ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಫೆಬ್ರವರಿ ಪು. 1-4
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಫೆಬ್ರವರಿ 5-11
  • ಫೆಬ್ರವರಿ 12-18
  • ಫೆಬ್ರವರಿ 19-25
  • ಫೆಬ್ರವರಿ 26–ಮಾರ್ಚ್‌ 4
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಫೆಬ್ರವರಿ ಪು. 1-4

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಫೆಬ್ರವರಿ 5-11

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 12:20​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಆರಿಹೋಗುತ್ತಿರುವ ಬತ್ತಿ: ಸಾಮಾನ್ಯವಾಗಿ ಮನೆಗಳಲ್ಲಿ ಉಪಯೋಗಿಸುತ್ತಿದ್ದ ದೀಪ ಆಲಿವ್‌ ಎಣ್ಣೆಯಿಂದ ತುಂಬಿರುವ ಮಣ್ಣಿನ ಚಿಕ್ಕ ಪಾತ್ರೆಯಾಗಿತ್ತು. ಎಣ್ಣೆಯನ್ನು ಹೀರಿದಾಗ ನಾರಿನ ಬತ್ತಿಯು ಉರಿಯುತ್ತದೆ. “ಆರಿಹೋಗುತ್ತಿರುವ ಬತ್ತಿ” ಎಂಬ ಗ್ರೀಕ್‌ ಪದರೂಪವು ಹೊಗೆಯಾಡುತ್ತಿರುವ ಬತ್ತಿಯನ್ನು ಸೂಚಿಸಬಹುದು. ಯಾಕೆಂದರೆ ಅದರಲ್ಲಿ ಬೆಂಕಿಯ ಕಿಡಿ ಇನ್ನೂ ಇದೆ, ಆದರೆ ಜ್ವಾಲೆಯು ಆರಿಹೋಗುತ್ತಾ ಇದೆ ಅಥವಾ ನಂದಿಹೋಗಿದೆ. ಯೆಶಾಯ 42:3ರ ಪ್ರವಾದನೆಯು ದೀನರ ಬಗ್ಗೆ ಯೇಸುವಿಗಿದ್ದ ಅನುಕಂಪವನ್ನು ಮುಂತಿಳಿಸಿದೆ. ಕಳೆಗುಂದಿದ, ಜಜ್ಜಿಹೋದ ದೀನಜನರ ನಿರೀಕ್ಷೆಯ ಕಡೇ ಕಿಡಿಯನ್ನು ಆತನು ಎಂದೂ ನಂದಿಸಲಾರನು.

ಫೆಬ್ರವರಿ 12-18

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 14-15

“ಕೆಲವರ ಕೈಯಿಂದ ಹಲವರಿಗೆ ಉಣಿಸಿದನು”

ಮತ್ತಾ 14:21​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಹೆಂಗಸರು ಮಕ್ಕಳಲ್ಲದೆ: ಈ ಅದ್ಭುತದ ಕುರಿತು ವರದಿ ಮಾಡಿದಾಗ ಹೆಂಗಸರು ಮತ್ತು ಮಕ್ಕಳ ಕುರಿತು ತಿಳಿಸಿದಾತನು ಮತ್ತಾಯನು ಮಾತ್ರ. ಹೀಗೆ ಯೇಸು ಅದ್ಭುತಕರವಾಗಿ 15,000ಕ್ಕಿಂತಲೂ ಹೆಚ್ಚು ಮಂದಿಗೆ ಉಣಿಸಿರಬಹುದೆಂದು ಗೊತ್ತಾಗುತ್ತದೆ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 15:7​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕಪಟಿಗಳು: ಇದರ ಗ್ರೀಕ್‌ ಪದರೂಪ ಹಿಪಕ್ರಿಟೀಸ್‌ ಎಂದಾಗಿದೆ. ಇದು ಮೂಲತಃ ಗ್ರೀಕ್‌ (ನಂತರ ರೋಮನ್‌) ರಂಗಭೂಮಿಯಲ್ಲಿ ನಟಿಸುವ ನಟರಿಗೆ ಸೂಚಿತವಾಗಿತ್ತು. ಅವರು ತಮ್ಮ ಧ್ವನಿಗಳನ್ನು ವರ್ಧಿಸಲಿಕ್ಕಾಗಿ ದೊಡ್ಡ ದೊಡ್ಡ ಮುಖವಾಡಗಳನ್ನು ಧರಿಸುತ್ತಿದ್ದರು. ಸಮಯಾನಂತರ ಈ ಪದವು ರೂಪಕಾಲಂಕಾರ ಅರ್ಥದಲ್ಲಿ ಬದಲಾಯಿತು. ಯಾವನಾದರೂ ತನ್ನ ನಿಜ ಇರಾದೆಗಳನ್ನು ಅಥವಾ ವ್ಯಕ್ತಿತ್ವವನ್ನು ಬಚ್ಚಿಡಲು ಸುಳ್ಳು ಸೋಗು ಹಾಕಿ ನಟಿಸುವುದಕ್ಕೆ ಇದನ್ನು ಬಳಸಲಾಯಿತು. ಇಲ್ಲಿ ಯೇಸು ಯೆಹೂದಿ ಧಾರ್ಮಿಕ ಮುಖಂಡರನ್ನು “ಕಪಟಿಗಳೇ” ಎಂದು ಕರೆದನು.—ಮತ್ತಾ 6:5, 16.

