ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ
1 ಅಸ್ಥಿರವಾದ ಒಂದು ಲೋಕದಲ್ಲಿ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲಲು ನಾವು ಯೆಹೋವನಲ್ಲಿ ಭರವಸವಿಡಬೇಕು. ನಮ್ಮ ದೈನಂದಿನ ಜೀವಿತದಲ್ಲಿ ನಾವು ಹೇಗೆ ಈ ಭರವಸೆಯನ್ನು ವ್ಯಕ್ತಪಡಿಸಬಲ್ಲೆವು? ಯೆಹೋವನಲ್ಲಿ ಭರವಸವಿಡುವುದು ನಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಜೀವನವನ್ನು ಹೇಗೆ ಬಾಧಿಸುತ್ತದೆ? ಸೈತಾನನ ಲೋಕದ ಪ್ರಭಾವವನ್ನು ಎದುರಿಸಲು ಅದು ನಮಗೆ ಹೇಗೆ ಸಹಾಯಮಾಡುತ್ತದೆ? 2003ನೇ ಸೇವಾ ವರ್ಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವು ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತದೆ. ಅದರ ಮುಖ್ಯ ವಿಷಯ: “ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡಿರಿ.”—ಕೀರ್ತ. 37:3.
2 ಯೆಹೋವನಲ್ಲಿನ ನಮ್ಮ ಭರವಸವು ವಿಶೇಷ ಸಂದರ್ಭಗಳು ಅಥವಾ ಕಷ್ಟಕಾಲಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಮ್ಮ ದೈನಂದಿನ ಜೀವನದ ಪ್ರತಿಯೊಂದು ಅಂಶವನ್ನೂ ಆವರಿಸುತ್ತದೆ. ಇದು “ಯಾವಾಗಲೂ ಯೆಹೋವನಲ್ಲಿ ಭರವಸವಿಡಿರಿ” ಎಂಬ ಮೊದಲನೆಯ ಭಾಷಣದಲ್ಲಿ ಒತ್ತಿಹೇಳಲ್ಪಡುವುದು. (ಕೀರ್ತ. 62:8) “ಯೆಹೋವನಲ್ಲಿ ಭರವಸೆಯನ್ನು ವ್ಯಕ್ತಪಡಿಸುವುದು” ಎಂಬ ನಾಲ್ಕು ಭಾಗದ ಭಾಷಣಮಾಲೆಯು, ಒಂದು ಯಶಸ್ವಿಕರ ವಿವಾಹವನ್ನು ಕಟ್ಟಲು, ಕುಟುಂಬ ವೃತ್ತದಲ್ಲಿ ಏಳುವ ಸಮಸ್ಯೆಗಳನ್ನು ನಿಭಾಯಿಸಲು, ಮತ್ತು ನಮ್ಮ ಆರ್ಥಿಕ ಆವಶ್ಯಕತೆಗಳನ್ನು ತೃಪ್ತಿಪಡಿಸಿಕೊಳ್ಳಲು ಸಹಾಯಮಾಡುವ ಬೈಬಲ್ ಆಧಾರಿತ ಮಾಹಿತಿಯನ್ನು ಹೇಗೆ ಕಂಡುಕೊಳ್ಳುವುದು ಮತ್ತು ಅನ್ವಯಿಸುವುದು ಎಂಬುದನ್ನು ತೋರಿಸುವುದು.
