ದೇವರು ತೋರಿಸಿದ ಕರುಣೆಗಾಗಿ ಕೃತಜ್ಞತೆ
1 ಅಪೊಸ್ತಲ ಪೌಲನು ಕ್ರೈಸ್ತನಾಗುವುದಕ್ಕೆ ಮುಂಚೆ ಕ್ರೈಸ್ತತ್ವದ ಹಬ್ಬುವಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದನು. ಆದರೂ, ಅಜ್ಞಾನದ ನಿಮಿತ್ತವಾಗಿ ಹಾಗೆ ವರ್ತಿಸಿದ್ದರಿಂದ ಅವನಿಗೆ ಕರುಣೆಯು ತೋರಿಸಲ್ಪಟ್ಟಿತು. ಯೆಹೋವನು ಅಪಾತ್ರ ದಯೆಯನ್ನು ತೋರಿಸಿದನು, ಮತ್ತು ಪೌಲನಿಗೆ ಸಾರುವಂತೆ ಒಂದು ನೇಮಕವೂ ಕೊಡಲ್ಪಟ್ಟಿತು. ಅವನಿಗೆ ಈ ನೇಮಕವು ಅಮೂಲ್ಯವಾಗಿತ್ತು. (ಅ. ಕೃ. 26:9-18; 1 ತಿಮೊ. 1:12-14) ಯೆಹೋವನ ಕರುಣೆಗಾಗಿರುವ ಗಣ್ಯತೆಯು, ಪೌಲನು ಸೇವೆಗಾಗಿ ತನ್ನ ಜೀವನವನ್ನೇ ಅರ್ಪಿಸಿಕೊಳ್ಳುವಂತೆ ಅವನನ್ನು ಪ್ರಚೋದಿಸಿತು.—2 ಕೊರಿಂಥ 12:15.
2 ದೇವರ ಕರುಣೆಯ ಒಂದು ಅಭಿವ್ಯಕ್ತಿಯಾಗಿ, ನಮಗೂ ಒಂದು ಸೇವೆಯು ಕೊಡಲ್ಪಟ್ಟಿದೆ. (2 ಕೊರಿಂ. 4:1) ಆತ್ಮಿಕ ಪ್ರಗತಿಯನ್ನು ಮಾಡುವಂತೆ ಇತರರಿಗೆ ಸಹಾಯಮಾಡಲು ಪ್ರಯತ್ನಿಸುವುದರ ಮೂಲಕ ನಮಗೆ ತೋರಿಸಲ್ಪಟ್ಟ ಕರುಣೆಗಾಗಿ ನಾವು ಪೌಲನಂತೆಯೇ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲೆವು. ಇದನ್ನು ಮಾಡಸಾಧ್ಯವಿರುವ ಒಂದು ವಿಧವು, ಬೈಬಲ್ ಅಧ್ಯಯನಗಳನ್ನು ಆರಂಭಿಸಿ ನಡೆಸುವುದೇ ಆಗಿದೆ.
3 ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು: ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿರುವ ಒಂದು ವಿಧವು, ಪತ್ರಿಕಾ ಮಾರ್ಗಗಳನ್ನು ಸ್ಥಾಪಿಸುವುದೇ ಆಗಿದೆ. ನಮ್ಮ ಪತ್ರಿಕಾ ಮಾರ್ಗದಲ್ಲಿರುವವರನ್ನು ಕ್ರಮವಾಗಿ ಭೇಟಿಮಾಡುವಾಗ, ನಾವು ಅವರ ಚಿಂತೆಗಳ ಕುರಿತು ಹೆಚ್ಚು ತಿಳಿದುಕೊಳ್ಳುತ್ತೇವೆ. ಕಾಲ ಸಂದಂತೆ, ಪತ್ರಿಕೆಗಳಲ್ಲೊಂದರಲ್ಲಿ ತೋರಿಬರುವ ಒಂದು ಲೇಖನವು ಅಪೇಕ್ಷಿಸು ಬ್ರೋಷರ್ನಿಂದ ಬೈಬಲ್ ಅಧ್ಯಯನವನ್ನು ಆರಂಭಿಸಲು ಉಡಾವಣೆ ಪೀಠವಾಗಿ ಉಪಯುಕ್ತವಾಗಬಹುದು. ನೀವು ಮನೆಯವರಿಗೆ ಪತ್ರಿಕೆಗಳನ್ನು ನೀಡಲು ಮಾಡುವ ಪ್ರತಿಯೊಂದು ಭೇಟಿಯಲ್ಲೂ ಅಪೇಕ್ಷಿಸು ಬ್ರೋಷರ್ನಿಂದ ಸಂಭಾಷಣೆಗಳನ್ನು ಮುಂದುವರಿಸಲು ನಿಮಗೆ ಸಾಧ್ಯವಾಗಬಹುದು.