ಮತ್ತಾ 15:26​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಮಕ್ಕಳಿಗೆ . . . ನಾಯಿಮರಿಗಳಿಗೆ: ಮೋಶೆಯ ಧರ್ಮಶಾಸ್ತ್ರಕ್ಕನುಸಾರ ನಾಯಿಗಳು ಅಶುದ್ಧ ಪ್ರಾಣಿಗಳಾಗಿದ್ದವು. ನಾಯಿಗಳು ಎಂಬ ಪದವನ್ನು ಬೈಬಲಿನಲ್ಲಿ ಅನೇಕ ಸಲ ಕೀಳಾದ ಅರ್ಥದಲ್ಲಿ ಬಳಸಲಾಗಿದೆ. (ಯಾಜ 11:27; ಮತ್ತಾ 7:6; ಫಿಲಿ 3:2; ಪ್ರಕ 22:15) ಆದರೆ ಮಾರ್ಕನ ವೃತ್ತಾಂತ (7:27) ಮತ್ತು ಮತ್ತಾಯನ ವೃತ್ತಾಂತ ಎರಡರಲ್ಲೂ ಯೇಸು ತನ್ನ ಸಂಭಾಷಣೆಯಲ್ಲಿ ನಾಯಿಗಳು ಎಂಬ ಪದವನ್ನು ಬಳಸಲಿಲ್ಲ. ಬದಲಾಗಿ “ನಾಯಿಮರಿಗಳು” ಅಥವಾ “ಸಾಕುನಾಯಿ” ಎಂಬ ಪದವನ್ನು ಬಳಸಿದನು. ಆ ಮೂಲಕ ತಾನು ಮಾಡಿದ ಹೋಲಿಕೆಯನ್ನು ಮೃದುಗೊಳಿಸಿದ್ದಾನೆ. ಪ್ರಾಯಶಃ ಯೆಹೂದ್ಯರಲ್ಲದವರ ಮನೆಗಳಲ್ಲಿದ್ದ ಮುದ್ದಿನ ಪ್ರಾಣಿಗಳನ್ನು ಆ ಅಕ್ಕರೆಯ ಹೆಸರಿಂದ ಸೂಚಿಸಿದ್ದಿರಬಹುದು. ಇಸ್ರಾಯೇಲ್ಯರನ್ನು “ಮಕ್ಕಳಿಗೆ” ಮತ್ತು ಯೆಹೂದ್ಯರಲ್ಲದವರನ್ನು “ನಾಯಿಮರಿಗಳಿಗೆ” ಹೋಲಿಸುವ ಮೂಲಕ ಒಂದು ಆದ್ಯತೆಯ ಕ್ರಮವನ್ನು ಯೇಸು ಸೂಚಿಸಿದನು. ಮಕ್ಕಳು ಮತ್ತು ನಾಯಿಗಳು ಎರಡೂ ಇದ್ದ ಮನೆಗಳಲ್ಲಿ ಮಕ್ಕಳಿಗೆ ಆದ್ಯತೆಕೊಟ್ಟು ಮೊದಲು ಉಣಿಸಲಾಗುತ್ತದೆ.

