ಅತ್ಯುನ್ನತ ಗುಣಮಟ್ಟದ ವೈದ್ಯಕೀಯ ಆರೈಕೆ—ಅದು ಯಾವುದು?
“ಒಬ್ಬ ರೋಗಿಯು ರಕ್ತರಹಿತ ಔಷಧೋಪಚಾರವನ್ನು ಪಡೆಯುವಾಗ, ಮೂಲಭೂತವಾಗಿ ಅವನು ಸಾಧ್ಯವಿರುವುದರಲ್ಲೇ ಅತ್ಯುನ್ನತ ಗುಣಮಟ್ಟದ ಶಸ್ತ್ರಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.” ಈ ಮಾತುಗಳು, ಒಬ್ಬ ವೈದ್ಯಕೀಯ ನಿರ್ದೇಶಕನು ಮತ್ತು ಅರಿವಳಿಕೆ ತಜ್ಞನಾಗಿರುವ ಡಾಕ್ಟರ್ ಮೈಕಲ್ ರೋಸ್ ಎಂಬವರದ್ದಾಗಿವೆ. ಯಾವೆಲ್ಲ ಚಿಕಿತ್ಸಾಕ್ರಮಗಳನ್ನು ಮತ್ತು ರಕ್ತಪೂರಣ ಬದಲಿಗಳನ್ನು “ರಕ್ತರಹಿತ ಔಷಧೋಪಚಾರ” ಎಂದು ಹೇಳಬಹುದು? ಇದರ ಬಗ್ಗೆ ನಿಮಗೆ ತಿಳಿದಿರಬೇಕು, ಏಕೆಂದರೆ ಆಗ ನೀವು ಔಷಧೋಪಚಾರ ಹಾಗೂ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟ ತಿಳುವಳಿಕೆಭರಿತ ನಿರ್ಣಯಗಳನ್ನು ಮಾಡಲು ಶಕ್ತರಾಗಿರುವಿರಿ. ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ ಎಂಬ ವಿಡಿಯೋವನ್ನು ನೋಡಿರಿ. ತದನಂತರ, ಈ ಮುಂದಿನ ಪ್ರಶ್ನೆಗಳ ಮೂಲಕ ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ.—ಗಮನದಲ್ಲಿಡಿ: ಈ ವಿಡಿಯೋದಲ್ಲಿ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟ ದೃಶ್ಯಗಳಿರುವುದರಿಂದ, ಇದನ್ನು ಚಿಕ್ಕ ಮಕ್ಕಳೊಂದಿಗೆ ವೀಕ್ಷಿಸುವ ವಿಷಯದಲ್ಲಿ ಹೆತ್ತವರು ವಿವೇಚನೆಯನ್ನು ಬಳಸಬೇಕು.
(1) ಯೆಹೋವನ ಸಾಕ್ಷಿಗಳು ರಕ್ತಪೂರಣಗಳನ್ನು ನಿರಾಕರಿಸುವುದಕ್ಕೆ ಮುಖ್ಯ ಕಾರಣವೇನು? (2) ವೈದ್ಯಕೀಯ ಆರೈಕೆಯ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಏನನ್ನು ಬಯಸುತ್ತಾರೆ? (3) ರೋಗಿಗಳಿಗೆ ಯಾವ ಮೂಲಭೂತ ಹಕ್ಕಿದೆ? (4) ರಕ್ತಪೂರಣ ಬದಲಿಗಳನ್ನು ಆಯ್ಕೆಮಾಡುವುದು ತರ್ಕಸಮ್ಮತವಾದದ್ದು ಮತ್ತು ಒಬ್ಬನಿಗೆ ತನ್ನ ಆರೋಗ್ಯದ ಕಡೆಗಿರುವ ಜವಾಬ್ದಾರಿಯ ಪ್ರಜ್ಞೆಯನ್ನು ತೋರಿಸುತ್ತದೆ ಏಕೆ? (5) ವಿಪರೀತ ರಕ್ತನಷ್ಟವಾದಾಗ ಡಾಕ್ಟರುಗಳಿಗೆ ಇರುವ ಎರಡು ತುರ್ತು ಆದ್ಯತೆಗಳಾವುವು? (6) ರಕ್ತಪೂರಣ ಬದಲಿ ಉಪಾಯಗಳ ನಾಲ್ಕು ಮೂಲತತ್ತ್ವಗಳಾವುವು? (7) ಡಾಕ್ಟರರು ಹೇಗೆ (ಎ) ರಕ್ತನಷ್ಟವಾಗುವುದನ್ನು ಕಡಿಮೆಮಾಡಬಹುದು, (ಬಿ) ಕೆಂಪು ರಕ್ತಕಣಗಳು ನಷ್ಟವಾಗದಂತೆ ನೋಡಿಕೊಳ್ಳಬಹುದು, (ಸಿ) ರಕ್ತ ಉತ್ಪಾದನೆಯನ್ನು ಹೆಚ್ಚಿಸಬಹುದು ಮತ್ತು (ಡಿ) ರಕ್ತನಷ್ಟವಾಗಿರುವ ಸಂದರ್ಭದಲ್ಲಿ ಉಳಿದಿರುವ ರಕ್ತದ ಪ್ರಮಾಣವನ್ನು ಹೆಚ್ಚಿಸಬಹುದು? (8) ಈ ಚಿಕಿತ್ಸಾಕ್ರಮಗಳು ಏನೆಂಬುದನ್ನು ವರ್ಣಿಸಿರಿ: (ಎ) ಹೀಮೊಡೈಲ್ಯೂಷನ್ ಮತ್ತು (ಬಿ) ಸೆಲ್ ಸ್ಯಾಲ್ವೇಜ್. (9) ಯಾವುದೇ ರಕ್ತಪೂರಣ ಬದಲಿಯ ಬಗ್ಗೆ ನಿಮಗೆ ಏನು ತಿಳಿದಿರಬೇಕು? (10) ರಕ್ತಪೂರಣಗಳಿಲ್ಲದೆ ಗಂಭೀರವಾದ ಹಾಗೂ ಜಟಿಲವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸಸಾಧ್ಯವಿದೆಯೊ? (11) ವೈದ್ಯಕೀಯ ಸಮುದಾಯದಲ್ಲಿ ಯಾವ ಸಕಾರಾತ್ಮಕ ಬೆಳವಣಿಗೆಯು ನಡೆಯುತ್ತಿದೆ?
ಈ ವಿಡಿಯೋದಲ್ಲಿ ತೋರಿಸಲಾಗಿರುವ ಯಾವುದೇ ಚಿಕಿತ್ಸೆಯನ್ನು ಸ್ವೀಕರಿಸಬೇಕೊ ಎಂಬುದು, ಪ್ರತಿಯೊಬ್ಬರು ತಮ್ಮ ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗನುಸಾರ ಮಾಡಬೇಕಾದ ವೈಯಕ್ತಿಕ ನಿರ್ಣಯವಾಗಿದೆ. ನಿಮಗೋಸ್ಕರ ಮತ್ತು ನಿಮ್ಮ ಮಕ್ಕಳಿಗೋಸ್ಕರ ಯಾವ ರಕ್ತಪೂರಣ ಬದಲಿಗಳನ್ನು ತೆಗೆದುಕೊಳ್ಳಲು ಬಯಸುವಿರೆಂದು ನಿರ್ಣಯಿಸಿದ್ದೀರೊ? ನೀವು ಮಾಡುವ ನಿರ್ಣಯಗಳು ಮತ್ತು ಆ ನಿರ್ಣಯಗಳನ್ನು ತೆಗೆದುಕೊಂಡದ್ದರ ಕಾರಣಗಳ ಬಗ್ಗೆ ಸಾಕ್ಷಿಗಳಾಗಿರದ ಕುಟುಂಬ ಸದಸ್ಯರಿಗೂ ಚೆನ್ನಾಗಿ ತಿಳಿದಿರಬೇಕು.—2004, ಜೂನ್ 15 ಮತ್ತು 2000, ಅಕ್ಟೋಬರ್ 15ರ ಕಾವಲಿನಬುರುಜು ಸಂಚಿಕೆಗಳಲ್ಲಿನ “ವಾಚಕರಿಂದ ಪ್ರಶ್ನೆಗಳು” ಲೇಖನವನ್ನು ನೋಡಿ.