ಬಹುಭಾಷೀಯ ಟೆರಿಟೊರಿಯಲ್ಲಿ ಸಾಹಿತ್ಯವನ್ನು ನೀಡುವುದು
1. ಸ್ಥಳಿಕ ಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನಾಡುವವರಿಗೆ ಯಾವ ಸಹಾಯವು ಒದಗಿಸಲ್ಪಟ್ಟಿದೆ?
1 ಅನೇಕ ದೊಡ್ಡ ನಗರಗಳಲ್ಲಿ, ಕೇವಲ ಒಂದೇ ಭಾಷೆಯನ್ನು ಉಪಯೋಗಿಸಿ ಕೂಟಗಳನ್ನು ನಡೆಸುವುದನ್ನು ಆರಂಭಿಸುವುದರಲ್ಲಿ ಒಳ್ಳೆಯ ಪ್ರಗತಿ ಮಾಡಲ್ಪಟ್ಟಿದೆ. ಸ್ಥಳಿಕ ಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ಅರ್ಥಮಾಡಿಕೊಳ್ಳುವವರು, ಅವರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯು ಉಪಯೋಗಿಸಲ್ಪಡುವ ಹತ್ತಿರದ ಸಭೆಗೆ ಹೋಗುವಂತೆ ನಿರ್ದೇಶಿಸಲ್ಪಟ್ಟಿದ್ದಾರೆ. ಆದರೆ ಹಲವಾರು ಭಾಷೆಗಳನ್ನಾಡುವವರು ಮಿಶ್ರಿತ ಜನಸ್ತೋಮವಾಗಿ ಹಬ್ಬಿಕೊಂಡಿರುವ ಒಂದು ಟೆರಿಟೊರಿಯಲ್ಲಿ ಸಾಕ್ಷಿಕೊಡುವುದರ ಕುರಿತಾಗಿ ಯಾವ ಏರ್ಪಾಡುಗಳು ಮಾಡಲ್ಪಟ್ಟಿವೆ?
2. ಒಂದೇ ಟೆರಿಟೊರಿಯಲ್ಲಿ ವಿಭಿನ್ನವಾದ ಭಾಷೆಗಳನ್ನಾಡುವ ಒಂದು ಅಥವಾ ಹೆಚ್ಚು ಸಭೆಗಳು ಕೆಲಸಮಾಡುವಾಗ ಯಾವ ಸಹಕಾರವು ಬೇಕಾಗಿರುತ್ತದೆ?
2 ಸಾಹಿತ್ಯವನ್ನು ನೀಡುವುದು: ವಿಷಯವು ಹೀಗಿರುವುದಾದರೆ, ವಿಭಿನ್ನವಾದ ಭಾಷೆಗಳನ್ನಾಡುವ ಎರಡು ಅಥವಾ ಹೆಚ್ಚು ಸಭೆಗಳು ಆ ಟೆರಿಟೊರಿಯಲ್ಲಿ ಕ್ರಮವಾಗಿ ಕೆಲಸಮಾಡಲು ಏರ್ಪಾಡುಗಳನ್ನು ಮಾಡಬೇಕು. ಪ್ರತಿಯೊಂದು ಭಾಷಾ ಗುಂಪು ಸಮಗ್ರವಾದ ಸಾಕ್ಷಿಯನ್ನು ಪಡೆದುಕೊಳ್ಳುವಂತಾಗಲು ಸಂಬಂಧಿತ ಹಿರಿಯರ ಮಂಡಲಿಗಳು ಸೇವಾ ಮೇಲ್ವಿಚಾರಕರೊಂದಿಗೆ ಕೆಲಸಮಾಡುತ್ತಾ ಒಂದು ಪರಸ್ಪರವಾಗಿ ಅಂಗೀಕೃತ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವವು. ಇಂತಹ ಟೆರಿಟೊರಿಯಲ್ಲಿ ಪ್ರಚಾರಕರು ಮನೆಯಿಂದ ಮನೆಗೆ ಸಾರುತ್ತಿರುವಾಗ, ಇತರ ಸಭೆಗಳ ಭಾಷೆಗಳಲ್ಲಿ ಅವರು ಸಾಮಾನ್ಯವಾಗಿ ಸಾಹಿತ್ಯವನ್ನು ನೀಡುವುದಿಲ್ಲ. ಒಂದುವೇಳೆ ಅವರು ನೀಡುವುದಾದರೆ, ಸಂಬಂಧಿತ ಸಭೆಯಿಂದ ಸಂಪರ್ಕಿಸಲ್ಪಡುವಂತೆ ಆ ವ್ಯಕ್ತಿಗಳ ಹೆಸರು ವಿಳಾಸಗಳನ್ನು ಗುರುತಿಸಿಕೊಳ್ಳಬೇಕು. ಸೇವಾ ಮೇಲ್ವಿಚಾರಕರು ಪ್ರತಿಯೊಂದು ಮನೆಯ ಭಾಷೆಯ ಕುರಿತ ಮಾಹಿತಿಯನ್ನು ವೈಯಕ್ತಿಕ ಟೆರಿಟೊರಿ ನೇಮಕ ಕಾರ್ಡ್ನಲ್ಲಿ ನೀಟಾಗಿ ದಾಖಲಿಸುವಂತೆ ಏರ್ಪಡಿಸುವರು, ಮತ್ತು ಹೀಗೆ, ಭವಿಷ್ಯದಲ್ಲಿ, ಪ್ರಚಾರಕರು ತಮ್ಮ ಸಭೆಯ ಭಾಷೆಯನ್ನಾಡುವ ಜನರನ್ನು ಮಾತ್ರ ಸಂಪರ್ಕಿಸುವಂತಾಗುವುದು.
