ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2006ರ ಡಿಸೆಂಬರ್ 25ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2006ರ ನವೆಂಬರ್ 6ರಿಂದ ಡಿಸೆಂಬರ್ 25ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಒಂದು ಶಾಸ್ತ್ರವಚನವನ್ನು ಪರಿಚಯಿಸಲು ಸೂಕ್ತವಾದ ಹೇಳಿಕೆಗಳನ್ನು ಆರಿಸುವಂತೆ ನಮಗೆ ಯಾವುದು ಸಹಾಯಮಾಡುವುದು? [be-KA ಪು. 148 ಪ್ಯಾರ. 4-ಪು. 149 ಪ್ಯಾರ. 1]
2. ನಾವು ಪದಗಳಿಗೆ ಮತ್ತು ಅಭಿವ್ಯಕ್ತಿಗಳಿಗೆ ಸೂಕ್ತವಾದ ಒತ್ತುನೀಡುವುದನ್ನು ಖಚಿತಪಡಿಸಿಕೊಳ್ಳಲು ಯಾವ ವಿಧಾನಗಳನ್ನು ಬಳಸಬಹುದು? [be-KA ಪು. 151 ಪ್ಯಾರ. 4-ಪು. 152 ಪ್ಯಾರ. 3]
3. ದೇವರ ವಾಕ್ಯವನ್ನು ಇತರರಿಗೆ ಕಲಿಸುವುದು ಗಂಭೀರವಾದ ವಿಷಯವಾಗಿರುವುದರಿಂದ, ನಾವು ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಲು’ ಏನು ಅಗತ್ಯ? (2 ತಿಮೊ. 2:15) [be-KA ಪು. 153 ಪ್ಯಾರ. 1-3, ಚೌಕ; ಪು. 154 ಪ್ಯಾರ. 1-2]
4. ನಾವು ಓದುವ ಶಾಸ್ತ್ರವಚನಗಳ ಅನ್ವಯವನ್ನು ನಾವು ಯಾವ ವಿಧಗಳಲ್ಲಿ ಸ್ಪಷ್ಟಪಡಿಸಬಹುದು? [be-KA ಪು. 154 ಪ್ಯಾರ. 4-ಪು. 155 ಪ್ಯಾರ. 3]
5. ನಮ್ಮ ವಿಷಯವಸ್ತುವಿನ ಪ್ರಾಯೋಗಿಕ ಮೌಲ್ಯವನ್ನು ಸ್ಪಷ್ಟಪಡಿಸುವುದು ಏಕೆ ಪ್ರಾಮುಖ್ಯ ಮತ್ತು ಇದನ್ನು ಮಾಡಬಹುದಾದ ಕೆಲವೊಂದು ವಿಧಗಳು ಯಾವುವು? [be-KA ಪು. 157 ಪ್ಯಾರ. 1-4, ಚೌಕ; ಪು. 158 ಪ್ಯಾರ. 1]
ನೇಮಕ ನಂ. 1
6. ಸೊಲೊಮೋನನು ಸಭೆಯನ್ನು ಜಮಾಯಿಸುವವನಾಗಿದ್ದದ್ದು ಯಾವ ಅರ್ಥದಲ್ಲಿ? [bsi06-KA ಪು. 25 ಪ್ಯಾರ. 1-3]
7. ಪ್ರಸಂಗಿ ಪುಸ್ತಕವು ಯೇಸುವಿನ ಬೋಧನೆಗಳಿಗೆ ಹೇಗೆ ಹೊಂದಿಕೆಯಲ್ಲಿದೆ? [bsi06-KA ಪು. 26 ಪ್ಯಾರ. 16]
8. ಪರಮಗೀತ ಪುಸ್ತಕದ ಅಧಿಕೃತತೆಗೆ ಯಾವ ಸಾಕ್ಷ್ಯವಿದೆ? [bsi06-KA ಪು. 28 ಪ್ಯಾರ. 3-4]
9. ನಮ್ಮ ಬೈಬಲ್ಗಳು ಮೂಲ ಪ್ರೇರಿತ ಬರಹಗಳಿಗೆ ಹೊಲಿಕೆಯಲ್ಲಿವೆಯೆಂದು ಯೆಶಾಯ ಪುಸ್ತಕದ ಮೃತ ಸಮುದ್ರ ಸುರುಳಿಯು ಹೇಗೆ ದೃಢೀಕರಿಸುತ್ತದೆ? [bsi06-KA ಪು. 30 ಪ್ಯಾರ. 6]
10. ವಿಸ್ತಾರವಾದ ಟಿಪ್ಪಣಿಯನ್ನು ಬರೆದಿಟ್ಟುಕೊಳ್ಳುವ ಅಗತ್ಯವನ್ನು ನೀಗಿಸಲು ಒಬ್ಬ ಭಾಷಣಕಾರನಿಗೆ ಯಾವುದು ಸಹಾಯಮಾಡುವುದು? [be-KA ಪು. 42 ಪ್ಯಾರ. 3]
ವಾರದ ಬೈಬಲ್ ವಾಚನ
11. “ಯೆಹೋವನನ್ನು ಹುಡುಕುವವರು” (NIBV) ‘ಸಮಸ್ತವನ್ನು ಗ್ರಹಿಸುವುದು’ ಹೇಗೆ? (ಜ್ಞಾನೋ. 28:5)
12. ‘ಮೂಢರು ಪಡುವ ಪ್ರಯಾಸ ಆಯಾಸವನ್ನುಂಟು’ ಮಾಡುವುದು ಹೇಗೆ? (ಪ್ರಸಂ. 10:15)
13. ಶೂಲೇಮ್ಯ ಕನ್ಯೆಯು, “ಅಗುಳಿಹಾಕಿದ ಉದ್ಯಾನ”ವಾಗಿದ್ದದು ಹೇಗೆ, ಮತ್ತು ಅವಳು ಅವಿವಾಹಿತ ಕ್ರೈಸ್ತ ಸ್ತ್ರೀಯರಿಗೆ ಉತ್ತಮ ಮಾದರಿಯಾಗಿರುವುದು ಹೇಗೆ? (ಪರಮ. 4:12)
14. ಯೆಹೋವನು ಇಸ್ರಾಯೇಲ್ಯರಿಗೆ, “ಬನ್ನಿರಿ, ವಾದಿಸುವ” [“ವಿಷಯಗಳನ್ನು ಸರಿಪಡಿಸಿಕೊಳ್ಳೊಣ,” NW] ಎಂಬ ಕರೆಯನ್ನು ಕೊಡುವ ಮೂಲಕ ಅವರೊಂದಿಗೆ ಒಂದು ನ್ಯಾಯಸಮ್ಮತವಾದ ಒಪ್ಪಂದ ಮಾಡಲಿಕ್ಕಾಗಿ ಸಿದ್ಧನಿದ್ದನೆಂಬುದನ್ನು ಸೂಚಿಸುತ್ತಿದ್ದನೊ? (ಯೆಶಾ. 1:18ಎ)
15. ಪ್ರಾಚೀನ ಕಾಲಗಳಲ್ಲಿ ಯೆಶಾಯ 11:6-9 ಹೇಗೆ ನೆರವೇರಿತು ಮತ್ತು ಅದರ ಮಹಾ ನೆರವೇರಿಕೆ ಯಾವುದು?