ಫೆಬ್ರವರಿ 19-25

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 16:18​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನೀನು ಪೇತ್ರನು, ಈ ಬಂಡೆಯ ಮೇಲೆ: ಪೇತ್ರ ಪದದ ಗ್ರೀಕ್‌ ಪದರೂಪ ಪೆಟ್ರಾಸ್‌. ಇದು ಪುಲ್ಲಿಂಗ ಪದ. “ಕಲ್ಲು ಅಥವಾ ಬಂಡೆಯ ತುಂಡು” ಎಂಬುದು ಇದರ ಅರ್ಥ. ಇಲ್ಲಿ ಅದನ್ನು (ಪೇತ್ರ) ಎಂಬ ಸರ್ವನಾಮವಾಗಿ ಬಳಸಲಾಗಿದೆ. ಇದು ಯೇಸು ಸೀಮೋನನಿಗೆ ಕೊಟ್ಟ ಗ್ರೀಕ್‌ ಪದರೂಪದ ಹೆಸರು. (ಯೋಹಾ 1:42) ಪೆಟ್ರಾ ಎಂಬುದು ಸ್ತ್ರೀಲಿಂಗದಲ್ಲಿದ್ದು ಅದರ ಅರ್ಥ “ಬಂಡೆ” ಎಂದಾಗಿದೆ. ಇದು ತಳಬಂಡೆ, ಗೋಡುಗಲ್ಲು ಅಥವಾ ಬಂಡೆಬೆಟ್ಟವನ್ನು ಸೂಚಿಸಬಲ್ಲದು. ಈ ಗ್ರೀಕ್‌ ಪದವು ಮತ್ತಾ 7:24, 25; 27:60; ಲೂಕ 6:48; 8:6; ರೋಮ 9:33; 1ಕೊರಿಂ 10:4; 1 ಪೇತ್ರ 2:8​ರಲ್ಲಿ ಕಂಡುಬರುತ್ತದೆ. ಯೇಸು ತನ್ನ ಸಭೆಯನ್ನು ಯಾವುದರ ಮೇಲೆ ಕಟ್ಟುತ್ತೇನೆಂದು ಹೇಳಿದನೋ ಆ ಬಂಡೆಯು ತಾನೆಂದು ಪೇತ್ರನು ವೀಕ್ಷಿಸಿರಲಿಲ್ಲ. ಯಾಕೆಂದರೆ ಪೇತ್ರನು ತಾನೇ 1ಪೇತ್ರ 2:4-8​ರಲ್ಲಿ, ಮುಂತಿಳಿಸಲಾದ ಮತ್ತು ದೇವರು ಆರಿಸಿಕೊಂಡ “ಅಸ್ತಿವಾರದ ಮೂಲೆಗಲ್ಲು” ಯೇಸುವೇ ಆಗಿದ್ದಾನೆ ಎಂದು ತಿಳಿಸಿದ್ದಾನೆ. ತದ್ರೀತಿಯಲ್ಲಿ, ಅಪೊಸ್ತಲ ಪೌಲನು ಸಹ ಯೇಸುವನ್ನು “ಅಸ್ತಿವಾರವಾಗಿ” ಮತ್ತು “ಆಧ್ಯಾತ್ಮಿಕ ಬಂಡೆ”ಯಾಗಿ ಸೂಚಿಸಿದ್ದಾನೆ. (1ಕೊರಿಂ 3:11; 10:4) ಇಲ್ಲಿ ಯೇಸು ಪದ ಚಿತ್ರವನ್ನು ಬಳಸಿ ಪ್ರತ್ಯಕ್ಷವಾಗಿ ಹೀಗೆ ಹೇಳುವಂತಿದೆ: ‘ನಾನು ಪೇತ್ರನೆಂದು ಕರೆದ ನೀನು ಬಂಡೆಯ ಒಂದು ತುಂಡು ಆಗಿರುವಿ. ನೀನು “ಈ ಬಂಡೆ”ಯಾಗಿರುವ ಕ್ರಿಸ್ತನ ನಿಜ ಗುರುತನ್ನು ಅರಿತಿರುವಿ. ಅವನೇ ಕ್ರೈಸ್ತ ಸಭೆಯ ಅಸ್ತಿವಾರವಾಗಿ ಕಾರ್ಯನಡಿಸುವವನು.’

