ಸೇವಾ ಕೂಟದ ಶೆಡ್ಯೂಲ್
ಫೆಬ್ರವರಿ 10ರಿಂದ ಆರಂಭವಾಗುವ ವಾರ
ಗೀತೆ 2 (15)
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಫೆಬ್ರವರಿ 24ರ ವಾರದ ಸೇವಾ ಕೂಟದಲ್ಲಿನ ಚರ್ಚೆಗಾಗಿ ಸಿದ್ಧತೆಯಲ್ಲಿ, ಪರೀಕ್ಷೆಗಳ ಕೆಳಗೆ ನಂಬಿಗಸ್ತರು—ಸೋವಿಯಟ್ ಯೂನಿಯನ್‌ನಲ್ಲಿ ಯೆಹೋವನ ಸಾಕ್ಷಿಗಳು (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡುವಂತೆ ಪ್ರತಿಯೊಬ್ಬರನ್ನೂ ಉತ್ತೇಜಿಸಿರಿ. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಲ್ಲಿ ಜನವರಿ-ಮಾರ್ಚ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು)ವನ್ನು ಮತ್ತು ಫೆಬ್ರವರಿ 15ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದನ್ನು ತೋರಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ, ಜೋಡಿಯಾಗಿ ಎರಡೂ ಪತ್ರಿಕೆಗಳು ನೀಡಲ್ಪಡಬೇಕು.
35 ನಿ: “ಸಾರಿರಿ ಮತ್ತು ಸಮಗ್ರವಾಗಿ ಸಾಕ್ಷಿ ನೀಡಿರಿ.”a ಇದು ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕು. ಸಾಧ್ಯವಿರುವವರೆಲ್ಲರೂ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವಂತೆ ಉತ್ತೇಜಿಸಿರಿ. ಕಳೆದ ಜ್ಞಾಪಕಾಚರಣೆಯ ಸಮಯದಲ್ಲಿ ಪಯನೀಯರ್ ಸೇವೆಯನ್ನು ಮಾಡಿದಂಥವರು ಹೇಳಿಕೆಗಳನ್ನು ನೀಡುವಂತೆ ಪ್ರೋತ್ಸಾಹಿಸಿರಿ. ಅವರು ಪಯನೀಯರ್ ಸೇವೆಯನ್ನು ಮಾಡಲು ಯಾವ ಏರ್ಪಾಡುಗಳನ್ನು ಮಾಡಿದರು? ಇದಕ್ಕಾಗಿ ಯಾವ ಪ್ರಯತ್ನ ಹಾಗೂ ಹೊಂದಾಣಿಕೆಗಳನ್ನು ಮಾಡಬೇಕಾಗಿತ್ತು? ಅವರು ಯಾವ ಆನಂದಗಳನ್ನು ಹಾಗೂ ಆಶೀರ್ವಾದಗಳನ್ನು ಅನುಭವಿಸಿದರು? 4ನೆಯ ಪುಟದ ಚೌಕದಲ್ಲಿರುವಂಥ ಮಾದರಿ ಶೆಡ್ಯೂಲ್‌ಗಳನ್ನು ಪುನರ್ವಿಮರ್ಶಿಸಿರಿ. ಕೂಟಾನಂತರ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿರುವ ಅರ್ಜಿಗಳು ಲಭ್ಯವಿರುವವು ಎಂಬ ಪ್ರಕಟನೆಯನ್ನು ಮಾಡಿರಿ.
ಗೀತೆ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 17ರಿಂದ ಆರಂಭವಾಗುವ ವಾರ
ಗೀತೆ 26 (212)
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ. ಮಾರ್ಚ್ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ ಅಂಶಗಳನ್ನು ಉಪಯೋಗಿಸುತ್ತಾ, ಜ್ಞಾನ ಪುಸ್ತಕವನ್ನು ನೀಡಲಿಕ್ಕಾಗಿರುವ ಒಂದೊ ಎರಡೊ ಸಲಹೆಗಳನ್ನು ತಿಳಿಸಿರಿ. ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಗುರಿಯನ್ನು ಒತ್ತಿಹೇಳಿರಿ.
10 ನಿ: “ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ.” ಒಂದು ಭಾಷಣ. ಮುಂದಿನ ಸರ್ಕಿಟ್ ಸಮ್ಮೇಳನದ ತಾರೀಖನ್ನು ಪ್ರಕಟಿಸಿರಿ. ಎಲ್ಲರೂ ಉಪಸ್ಥಿತರಿರುವಂತೆ ಮತ್ತು ಕಾರ್ಯಕ್ರಮಕ್ಕೆ ಜಾಗರೂಕತೆಯಿಂದ ಕಿವಿಗೊಡುವಂತೆ ಉತ್ತೇಜಿಸಿರಿ. ಅಸ್ನಾತ ಪ್ರಚಾರಕರು ದೀಕ್ಷಾಸ್ನಾನಕ್ಕಾಗಿ ಅರ್ಹರಾಗುವುದರ ಕುರಿತು ಆಲೋಚಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ. ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡಿರಿ.
25 ನಿ: “ನೀವು ಯಾವುದಕ್ಕೆ ಆದ್ಯತೆ ನೀಡುತ್ತೀರಿ?”b ಒಬ್ಬರು ಅಥವಾ ಇಬ್ಬರು ಪ್ರಚಾರಕರು, ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲಿಕ್ಕಾಗಿ ತಮ್ಮ ಸನ್ನಿವೇಶಗಳನ್ನು ಹೊಂದಿಸಿಕೊಳ್ಳಲು ಅವರು ಹೇಗೆ ಶಕ್ತರಾಗಿದ್ದಾರೆಂಬುದನ್ನು ತಿಳಿಸುವಂತೆ ಮುಂಚಿತವಾಗಿಯೇ ಏರ್ಪಡಿಸಿರಿ.