3 ಸೈತಾನನ ಲೋಕವು ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಎಂಬ ವಿಷಯದಲ್ಲಿ ಒಂದು ವಿಕೃತ ದೃಷ್ಟಿಕೋನವನ್ನು ನಮ್ಮ ಮೇಲೆ ಹೇರಲು ಮತ್ತು ಯಾವುದು ಪ್ರಾಮುಖ್ಯವಾದದ್ದು ಅಥವಾ ಅಪ್ರಾಮುಖ್ಯವಾದದ್ದು ಎಂಬ ವಿಷಯದಲ್ಲಿ ಗಲಿಬಿಲಿಯನ್ನು ಉಂಟುಮಾಡಲು ಪ್ರಯತ್ನಿಸುತ್ತದೆ. (ಯೆಶಾ. 5:20) “ಜೀವನದ ವ್ಯರ್ಥತೆಗಳ ವಿರುದ್ಧ ಎಚ್ಚರವಾಗಿರ್ರಿ” ಮತ್ತು “ಕೆಟ್ಟದ್ದರಿಂದ ದೂರವಿರಿ, ಒಳ್ಳೆಯದನ್ನು ಮಾಡುವವರಾಗಿರ್ರಿ” ಎಂಬ ಭಾಷಣಗಳು, ಯೆಹೋವನ ಉನ್ನತ ಮಟ್ಟಗಳನ್ನು ಎತ್ತಿಹಿಡಿಯಲಿಕ್ಕಾಗಿರುವ ನಮ್ಮ ತೀರ್ಮಾನವನ್ನು ಇನ್ನಷ್ಟು ಬಲಪಡಿಸುವವು.—ಆಮೋ. 5:14.
4 ಯೆಹೋವನು ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ಅಂತ್ಯವನ್ನು ತರುವಾಗ, ದೇವರ ಸೇವಕರು ಆತನಲ್ಲಿ ಪೂರ್ಣವಾಗಿ ಭರವಸವಿಡಬೇಕು. ಇದು “ಲೋಕ ಸಂಕಟದಿಂದ ಬಿಡುಗಡೆಯು ಹತ್ತಿರವಿದೆ” ಎಂಬ ಬಹಿರಂಗ ಭಾಷಣದಲ್ಲಿ ಎತ್ತಿ ತೋರಿಸಲ್ಪಟ್ಟಿದೆ. ಅದರ ನಂತರ, “ನೀವು ದೇವರ ರಾಜ್ಯಕ್ಕೆ ಯೋಗ್ಯರೆಂದು ಎಣಿಸಲ್ಪಡುವಿರೋ?” ಎಂಬ ಭಾಗದಲ್ಲಿ, ನಾವು ನಮ್ಮನ್ನೇ ಪರೀಕ್ಷಿಸಿಕೊಳ್ಳುವಂತೆ ಕೇಳಿಕೊಳ್ಳಲ್ಪಡುವೆವು. ಕಾರ್ಯಕ್ರಮವು “ಯೆಹೋವನ ವಾಗ್ದಾನಗಳಲ್ಲಿ ಭರವಸವಿಡಿರಿ” ಎಂಬ ಉತ್ತೇಜನದೊಂದಿಗೆ ಕೊನೆಗೊಳ್ಳುವುದು.
5 ಪ್ರತಿಯೊಂದು ಸಮ್ಮೇಳನದ ಒಂದು ವೈಶಿಷ್ಟ್ಯವು ದೀಕ್ಷಾಸ್ನಾನದ ಭಾಷಣವಾಗಿದೆ. ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಬಯಸುವವರು ಸಾಧ್ಯವಾದಷ್ಟು ಶೀಘ್ರವಾಗಿ ಇದರ ಕುರಿತು ಅಧ್ಯಕ್ಷ ಮೇಲ್ವಿಚಾರಕನಿಗೆ ತಿಳಿಯಪಡಿಸಬೇಕು. ಇದು ಬೇಕಾಗಿರುವ ಏರ್ಪಾಡುಗಳನ್ನು ಮಾಡಲು ಸಹಾಯಮಾಡುವುದು.
6 ಈ ಅನಿಶ್ಚಿತ ಸಮಯಗಳಲ್ಲಿ, ಯೆಹೋವನೊಬ್ಬನೇ ನಂಬಿಕೆಯ ಮತ್ತು ದೃಢತೆಯ ನಿಜ ಮೂಲನಾಗಿದ್ದಾನೆ. (ಕೀರ್ತ. 118:8, 9) ನಾವೆಲ್ಲರೂ ಆತನಲ್ಲಿರುವ ನಮ್ಮ ಭರವಸವನ್ನು, ಸರ್ಕಿಟ್ ಸಮ್ಮೇಳನದ ಇಡೀ ಕಾರ್ಯಕ್ರಮಕ್ಕೆ ಹಾಜರಿರುವ ಮೂಲಕ ಇನ್ನಷ್ಟು ಬಲಪಡಿಸೋಣ.