ಬೈಬಲಿನಲ್ಲಿರುವ ರತ್ನಗಳು | ನಹೂಮ 1–ಹಬಕ್ಕೂಕ 3
ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ
ಬಾಬೆಲಿನವರು ಯೆಹೂದವನ್ನು ನಾಶಮಾಡುವರೆಂದು ಮುಂತಿಳಿಸಲಾಗಿದ್ದರೂ ಅದು ಅಸಾಧ್ಯವೆಂಬಂತೆ ಕಾಣಿಸಿರಬಹುದು. ಯಾಕೆಂದರೆ, ಯೆಹೂದವು ಐಗುಪ್ತದ ಅಧಿಕಾರದ ಕೆಳಗಿತ್ತು. ಬಾಬೆಲಿನವರು ಐಗುಪ್ತಕ್ಕಿಂತ ಬಲಶಾಲಿಗಳಾಗಿರಲಿಲ್ಲ. ಅದೂ ಅಲ್ಲದೆ, ಯೆರೂಸಲೇಮನ್ನು ಮತ್ತು ದೇವಾಲಯನ್ನು ನಾಶಮಾಡಲು ಯೆಹೋವನು ಎಂದಿಗೂ ಬಿಡುವುದಿಲ್ಲ ಎಂದು ಅನೇಕ ಯೆಹೂದ್ಯರು ನಂಬಿದ್ದರು. ಅದೇನೇ ಆದರೂ, ಪ್ರವಾದನೆ ಖಂಡಿತ ನೆರವೇರಲಿತ್ತು. ಹಬಕ್ಕೂಕನು ಆಧ್ಯಾತ್ಮಿಕವಾಗಿ ಎಚ್ಚರವಾಗಿಯೂ ಕ್ರಿಯಾಶೀಲನಾಗಿಯೂ ಇದ್ದು ಅದಕ್ಕಾಗಿ ಕಾಯುತ್ತಿರಬೇಕಿತ್ತು.
ಈ ವಿಷಯಗಳ ವ್ಯವಸ್ಥೆಯ ಅಂತ್ಯ ಅತಿ ಹತ್ತಿರದಲ್ಲಿದೆ ಎಂದು ನಂಬಲು ಯಾವ ಆಧಾರಗಳಿವೆ?
ನಾನು ಹೇಗೆ ಆಧ್ಯಾತ್ಮಿಕವಾಗಿ ಎಚ್ಚರವಾಗಿಯೂ ಕ್ರಿಯಾಶೀಲವಾಗಿಯೂ ಇರಬಹುದು