ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
ಸೆಪ್ಟೆಂಬರ್ 4-10
ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 42-45
“ಶುದ್ಧಾರಾಧನೆ ಪುನಃಸ್ಥಾಪಿಸಲ್ಪಟ್ಟಿತು!”
it-2 1082 ¶2
ದೇವಾಲಯ
ಯೆಹೆಜ್ಕೇಲನು ನೋಡಿದ ಆಲಯದ ದರ್ಶನ. ಅದು ಕ್ರಿ.ಪೂ. 593 ನೇ ವರ್ಷವಾಗಿತ್ತು. ಯೆರೂಸಲೇಮ್ ಪಟ್ಟಣ ಮತ್ತು ಸೊಲೊಮೋನನು ಕಟ್ಟಿದ್ದ ದೇವಾಲಯವು ನಾಶವಾಗಿ 14 ವರುಷಗಳಾಗಿದ್ದವು. ಆಗ ಯಾಜಕನೂ ಪ್ರವಾದಿಯೂ ಆಗಿದ್ದ ಯೆಹೆಜ್ಕೇಲನಿಗೆ ಒಂದು ದರ್ಶನವಾಯಿತು. ದರ್ಶನದಲ್ಲಿ ಅವನು ಒಂದು ಅತ್ಯುನ್ನತ ಪರ್ವತಕ್ಕೆ ಒಯ್ಯಲ್ಪಟ್ಟನು. ಅಲ್ಲಿ ಅವನು ಯೆಹೋವನ ಒಂದು ಮಹಾ ಆಲಯವನ್ನು ನೋಡಿದನು. (ಯೆಹೆ 40:1, 2) ಅಲ್ಲಿ ನೋಡಿದ ಎಲ್ಲವನ್ನು “ಇಸ್ರಾಯೇಲ್ ವಂಶದವರಿಗೆ” ಪ್ರಕಟಿಸುವಂತೆ ಯೆಹೆಜ್ಕೇಲನಿಗೆ ಅಪ್ಪಣೆಯಾಯಿತು. ಏಕೆ? ಏಕೆಂದರೆ ಬಾಬೆಲಿನಲ್ಲಿ ಸೆರೆಯಾಗಿದ್ದ ಯೆಹೂದ್ಯರು ತಮ್ಮ ಅಪರಾಧಗಳಿಗಾಗಿ ನಾಚಿಕೆಪಟ್ಟು ಪಶ್ಚಾತ್ತಾಪಪಡಲಿಕ್ಕಾಗಿ ಮತ್ತು ನಂಬಿಗಸ್ತರಾಗಿ ಉಳಿದಿದ್ದ ಯೆಹೂದ್ಯರು ಸಾಂತ್ವನವನ್ನು ಪಡೆಯಲಿಕ್ಕಾಗಿಯೇ. (ಯೆಹೆ 40:4; 43:10, 11) ದರ್ಶನದಲ್ಲಿ ಅಳತೆಯ ಲೆಕ್ಕಾಚಾರಗಳ ಬಗ್ಗೆ ಸವಿವರವಾದ ಮಾಹಿತಿ ಕೊಡಲಾಗಿತ್ತು. ಕಟ್ಟಡ ಕಟ್ಟಲು ಬಳಸಲಾದ ಅಳತೆಯ ಮಾನಗಳು “ಅಳತೇಕೋಲು” (ಉದ್ದವಾದ ಅಳತೇಕೋಲು 3.11 ಮೀ; 10.2 ಅಡಿ) ಮತ್ತು “ಮೊಳ” (ಉದ್ದವಾದ ಮೊಳ 51.8 ಸೆಂ.