3. ಬಹುಭಾಷೀಯ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡುವುದರಲ್ಲಿ ಬೆಂಬಲವನ್ನು ನೀಡಲು ವೈಯಕ್ತಿಕವಾಗಿ ಪ್ರತಿಯೊಬ್ಬ ಪ್ರಚಾರಕರು ಏನು ಮಾಡಸಾಧ್ಯವಿದೆ?
3 ಪ್ರತಿಯೊಂದು ಸಭೆಯಿಂದ ಟೆರಿಟೊರಿಯು ಸಂಪೂರ್ಣವಾಗಿ ಆವರಿಸಲ್ಪಡುತ್ತಿದೆ ಮತ್ತು ಇದನ್ನು ಕ್ರಮವಾದ ಅಂತರಗಳಲ್ಲಿ ಮಾಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಒಳ್ಳೆಯ ಸಂಯೋಜನೆಯು ಬೇಕಾಗಿದೆ. ಎಲ್ಲಾ ಪ್ರಚಾರಕರು ಕೇವಲ ತಮ್ಮ ಸಭೆಯ ಭಾಷೆಯನ್ನಾಡುವ ಜನರ ಮೇಲೆ ತಮ್ಮ ಮುಖ್ಯ ಗಮನವನ್ನು ಕೇಂದ್ರೀಕರಿಸುವ ಮೂಲಕ ಸಹಕರಿಸಬಹುದು. ಸವಿವರವಾದ ಮನೆ-ಮನೆಯ ದಾಖಲೆಗಳನ್ನು ಹೊಂದಿರುವುದು ಕೂಡ ಸಹಾಯಕರ. ನಿರ್ದೇಶಿಸಲ್ಪಟ್ಟಂತೆ S-8 ಫಾರ್ಮನ್ನು ಉಪಯೋಗಿಸಿರಿ ಮತ್ತು ಭಾಷಾ ಮಾಹಿತಿಯನ್ನು ಸೇವಾ ಮೇಲ್ವಿಚಾರಕನಿಗೆ ತಪ್ಪದೆ ಕೊಡಿರಿ. ಮನೆಯವರು ಎರಡು ಅಥವಾ ಮೂರು ಭಾಷೆಗಳನ್ನು ಚೆನ್ನಾಗಿ ಮಾತಾಡುವುದಾದರೆ, ಆ ಮನೆಯನ್ನು ಯಾವ ಸಭೆಯು ಭೇಟಿಮಾಡುತ್ತಾ ಮುಂದುವರಿಯಬೇಕೆಂಬುದನ್ನು ನಿರ್ಧರಿಸಲು ವಿವೇಚನೆಯ ಅಗತ್ಯವಿದೆ. ಇದಕ್ಕೆ ಕೂಡಿಸುತ್ತಾ, ನಿವಾಸಿಗಳು ಆಗಿಂದಾಗ್ಗೆ ಬದಲಾಗುತ್ತಾ ಇರುವುದರಿಂದ, ದಾಖಲೆಗಳನ್ನು ಕ್ರಮವಾಗಿ ಸದ್ಯೋಚಿತಗೊಳಿಸಬೇಕು.
4. ಒಂದು ಸಭೆಯು ತಮ್ಮದಲ್ಲದ ಭಾಷೆಯ ಸಾಹಿತ್ಯವನ್ನು ಯಾವಾಗ ಸ್ಟಾಕ್ನಲ್ಲಿಡುವುದು?
