ಹೊಂದಿಸಿಕೊಳ್ಳಸಾಧ್ಯವಿರುವಂಥ ಒಂದು ಪ್ರಸ್ತಾಪವನ್ನು ಉಪಯೋಗಿಸಲು ಪ್ರಯತ್ನಿಸಿರಿ
ಜನರ ಕಡೆಗೆ ನಮಗಿರುವ ಪ್ರಾಮಾಣಿಕ ಆಸಕ್ತಿಯು ಅವರ ಅಗತ್ಯಗಳನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸುವಂತೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯವು ಹೇಗೆ ಸಂಪೂರ್ಣ ಪರಿಹಾರವನ್ನು ತರುವುದು ಎಂಬುದನ್ನು ತೋರಿಸುವಂತೆ ನಮ್ಮನ್ನು ಪ್ರೇರಿಸುವುದು. (ಫಿಲಿ. 2:4) ನಮ್ಮ ಪ್ರಕಾಶನಗಳಲ್ಲಿರುವ ಪರದೈಸನ್ನು ಚಿತ್ರಿಸುವ ಚಿತ್ರಗಳ ಕುರಿತು ಹೇಳಿಕೆ ನೀಡುವಂತೆ ಮನೆಯವರನ್ನು ಪ್ರೋತ್ಸಾಹಿಸುವುದು ಹೊಂದಿಸಿಕೊಳ್ಳಸಾಧ್ಯವಿರುವ ಪರಿಣಾಮಕಾರಿಯಾದ ಪ್ರಸ್ತಾಪವಾಗಿದೆ ಎಂದು ಅನೇಕ ಪ್ರಚಾರಕರು ಕಂಡುಕೊಂಡಿದ್ದಾರೆ; ಇವುಗಳಲ್ಲಿ ಕೆಲವನ್ನು ಈ ಪುಟದ ಬಲಬದಿಯಲ್ಲಿ ಪಟ್ಟಿಮಾಡಲಾಗಿದೆ. ಮುಂದಿನ ನಿರೂಪಣೆಗಳಲ್ಲೊಂದನ್ನು ಉಪಯೋಗಿಸುವ ಮೂಲಕ ನೀವಿದನ್ನು ಮಾಡಬಲ್ಲಿರಿ:
◼ “ಇಲ್ಲಿ ಚಿತ್ರಿಸಲ್ಪಟ್ಟಿರುವ ರೀತಿಯ ಪರಿಸ್ಥಿತಿಗಳಲ್ಲಿ ಮಾನವ ಕುಟುಂಬವು ಆನಂದಿಸುವುದನ್ನು ನಾವೆಂದಾದರೂ ನೋಡಸಾಧ್ಯವಿದೆ ಎಂದು ನಿಮಗೆ ಅನಿಸುತ್ತದೋ?”
◼ “ಇಲ್ಲಿ ಚಿತ್ರಿಸಲ್ಪಟ್ಟಿರುವ ರೀತಿಯ ಲೋಕದಲ್ಲಿ ನಮ್ಮ ಮಕ್ಕಳು ಆನಂದವನ್ನು ಕಂಡುಕೊಳ್ಳಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಇದು ಸಾಧ್ಯವಾಗಬೇಕಾದರೆ ಏನು ಅಗತ್ಯ ಎಂದು ನಿಮಗನಿಸುತ್ತದೆ?”
◼ “ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರುವಾಗ ಭೂಮಿಯು ಹೇಗೆ ಕಾಣುವುದು ಎಂಬುದರ ಚಿತ್ರಣವೇ ಇದು. ಇಂದಿನ ಜೀವಿತಕ್ಕೆ ಹೋಲಿಸುವಾಗ ಈ ಚಿತ್ರದಲ್ಲಿ ಏನಾದರೂ ಭಿನ್ನತೆಯಿರುವುದನ್ನು ನೀವು ಗಮನಿಸುತ್ತೀರೋ?”
◼ “ಇಲ್ಲಿ ಚಿತ್ರಿಸಲ್ಪಟ್ಟಿರುವ ಪರಿಸ್ಥಿತಿಗಳಲ್ಲಿ ನೀವು ಜೀವಿಸಲು ಬಯಸುವಿರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇದು ನಮ್ಮ ಜೀವಮಾನ ಕಾಲದಲ್ಲಿ ಸಂಭವಿಸುವುದು ಎಂದು ನಿಮಗೆ ತೋರುತ್ತದೋ?”