ಮೀ; 20.4 ಇಂಚು). (ಯೆಹೆ 40:5, ಪಾದಟಿಪ್ಪಣಿ) ಈ ದಾರ್ಶನಿಕ ಆಲಯ ಕಟ್ಟಲು ಕೊಡಲಾದ ಅಷ್ಟು ನಿಖರ ಅಳತೆಯಿಂದಾಗಿ ಅದು ಸೆರೆವಾಸದ ನಂತರ ಕಟ್ಟಲ್ಪಡಲಿದ್ದ ಜೆರುಬ್ಬಾಬೆಲನ ಆಲಯದ ಮಾದರಿ ನಕ್ಷೆಯಾಗಿರಬೇಕೆಂದು ಕೆಲವರು ನಂಬಿದ್ದರು. ಆದರೆ ಆ ನಂಬಿಕೆಗೆ ಯಾವ ದೃಢವಾದ ಆಧಾರವೂ ಇಲ್ಲ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 467 ¶4
ಹೆಸರು
ಇಸ್ರಾಯೇಲ್ಯರು ದೇವರ ನೀತಿಯ ಆಜ್ಞೆಗಳಿಗೆ ಅನುಸಾರ ನಡೆಯಲಿಲ್ಲ. ಆತನ ಹೆಸರಿನ ಜನರಾಗಿ ಜೀವಿಸಲು ತಪ್ಪಿಹೋಗಿ ಭ್ರಷ್ಟರಾದರು. ಇದರಿಂದಾಗಿ ದೇವರ ನಾಮ ಅಪವಿತ್ರವಾಯಿತು. ಅವರು ಅದನ್ನು ಹೊಲೆಗೆಡಿಸಿದರು. (ಯೆಹೆ 43:8; ಆಮೋ 2:7) ಇಸ್ರಾಯೇಲ್ಯರ ಈ ಅಪನಂಬಿಕೆಗಾಗಿ ದೇವರು ಅವರಿಗೆ ತಕ್ಕ ಶಿಕ್ಷೆ ವಿಧಿಸಿದನು. ಅನ್ಯಜನರು ಇದನ್ನು ನೋಡಿ ಆತನ ನಾಮಕ್ಕೆ ಅಪಕೀರ್ತಿ ತರಲು ಮೊಂಡು ಧೈರ್ಯಮಾಡಿದರು. (ಹೋಲಿಸಿ, ಕೀರ್ತ 74:10, 18; ಯೆಶಾ 52:5) ಇಸ್ರಾಯೇಲ್ಯರನ್ನು ದಂಡಿಸಿದ್ದು ಯೆಹೋವನೇ ಎಂದು ಆ ಅನ್ಯಜನಾಂಗಗಳು ಅರಿತುಕೊಳ್ಳಲಿಲ್ಲ. ಯೆಹೋವನಿಗೆ ತನ್ನ ಜನರನ್ನು ಕಾಪಾಡಲು ಶಕ್ತಿಯಿಲ್ಲದ್ದರಿಂದಲೇ ಇಸ್ರಾಯೇಲ್ಯರ ಮೇಲೆ ಆಪತ್ತುಗಳು ಬಂದಿವೆ ಎಂದು ಅವರು ತಪ್ಪಾಗಿ ಅರ್ಥಮಾಡಿಕೊಂಡರು. ಆದ್ದರಿಂದ ಯೆಹೋವನು ತನ್ನ ನಾಮಕ್ಕೆ ಹತ್ತಿದ ಅಂಥ ನಿಂದನೆಗಳನ್ನು ಹೋಗಲಾಡಿಸಲು ಕ್ರಿಯೆಗೈದನು. ತನ್ನ ಹೆಸರಿನ ನಿಮಿತ್ತವಾಗಿಯೇ ಸೆರೆಯಲ್ಲಿದ್ದ ಉಳಿಕೆಯವರನ್ನು ಸ್ವದೇಶಕ್ಕೆ ಕರತಂದು ಅವರನ್ನು ಪುನಃಸ್ಥಾಪಿಸಿದನು.—ಯೆಹೆ 36:22-24.
