ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • th ಅಧ್ಯಯನ 7 ಪು. 10
  • ಭರವಸಾರ್ಹ ಮಾಹಿತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭರವಸಾರ್ಹ ಮಾಹಿತಿ
  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಅನುರೂಪ ಮಾಹಿತಿ
  • ಹೇಳಿಕೆಯ ನಿಷ್ಕೃಷ್ಟತೆ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ವಚನಗಳ ಪರಿಚಯ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಸ್ಪಷ್ಟವಾದ ವೈಯಕ್ತಿಕ ಅನ್ವಯ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಪ್ರಶ್ನೆಗಳ ಉಪಯೋಗ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
ಇನ್ನಷ್ಟು
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
th ಅಧ್ಯಯನ 7 ಪು. 10

ಪಾಠ 7

ಭರವಸಾರ್ಹ ಮಾಹಿತಿ

ಸಂಬಂಧಪಟ್ಟ ವಚನ

ಲೂಕ 1:3

ಏನು ಮಾಡಬೇಕು: ಕೇಳುಗರು ಸರಿಯಾದ ತೀರ್ಮಾನಕ್ಕೆ ಬರಲು ವಿಶ್ವಾಸಾರ್ಹ ಮೂಲಗಳಿಂದ ಸಿಗುವ ಮಾಹಿತಿಯನ್ನು ಉಪಯೋಗಿಸಿ.

ಹೇಗೆ ಮಾಡಬೇಕು:

  • ವಿಶ್ವಾಸಾರ್ಹವಾದ ಮೂಲಗಳನ್ನು ಉಪಯೋಗಿಸಿ. ನಿಮ್ಮ ಹೇಳಿಕೆಗಳು ಬೈಬಲಿನ ಮೇಲೆ ಆಧರಿಸಿರಲಿ. ಸಾಧ್ಯವಾದಾಗೆಲ್ಲಾ ಬೈಬಲಿಂದಲೇ ಓದಿ. ನೀವು ಒಂದು ವೈಜ್ಞಾನಿಕ ವಿಚಾರ, ವಾರ್ತಾ ವರದಿ, ಅನುಭವ ಅಥವಾ ಬೇರೆ ಮಾಹಿತಿಯನ್ನು ಉಪಯೋಗಿಸುವುದಾದರೆ ಅದರ ಮೂಲ ವಿಶ್ವಾಸಾರ್ಹವಾಗಿದೆಯಾ ಮತ್ತು ಅದರಲ್ಲಿರುವುದು ಇತ್ತೀಚಿನ ಮಾಹಿತಿನಾ ಎಂದು ಖಚಿತಪಡಿಸಿಕೊಳ್ಳಿ.

  • ಮಾಹಿತಿಯ ಮೂಲಗಳನ್ನು ಸರಿಯಾಗಿ ಉಪಯೋಗಿಸಿ. ವಚನಗಳ ವಿವರಣೆಯು ಅದರ ಹಿನ್ನೆಲೆ, ಬೈಬಲಲ್ಲಿರುವ ಇಡೀ ಸಂದೇಶ ಮತ್ತು ನಂಬಿಗಸ್ತ ಆಳು ಕೊಟ್ಟಿರುವ ಪ್ರಕಾಶನಗಳಿಗೆ ಹೊಂದಿಕೆಯಲ್ಲಿರಬೇಕು. (ಮತ್ತಾ. 24:45) ಹೊರಗಿನ ಮೂಲಗಳಿಂದ ಸಾಕ್ಷ್ಯಾಧಾರಗಳನ್ನು ತೆಗೆದುಕೊಳ್ಳುವುದಾದರೆ ಅದನ್ನು ನಮಗೆ ಹೇಗೆ ಬೇಕೋ ಹಾಗೆ ಬದಲಾಯಿಸಿಕೊಳ್ಳಬಾರದು.

    ಸಹಾಯಕರ ಸಲಹೆ

    ಅಂಕಿ-ಅಂಶಗಳನ್ನು ಅತಿಶಯಿಸಿ ಅಥವಾ ಹೆಚ್ಚಿಸಿ ಹೇಳಬೇಡಿ. “ಕೆಲವು ಜನರು” ಅನ್ನುವುದು “ಹೆಚ್ಚಿನ ಜನರು” ಅಂತ ಆಗಬಾರದು.“ಕೆಲವೊಮ್ಮೆ” ಅನ್ನುವುದು “ಯಾವಾಗಲೂ” ಅಂತ ಆಗಬಾರದು. “ನಡೆದಿರಲಿಕ್ಕಿಲ್ಲ” ಅನ್ನುವುದು “ನಡೆದಿರಲ್ಲ” ಅಂತ ಆಗಬಾರದು.

  • ಆಧಾರ ಕೊಟ್ಟು ವಿವರಿಸಿ. ಒಂದು ವಚನ ಓದಿದ ಮೇಲೆ ಅಥವಾ ಒಂದು ಮೂಲದಿಂದ ಮಾಹಿತಿಯನ್ನು ಕೊಟ್ಟ ಮೇಲೆ ಕೇಳುಗರು ಸರಿಯಾದ ತೀರ್ಮಾನಕ್ಕೆ ಬರಲು ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ ಅಥವಾ ಉದಾಹರಣೆ ಕೊಟ್ಟು ವಿವರಿಸಿ.

ಸೇವೆಯಲ್ಲಿ

ಸೇವೆಗೆ ತಯಾರಿ ಮಾಡುವಾಗ ಜನರು ಯಾವ ಪ್ರಶ್ನೆ ಕೇಳಬಹುದು ಎಂದು ಯೋಚಿಸಿ. ಅದಕ್ಕೆ ಯಾವ ಉತ್ತರ ಕೊಡಬಹುದೆಂದು ಸಂಶೋಧನೆ ಮಾಡಿ. ಮನೆಯವರು ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಸಂಶೋಧನೆ ಮಾಡಿ ಬರುತ್ತೇವೆಂದು ಹೇಳಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