ಸಭೆ: ಗ್ರೀಕ್‌ ಪದರೂಪವಾದ ಎ-ಕ್ಲೀ-ಸಿಯ ಇಲ್ಲಿ ಮೊತ್ತಮೊದಲ ಬಾರಿ ಕಂಡು ಬರುತ್ತದೆ. ಇದು ಎರಡು ಗ್ರೀಕ್‌ ಪದಗಳಿಂದ ಬಂದಿದೆ. ಎಕ್‌ ಅಂದರೆ “ಹೊರಗೆ” ಮತ್ತು ಕಲಿಯ ಅಂದರೆ “ಕರೆಕೊಡು” ಎಂದರ್ಥ. ಅಂದರೆ ಒಂದು ವಿಶಿಷ್ಟ ಉದ್ದೇಶಕ್ಕಾಗಿ ಅಥವಾ ಕೆಲಸಕ್ಕಾಗಿ ಕೂಡಿಬರುವಂತೆ ಜನಸಮೂಹಕ್ಕೆ ಕರೆಕೊಡುವುದನ್ನು ಇಲ್ಲವೆ ಆಜ್ಞಾಪಿಸುವುದನ್ನು ಇದು ಸೂಚಿಸುತ್ತದೆ. (ಗ್ಲಾಸರಿ ನೋಡಿ.) ಈ ವಚನದ ಪೂರ್ವಾಪರದಲ್ಲಿ ಯೇಸು, ಕ್ರೈಸ್ತ ಸಭೆಯ ರಚನೆಯನ್ನು ಮುಂತಿಳಿಸುತ್ತಿದ್ದನು. ಇದು ಅಭಿಷಿಕ್ತ ಕ್ರೈಸ್ತರಿಂದ ಕೂಡಿದ್ದಾಗಿದೆ. ಅವರು ‘ಜೀವವುಳ್ಳ ಕಲ್ಲುಗಳಾಗಿದ್ದು,’ ‘ಆಧ್ಯಾತ್ಮಿಕ ಆಲಯವಾಗಿ ಕಟ್ಟಲ್ಪಡುತ್ತಿದ್ದರು.’ (1ಪೇತ್ರ 2:4, 5) ಹಿಬ್ರೂವಿನಲ್ಲಿ “ಸಭೆ”ಯೆಂಬ ಪದವನ್ನು ಬೈಬಲ್‌ ಅನೇಕ ಸಲ ದೇವಜನರ ಇಡೀ ಜನಾಂಗಕ್ಕೆ ಸೂಚಿಸಿ ಹೇಳಿಯದೆ. ಗ್ರೀಕ್‌ ಸೆಪ್ಟೂಅಂಜಿಟ್‌ ಸಹ ಎಕ್ಲೀಸಿಯವನ್ನು ಅದೇ ಸಮಾನಾರ್ಥದಲ್ಲಿ ಅನೇಕ ಸಲ ಬಳಸಿದೆ. (ಧರ್ಮೋ. 23:3; 31:30) ಅಕಾ 7:38​ರಲ್ಲಿ, ಐಗುಪ್ತದಿಂದ ಕರೆಯಲ್ಪಟ್ಟ ಇಸ್ರಾಯೇಲ್ಯರನ್ನು ‘ಅರಣ್ಯದಲ್ಲಿದ್ದ ಸಭೆ’ ಎಂದು ಕರೆಯಲಾಗಿದೆ. ತದ್ರೀತಿಯಲ್ಲಿ “ಕತ್ತಲೆಯೊಳಗಿಂದ” ಕರೆಯಲ್ಪಟ್ಟ ಮತ್ತು “ಲೋಕದಿಂದ ಆರಿಸಿಕೊಂಡಿರುವ” ಕ್ರೈಸ್ತರು “ದೇವರ ಸಭೆ”ಯಾಗಿ ರಚಿಸಲ್ಪಟ್ಟಿದ್ದಾರೆ.—1ಪೇತ್ರ 2:9; ಯೋಹಾ 15:19; 1ಕೊರಿಂ 1:2.

ಮತ್ತಾ 16:19​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸ್ವರ್ಗದ ರಾಜ್ಯದ ಬೀಗದ ಕೈಗಳು: ಬೈಬಲಿನಲ್ಲಿ ಯಾರಿಗೆ ನಿರ್ದಿಷ್ಟ ಬೀಗದ ಕೈಗಳನ್ನು ಅಕ್ಷರಾರ್ಥವಾಗಿ ಅಥವಾ ಸಾಂಕೇತಿಕವಾಗಿ ಕೊಡಲಾಗಿತ್ತೋ ಅವರಿಗೆ ಸ್ವಲ್ಪ ಮಟ್ಟಿಗಿನ ಅಧಿಕಾರವನ್ನು ವಹಿಸಲಾಗಿತ್ತು. (1ಪೂರ್ವ 9:26, 27; ಯೆಶಾ 22:20-22) ಆದ್ದರಿಂದ “ಬೀಗದ ಕೈ” ಎಂಬ ಪದವು ಅಧಿಕಾರ ಮತ್ತು ಜವಾಬ್ದಾರಿಯನ್ನು ಸೂಚಿಸುವ ಪದ. ಪೇತ್ರನು ತನಗೆ ಕೊಡಲಾದ ‘ಬೀಗದ ಕೈಗಳನ್ನು’ ಯೆಹೂದ್ಯರಿಗಾಗಿ (ಅಕಾ 2:22-41), ಸಮಾರ್ಯದವರಿಗಾಗಿ (ಅಕಾ 8:14-17), ಮತ್ತು ಅನ್ಯಜನರಿಗಾಗಿ (ಅಕಾ 10:34-38) ಅವಕಾಶದ ಬಾಗಿಲನ್ನು ತೆರೆಯಲು ಉಪಯೋಗಿಸಿದನು. ಈ ಅವಕಾಶವು ಅವರು ಸ್ವರ್ಗದ ರಾಜ್ಯವನ್ನು ಪ್ರವೇಶಿಸಲಿಕ್ಕಾಗಿ ದೇವರ ಪವಿತ್ರಾತ್ಮವನ್ನು ಪಡೆಯುವುದಾಗಿತ್ತು.

