ಬೈಬಲಿನಲ್ಲಿರುವ ರತ್ನಗಳು | ನೆಹೆಮೀಯ 9-11
ನಿಷ್ಠಾವಂತ ಆರಾಧಕರು ದೈವಿಕ ಏರ್ಪಾಡುಗಳಿಗೆ ಬೆಂಬಲ ನೀಡುತ್ತಾರೆ
ದೇವಜನರು ಸತ್ಯಾರಾಧನೆಗೆ ಅನೇಕ ವಿಧಗಳಲ್ಲಿ ಸ್ವಇಚ್ಛೆಯಿಂದ ಬೆಂಬಲ ನೀಡಿದರು
ದೇವಜನರು ಪರ್ಣಶಾಲೆಗಳ ಹಬ್ಬಕ್ಕಾಗಿ ಸರಿಯಾದ ರೀತಿಯಲ್ಲಿ ತಯಾರಿ ಮಾಡಿ ಆಚರಿಸಿದರು
ಧರ್ಮಶಾಸ್ತ್ರವನ್ನು ಕೇಳಿಸಿಕೊಳ್ಳಲು ಜನರು ಪ್ರತಿದಿನ ಕೂಡಿಬಂದರು ಮತ್ತು ಸಂತೋಷಿಸಿದರು
ಜನರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು, ಪ್ರಾರ್ಥಿಸಿದರು ಮತ್ತು ತಮ್ಮನ್ನು ಆಶೀರ್ವದಿಸುವಂತೆ ಯೆಹೋವ ದೇವರನ್ನು ಕೇಳಿಕೊಂಡರು
ಎಲ್ಲಾ ದೈವಿಕ ಏರ್ಪಾಡುಗಳಿಗೆ ತಾವು ಬೆಂಬಲಿಸುತ್ತಾ ಇರುತ್ತೇವೆಂದು ಜನರು ಒಪ್ಪಿಕೊಂಡರು
ದೈವಿಕ ಏರ್ಪಾಡುಗಳಿಗೆ ಯಾವಾಗಲೂ ಬೆಂಬಲಿಸುವುದರಲ್ಲಿ ಈ ಅಂಶಗಳು ಸೇರಿದ್ದವು:
ಯೆಹೋವನ ಆರಾಧಕರನ್ನು ಮಾತ್ರ ಮದುವೆಯಾಗುವುದು
ಕಾಣಿಕೆಗಳನ್ನು ನೀಡುವುದು
ಸಬ್ಬತ್ತನ್ನು ಆಚರಿಸುವುದು
ಯಜ್ಞವೇದಿಗೋಸ್ಕರ ಕಟ್ಟಿಗೆಗಳನ್ನು ಒದಗಿಸುವುದು
ಬೆಳೆಯಲ್ಲಿ ಪ್ರಥಮಫಲ ಮತ್ತು ಪ್ರಾಣಿಗಳಲ್ಲಿ ಚೊಚ್ಚಲ ಮರಿಗಳನ್ನು ಯೆಹೋವನಿಗೆ ಕೊಡುವುದು