it-2 140
ನ್ಯಾಯ
ಆದುದರಿಂದ ಯೆಹೋವನ ಅನುಗ್ರಹ ಪಡೆಯಲು ಬಯಸುವವರು ಆತನ ನ್ಯಾಯದ ಮಟ್ಟವನ್ನು ಕಲಿತುಕೊಳ್ಳಬೇಕು, ನೀತಿನ್ಯಾಯಗಳನ್ನು ಅನುಸರಿಸಬೇಕು ಎಂದು ಆತನು ಯಾವಾಗಲೂ ಅವಶ್ಯಪಡಿಸಿದ್ದನು. (ಯೆಶಾ 1:17, 18; 10:1, 2; ಯೆರೆ 7:5-7; 21:12; 22:3, 4; ಯೆಹೆ 45:9, 10; ಆಮೋ 5:15; ಮೀಕ 3:9-12; 6:8; ಜೆಕ 7:9-12)
ಸೆಪ್ಟೆಂಬರ್ 11-17
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 ¶1001
ನರಪುತ್ರ
ಹೀಬ್ರು ಶಾಸ್ತ್ರಗಳಲ್ಲಿ ಈ ಪದವನ್ನು ಹೆಚ್ಚಾಗಿ ಯೆಹೆಜ್ಕೇಲ ಪುಸ್ತದಲ್ಲಿ ಬಳಸಲಾಗಿದೆ. ದೇವರು ಪ್ರವಾದಿ ಯೆಹೆಜ್ಕೇಲನನ್ನು ಸುಮಾರು 90 ಸಾರಿ “ನರಪುತ್ರ”ನೆಂದು ಕರೆದಿದ್ದಾನೆ. (ಯೆಹೆ 2:1, 3, 6, 8) ಹೀಗೆ ಸಂಬೋಧಿಸುವ ಮೂಲಕ ಪ್ರವಾದಿಯು ಕೇವಲ ಮಾನವನೆಂದು ಒತ್ತಿ ಹೇಳಿದ್ದಾನೆ. ಜೊತೆಗೆ ಮಾನವ ಸಂದೇಶವಾಹಕ ಮತ್ತು ಸಂದೇಶದ ಮೂಲನಾಗಿರುವ ಅತ್ಯುನ್ನತ ದೇವರ ಮಧ್ಯೆ ಇರುವ ವ್ಯತ್ಯಾಸವನ್ನು ಒತ್ತಿ ಹೇಳಿದ್ದಾನೆ. ದಾನಿಯೇಲ 8:17 ರಲ್ಲಿ ಪ್ರವಾದಿ ದಾನಿಯೇಲನಿಗೆ ಸಹ ಇದೇ ರೀತಿ ಸಂಬೋಧಿಸಲಾಗಿದೆ.
ಸೆಪ್ಟೆಂಬರ್ 18-24
ಬೈಬಲಿನಲ್ಲಿರುವ ರತ್ನಗಳು | ದಾನಿಯೇಲ 1-3
“ಯೆಹೋವನಿಗೆ ನಿಷ್ಠರಾಗಿದ್ದರೆ ಆಶೀರ್ವಾದ ಸಿಗುತ್ತದೆ”
it-2 ¶382
ಮೇಶಕ್
ರಾಜನ ಭೋಜನ ಪದಾರ್ಥಗಳನ್ನು ‘ಅಶುದ್ಧ’ವೆಂದು ಹೇಳಲು ಮೂರು ಸಂಭಾವ್ಯ ಕಾರಣಗಳಿದ್ದವು. (1) ಮೋಶೆಯ ಧರ್ಮಶಾಸ್ತ್ರವು ಅಶುದ್ಧವೆಂದು ವಿಧಿಸಿದ್ದ ಪ್ರಾಣಿಗಳ ಮಾಂಸವನ್ನು ಬಾಬೆಲಿನವರು ತಿನ್ನುತ್ತಿದ್ದರು. (2) ಅವರು ಪ್ರಾಣಿಗಳನ್ನು ವಧಿಸುವಾಗ ಅದರ ರಕ್ತ ಪೂರ್ತಿ ಹೋಗಿದೆಯಾ ಎಂದು ಖಾತ್ರಿ ಮಾಡುತ್ತಿರಲಿಲ್ಲ, ಕೆಲವು ಪ್ರಾಣಿಗಳನ್ನು ಕತ್ತುಹಿಸುಕಿ ಕೊಲ್ಲಲಾಗುತ್ತಿತ್ತು. (3) ಅನ್ಯಜನರು ಪ್ರಾಣಿಗಳನ್ನು ಮೊದಲು ತಮ್ಮ ದೇವರುಗಳಿಗೆ ಅರ್ಪಿಸುತ್ತಿದ್ದರು, ಬಳಿಕ ತಿನ್ನುತ್ತಿದ್ದರು. ಆ ಮಾಂಸ ತಿನ್ನುವುದು ಅವರೆಣಿಕೆಯಲ್ಲಿ ದೇವರುಗಳ ಆರಾಧನೆಯ ಭಾಗವಾಗಿತ್ತು.—ದಾನಿ 1:8; ಹೋಲಿಸಿ 1ಕೊರಿಂ 10:18-20, 28.
