ಪಾಠ 3
ಪ್ರಶ್ನೆಗಳ ಉಪಯೋಗ
ಮತ್ತಾಯ 16:13-16
ಏನು ಮಾಡಬೇಕು: ಆಸಕ್ತಿ ಹುಟ್ಟಿಸಿ ಅದನ್ನು ಹಿಡಿದಿಡಲು, ಸರಿಯಾದ ತೀರ್ಮಾನಕ್ಕೆ ಬರುವಂತೆ ಮಾಡಲು, ಮುಖ್ಯಾಂಶಗಳನ್ನು ಒತ್ತಿಹೇಳಲು ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ.
ಹೇಗೆ ಮಾಡಬೇಕು:
ಆಸಕ್ತಿ ಹುಟ್ಟಿಸಿ ಕೊನೆ ತನಕ ಕಡಿಮೆಯಾಗದಂತೆ ನೋಡಿಕೊಳ್ಳಿ. ಕುತೂಹಲ ಕೆರಳಿಸುವ ಅಥವಾ ಯೋಚಿಸುವಂತೆ ಮಾಡುವ ಪ್ರಶ್ನೆಗಳನ್ನು ಕೇಳಿ.
ಒಳ್ಳೇ ತೀರ್ಮಾನಕ್ಕೆ ಬರಲು ಸಹಾಯ ಮಾಡಿ. ನೀವು ಹೇಳುವ ವಿಷಯ ಸರಿಯಾಗಿದೆ ಎಂದು ಕೇಳುಗರು ಅರ್ಥಮಾಡಿಕೊಂಡು ಒಳ್ಳೇ ತೀರ್ಮಾನಕ್ಕೆ ಬರಲು ಪ್ರಶ್ನೆಗಳನ್ನು ಕೇಳಿ.
ಮುಖ್ಯಾಂಶಗಳನ್ನು ಒತ್ತಿಹೇಳಿ. ಒಂದು ಮುಖ್ಯಾಂಶವನ್ನು ಹೇಳುವ ಮುಂಚೆ ಯೋಚಿಸುವಂತೆ ಮಾಡುವ ಪ್ರಶ್ನೆಯನ್ನು ಕೇಳಿ. ಒಂದು ಮುಖ್ಯಾಂಶದ ಬಗ್ಗೆ ಮಾತಾಡಿದ ಮೇಲೆ ಅಥವಾ ನಿಮ್ಮ ಭಾಗವನ್ನು ಮುಗಿಸುವಾಗ ಮಾತಾಡಿದ ವಿಷಯವನ್ನು ಮನಸ್ಸಲ್ಲಿ ಉಳಿಯುವಂತೆ ಮಾಡಲು ಪ್ರಶ್ನೆಗಳನ್ನು ಕೇಳಿ.