ಫೆಬ್ರವರಿ 26–ಮಾರ್ಚ್‌ 4

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 18-19

“ಎಡವಬೇಡಿ, ಎಡವಿಸಬೇಡಿ”

ಮತ್ತಾ 18:6​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕತ್ತೆಯಿಂದ ಎಳೆಯಲ್ಪಡುವ ಬೀಸುವಕಲ್ಲು: ಅಥವಾ “ಒಂದು ದೊಡ್ಡ ಬೀಸುವಕಲ್ಲು.” ಅಕ್ಷರಾರ್ಥಕವಾಗಿ “ಕತ್ತೆಯ ಬೀಸುವಕಲ್ಲು” ಎಂದಾಗಿದೆ. ಅಂಥ ಒಂದು ಬೀಸುವಕಲ್ಲಿನ ಸುತ್ತಳತೆ 4-5 ಅಡಿ ಇರುತ್ತಿತ್ತು. ಅದು ಎಷ್ಟು ಭಾರವಾಗಿತ್ತೆಂದರೆ ಅದನ್ನು ಕತ್ತೆಯೇ ಎಳೆಯಬೇಕಿತ್ತು.

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ಬೀಸುವಕಲ್ಲು

ಧಾನ್ಯ ಬೀಸಲು ಮತ್ತು ಆಲಿವ್‌ಗಳಿಂದ ಎಣ್ಣೆ ತೆಗೆಯಲು ಬೀಸುವ ಕಲ್ಲುಗಳನ್ನು ಜನರು ಬಳಸುತ್ತಿದ್ದರು. ಕೆಲವು ಕಲ್ಲುಗಳು ಕೈಯಿಂದ ಬೀಸುವಷ್ಟು ಚಿಕ್ಕದ್ದಾಗಿದ್ದವು. ಇನ್ನು ಕೆಲವು ಎಷ್ಟು ದೊಡ್ಡದ್ದಾಗಿದ್ದವೆಂದರೆ ಅವುಗಳನ್ನು ಎಳೆಯಲು ಪ್ರಾಣಿಗಳನ್ನೇ ಬಳಸಬೇಕಿತ್ತು. ಇಂಥದ್ದೇ ಒಂದು ದೊಡ್ಡ ಬೀಸುವಕಲ್ಲನ್ನು ಎಳೆಯುವಂತೆ ಸಂಸೋನನಿಗೆ ಫಿಲಿಷ್ಟಿಯರು ಒತ್ತಾಯಿಸಿದ್ದಿರಬೇಕು. (ನ್ಯಾಯ 16:21) ಪ್ರಾಣಿಗಳು ಎಳೆಯುವ ಇಂಥ ದೊಡ್ಡ ಬೀಸುವ ಕಲ್ಲುಗಳು ಇಸ್ರಾಯೇಲಿನಲ್ಲಿ ಮಾತ್ರವಲ್ಲ ರೋಮನ್‌ ಪ್ರಾಂತ್ಯದ ಹೆಚ್ಚಿನ ಕಡೆಗಳಲ್ಲಿ ಸಾಮಾನ್ಯವಾಗಿದ್ದವು.

ಮೇಲಿನ ಮತ್ತು ಕೆಳಗಿನ ಬೀಸುವ ಕಲ್ಲುಗಳು

ಇಲ್ಲಿ ಚಿತ್ರಿಸಲಾದ ದೊಡ್ಡ ಬೀಸುವಕಲ್ಲನ್ನು ಕತ್ತೆ ಮುಂತಾದ ಸಾಕು ಪ್ರಾಣಿಗಳು ಎಳೆಯುತ್ತಿದ್ದವು. ಇವುಗಳನ್ನು ಧಾನ್ಯವನ್ನು ಬೀಸಲು ಅಥವಾ ಆಲಿವ್‌ಗಳನ್ನು ಜಜ್ಜಲು ಬಳಸಲಾಗುತ್ತಿತ್ತು. ಮೇಲಿನ ಕಲ್ಲು ಸುಮಾರು 5 ಅಡಿ ಸುತ್ತಳತೆಯುಳ್ಳದ್ದು. ಇದಕ್ಕಿಂತಲೂ ದೊಡ್ಡದಾದ ಕೆಳಗಿನ ಕಲ್ಲಿನ ಮೇಲೆ ಅದನ್ನು ತಿರುಗಿಸುತ್ತಿದ್ದರು.