ಸೆಪ್ಟೆಂಬರ್ 25–ಅಕ್ಟೋಬರ್ 1
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w88 10/1 30 ¶3-5
ವಾಚಕರಿಂದ ಪ್ರಶ್ನೆಗಳು
ಕೊನೆಗೆ ಇಬ್ರಿಯನಾದ ದಾನಿಯೇಲನನ್ನು ಅರಸನ ಸನ್ನಿಧಿಗೆ ತರಲಾಯಿತು. ಬರಹಗಳ ಅರ್ಥವನ್ನು ತಿಳಿಸುವುದಾದರೆ ಅವನಿಗೆ ಬಹುಮಾನ ಕೊಡುವುದಾಗಿ ಅರಸನು ಪುನಃ ವಚನವಿತ್ತನು. ದಾನಿಯೇಲನಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ರಾಜ್ಯದಲ್ಲಿ ಮೂರನೇ ಮುಖ್ಯಾಧಿಕಾರಿಯಾಗಿ ನೇಮಿಸಲಾಗುವುದೆಂದು ಹೇಳಿದನು. ಪ್ರವಾದಿಯು ಗೌರವಪೂರ್ವಕವಾಗಿ ಉತ್ತರಿಸಿದ್ದು: “ನಿನ್ನ ದಾನಗಳು ನಿನಗೆಯೇ ಇರಲಿ. ನಿನ್ನ ಬಹುಮಾನಗಳು ಮತ್ತೊಬ್ಬನಿಗಾಗಲಿ. ಆದರೆ ನಾನು ಈ ಬರಹವನ್ನು ಓದಿ ಇದರ ಅರ್ಥವನ್ನು ರಾಜನಿಗೆ ತಿಳಿಸುವೆನು.”—ದಾನಿಯೇಲ 5:17.
ಹೀಗೆ ಬರಹಗಳ ಅರ್ಥವನ್ನು ತಿಳಿಸಲು ದಾನಿಯೇಲನಿಗೆ ಲಂಚ ಅಥವಾ ಹಣ ಬೇಕಾಗಿರಲಿಲ್ಲ. ಅರಸನು ತನ್ನ ಕೊಡುಗೆಗಳನ್ನು ತಾನೇ ಇಟ್ಟುಕೊಳ್ಳಬಹುದಿತ್ತು ಅಥವಾ ಬೇರೆಯವರಿಗೆ ಕೊಡಬಹುದಿತ್ತು. ದಾನಿಯೇಲನು ಬಹುಮಾನಕ್ಕಾಗಿ ಅರ್ಥವನ್ನು ಹೇಳುವವನಲ್ಲ. ಹಾಗೆ ಮಾಡಲು ಅವನಿಗೆ ಶಕ್ತಿಕೊಟ್ಟಾತನು ಸತ್ಯದೇವರಾದ ಯೆಹೋವನೇ. ದೇವರ ಶಕ್ತಿಯಿಂದಲೇ ಅವನು ಅದನ್ನು ಮಾಡಿದನು. ಏಕೆಂದರೆ ಬಾಬೆಲಿನವರ ಮೇಲೆ ಯೆಹೋವನ ನ್ಯಾಯತೀರ್ಪು ಶೀಘ್ರವೇ ಬರಲಿತ್ತು.
ದಾನಿಯೇಲನು ಆ ಬರಹವನ್ನು ಓದಿ ಅದರ ಅರ್ಥವನ್ನು ತಿಳಿಸಿದನು. ಆ ಬಳಿಕ ಹೇಗಾದರೂ ಆ ಬಹುಮಾನಗಳು ಅವನಿಗೆ ಕೊಡಲಾಗುವಂತೆ ರಾಜಾಜ್ಞೆ ಆಯಿತು. ಅದನ್ನು ದಾನಿಯೇಲ 5:29 ರಲ್ಲಿ ನಾವು ಓದುತ್ತೇವೆ. ಆ ಧೂಮ್ರವಸ್ತ್ರವನ್ನು ಮತ್ತು ಚಿನ್ನದ ಹಾರವನ್ನು ದಾನಿಯೇಲನು ತಾನಾಗಿ ಧರಿಸಿಕೊಳ್ಳಲಿಲ್ಲ. ಶ್ರೇಷ್ಠ ಪ್ರಭುವಾದ ರಾಜ ಬೇಲ್ಶೆಚ್ಚರನ ಆಜ್ಞೆಯ ಮೇರೆಗೆ ಅವನ್ನು ದಾನಿಯೇಲನಿಗೆ ತೊಡಿಸಲಾಯಿತು. ಆದರೆ ಇದು ದಾನಿಯೇಲ 5:17 ಕ್ಕೆ ತದ್ವಿರುದ್ಧವಲ್ಲ, ಯಾಕೆಂದರೆ ಪ್ರವಾದಿಯು ತನಗೆ ಯಾವ ಸ್ವಾರ್ಥ ಹೇತುವೂ ಇಲ್ಲವೆಂದು ಮೊದಲೇ ಅಲ್ಲಿ ಸ್ಪಷ್ಟಪಡಿಸಿದ್ದನು.