ವ್ಯಕ್ತಿಯ ಪ್ರತಿಕ್ರಿಯೆಗೆ ನಿಕಟ ಗಮನಕೊಡಿರಿ, ಮತ್ತು ಒಂದೆರಡು ಹೆಚ್ಚಿನ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಅವರು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸುವಂತೆ ಮಾಡಿ. ಚಿತ್ರಿಸಲ್ಪಟ್ಟಿರುವ ಪರಿಸ್ಥಿತಿಗಳ ಕೆಳಗೆ ಜೀವಿಸುವ ಬಯಕೆಯಿಲ್ಲ ಅಥವಾ ಇಂತಹ ಸಂಗತಿ ಸಂಭವಿಸುವುದು ಅಸಾಧ್ಯ ಎಂದು ಅವರು ಅಭಿಪ್ರಯಿಸುವುದಾದರೆ, ಅವರಿಗೆ ಆಸಕ್ತಿಯಿಲ್ಲ ಎಂದು ಕೂಡಲೆ ತೀರ್ಮಾನಿಸಿಬಿಡಬೇಡಿ. ಅವರಿಗೆ ಹೀಗೇಕೆ ಅನಿಸುತ್ತದೆ ಎಂದು ಸಮಯೋಚಿತ ನಯದಿಂದ ವಿಚಾರಿಸಿ. ಮಾನವಕುಲವು ಎದುರಿಸುತ್ತಿರುವ ಪರಿಹರಿಸಲಾಗದಂತೆ ತೋರುವ ಸಮಸ್ಯೆಗಳ ವಿಷಯದಲ್ಲಿ ಅವರು ಗಾಢವಾಗಿ ಚಿಂತಿತರಾಗಿದ್ದಾರೆ ಎಂಬುದನ್ನು ಅವರ ಹೇಳಿಕೆಗಳು ವ್ಯಕ್ತಪಡಿಸಬಹುದು.—ಯೆಹೆ. 9:4.
ಮನೆಯವರ ಚಿಂತೆಗಳನ್ನು ನೀವು ಗ್ರಹಿಸಿ, ನಿಮ್ಮ ನಿರೂಪಣೆಯನ್ನು ಅದಕ್ಕೆ ತಕ್ಕ ಹಾಗೆ ಹೊಂದಿಸಿಕೊಳ್ಳಿ. ಅವರ ಅಗತ್ಯಗಳನ್ನು ನೇರವಾಗಿ ಸಂಬೋಧಿಸುವ ರಾಜ್ಯ ಸಂದೇಶದ ಅಂಶವನ್ನು ಎತ್ತಿತೋರಿಸಿ. ಅವರು ಚಿಂತಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದ ಒಂದೆರಡು ಶಾಸ್ತ್ರವಚನಗಳನ್ನು ಅವರಿಗೆ ತೋರಿಸಿರಿ. (ಬಲಬದಿಯ ಕಾಲಮ್ನಲ್ಲಿರುವ ಸಲಹೆಗಳನ್ನು ನೋಡಿರಿ.) ದೇವರ ವಾಕ್ಯವು ಏನು ಹೇಳುತ್ತದೆ ಎಂಬುದನ್ನು ಮನೆಯವರು ಸ್ವತಃ ನೋಡಲಿ. ಅವರು ಆಸಕ್ತಿಯನ್ನು ತೋರಿಸುವುದಾದರೆ ಪ್ರಕಾಶನವನ್ನು ನೀಡಿರಿ ಮತ್ತು ಪುನಃ ಭೇಟಿಕೊಡಲು ಏರ್ಪಾಡನ್ನು ಮಾಡಿರಿ. ನಿಮ್ಮ ಮೊದಲ ಚರ್ಚೆಯಿಂದಲೇ ಮುಂದುವರಿಸುತ್ತಾ ಅವರ ಆಸಕ್ತಿಯನ್ನು ಬೆಳೆಸುವುದನ್ನು ಮುಂದುವರಿಸಿ.
[ಪುಟ 6ರಲ್ಲಿರುವಚಿತ್ರ]
ಪರದೈಸ್ ದೃಶ್ಯಗಳ ಉದಾಹರಣೆಗಳು
ಸೃಷ್ಟಿ (ಇಂಗ್ಲಿಷ್) ಪುಸ್ತಕ: ಪುಟಗಳು 237, 243, 251
ಬೋಧಕ (ಇಂಗ್ಲಿಷ್) ಪುಸ್ತಕ: ಪುಟಗಳು 251-4
ಜ್ಞಾನ ಪುಸ್ತಕ: ಪುಟಗಳು 4-5, 188-9
ಅಪೇಕ್ಷಿಸು ಬ್ರೋಷರ್: ಪುಟಗಳು 11, 13
ನಿಜ ಶಾಂತಿ ಪುಸ್ತಕ: ಪುಟ 98
ದೇವರನ್ನು ಆರಾಧಿಸಿರಿ ಪುಸ್ತಕ: ಪುಟಗಳು 92-3
[ಪುಟ 6ರಲ್ಲಿರುವಚಿತ್ರ]
ಜನರನ್ನು ಚಿಂತೆಗೀಡುಮಾಡುವ ವಿಚಾರಗಳು
ಅಸ್ವಸ್ಥತೆ, ಅಂಗವಿಕಲತೆ
ಆಹಾರದ ಅಭಾವಗಳು, ನ್ಯೂನಪೋಷಣೆ
ಖಿನ್ನತೆ
ಕೀರ್ತನೆ 34:8, NW
ನೈತಿಕತೆಯ ಕುಸಿತ
ಪಾತಕ, ಹಿಂಸೆ
ಪೂರ್ವಾಗ್ರಹ, ಅಸಮಾನತೆ
ಪ್ರಾಣಿಗಳ ಶೋಷಣೆ
ಫಲಕಾರಿಯಲ್ಲದ ಸರಕಾರ
ಬಡತನ, ದಬ್ಬಾಳಿಕೆ
ಭ್ರಷ್ಟಾಚಾರ, ಅನ್ಯಾಯ
ಮರಣ, ಶೋಕ
ಯುದ್ಧ, ಭಯೋತ್ಪಾದನೆ
ಲೋಕ ನಾಶನ
ವಸತಿ ಸೌಲಭ್ಯ, ಆರ್ಥಿಕ ಸಮಸ್ಯೆಗಳು