ಮತ್ತಾ 18:7​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಎಡವುಗಲ್ಲುಗಳು: ಎಡವುಗಲ್ಲಿಗಿರುವ ಗ್ರೀಕ್‌ ಪದರೂಪ ಸ್ಕ್ಯಾಂಡಲೋನ್‌. ಇದರ ಮೂಲ ಅರ್ಥ “ಎಡವುಗಲ್ಲು” ಎಂದಾಗಿದೆ. ಇದನ್ನು ಬೋನಿಗೆ ಸೂಚಿಸಲಾಗುತ್ತಿತ್ತಂತೆ. ಅದು ಬೋನಿನಲ್ಲಿರುವ ಒಂದು ಕೋಲು ಎಂದು ಕೆಲವರು ಹೇಳುತ್ತಾರೆ. ಕೋಲಿನ ತುದಿಗೆ ತೀನಿಯನ್ನು ಸಿಕ್ಕಿಸಲಾಗುತ್ತಿತ್ತು. ವಿಶಾಲಾರ್ಥದಲ್ಲಿ ಆ ಪದವು, ಒಬ್ಬನನ್ನು ಎಡವುವಂತೆ ಅಥವಾ ಬೀಳುವಂತೆ ಮಾಡುವ ಯಾವುದೇ ಅಡ್ಡಿ ಅಥವಾ ತೊಡಕನ್ನು ಸೂಚಿಸುತ್ತದೆ. ಸಾಂಕೇತಿಕ ಅರ್ಥದಲ್ಲಿ, ಒಬ್ಬನನ್ನು ಕೆಟ್ಟ ಮಾರ್ಗಕ್ಕೆ ನಡಿಸುವ ಯಾವುದೇ ಸನ್ನಿವೇಶ ಅಥವಾ ಕೃತ್ಯಕ್ಕೆ ಅಥವಾ ನೈತಿಕವಾಗಿ ಪಾಪದಲ್ಲಿ ಬೀಳಿಸುವುದಕ್ಕೆ ಈ ಪದವನ್ನು ಬಳಸಲಾಗುತ್ತದೆ. ಮತ್ತಾ 18:8, 9​ರಲ್ಲಿ ಇದಕ್ಕೆ ಸಂಬಂಧಿಸಿದ ಕ್ರಿಯಾಪದ ಸ್ಕಾಂಡಲಿಸೋ ಎಂಬುದನ್ನು “ಎಡವಿಸು” ಎಂದು ಭಾಷಾಂತರಿಸಲಾಗಿದೆ. ಇದನ್ನೇ “ಪಾಶವಾಗು; ಪಾಪಕ್ಕೆ ಕಾರಣವಾಗು” ಎಂದೂ ತರ್ಜುಮೆ ಮಾಡಬಹುದು.

ಮತ್ತಾ 18:9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಗೆಹೆನ್ನಾ: ಈ ಪದವು ಹೀಬ್ರು ಪದಗಳಾದ ಗೆ-ಹೀ-ನೋಮ್‌ ಇದರಿಂದ ಬಂದಿದೆ. ಅದರ ಅರ್ಥ “ಹಿನ್ನೋಮ್‌ ಕಣಿವೆ.” ಇದು ಪುರಾತನ ಯೆರೂಸಲೇಮಿನ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿತ್ತು. (ಪರಿಶಿಷ್ಟ ಬಿ12, “ಯೆರೂಸಲೇಮ್‌ ಮತ್ತು ಸುತ್ತಮುತ್ತಲಿನ ಪ್ರದೇಶ” ಭೂಪಟ ನೋಡಿ.) ಯೇಸುವಿನ ದಿನಗಳಲ್ಲಿ ಆ ಕಣಿವೆ ಕಸವನ್ನು ಸುಟ್ಟುಹಾಕುವ ಸ್ಥಳವಾಗಿತ್ತು. ಆದ್ದರಿಂದ ‘ಗೆಹೆನ್ನಾ’ ಎಂಬುದು ಸಂಪೂರ್ಣ ನಾಶನವನ್ನು ಸೂಚಿಸಲು ಬಳಸುವ ಸೂಕ್ತ ಪದವಾಗಿತ್ತು.

ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ಮತ್ತು ಗ್ಲಾಸರಿ

ಗೆಹೆನ್ನಾ

ಯೆರೂಸಲೇಮಿನ ನೈರುತ್ಯಕ್ಕಿರುವ ಹಿನ್ನೋಮ್‌ ಕಣಿವೆಯ ಗ್ರೀಕ್‌ ಹೆಸರೇ ಗೆಹೆನ್ನಾ. (ಯೆರೆ 7:31) ಪ್ರವಾದನಾ ರೂಪವಾಗಿ ಶವಗಳನ್ನು ಎಸೆದುಬಿಡುವ ಸ್ಥಳವಾಗಿ ಅದು ಹೇಳಲ್ಪಟ್ಟಿದೆ. (ಯೆರೆ 7:32; 19:6) ಪ್ರಾಣಿಗಳನ್ನು ಅಥವಾ ಮನುಷ್ಯರನ್ನು ಸಜೀವವಾಗಿ ಸುಡಲು ಇಲ್ಲವೆ ಯಾತನೆ ಕೊಡಲು ಗೆಹೆನ್ನಾದಲ್ಲಿ ಹಾಕಲಾಗುತ್ತಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆದ್ದರಿಂದ ಹಿನ್ನೋಮ್‌ ಕಣಿವೆಯನ್ನು ಮಾನವಾತ್ಮಗಳು ಅಕ್ಷರಾರ್ಥಕ ಬೆಂಕಿಯಲ್ಲಿ ನಿತ್ಯಯಾತನೆಪಡುವ ಒಂದು ಅದೃಶ್ಯಸ್ಥಳವಾಗಿ ಸೂಚಿಸಸಾಧ್ಯವಿಲ್ಲ. ಬದಲಾಗಿ ಗೆಹೆನ್ನಾ ಎಂಬುದನ್ನು ಯೇಸು ಮತ್ತು ಅವನ ಶಿಷ್ಯರು “ಎರಡನೇ ಮರಣ” ಎಂಬ ನಿತ್ಯ ಶಿಕ್ಷೆಯನ್ನು ಅಂದರೆ ನಿತ್ಯನಾಶನ, ಸರ್ವನಾಶನವನ್ನು ಸೂಚಿಸಲು ಬಳಸಿದರು.—ಪ್ರಕ 20:14; ಮತ್ತಾ 5:22; 10:28.