4 ಸಾಹಿತ್ಯವನ್ನು ಸ್ಟಾಕ್ನಲ್ಲಿ ಹೊಂದಿರುವುದು: ಸಾಮಾನ್ಯ ನಿಯಮವಾಗಿ ಒಂದು ಸಭೆಯು, ಬೇರೊಂದು ಸ್ಥಳಿಕ ಸಭೆ ಉಪಯೋಗಿಸುವ ಭಾಷೆಯ ದೊಡ್ಡ ಪ್ರಮಾಣದ ಸಾಹಿತ್ಯವನ್ನು ಸ್ಟಾಕ್ನಲ್ಲಿ ಹೊಂದಿರಬಾರದು. ಆದರೆ ಬೇರೊಂದು ಭಾಷೆಯನ್ನಾಡುವ ಜನಸಮೂಹದ ಹೆಚ್ಚುಕಡಿಮೆ ದೊಡ್ಡ ಗುಂಪು ಒಂದು ಕ್ಷೇತ್ರದಲ್ಲಿದ್ದು, ಆದರೆ ಅದೇ ಸಮಯದಲ್ಲಿ ಆ ನಿರ್ದಿಷ್ಟ ಭಾಷೆಯನ್ನಾಡುವ ಬೇರೊಂದು ಸಭೆ ಇಲ್ಲದಿರುವುದಾದರೆ ಆಗೇನು? ಆ ಪರಿಸ್ಥಿತಿಗಳ ಕೆಳಗೆ, ಸಭೆಗಳು ಆ ಭಾಷೆಯಲ್ಲಿ ಟ್ರ್ಯಾಕ್ಟ್ಗಳು, ಅಪೇಕ್ಷಿಸು ಬ್ರೋಷರ್, ಮತ್ತು ಜ್ಞಾನ ಪುಸ್ತಕದಂಥ ಮೂಲಭೂತ ಸಾಹಿತ್ಯದ ಒಂದು ಚಿಕ್ಕ ಪ್ರಮಾಣದ ಸಾಹಿತ್ಯವನ್ನು ಹೊಂದಿರಬಹುದು. ಪ್ರಚಾರಕರು ಈ ಭಾಷೆಯನ್ನಾಡುವ ಯಾರನ್ನಾದರೂ ಭೇಟಿಯಾಗುವುದಾದರೆ ಈ ಸಾಹಿತ್ಯವನ್ನು ನೀಡಬಹುದು.
5. ಸಭೆಯು ಸ್ಟಾಕ್ನಲ್ಲಿಡದ ಭಾಷೆಯಲ್ಲಿ ಸಾಹಿತ್ಯವು ಅಗತ್ಯವಿರುವುದಾದರೆ, ಅದನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?
5 ಒಬ್ಬ ಆಸಕ್ತ ವ್ಯಕ್ತಿಯು ಓದುವ ಭಾಷೆಯಲ್ಲಿ ಒಂದು ಸಭೆಯು ಸಾಹಿತ್ಯವನ್ನು ಸ್ಟಾಕ್ನಲ್ಲಿಡುವುದಿಲ್ಲವಾದರೆ, ಆ ಭಾಷೆಯಲ್ಲಿ ಸಾಹಿತ್ಯವನ್ನು ಹೇಗೆ ಪಡೆದುಕೊಳ್ಳುವುದು? ಆ ಭಾಷೆಯಲ್ಲಿ ಯಾವ ಪ್ರಕಾಶನಗಳು ಲಭ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಚಾರಕನು ಸಾಹಿತ್ಯ ಸೇವಕನ ಬಳಿ ವಿಚಾರಿಸಬೇಕು, ಮತ್ತು ಹೀಗೆ ಅಗತ್ಯವಿರುವ ಸಾಹಿತ್ಯವನ್ನು ಸಭೆಯ ಮುಂದಿನ ಸಾಹಿತ್ಯ ವಿನಂತಿಯಲ್ಲಿ ಆರ್ಡರ್ ಮಾಡಬಹುದು.
6. ಕ್ರೈಸ್ತ ಪ್ರಕಾಶನಗಳನ್ನು ಲಭ್ಯಗೊಳಿಸುವುದರಲ್ಲಿ ನಮ್ಮ ಗುರಿ ಏನಾಗಿದೆ?
6 “ಎಲ್ಲಾ ಮನುಷ್ಯರು,” ಅವರ ಭಾಷೆಯ ಹೊರತಾಗಿಯೂ ‘ಸತ್ಯದ ಜ್ಞಾನಕ್ಕೆ ಬಂದು ರಕ್ಷಣೆಯನ್ನು ಹೊಂದಲು’ ನಮ್ಮ ಕ್ರೈಸ್ತ ಪ್ರಕಾಶನಗಳನ್ನು ಸದುಪಯೋಗಿಸೋಣ.—1 ತಿಮೊ. 2:3, 4.