4 ಪ್ರಾರ್ಥನಾಪೂರ್ವಕ ಪ್ರಯತ್ನ ಆವಶ್ಯ: ಪ್ರಾರ್ಥನೆಯೊಂದಿಗೆ ಕೂಡಿದ ನಮ್ಮ ಶ್ರದ್ಧಾಪೂರ್ವಕ ಪ್ರಯತ್ನಗಳು ನಮ್ಮ ಸಾರುವ ಕೆಲಸವನ್ನು ಪ್ರಗತಿಪರಗೊಳಿಸಬಲ್ಲವು. ಒಂದು ಬೈಬಲ್ ಅಧ್ಯಯನವನ್ನು ಹೊಂದಿದ್ದ ಒಬ್ಬ ಪಯನೀಯರ್ ಸಹೋದರಿಯು, ತನ್ನನ್ನು ಹೆಚ್ಚು ಅಧ್ಯಯನಗಳೊಂದಿಗೆ ಆಶೀರ್ವದಿಸುವಂತೆ ಯೆಹೋವನಲ್ಲಿ ಪ್ರಾರ್ಥಿಸಿದಳು. ಮತ್ತು ತನ್ನ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಅವಳು ಕ್ರಿಯೆಗೈದಳು. ಅವಳು ತನ್ನ ಶುಶ್ರೂಷೆಯನ್ನು ಪರೀಕ್ಷಿಸಿದಳು ಮತ್ತು ತಾನು ಪುನರ್ಭೇಟಿಗಳನ್ನು ಮಾಡುತ್ತಿರುವಾಗ ಬೈಬಲ್ ಅಧ್ಯಯನಗಳ ಪ್ರಸ್ತಾಪವನ್ನು ಮಾಡುತ್ತಿಲ್ಲ ಎಂಬುದನ್ನು ಗ್ರಹಿಸಿದಳು. ಅವಳು ಇದನ್ನು ಮಾಡಲು ಪ್ರಾರಂಭಿಸಿದಳು ಮತ್ತು ಶೀಘ್ರವೇ ಎರಡು ಅಧ್ಯಯನಗಳನ್ನು ಪಡೆದುಕೊಂಡಳು.
5 “ದೇವರ ಅಪಾತ್ರ ದಯೆಯ ವಿಷಯವಾದ ಸುವಾರ್ತೆಯನ್ನು” ಪ್ರಚುರಪಡಿಸುವುದರಲ್ಲಿ ಭಾಗವಹಿಸುವುದು ಎಂತಹ ಸುಯೋಗವಾಗಿದೆ! (ಅ. ಕೃ. 20:24, NW) ದೇವರ ಕರುಣೆಗಾಗಿರುವ ಗಣ್ಯತೆಯು, ಇತರರೂ ಯೆಹೋವನ ಅಪಾತ್ರ ದಯೆಯಿಂದ ಪ್ರಯೋಜನಪಡೆದುಕೊಳ್ಳಲು ಅವರಿಗೆ ಸಹಾಯಮಾಡುವಂತೆ ನಮ್ಮನ್ನು ಪ್ರಚೋದಿಸುವುದು.