ಮತ್ತಾ 18:10​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನನ್ನ ತಂದೆಯ ಮುಖವನ್ನು ನೋಡುತ್ತಿರುತ್ತಾರೆ: ಅಥವಾ “ನನ್ನ ತಂದೆಯ ಸನ್ನಿಧಿಗೆ ಹೋಗುವ ಹಕ್ಕು.” ದೇವರ ಮುಖವನ್ನು ನೋಡಲು ಆತ್ಮಜೀವಿಗಳಿಗೆ ಮಾತ್ರ ಸಾಧ್ಯ. ಏಕೆಂದರೆ ದೇವರ ಸನ್ನಿಧಾನವನ್ನು ಪ್ರವೇಶಿಸುವ ಹಕ್ಕು ಅವರಿಗಿದೆ.—ವಿಮೋ 33:20.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 18:22​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

77 ಸಾರಿ: ಅಕ್ಷರಾರ್ಥಕವಾಗಿ “ಏಳೆಪ್ಪತ್ತು ಸಾರಿ.” ಈ ಗ್ರೀಕ್‌ ಹೇಳಿಕೆಯ ಅರ್ಥವು “7 ಮತ್ತು 70” (77 ಸಾರಿ) ಅಥವಾ “70 ಗುಣಿಸು 7” (490 ಸಾರಿ) ಎಂದಾಗಿದೆ. ಆದಿಕಾಂಡ 4:24​ರಲ್ಲಿ ಕಂಡುಬರುವ ಇದೇ ಹಿಬ್ರೂ ಪದಗಳನ್ನು ಗ್ರೀಕ್‌ ಸೆಪ್ಟೂಅಜಿಂಟ್‌ ಭಾಷಾಂತರ “77 ಸಾರಿ” ಎಂದೇ ಭಾಷಾಂತರಿಸಿದೆ. ಇದರ ಅರ್ಥ ಹೇಗೆಯೇ ಇರಲಿ, ಇಲ್ಲಿ 7 ಎಂಬ ಸಂಖ್ಯೆಯು ಎರಡು ಸಲ ಬರುವ ಕಾರಣ ಅದು ಒಂದು ಅನಿಶ್ಚಿತ” ಅಥವಾ “ಮಿತಿಯಿಲ್ಲದಷ್ಟು” ಸಾರಿ ಎಂಬ ಸಮಾನ ಅರ್ಥವನ್ನು ಕೊಡುತ್ತದೆ. ಪೇತ್ರನು ಹೇಳಿದ 7 ಎಂಬುದನ್ನು 77 ಎಂದು ತಿರುಗಿಸಿ ಹೇಳುವ ಮೂಲಕ ಯೇಸು ತನ್ನ ಹಿಂಬಾಲಕರಿಗೆ ನಿಜಕ್ಕೂ ಒಂದು ಪಾಠವನ್ನು ಕಲಿಸಿದನು. ಅದೇನೆಂದರೆ ನಾವು ಮಿತಿಯಿಲ್ಲದಷ್ಟು ಸಾರಿ ಕ್ಷಮಿಸಬೇಕು ಎಂಬದೇ. ಇದಕ್ಕೆ ವಿರುದ್ಧವಾಗಿ ಬ್ಯಾಬಿಲೋನ್‌ ಟ್ಯಾಲ್ಮಡ್‌ (Yoma 86 ಬಿ) ಹೇಳುವುದು, “ಒಮ್ಮೆ, ಎರಡು ಬಾರಿ, ಮೂರು ಬಾರಿ ತಪ್ಪು ಮಾಡಿದರೆ ಒಬ್ಬ ಮನುಷ್ಯನಿಗೆ ಕ್ಷಮೆ ಸಿಗುತ್ತದೆ. ಆದರೆ ನಾಲ್ಕನೇ ಬಾರಿ ತಪ್ಪುಮಾಡಿದರೆ ಕ್ಷಮೆಯೇ ಇಲ್ಲ.”

