಮನೆವಾರ್ತೆಯಲ್ಲಿ ಬೆಳೆಸಲ್ಪಟ್ಟವನಾಗಿದ್ದರೂ ಯೆಹೋವನ ಹುರುಪಿನ ಸೇವಕನಾಗಿ ಪರಿಣಮಿಸಿದನು. ಅವನ ಯುವ ಪ್ರಾಯದಲ್ಲಿ ಅವನಿಗೆ ಪವಿತ್ರ ಬರಹಗಳನ್ನು ಕಲಿಸುವುದರಲ್ಲಿ ಅವನ ತಾಯಿಯ ಹಾಗೂ ಅಜ್ಜಿಯ ಶ್ರದ್ಧಾಪೂರ್ವಕ ಪ್ರಯತ್ನಗಳು ನಿಸ್ಸಂದೇಹವಾಗಿಯೂ ಅತಿ ಪ್ರಾಮುಖ್ಯವಾದ ಪಾತ್ರವನ್ನು ವಹಿಸಿದವು. (ಅ. ಕೃ. 16:1, 2; 2 ತಿಮೊ. 1:5; 3:15) ಆದರೂ, ತಿಮೊಥೆಯನನ್ನು ‘ಕರ್ತನಲ್ಲಿ ನನಗೆ ಪ್ರಿಯನು ಮತ್ತು ನಂಬಿಗಸ್ತನು [“ನಂಬಿಗಸ್ತ ಮಗನು,” NW]’ ಎಂದು ಸಂಬೋಧಿಸಿದ ಅಪೊಸ್ತಲ ಪೌಲನನ್ನೂ ಒಳಗೊಂಡು ಇತರ ಕ್ರೈಸ್ತರೊಂದಿಗಿನ ಸಹವಾಸದಿಂದಲೂ ಅವನು ಪ್ರಯೋಜನವನ್ನು ಪಡೆದುಕೊಂಡನು.—1 ಕೊರಿಂ. 4:17.
5 ತದ್ರೀತಿಯಲ್ಲಿ ಇಂದು, ಆತ್ಮಿಕವಾಗಿ ಪ್ರೌಢರಾಗಿರುವ ಸಹೋದರ ಸಹೋದರಿಯರು ಸಭೆಯಲ್ಲಿರುವ ತಂದೆಯಿಲ್ಲದ ಹುಡುಗ ಹುಡುಗಿಯರಲ್ಲಿ ಪ್ರೀತಿಭರಿತ ಆಸಕ್ತಿಯನ್ನು ತೋರಿಸುವುದು ಎಷ್ಟು ಪ್ರಯೋಜನದಾಯಕವಾಗಿದೆ! ಅವರಲ್ಲಿ ಪ್ರತಿಯೊಬ್ಬರ ಹೆಸರು ನಿಮಗೆ ತಿಳಿದಿದೆಯೋ? ಕ್ರೈಸ್ತ ಕೂಟಗಳಲ್ಲಿ ಮತ್ತು ಇನ್ನಿತರ ಸಂದರ್ಭಗಳಲ್ಲಿ ನೀವು ಅವರೊಂದಿಗೆ ಮಾತಾಡುತ್ತೀರೋ? ಕ್ಷೇತ್ರ ಶುಶ್ರೂಷೆಯಲ್ಲಿ ನಿಮ್ಮ ಜೊತೆಗೂಡುವಂತೆ ಅವರನ್ನು ಆಮಂತ್ರಿಸಿರಿ. ನಿಮ್ಮ ಕುಟುಂಬ ಅಧ್ಯಯನದಲ್ಲಿ ಅಥವಾ ಹಿತಕರವಾದ ಮನೋರಂಜನೆಯ ಏರ್ಪಾಡುಗಳಲ್ಲಿ, ಅಂಥ ಮಕ್ಕಳನ್ನು ಅವರ ಒಂಟಿ ಹೆತ್ತವರು ಅಥವಾ ವಿಶ್ವಾಸಿ ಹೆತ್ತವರೊಂದಿಗೆ ಬಹುಶಃ ಆಗಿಂದಾಗ್ಗೆ ಒಳಗೂಡಿಸಬಹುದು. ಇಂಥ ಮಕ್ಕಳು ನಿಮ್ಮನ್ನು ತಮ್ಮ ಮಿತ್ರರಾಗಿ ಪರಿಗಣಿಸುವಾಗ, ಅವರು ನಿಮ್ಮ ಮಾದರಿಯನ್ನು ಅನುಕರಿಸುವ ಹಾಗೂ ನಿಮ್ಮ ಪ್ರೋತ್ಸಾಹವನ್ನು ಸ್ವೀಕರಿಸುವ ಸಂಭವನೀಯತೆಯು ಹೆಚ್ಚಿರುತ್ತದೆ.—ಫಿಲಿ. 2:4.
6 ಯೆಹೋವನು ತಂದೆಯಿಲ್ಲದ ಮಕ್ಕಳಲ್ಲಿ ತುಂಬ ಆಸಕ್ತನಾಗಿದ್ದಾನೆ, ಮತ್ತು ಅಂಥವರು ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳುವಂತೆ ಸಹಾಯಮಾಡುವ ನಮ್ಮ ಪ್ರೀತಿಭರಿತ ಪ್ರಯತ್ನಗಳನ್ನು ಆತನು ಖಂಡಿತವಾಗಿಯೂ ಆಶೀರ್ವದಿಸುತ್ತಾನೆ. ಒಂಟಿ ಹೆತ್ತವರುಳ್ಳ ಅಥವಾ ವಿಭಾಜಿತ ಮನೆವಾರ್ತೆಗಳಲ್ಲಿ ಬೆಳೆದಂಥ ಅನೇಕರು ಇಂಥ ಉತ್ತೇಜನವನ್ನು ಪಡೆದುಕೊಂಡದ್ದರಿಂದ, ಈಗ ಅವರು ಪಯನೀಯರರು, ಶುಶ್ರೂಷಾ ಸೇವಕರು, ಹಿರಿಯರು, ಸಂಚರಣ ಮೇಲ್ವಿಚಾರಕರು, ಅಥವಾ ಬೆತೆಲ್ ಕುಟುಂಬದ ಸದಸ್ಯರೋಪಾದಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿದ್ದಾರೆ. ನಮ್ಮ ಸ್ವರ್ಗೀಯ ತಂದೆಯನ್ನು ಅನುಕರಿಸುತ್ತಾ, ತಂದೆಯಿಲ್ಲದ ಮಕ್ಕಳಿಗಾಗಿ ನಾವು ತೋರಿಸುವ ಮಮತೆಯಲ್ಲಿ “ವಿಶಾಲ”ಗೊಳ್ಳಲಿಕ್ಕಾಗಿರುವ ಮಾರ್ಗಗಳಿಗಾಗಿ ನಾವೆಲ್ಲರೂ ಎದುರುನೋಡೋಣ.—2 ಕೊರಿಂ. 6:11-13.