ಗೀತೆ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 24ರಿಂದ ಆರಂಭವಾಗುವ ವಾರ
ಗೀತೆ 11 (85)
10 ನಿ: ಸ್ಥಳಿಕ ಪ್ರಕಟನೆಗಳು. ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯದಲ್ಲಿ ಜನವರಿ-ಮಾರ್ಚ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು)ವನ್ನು ಮತ್ತು ಮಾರ್ಚ್ 1ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದನ್ನು ತೋರಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ, ಜೋಡಿಯಾಗಿ ಎರಡೂ ಪತ್ರಿಕೆಗಳು ನೀಡಲ್ಪಡಬೇಕು.
10 ನಿ: “ಸಮಯೋಚಿತ ಸಹಾಯ.” ಒಬ್ಬ ಹಿರಿಯನಿಂದ ಭಾಷಣ. ಅಕ್ರಿಯರಾಗಿರುವವರಿಗೆ ಸಹಾಯಮಾಡಲಿಕ್ಕಾಗಿ ಮಾಡಲ್ಪಡುತ್ತಿರುವ ವಿಶೇಷ ಪ್ರಯತ್ನವು, ತನ್ನ ಜನರಿಗಾಗಿರುವ ಯೆಹೋವನ ಪ್ರೀತಿಯ ಹಿತಾಸಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಎತ್ತಿಹೇಳಿರಿ.
25 ನಿ: “ನಿಮಗೆ ಒಳನೋಟವನ್ನು ನೀಡುವಂಥ ಹಾಗೂ ನಿಮ್ಮನ್ನು ಹುರಿದುಂಬಿಸುವಂಥ ಒಂದು ವಿಡಿಯೋ!” ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ಪರೀಕ್ಷೆಗಳ ಕೆಳಗೆ ನಂಬಿಗಸ್ತರು (ಇಂಗ್ಲಿಷ್) ಎಂಬ ವಿಡಿಯೋದ ಕುರಿತು ಸಭಿಕರೊಂದಿಗಿನ ಚರ್ಚೆಯನ್ನು ನೇರವಾಗಿ ಆರಂಭಿಸಿರಿ. ಕೊನೆಯ ಪ್ರಶ್ನೆಯ ಕುರಿತು ಅನೇಕ ಹೇಳಿಕೆಗಳನ್ನು ಪಡೆಯಲು ಸಾಕಷ್ಟು ಸಮಯವು ಇರಸಾಧ್ಯವಾಗುವಂತೆ, ಸಮಯವನ್ನು ಜಾಗರೂಕತೆಯಿಂದ ನಿಗದಿಪಡಿಸಿರಿ. 2002 ವರ್ಷಪುಸ್ತಕ (ಇಂಗ್ಲಿಷ್)ದ 192ನೆಯ ಪುಟದಲ್ಲಿರುವ ಚೌಕವನ್ನು ಓದುವ ಮೂಲಕ ಮುಕ್ತಾಯಗೊಳಿಸಿರಿ.
ಗೀತೆ 4 (43) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 3ರಿಂದ ಆರಂಭವಾಗುವ ವಾರ
ಗೀತೆ 8 (53)
10 ನಿ: ಸ್ಥಳಿಕ ಪ್ರಕಟನೆಗಳು. “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ”ವನ್ನು ಚರ್ಚಿಸಿರಿ. ಮುಂದಿನ ವಿಶೇಷ ಸಮ್ಮೇಳನ ದಿನದ ತಾರೀಖನ್ನು ಪ್ರಕಟಿಸಿರಿ, ಮತ್ತು ಇಡೀ ಕಾರ್ಯಕ್ರಮಕ್ಕೆ ಬೇಗನೆ ಆಗಮಿಸುವಂತೆ ಮತ್ತು ಜಾಗರೂಕತೆಯಿಂದ ಕಿವಿಗೊಡುವಂತೆ ಎಲ್ಲರನ್ನೂ ಉತ್ತೇಜಿಸಿರಿ. ಹೊಸ ಆಸಕ್ತರನ್ನು ಮತ್ತು ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಅಂತ್ಯವು ಸಮೀಪಿಸುತ್ತಾ ಇರುವುದರಿಂದ ಸ್ವಸ್ಥಚಿತ್ತರಾಗಿರಿ.”c 3-4ನೆಯ ಪ್ಯಾರಗ್ರಾಫ್‌ಗಳನ್ನು ಚರ್ಚಿಸುತ್ತಿರುವಾಗ, ಸದ್ಯಕ್ಕೆ ಅವರು ಯಾವ ಆತ್ಮಿಕ ಗುರಿಗಳನ್ನು ಬೆನ್ನಟ್ಟುತ್ತಿದ್ದಾರೆಂಬುದನ್ನು ತಿಳಿಸುವಂತೆ ಪ್ರಚಾರಕರನ್ನು ಆಮಂತ್ರಿಸಿರಿ. ದೇವರನ್ನು ಆರಾಧಿಸಿ (ಇಂಗ್ಲಿಷ್) ಪುಸ್ತಕದ 176ನೇ ಪುಟದಲ್ಲಿರುವ ಹೇಳಿಕೆಗಳನ್ನು ಒಳಗೂಡಿಸಿರಿ.
ಗೀತೆ 15 (127) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.