ಸತ್ಕಾರ್ಯಗಳನ್ನು ಮಾಡಲು ಹುರುಪಿನಿಂದ ಒಬ್ಬರನ್ನೊಬ್ಬರು ಪ್ರೇರೇಪಿಸಿ
“ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ” ಎಂದು ಇಬ್ರಿಯ 10:24 ನಮ್ಮನ್ನು ಪ್ರೋತ್ಸಾಹಿಸುತ್ತದೆ. ಆದರೆ ಇದನ್ನು ಮಾಡುವುದು ಹೇಗೆ? ಉತ್ತಮ ಮಾದರಿಯನ್ನಿಡುವ ಮೂಲಕ ಮತ್ತು ನಂಬಿಕೆಯ ಕ್ರಿಯೆಗಳ ಮೂಲಕವೇ. ಅಷ್ಟೇ ಅಲ್ಲದೆ ದೇವರ ಸೇವೆಯಲ್ಲಿ ನಿಮಗೆ ದೊರೆತ ಒಳ್ಳೆಯ ಅನುಭವಗಳನ್ನು ಸಭೆಯಲ್ಲಿರುವವರಿಗೆ ತಿಳಿಸಿ. ನೀವು ಆತನ ಸೇವೆಯಲ್ಲಿ ಎಷ್ಟು ಸಂತೋಷವನ್ನು ಅನುಭವಿಸುತ್ತಿದ್ದೀರೆಂದು ಅವರು ಸಹ ತಿಳಿದುಕೊಳ್ಳಲಿ. ಆದರೆ ಅವರನ್ನು ನಿಮ್ಮೊಂದಿಗೆ ಅಥವಾ ಇತರರೊಂದಿಗೆ ಹೋಲಿಸಿ, ‘ನಾವು ಇದನ್ನೆಲ್ಲಾ ಮಾಡುತ್ತಿಲ್ಲವಲ್ಲಾ’ ಅನ್ನೋ ದೋಷಿ ಭಾವನೆ ಮೂಡುವಂತೆ ಮಾತಾಡಬೇಡಿ. (ಗಲಾ. 6:4) ಯಾಕೆಂದರೆ ಆ ವಚನದಲ್ಲಿ ದೋಷಿ ಭಾವನೆ ಮೂಡಿಸಿ, ಸತ್ಕಾರ್ಯ ಮಾಡುವಂತೆ ಪ್ರೇರೇಪಿಸಿ ಎಂದು ಹೇಳಿಲ್ಲ, ಬದಲಿಗೆ ‘ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಿ’ ಎಂದು ಹೇಳಲಾಗಿದೆ. (ಶುಶ್ರೂಷಾ ಶಾಲೆ ಪುಸ್ತಕದ ಪು. 158ರ ಪ್ಯಾರ 4ನ್ನು ನೋಡಿ.) ಆದ್ದರಿಂದ ಇತರರನ್ನು ಪ್ರೀತಿಸುವಂತೆ ಪ್ರೇರೇಪಿಸಿ. ಆಗ ಅವರು ಸಾರುವಂಥ ಮತ್ತು ಭೌತಿಕ ಸಹಾಯ ಮಾಡುವಂಥ ಒಳ್ಳೆಯ ಕೆಲಸಗಳನ್ನು ತಾವಾಗಿಯೇ ಮಾಡುತ್ತಾರೆ.—2 ಕೊರಿಂ. 1:24.