ಮತ್ತಾ 19:7​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ತ್ಯಾಗ ಪತ್ರಕೊಟ್ಟು ವಿಚ್ಛೇದನ: ಅಥವಾ “ವಿಚ್ಛೇದನ ಪತ್ರ.” ಹೆಂಡತಿಗೆ ವಿಚ್ಛೇದನ ಕೊಡಲು ಬಯಸುವ ಒಬ್ಬ ಪುರುಷನು ಕಾನೂನುಬದ್ಧ ತ್ಯಾಗಪತ್ರವನ್ನು ಸಿದ್ಧಮಾಡಬೇಕು ಮಾತ್ರವಲ್ಲ ಹಿರಿಯರನ್ನು ಸಂಪರ್ಕಿಸಬೇಕು ಎಂದು ಧರ್ಮಶಾಸ್ತ್ರವು ಅವಶ್ಯಪಡಿಸಿತ್ತು. ಏಕೆಂದರೆ ವಿಚ್ಛೇದನವು ಒಂದು ಗಂಭೀರ ನಿರ್ಣಯವಾಗಿತ್ತು. ಒಬ್ಬನು ತನ್ನ ನಿರ್ಣಯವನ್ನು ಮರುಪರಿಶೀಲಿಸಿ ನೋಡುವಂತೆ ಈ ಮೂಲಕ ಧರ್ಮಶಾಸ್ತ್ರವು ಅವನಿಗೆ ಸಮಯ ಕೊಟ್ಟಿತು. ದುಡುಕಿ ವಿಚ್ಛೇದನ ಮಾಡುವುದನ್ನು ತಡೆಯುವುದೇ ಧರ್ಮಶಾಸ್ತ್ರದ ಉದ್ದೇಶವಾಗಿತ್ತು. ಅಲ್ಲದೆ, ಸ್ತ್ರೀಯರಿಗೆ ನ್ಯಾಯಬದ್ಧ ರಕ್ಷಣೆಯನ್ನೂ ಕೊಡುವುದಾಗಿತ್ತು. (ಧರ್ಮೋ 24:1) ಆದರೆ ಯೇಸುವಿನ ದಿನಗಳಲ್ಲಿ ಧಾರ್ಮಿಕ ಮುಖಂಡರು ವಿಚ್ಛೇದನ ಪಡೆಯುವುದನ್ನು ತೀರ ಸುಲಭ ಮಾಡಿದ್ದರು. ಒಂದನೇ ಶತಮಾನದ ಇತಿಹಾಸಗಾರ ಜೊಸೀಫಸನು ತಾನೇ ಒಬ್ಬ ವಿಚ್ಛೇದಿತ ಫರಿಸಾಯನಾಗಿದ್ದನು. ಅವನು ಸೂಚಿಸಿದ್ದು: “ಯಾವುದೇ ಕಾರಣಕ್ಕಾಗಿ ವಿಚ್ಛೇದನ ಕೊಡಲು ಅನುಮತಿಯಿದೆ. (ಅಂಥ ಅನೇಕ ಕಾರಣಗಳು ಗಂಡಸರಿಗಿವೆ.)”

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ವಿಚ್ಛೇದನ ಪತ್ರ

ಇಲ್ಲಿ ಕೊಡಲಾದ ವಿಚ್ಛೇದನ ಪತ್ರವು ಕ್ರಿ.ಶ. 71 ಅಥವಾ 72ರದ್ದು. ಇದನ್ನು ಅರಮಾಯ ಭಾಷೆಯಲ್ಲಿ ಬರೆಯಲಾಗಿದೆ. ಇದು ಯೆಹೂದ ಮರುಭೂಮಿಯ ಬತ್ತಿದ ನದೀತಳವಾದ ‘ವಾಡಿ ಮುರಬ್ಬಾತ್‌’ ಎಂಬ ಸ್ಥಳದ ಉತ್ತರ ದಿಕ್ಕಿನಲ್ಲಿ ಸಿಕ್ಕಿತು. ಅದು ಹೇಳುವುದು: ಯೆಹೂದಿ ದಂಗೆಯ 6ನೇ ವರ್ಷದಲ್ಲಿ ನಕ್ಸನ್‌ನ ಮಗನಾದ ಜೋಸೆಫ್‌, ಮಸಾಡಾ ನಗರದಲ್ಲಿ ವಾಸಿಸುತ್ತಿದ್ದ ಜೋನತನ್‌ನ ಮಗಳಾದ ಮಿರಿಯಮಳಿಗೆ ವಿಚ್ಛೇದನ ಕೊಟ್ಟನು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